Home
ಸುದ್ದಿಜಾಲ

Airport: ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಹೊಸ ವ್ಯವಸ್ಥೆ: ಇನ್ಮುಂದೆ ನಿಮ್ಮ ಬ್ಯಾಗಲ್ಲಿ ಏನಿದೆ ತೆಗೀರಿ ಅನ್ನೋ ಮಾತೇ ಇಲ್ಲ!

ದಕ್ಷಿಣ ಭಾರತದ ಅತ್ಯಂತ ಜನನಿಬಿಡ ವಿಮಾನ ನಿಲ್ದಾಣವಾಗಿರುವ ಬೆಂಗಳೂರು ವಿಮಾನ ನಿಲ್ದಾಣ ದೇಶದ ಮೂರನೇ ಅತಿದೊಡ್ಡ ವಿಮಾನ ನಿಲ್ದಾಣವಾಗಿದೆ. ಇದು 4,000 ಎಕರೆ ಭೂಮಿಯಲ್ಲಿ ಹರಡಿದ್ದು, ಈ ಮೂಲಕ ಜಗತ್ತಿನ ಎಲ್ಲಾ ವಿಮಾನ ನಿಲ್ದಾಣಗಳಿಗೂ (Airport) ಕೊಂಡಿಯಾಗಿ ಕೆಲಸ ಮಾಡುತ್ತಿದೆ. ಈ ನಡುವೆ ಈ ವಿಮಾನ ನಿಲ್ದಾಣದಲ್ಲಿ ಮಹತ್ವದ ಬೆಳವಣಿಗೆ ಕಂಡುಬಂದಿದೆ.

ಹೌದು, ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ (Bangalore Kempegowda International Airport) ಟರ್ಮಿನಲ್ 2 (T2) ಮೂಲಕ ಪ್ರಯಾಣಿಸುವ ಪ್ರಯಾಣಿಕರು ಇನ್ಮುಂದೆ ಯಾವುದೇ ಸಮಸ್ಯೆ ಇಲ್ಲದೆ ಹಾಗೂ ಹೆಚ್ಚಿನ ಭದ್ರತಾ ತಪಾಸಣೆಗೆ ಒಳಗಾಗದೆ ಸಲೀಸಾಗಿ ಎಂಟ್ರಿ ಆಗಬಹುದಾಗಿದೆ. ಹಾಗಿದ್ರೆ, ಏನಿದು ಹೊಸ ಬೆಳವಣಿಗೆ?, ಈ ರೀತಿ ಏನೂ ಚೆಕ್‌ ಮಾಡದೆ ಪ್ರಯಾಣಿಕರನ್ನು ಒಳಗೆ ಬಿಟ್ಟರೆ ಸಮಸ್ಯೆ ಆಗುವುದಿಲ್ಲವೇ ಎನ್ನುವ ಪ್ರಶ್ನೆಗೆ ಇಲ್ಲದೆ ನೋಡಿ ಉತ್ತರ.

ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಹೊಸ ವ್ಯವಸ್ಥೆ ...

ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಹೊಸ ವ್ಯವಸ್ಥೆ: ಈ ಮೊದಲು ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಎಂಟ್ರಿ ನೀಡಬೇಕು ಎಂದರೆ ಅತ್ಯಂತ ಕಠಿಣ ಭದ್ರತಾ ತಪಾಸಣೆಗೆ ಒಳಗಾಗಬೇಕಿತ್ತು. ಪರಿಣಾಮ ದೊಡ್ಡ ಸಾಲು ಹಾಗೂ ದೀರ್ಘ ಸಮಯದ ಕಾಯುವಿಕೆ ಪ್ರಯಾಣಿಕರಿಗೆ ಬೇಸರ ಉಂಟಾಗುವಂತೆ ಮಾಡಿತ್ತು. ಆದರೆ, ಈಗ ಈ ಸಮಸ್ಯೆಗೆ ಮುಕ್ತಿಯಾಡಲು ಸಂಸ್ಥೆ ಮುಂದಾಗಿದೆ.

ಅಂದರೆ ನಿಮ್ಮ ಬ್ಯಾಗ್‌ನ ಒಳಗೆ ಇರುವ ಸ್ಮಾರ್ಟ್‌ ಡಿವೈಸ್‌ಗಳು ಅಥವಾ ಇನ್ನಿತರೆ ಯಾವುದೇ ವಸ್ತುಗಳನ್ನು ಓಪನ್‌ ಮಾಡಿ ಭದ್ರತಾ ಸಿಬ್ಬಂದಿಗಳಿಗೆ ತೋರಿಸುವ ಅಗತ್ಯ ಇಲ್ಲ. ಈ ಮೂಲಕ ವಿಮಾನ ನಿಲ್ದಾಣವು ಕೈಚೀಲಗಳಿಂದ ವೈಯಕ್ತಿಕ ಎಲೆಕ್ಟ್ರಾನಿಕ್ ಡಿವೈಸ್‌ಗಳನ್ನು ತೆಗೆದು ತೋರಿಸುವ ಅಗತ್ಯವನ್ನು ತೆಗೆದುಹಾಕಲು ಹೊಸ ಹೆಜ್ಜೆಯನ್ನು ತೆಗೆದುಕೊಂಡಿದೆ. ಅಂದರೆ T2 ನಲ್ಲಿ ಕಂಪ್ಯೂಟರ್ ಟೊಮೊಗ್ರಫಿ ಎಕ್ಸ್-ರೇ (CTX) ಯಂತ್ರಕ್ಕಾಗಿ ಪ್ರಾಯೋಗಿಕ ಚಾಲನೆಯನ್ನು ಪ್ರಾರಂಭಿಸುವುದನ್ನು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಹೊಸ ವ್ಯವಸ್ಥೆ ...

ಇನ್ನು ಮುಂದಿನ ಕೆಲವು ವಾರಗಳಲ್ಲಿ ಪ್ರಾರಂಭವಾಗಲಿರುವ ಈ ಪ್ರಯೋಗವನ್ನು ಆರಂಭದಲ್ಲಿ ದೇಶೀಯ ಪ್ರಯಾಣಿಕರಿಗೆ ನಿರ್ದೇಶಿಸಲಾಗಿದೆ. ಈ ವ್ಯವಸ್ಥೆಯು ಡಿಸೆಂಬರ್ 2023 ರ ವೇಳೆಗೆ ಸಂಪೂರ್ಣವಾಗಿ ಕಾರ್ಯನಿರ್ವಹಿಸುವ ನಿರೀಕ್ಷೆಯಿದೆ. ಈ ಮೂಲಕ ಈ ವ್ಯವಸ್ಥೆ ಹೊಂದಿದ ಭಾರತದ ಮೊದಲ ವಿಮಾನ ನಿಲ್ದಾಣವಾಗಿ ಇದು ಗುರುತಿಸಿಕೊಳ್ಳಲಿದೆ. ಈ ಸಿಟಿಎಕ್ಸ್‌ ಯಂತ್ರ(Computed Tomography X-ray) ಆಟೋಮ್ಯಾಟಿಕ್‌ ಟ್ರೇ ಮರುಪಡೆಯುವಿಕೆ ಸಿಸ್ಟಮ್ (ATRS) ಮತ್ತು ಫುಲ್‌ ಬಾಡಿ ಸ್ಕ್ಯಾನರ್‌ ಆಗಿ ಕೆಲಸ ಮಾಡಲಿದ್ದು, ಇದು ಹೆಚ್ಚಿನ ಭದ್ರತಾ ಕ್ರಮಗಳು ಮತ್ತು ಕಾರ್ಯಾಚರಣೆಯ ದಕ್ಷತೆಯ ಭರವಸೆ ನೀಡುತ್ತದೆ.

ಅಂದರೆ ಈ ಸಿಟಿಎಕ್ಸ್‌ಯಂತ್ರ ಲ್ಯಾಪ್‌ಟಾಪ್‌ಗಳಂತಹ ಎಲೆಕ್ಟ್ರಾನಿಕ್ ಡಿವೈಸ್‌ಗಳು ಮತ್ತು ಲಿಕ್ವಿಡ್‌ಗಳು, ಏರೋಸಾಲ್‌ಗಳು ಮತ್ತು ಜೆಲ್‌ಗಳು (LAGs) ಎಂದು ವರ್ಗೀಕರಿಸಿದ ವಸ್ತುಗಳು ಪ್ರಯಾಣಿಕರ ಚೀಲಗಳಲ್ಲಿ ಇದ್ದರೆ ಅವುಗಳನ್ನು ಪತ್ತೆ ಮಾಡುತ್ತದೆ ಜೊತೆಗೆ ಸುಲಭ ಪರಿಶೀಲನೆ ಅವಕಾಶ ಮಾಡಿಕೊಡುತ್ತದೆ. ಈ ಮೂಲಕ ಸ್ಕ್ರೀನಿಂಗ್ ಪ್ರಕ್ರಿಯೆಯನ್ನು ವೇಗಗೊಳಿಸುತ್ತದೆ. ಈ ವಿಧಾನವು ಸುರಕ್ಷತಾ ಸ್ಕ್ರೀನಿಂಗ್ ಸಮಯದಲ್ಲಿ ಪ್ರತಿ ವ್ಯಕ್ತಿಗೆ ಅಗತ್ಯವಿರುವ ಟ್ರೇಗಳ ಸಂಖ್ಯೆಯನ್ನು ಗಣನೀಯವಾಗಿ ಕಡಿಮೆ ಸಹ ಮಾಡುತ್ತದೆ.

ಇದರೊಂದಿಗೆ ಸಿಟಿಎಕ್ಸ್‌ಯಂತ್ರದ ಪರಿಚಯವು ವಾಕ್ ಥ್ರೂ ಮೆಟಲ್ ಡಿಟೆಕ್ಟರ್ ಮೂಲಕ ಪ್ರಾಥಮಿಕ ಸ್ಕ್ರೀನಿಂಗ್ ನಂತರ ಪ್ರಯಾಣಿಕರನ್ನು ಕೆಳಗಿಳಿಸುವ ಸಮಸ್ಯೆಯನ್ನು ತೊಡೆದುಹಾಕುತ್ತದೆ. ಇದರೊಂದಿಗೆ ಸುರಕ್ಷತೆ ಮತ್ತು ಪ್ರಯಾಣಿಕರ ಅನುಕೂಲಕ್ಕಾಗಿ ಆದ್ಯತೆ ನೀಡುತ್ತದೆ. ಅದರಲ್ಲೂ ಸ್ಫೋಟಕಗಳನ್ನು ಪತ್ತೆ ಮಾಡುವ ಅಲ್ಗಾರಿದಮ್‌ಗಳೊಂದಿಗೆ ಸಿಟಿಎಕ್ಸ್‌ ಯಂತ್ರ ಉತ್ತಮವಾದ 3D ಚಿತ್ರದ ಗುಣಮಟ್ಟವನ್ನು ನೀಡುತ್ತದೆ.

ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಹೊಸ ವ್ಯವಸ್ಥೆ ...

ಇತರೆ ಭಾರತೀಯ ವಿಮಾನ ನಿಲ್ದಾಣಗಳಿಗೆ ಯಾವಾಗ ಲಭ್ಯ? ಇತರ ವಿಮಾನ ನಿಲ್ದಾಣಗಳು ತಮ್ಮ ಭದ್ರತಾ ಮೂಲಸೌಕರ್ಯವನ್ನು ನವೀಕರಿಸುವ ಪ್ರಕ್ರಿಯೆಯಲ್ಲಿವೆ. ಬ್ಯೂರೋ ಆಫ್ ಸಿವಿಲ್ ಏವಿಯೇಷನ್ ​​​​ಸೆಕ್ಯುರಿಟಿ (BCAS), 50 ಲಕ್ಷ ಪ್ರಯಾಣಿಕರನ್ನು ನಿರ್ವಹಿಸುವ ಪ್ರಮುಖ ವಿಮಾನ ನಿಲ್ದಾಣಗಳನ್ನು ವರ್ಷಾಂತ್ಯದ ವೇಳೆಗೆ ಕ್ಯಾಬಿನ್ ತಪಾಸಣೆಗಾಗಿ 3D ಸಿಟಿಎಕ್ಸ್‌ ಯಂತ್ರಗಳನ್ನು ಸ್ಥಾಪಿಸಲು ಕಡ್ಡಾಯ ಸೂಚನೆ ಸಹ ನೀಡಿದೆ.

Best Mobiles in India

English summary
Officials have announced the start of a trial run for the Computer Tomography X-ray (CTX) machine at Bangalore's Kempegowda International Airport T2.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+