ಆಧಾರ್ ಕಾರ್ಡ್‌ ಡೌನ್‌ಲೋಡ್‌ ಮಾಡುವಾಗ ಈ ತಪ್ಪು ಎಂದಿಗೂ ಮಾಡಬೇಡಿ!

|

ದೇಶದಲ್ಲಿ ಆಧಾರ್ ಕಾರ್ಡ್‌ ಪ್ರತಿಯೊಬ್ಬರ ಅಗತ್ಯ ದಾಖಲೆಗಳಲ್ಲಿ ಒಂದಾಗಿದೆ. ಸರ್ಕಾರದ ಯಾವುದೇ ಸೇವೆ, ಸಬ್ಸಿಡಿ ಹಾಗೂ ವಿಳಾಸ ಪುರಾವೆಯಾಗಿ ಆಧಾರ್ ಕಾರ್ಡ್ ಅವಶ್ಯವಾಗಿದೆ. ಅಗತ್ಯ ಸಂದರ್ಭಗಳಲ್ಲಿ ಆಧಾರ್ ಕಾರ್ಡ್‌ ಡಿಜಿಟಲ್ ರೂಪದಲ್ಲಿಯೂ ಡೌನ್‌ಲೋಡ್ ಮಾಡಿಕೊಳ್ಳುವ ಅವಕಾಶ ನೀಡಲಾಗಿದೆ. ಆದರೆ ಇ-ಆಧಾರ್ ಕಾರ್ಡ್‌ ಡೌನ್‌ಲೋಡ್ ಮಾಡಿಕೊಳ್ಳುವಾಗ ಎಚ್ಚರವಹಿಸುವಂತೆ ಯುನಿಕ್ ಐಡೆಂಟಿಫಿಕೇಶನ್ ಅಥಾರಿಟಿ ಆಫ್ ಇಂಡಿಯಾ (UIDAI) ಸಾರ್ವಜನಿಕರಿಗೆ ಕೆಲವು ಮಹತ್ತರ ಸಲಹೆಗಳನ್ನು ತಿಳಿಸಿದೆ.

UIDAI

ಹೌದು, ಯುಐಡಿಎಐ-UIDAI ಇ-ಆಧಾರ್ ಡೌನ್‌ಲೋಡ್ ಮಾಡುವಾಗ ಸಾವರ್ಜನಿಕರು ಜಾಗೃತಿವಹಿಸಬೇಕು ಎನ್ನುವ ಬಗ್ಗೆ ತನ್ನ ಅಧಿಕೃತ ಟ್ವಿಟ್ಟರ್ ಖಾತೆಯಿಂದ ಟ್ವೀಟ್ ಮೂಲಕ ಸಲಹೆ ನೀಡಿದೆ. ಜನರು ಇ-ಆಧಾರ್ ಡೌನ್‌ಲೋಡ್ ಮಾಡಲು ದಯವಿಟ್ಟು ಇಂಟರ್ನೆಟ್ ಕೆಫೆ ಅಥವಾ ಸಾರ್ವಜನಿಕ ಕಂಪ್ಯೂಟರ್ ಅನ್ನು ಬಳಸುವುದನ್ನು ತಪ್ಪಿಸಿ ಎಂದಿದೆ. ಆದಾಗ್ಯೂ, ಅನಿವಾರ್ಯ ಸಂದರ್ಭಗಳಲ್ಲಿ ಇಂಟರ್ನೆಟ್ ಕೆಫೆಗಳಲ್ಲಿ ಇ-ಆಧಾರ್ ಡೌನ್‌ಲೋಡ್ ಮಾಡಿದರೆ, ಕೆಲಸ ಮುಗಿದ ಬಳಿಕ, ಇ-ಆಧಾರ್‌ನ ಎಲ್ಲಾ ಡೌನ್‌ಲೋಡ್ ಮಾಡಿದ ಪ್ರತಿಗಳನ್ನು ಮರೆಯದೆ ಡಿಲೀಟ್ ಮಾಡುವಂತೆ ಶಿಫಾರಸು ಮಾಡಿದೆ.

ಡೌನ್‌ಲೋಡ್

ಇಂಟರ್ನೆಟ್ ಕೆಫೆಗಳಲ್ಲಿ ಡೌನ್‌ಲೋಡ್ ಮಾಡಿದ ಇ-ಆಧಾರ್ ಕಾರ್ಡ್ ಅನ್ನು ಕೆಲಸ ಮುಗಿದ ಬಳಿಕ ಡಿಲೀಟ್ ಮಾಡದೆ ಇದ್ದಲ್ಲಿ, ಅದು ದುರುಪಯೋಗ/ದುರುದ್ದೇಶ ಬಳಕೆ ಆಗುವ ಸಾಧ್ಯತೆಗಳಿರುತ್ತವೆ. ಈ ನಿಟ್ಟಿನಲ್ಲಿ ಯುಐಡಿಎಐ ಸಾರ್ವಜನಿಕರಿಗೆ ಸೂಚನೆ ನೀಡಿದೆ. ಆಧಾರ್ ಕಾರ್ಡ್ ಸಂಬಂಧಿಸಿದಂತೆ ಕೆಲವು ಮಹತ್ತರ ಅಂಶಗಳನ್ನು ಮುಂದೆ ತಿಳಿಯೋಣ ಬನ್ನಿರಿ.

ಯಾವುದೇ

* ನಿಮ್ಮ ಒಟಿಪಿಯನ್ನು ಬೇರೆ ಯಾವುದೇ ವ್ಯಕ್ತಿಯೊಂದಿಗೆ ಹಂಚಿಕೊಳ್ಳಬೇಡಿ.
* ನಿಮ್ಮ ಮೊಬೈಲ್ ಸಂಖ್ಯೆಯೊಂದಿಗೆ ಆಧಾರ್ ಕಾರ್ಡ್ ಅನ್ನು ಲಿಂಕ್ ಮಾಡಲು ಇತರರನ್ನು ಎಂದಿಗೂ ಅನುಮತಿಸಬೇಡಿ.
* ಇದು ಮಾತ್ರವಲ್ಲ, ನಿಮ್ಮ ಆಧಾರ್ ಕಾರ್ಡ್ ಅನ್ನು ಬೇರೊಬ್ಬರ ಸಂಖ್ಯೆಯಲ್ಲಿ ನೋಂದಾಯಿಸುವುದನ್ನು ತಪ್ಪಿಸಲು ಪ್ರಯತ್ನಿಸಿ.
* ಆಧಾರ್ ಕಾರ್ಡ್‌ನ ವರ್ಚುವಲ್ ಐಡಿಯನ್ನು ಬಳಸಲು ಪ್ರಯತ್ನಿಸಿ.
* ನಿಮ್ಮ ಬಯೋಮೆಟ್ರಿಕ್ ಅನ್ನು ಎಲ್ಲಾ ಸಮಯದಲ್ಲೂ ಲಾಕ್ ಮಾಡಲು ಪ್ರಯತ್ನಿಸಿ.

UIDAI mAadhaar ಅಪ್ಲಿಕೇಶನ್ ಮೂಲಕ ಆಧಾರ್‌ ಬಯೋಮೆಟ್ರಿಕ್ಸ್ ಅನ್ನು ಲಾಕ್ ಮಾಡುವುದು ಹೇಗೆ?

UIDAI mAadhaar ಅಪ್ಲಿಕೇಶನ್ ಮೂಲಕ ಆಧಾರ್‌ ಬಯೋಮೆಟ್ರಿಕ್ಸ್ ಅನ್ನು ಲಾಕ್ ಮಾಡುವುದು ಹೇಗೆ?

1. ಮೊದಲನೆಯದು mAadhaar ಅಪ್ಲಿಕೇಶನ್ ಕೆಳಭಾಗದಲ್ಲಿರುವ ಬಯೋಮೆಟ್ರಿಕ್ಸ್ ಅನ್ಲಾಕ್ಡ್ ಅಧಿಸೂಚನೆಯನ್ನು ಕ್ಲಿಕ್ ಮಾಡುವುದು.
2. ನಿಮ್ಮನ್ನು mAadhaar ಪಾಸ್‌ವರ್ಡ್ ಕೇಳಲಾಗುತ್ತದೆ.
3. ಒಮ್ಮೆ ದೃಡೀಕರಿಸಿದ ನಂತರ, ನಿಮ್ಮ ಬಯೋಮೆಟ್ರಿಕ್ಸ್ ಲಾಕ್ ಆಗುತ್ತದೆ. ನಿಮಗೆ ಈಗ ಯಾವುದೇ ವಹಿವಾಟು ಮಾಡಲು ಸಾಧ್ಯವಾಗುವುದಿಲ್ಲ.

ಯುಐಡಿಎಐ ಅಧಿಕೃತ ವೆಬ್‌ಸೈಟ್ ಮೂಲಕ ಆಧಾರ್‌ ಬಯೋಮೆಟ್ರಿಕ್ಸ್ ಅನ್ನು ಲಾಕ್ ಮಾಡುವುದು ಹೇಗೆ?

ಯುಐಡಿಎಐ ಅಧಿಕೃತ ವೆಬ್‌ಸೈಟ್ ಮೂಲಕ ಆಧಾರ್‌ ಬಯೋಮೆಟ್ರಿಕ್ಸ್ ಅನ್ನು ಲಾಕ್ ಮಾಡುವುದು ಹೇಗೆ?

1. ನಿಮ್ಮ ಆಧಾರ್ ಸಂಖ್ಯೆ ಮತ್ತು ಭದ್ರತಾ ಕೋಡ್ ಅನ್ನು ಒಮ್ಮೆ ನೀಡಿದ ನಂತರ, ನಿಮಗೆ ಒಟಿಪಿ ಕಳುಹಿಸಲಾಗುತ್ತದೆ.
2. OTP ಅಥವಾ TOTP ಅನ್ನು ನಮೂದಿಸಿ.
3. ನಿಮ್ಮ ಆಧಾರ್ ಲಾಕ್ ಆಗಿದೆಯೇ ಅಥವಾ ಅನ್ಲಾಕ್ ಆಗಿದೆಯೇ ಎಂದು ತೋರಿಸುವ ಪೇಜ್‌ಗೆ ನಿಮ್ಮನ್ನು ಕರೆದೊಯ್ಯಲಾಗುತ್ತದೆ.
4. ಈ ಪುಟದಿಂದ ನೀವು ಅನ್ಲಾಕ್ ಮಾಡಲು (ಲಾಕ್ ಆಗಿದ್ದರೆ) ಅಥವಾ ಲಾಕ್ ಮಾಡಲು (ಅನ್ಲಾಕ್ ಆಗಿದ್ದರೆ) ನಿಮಗೆ ಸಾಧ್ಯವಾಗುತ್ತದೆ.
5. ಒಮ್ಮೆ ನೀವು ಆಧಾರ್ ಅನ್ನು ಅನ್ಲಾಕ್ ಮಾಡಿದರೆ, ಅದನ್ನು ಹತ್ತು ನಿಮಿಷಗಳ ಕಾಲ ಅನ್ಲಾಕ್ ಮಾಡಲಾಗುತ್ತದೆ.
6. ಇದು 10 ನಿಮಿಷಗಳ ನಂತರ ಸ್ವಯಂಚಾಲಿತವಾಗಿ ಲಾಕ್ ಆಗುತ್ತದೆ.

Most Read Articles
Best Mobiles in India

English summary
Never Leave Your E-Aadhaar Copy On A Public Computer: UIDAI.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X