ನಿಮ್ಮ ಫೋನ್ ಅನ್ನು 1 ನಿಮಿಷದಲ್ಲಿ ಚಾರ್ಜ್ ಮಾಡುವ ಸೂಪರ್ ಬ್ಯಾಟರಿ

Written By:

ದುಬಾರಿಯಲ್ಲದ ಅಲ್ಯುಮಿನಿಯಮ್ ಬ್ಯಾಟರಿಯೊಂದು ನಿಮ್ಮ ಸೆಲ್‌ಫೋನ್ ಅನ್ನು ಒಂದೇ ನಿಮಿಷದಲ್ಲಿ ಚಾರ್ಜ್ ಮಾಡುವಂತಿದ್ದರೆ ವಾಹ್ ಇಂತಹ ಉಪಾಯ ಎಷ್ಟೊಂದು ಚೆನ್ನಾಗಿದೆ ಅಲ್ಲವೇ? ಇಂತಹುದೇ ಆಲೋಚನೆಯೊಂದು ನಿಮ್ಮ ಮನದಲ್ಲಿ ಸುಳಿದಿದೆ ಎಂದಲ್ಲಿ ಅದು ನಿಜವಾಗುತ್ತಿದೆ.

ಇದನ್ನೂ ಓದಿ: ಫಾಸ್ಟ್ ಏಂಡ್ ಫ್ಯುರಿಯಸ್ 7 ನಲ್ಲಿ ಟೆಕ್ನಿಕ್ ಆಟ ಹೇಗಿದೆ?

ಸ್ಟ್ಯಾನ್‌ಫೋರ್ಡ್‌ನ ವಿಜ್ಞಾನಿಗಳು ಇಂತಹುದೇ ಒಂದು ಬ್ಯಾಟರಿಯನ್ನು ಕಂಡುಹುಡುಕಿದ್ದು ಪ್ರಸ್ತುತ ಲಿಥೀಯಮ್ ಬ್ಯಾಟರಿಗಿಂತ ಇದು ಚೆನ್ನಾಗಿದೆ ಹಾಗೂ ಸ್ಮಾರ್ಕ್ ಅನ್ನು ಉಂಟುಮಾಡುವುದಿಲ್ಲ ಎಂಬುದು ತಿಳಿದು ಬಂದಿದೆ.

ನಿಮ್ಮ ಫೋನ್ ಅನ್ನು 1 ನಿಮಿಷದಲ್ಲಿ ಚಾರ್ಜ್ ಮಾಡುವ ಸೂಪರ್ ಬ್ಯಾಟರಿ

ನಾವು ರೀಚಾರ್ಜ್ ಮಾಡಬಹುದಾದ ಅಲ್ಯುಮಿನಿಯಮ್ ಬ್ಯಾಟರಿಯನ್ನು ಅಭಿವೃದ್ಧಿಪಡಿಸಿದ್ದು ಪ್ರಸ್ತುತ ಬಳಕೆಯಲ್ಲಿರುವ ಪರಿಸರಕ್ಕೆ ಹಾನಿಕಾರಕವಾಗಿರುವ ಅಲ್ಕಲೈನ್ ಬ್ಯಾಟರಿಯನ್ನು ಸ್ಥಾನಾಂತರಿಸಿ ಈ ಬ್ಯಾಟರಿಯನ್ನು ಅಳವಡಿಸಲಿದ್ದೇವೆ. ಎಂದು ಸ್ಟ್ಯಾನ್‌ಫೋರ್ಡ್ ವಿಶ್ವವಿದ್ಯಾನಿಲಯದ ಪ್ರೊಫೆಸರ್ ಹೋಂಗ್ಜಿ ಡೈ ತಿಳಿಸಿದ್ದಾರೆ.

ಇದನ್ನೂ ಓದಿ: ಉತ್ತಮ ಬ್ಯಾಟರಿ ಹೊಂದಿರುವ ಮೈಕ್ರೋಮ್ಯಾಕ್ಸ್‌ನ ಟಾಪ್‌ ಸ್ಮಾರ್ಟ್‌ಫೋನ್‌ಗಳು

ನೀವು ಅದರ ಮೇಲೆ ಡ್ರಿಲ್ ಮಾಡಿದರೆ ಕೂಡ ನಮ್ಮ ಹೊಸ ಬ್ಯಾಟರಿ ಬೆಂಕಿಯನ್ನುಗುಳುವುದಿಲ್ಲ ಎಂದು ಡೈ ತಿಳಿಸಿದ್ದಾರೆ. ತಮ್ಮ ಅಧ್ಯಯನದಲ್ಲಿ ಗ್ರಾಫೈಟ್ ಮೆಟೀರಿಯಲ್ ಅನ್ನು ಡೈ ಗುರುತಿಸಿದ್ದು ಇದು ನಮಗೆ ಉತ್ತಮ ಕಾರ್ಯಾಚರಣೆಯನ್ನು ನಡೆಸಲು ಅನುವು ಮಾಡಿಕೊಟ್ಟಿದೆ ಎಂದು ಡೈ ತಿಳಿಸಿದ್ದಾರೆ.

English summary
A new inexpensive aluminium battery that could charge cellphones in just one minute has been developed by Stanford scientists.
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot