Home
ಸುದ್ದಿಜಾಲ

Neuralink chip: ರೋಗಿಯ ಮೆದುಳಿನಲ್ಲಿ ನ್ಯೂರಾಲಿಂಕ್ ಚಿಪ್‌ ಅಳವಡಿಕೆ ಯಶಸ್ವಿ! ಇದು ಹೇಗೆ ಕೆಲಸ ಮಾಡುತ್ತೆ?

ಎಲಾನ್‌ ಮಸ್ಕ್‌ ಕೇವಲ ಎಕ್ಸ್‌ (ಟ್ವಿಟ್ಟರ್‌) ವಿಷಯಕ್ಕೆ ಮಾತ್ರವಲ್ಲದೆ ಇತರೆ ತಂತ್ರಜ್ಞಾನ ವಿಭಾಗದಲ್ಲಿಯೂ ಮುಂಚೂಣಿಯಲ್ಲಿದ್ದಾರೆ. ಅದರಲ್ಲೂ ಹೊಸ ಹೊಸ ಅನ್ವೇಷಣೆ ವಿಷಯದಲ್ಲಿ ಮುಂಚೂಣಿಯಲ್ಲಿರುವ ಹೆಸರು ಇದು. ಈ ನಡುವೆ ಇಡೀ ಜಗತ್ತಿನಲ್ಲೇ ಜನರಿಗೆ ಕಾತುರ ಉಂಟು ಮಾಡಿದ್ದ ಅವರ ನ್ಯೂರಾಲಿಂಕ್ ಚಿಪ್‌ (Neuralink chip) ಅನ್ನು ರೋಗಿಯೊಬ್ಬರ ಮಿದುಳಿಗೆ ಯಶಸ್ವಿಯಾಗಿ ಅಳವಡಿಸಲಾಗಿದೆ.

ಹೌದು, ಮಿದುಳಿಗೆ ಚಿಪ್ಪೇ ಅನ್ನೋ ಪ್ರಶ್ನೆ ನಿಮ್ಮಲ್ಲಿ ಮೂಡಿರಬಹುದು. ಆದರೆ ಇದು ಸತ್ಯ. ಅಷ್ಟೇ ಅಲ್ಲ ಮೊದಲ ನ್ಯೂರಾಲಿಂಕ್ ಸಂಪರ್ಕಿತ ಮಾನವನು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದಾನೆ ಅನ್ನೋದು ಸಹ ಸತ್ಯವಾದ ವಿಚಾರವಾಗಿದೆ. ಹಾಗಿದ್ರೆ, ಈ ಚಿಪ್‌ ಅನ್ನು ಯಾರಿಗೆ ಹಾಕಲಾಗುತ್ತದೆ?, ಇದರ ಉದ್ದೇಶ ಏನು?, ಇದು ಹೇಗೆಲ್ಲಾ ಕೆಲಸ ಮಾಡಲಿದೆ ಎಂಬಿತ್ಯಾದಿ ಮಾಹಿತಿ ಇಲ್ಲಿದೆ ನೋಡಿ.

ರೋಗಿಯ ಮೆದುಳಿನಲ್ಲಿ ನ್ಯೂರಾಲಿಂಕ್ ಚಿಪ್‌ ಅಳವಡಿಕೆ ಯಶಸ್ವಿ!

ನ್ಯೂರಾಲಿಂಕ್ ಚಿಪ್‌: ಎಲಾನ್ ಮಸ್ಕ್‌ ತನ್ನ ನ್ಯೂರೋಟೆಕ್ನಾಲಜಿ ಸ್ಟಾರ್ಟ್ಅಪ್, ನ್ಯೂರಾಲಿಂಕ್ (Neuralink) ತನ್ನ ಮೊದಲ ರೋಗಿಗೆ ಯಶಸ್ವಿಯಾಗಿ ಮೆದುಳಿನ ಚಿಪ್ ಅನ್ನು ಅಳವಡಿಸಿದೆ ಎಂದು ಎಕ್ಸ್‌ ನಲ್ಲಿ ಮಾಹಿತಿ ಬರೆದಿದ್ದಾರೆ. ಅಲ್ಲದೆ ಆರಂಭಿಕ ಫಲಿತಾಂಶಗಳನ್ನು ಭರವಸೆಯ ನ್ಯೂರಾನ್ ಸ್ಪೈಕ್ ಪತ್ತೆ ಎಂದು ಕರೆಯಲಾಗಿದೆ. ಜೊತೆಗೆ ಈ ಸಂಬಂಧ ಮಸ್ಕ್‌ ಸ್ವತಃ ಮಾಹಿತಿ ನೀಡಿದ್ದು, ಮೊದಲ ನ್ಯೂರಾಲಿಂಕ್-ಸಂಪರ್ಕಿತ ಮಾನವನು ಉತ್ತಮವಾಗಿ ಕೆಲಸ ಮಾಡುತ್ತಿದ್ದಾನಂತೆ.

ನ್ಯೂರಾಲಿಂಕ್‌ನ ಸಹ-ಸಂಸ್ಥಾಪಕರಾಗಿರುವ ಎಲಾನ್ ಮಸ್ಕ್ ಈ ಮೊದಲು ಮೊದಲ ಮಾನವ ಮೆದುಳಿನ ಇಂಪ್ಲಾಂಟ್ ಅನ್ನು ಸ್ಥಾಪಿಸುವುದಾಗಿ ಘೋಷಣೆ ಮಾಡಿದ್ದರು. ಅದರಂತೆ ಮಾನವನ ಮೆದುಳು ಮತ್ತು ಕಂಪ್ಯೂಟರ್‌ಗಳ ನಡುವೆ ನೇರ ಸಂವಹನ ಮಾರ್ಗಗಳನ್ನು ಸ್ಥಾಪಿಸುವ ಕಾರಣಕ್ಕೆ 2016 ರಲ್ಲಿ ಮಸ್ಕ್ ಈ ಕಂಪೆನಿಯನ್ನು ಆರಂಭ ಮಾಡಿದ್ದರು. ಅದರಂತೆ ಈಗ ಇದು ಮೊದಲ ಬಾರಿಗೆ ಯಶಸ್ಸನ್ನು ಸಾಧಿಸಿದೆ.

ರೋಗಿಯ ಮೆದುಳಿನಲ್ಲಿ ನ್ಯೂರಾಲಿಂಕ್ ಚಿಪ್‌ ಅಳವಡಿಕೆ ಯಶಸ್ವಿ!

ಇದರಿಂದ ಪ್ರಯೋಜನ ಏನು?: ನ್ಯೂರಾಲಿಂಕ್‌ನ ಗುರಿಯು ಮಾನವ ಸಾಮರ್ಥ್ಯಗಳನ್ನು ಗಮನಾರ್ಹವಾಗಿ ಸುಧಾರಿಸುವುದೇ ಆಗಿದೆ. ಅಂದರೆ ಎಎಲ್ಎಸ್‌ ಮತ್ತು ಪಾರ್ಕಿನ್ಸನ್‌ನಂತಹ ನರವೈಜ್ಞಾನಿಕ ಅಸ್ವಸ್ಥತೆಗಳನ್ನು ಪರಿಹರಿಸುವುದು ಇದರ ಉದ್ದೇಶವಾಗಿದ್ದು, ಮಾನವರು ಮತ್ತು ಕೃತಕ ಬುದ್ಧಿಮತ್ತೆಯ ನಡುವೆ ಸಂಭಾವ್ಯ ಸಹಜೀವನದ ಸಂಬಂಧವನ್ನು ಸ್ಥಾಪಿಸಲು ಈ ಚಿಪ್‌ ಕೆಲಸ ಮಾಡಲಿದೆ.

ಈ ಚಿಪ್‌ ಅನ್ನು ಯಾರ ಮೆದುಳಲ್ಲಿ ಅಳವಡಿಸಲಾಗುತ್ತದೆಯೋ ಅವರ ಆಲೋಚನೆಯಂತೆ ಆ ಚಿಪ್‌ ಕೆಲಸ ಮಾಡಲಿದೆ. ಅಂದರೆ ಅವರು ಮನಸ್ಸಿನಲ್ಲಿ ಅಂದುಕೊಂಡಿದ್ದನ್ನು ಈ ಚಿಪ್‌ ತಂತ್ರಜ್ಞಾನ ಸಹಾಯದಿಂದ ಮಾಡುತ್ತದೆ. ಈ ವಿಭಾಗದಲ್ಲಿ ಸ್ಮಾರ್ಟ್‌ಫೋನ್‌ ಗಳು ಅಥವಾ ಕಂಪ್ಯೂಟರ್‌ಗಳಂತ ಡಿವೈಸ್ ಗಳನ್ನು ನೇರವಾಗಿ ಕಂಟ್ರೋಲ್‌ ಮಾಡಬಹುದಾಗಿದೆ.

ಇನ್ನು ನ್ಯೂರಾಲಿಂಕ್ ಇಂಪ್ಲಾಂಟ್ ಅನ್ನು ಪಡೆದವರು ಚೆನ್ನಾಗಿ ಚೇತರಿಸಿಕೊಳ್ಳುತ್ತಿದ್ದಾರೆ ಎಂದು ಎಲಾನ್‌ ಮಸ್ಕ್ ವರದಿ ಮಾಡಿದ್ದು, ನ್ಯೂರಾಲಿಂಕ್‌ನ ನ್ಯೂರೋಟೆಕ್ನಾಲಜಿಯ ಸುರಕ್ಷತೆ ಮತ್ತು ಫಲಿತಾಂಶವನ್ನು ಮೌಲ್ಯೀಕರಿಸುವಲ್ಲಿ ಈ ಸಕಾರಾತ್ಮಕ ಫಲಿತಾಂಶವು ನಿರ್ಣಾಯಕ ಹೆಜ್ಜೆಯಾಗಿದೆ ಎಂದಿರುವ ಅವರು ಈ ಬಗ್ಗೆ ಆಶಾವಾದವನ್ನು ವ್ಯಕ್ತಪಡಿಸಿದ್ದಾರೆ.

ಈ ನ್ಯೂರಾಲಿಂಕ್‌ನ ತಂತ್ರಜ್ಞಾನವು ಲಿಂಕ್ ಎಂದು ಕರೆಯಲ್ಪಡುವ ಇಂಪ್ಲಾಂಟ್‌ನ ಮೇಲೆ ಅವಲಂಬಿತವಾಗಿದೆ. ಇದು ನಾಣ್ಯದ ಗಾತ್ರದ ಡಿವೈಸ್‌ ಆಗಿದೆ. ಇದನ್ನು ಮಾನವ ಮೆದುಳಿನೊಳಗೆ ಹಾಕಲು ವಿಶೇಷವಾದ ಶಸ್ತ್ರಚಿಕಿತ್ಸೆಯ ಅಗತ್ಯವಿರುತ್ತದೆ. ಹಾಗೆಯೇ ಕಂಪನಿಯು ತನ್ನ ಮೆದುಳಿನ ಇಂಪ್ಲಾಂಟ್‌ಗಳನ್ನು ಮನುಷ್ಯರ ಮೇಲೆ ಪರೀಕ್ಷಿಸಲು ಯುನೈಟೆಡ್ ಸ್ಟೇಟ್ಸ್‌ನಲ್ಲಿ ನಿಯಂತ್ರಕ ಅನುಮೋದನೆಯನ್ನು ಪಡೆದುಕೊಂಡಿದೆ.

ರೋಗಿಯ ಮೆದುಳಿನಲ್ಲಿ ನ್ಯೂರಾಲಿಂಕ್ ಚಿಪ್‌ ಅಳವಡಿಕೆ ಯಶಸ್ವಿ!

ಪ್ರತಿಯೊಂದು ವೈರ್‌ಲೆಸ್ ನ್ಯೂರಾಲಿಂಕ್ ಡಿವೈಸ್‌ 1,000 ಕ್ಕಿಂತ ಹೆಚ್ಚು ಸೂಪರ್‌ಥಿನ್, ಹೊಂದಿಕೊಳ್ಳುವ ಕಂಡಕ್ಟರ್‌ಗಳ ಚಿಪ್ ಮತ್ತು ಎಲೆಕ್ಟ್ರೋಡ್ ಅರೇಗಳನ್ನು ಹೊಂದಿರುತ್ತದೆ. ಇದು ಶಸ್ತ್ರಚಿಕಿತ್ಸೆಯ ರೋಬೋಟ್ ಸೆರೆಬ್ರಲ್ ಕಾರ್ಟೆಕ್ಸ್‌ಗೆ ಹೀಲ್‌ ಮಾಡುವ ಸಾಮರ್ಥ್ಯ ಪಡೆದಿದೆ . ಅಲ್ಲಿ ವಿದ್ಯುದ್ವಾರಗಳನ್ನು ಚಲನೆಗೆ ಸಂಬಂಧಿಸಿದ ಆಲೋಚನೆಗಳನ್ನು ನೋಂದಾಯಿಸಲು ಇದನ್ನು ವಿನ್ಯಾಸಗೊಳಿಸಲಾಗಿದೆ. ಇನ್ನು ಹಲವಾರು ಪ್ರತಿಸ್ಪರ್ಧಿ ಸಂಸ್ಥೆಗಳು ಈಗಾಗಲೇ ಇದೇ ರೀತಿಯ ಡಿವೈಸ್‌ ಅನ್ನು ಅಳವಡಿಸಿವೆ ಅನ್ನೋದು ನಿಮ್ಮ ಗಮನಕ್ಕೆ ಇರಲಿ.

ನ್ಯೂರಾಲಿಂಕ್ ಪರೀಕ್ಷೆ: ನ್ಯೂರಾಲಿಂಕ್ ಅನ್ನು ಹಿಂದೆ ದೊಡ್ಡ ಮಟ್ಟದಲ್ಲಿ ಟೀಕೆ ಮಾಡಲಾಗಿತ್ತು. ಇದಕ್ಕೆ ಕಾರಣ ಆಗಿದ್ದು ಹಲವಾರು ಪ್ರಾಣಿಗಳ ಸಾವು. ಆರಂಭದಲ್ಲಿ ಕುರಿ, ಮಂಗಗಳು ಮತ್ತು ಹಂದಿಗಳು ಸೇರಿದಂತೆ ಸುಮಾರು 1,500 ಪ್ರಾಣಿಗಳ ಸಾವಿಗೆ ಈ ಚಿಪ್‌ ಕಾರಣವಾಗಿತ್ತು. ಇದಾದ ನಂತರದಲ್ಲಿ ಪ್ರಾಣಿ ದಯಾ ಸಂಘದವರು ಇವರ ವಿರುದ್ಧ ತಿರುಗಿ ಬಿದ್ದಿದ್ದರು. ಜುಲೈ 2023 ರಲ್ಲಿ ಯುಎಸ್‌ ಕೃಷಿ ಇಲಾಖೆಯ ಮುಖ್ಯಸ್ಥರು, ಇದರ ಸಂಬಂಧ ತನಿಖೆ ಮಾಡಿದ ನಂತರ ಸಂಸ್ಥೆಯಲ್ಲಿ ಪ್ರಾಣಿ ಸಂಶೋಧನಾ ನಿಯಮಗಳ ಯಾವುದೇ ಉಲ್ಲಂಘನೆ ಕಂಡುಬಂದಿಲ್ಲ ಎಂದು ವರದಿ ನೀಡಿದ್ದರು.

Best Mobiles in India

English summary
Neuralink chip has now been successfully implanted into a patient's brain. The patient now seems to be communicating better through this chip.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+