ಮತದಾನದ ಬಗ್ಗೆ ಫೇಸ್‌ಬುಕ್‌ನಿಂದ ಯುವಜನತೆಗೆ ಜಾಗೃತಿ
ಭಾರತದ ಲೋಕಸಭಾ ಚುನಾವಣೆಗೆ ಇನ್ನೇನು ಕೆಲವೇ ತಿಂಗಳುಗಳಿವೆ. ರಾಜಕೀಯ ಪಕ್ಷಗಳು ಅಭ್ಯರ್ಥಿಗಳ ಆಯ್ಕೆಗೆ ಕಸರತ್ತು ನಡೆಸುತ್ತಿದ್ದರೆ ಇತ್ತ ಫೇಸ್‌ಬುಕ್ ಯುವ ಜನರಲ್ಲಿ ಮತದಾನದ ಮಹತ್ವವನ್ನು ಸಾರಲು 'ರಿಜಿಸ್ಟರ್ ವೋಟ್' ಎನ್ನುವ ಹೊಸ ವಿಶೇಷತೆಯಿರುವ ತನ್ನ ಟೈಮ್‌ಲೈನ್ ಆರಂಭಿಸಿದೆ.
ಈ ವರ್ಷ ಹೊಸದಾಗಿ 18 ರಿಂದ 19 ವರ್ಷದೊಳಗಿನ 1.7 ಕೋಟಿ ಯುವ ಜನರು ಮತದಾನ ಹಕ್ಕನ್ನು ಪಡೆಯುವರಿದ್ದಾರೆ. ಹೀಗಾಗಿ ಫೇಸ್‌ಬುಕ್‌ನಲ್ಲಿ ಯುವ ಜನರಿಗೆ ಮತದಾನದ ಬಗ್ಗೆ ಜಾಗೃತಿ ಮೂಡಿಸಲು ಈ ವಿಶೇಷ ಟೈಮ್‌ಲೈನ್ ವಿಶೇಷತೆಯನ್ನು ಫೇಸ್‌ಬುಕ್‌ನಲ್ಲಿ ಅಳವಡಿಸಲು ಮುಂದಾಗಿದ್ದೇವೆ ಎಂದು ಫೇಸ್‌ಬುಕ್ ಇಂಡಿಯಾ ಹೇಳಿದೆ.
ಫೇಸ್‌ಬುಕ್‌ನಲ್ಲಿ ರಿಜಿಸ್ಟರ್ ವೋಟ್ ಈ ಲೈಫ್ ಇವೆಂಟ್ ಟೈಮ್‌ಲೈನ್‌ನ್ನು ಸೇರಿಸುವುದಕ್ಕೆ ಕೆಲವು ಹಂತಗಳಿವೆ. ಮುಂದಿನ ಪುಟದಲ್ಲಿ ಹೇಗೆ ಸೇರಿಸಬೇಕು ಎನ್ನುವುದನ್ನು ತಿಳಿಸಲಾಗಿದೆ.
ಇದನ್ನೂ ಓದಿ: ಮತದಾರರ ಪಟ್ಟಿಯಲ್ಲಿ ನಿಮ್ಮ ಹೆಸರನ್ನು ನೀವೇ ಹುಡುಕಿ

ಮತದಾನದ ಬಗ್ಗೆ ಫೇಸ್‌ಬುಕ್‌ನಿಂದ ಯುವಜನತೆಗೆ ಜಾಗೃತಿ
ಹಂತ- 1
ಟೈಮ್‌ಲೈನ್‌ಗೆ ಹೋಗಿ ಲೈಫ್ ಇವೆಂಟ್ ಆಯ್ಕೆಯನ್ನು ಆರಿಸಿ

ಮತದಾನದ ಬಗ್ಗೆ ಫೇಸ್‌ಬುಕ್‌ನಿಂದ ಯುವಜನತೆಗೆ ಜಾಗೃತಿ
ಹಂತ-2
ನಂತರ Travel &experinces ಆಯ್ಕೆಯನ್ನು ಆರಿಸಿ, Register to Vote ಆಯ್ಕೆಯನ್ನು ಆರಿಸಿ.

ಮತದಾನದ ಬಗ್ಗೆ ಫೇಸ್‌ಬುಕ್‌ನಿಂದ ಯುವಜನತೆಗೆ ಜಾಗೃತಿ
ಹಂತ-3
ಇಲ್ಲಿ ಇಲ್ಲಿ ಪ್ರದೇಶ, ದಿನಾಂಕ, ವೋಟರ್ ಐಡಿ/ ಫೋಟೋವನ್ನು ಆಪ್‌ಲೋಡ್ ಮಾಡಿ ಯಾಕೆ ಮತದಾನಕ್ಕೆ ರಿಜಿಸ್ಟಾರ್ ಆಗಿದ್ದೇನೆ ಎನ್ನುವುದಕ್ಕೆ ನಿಮ್ಮ ಅಭಿಪ್ರಾಯವನ್ನು ಬರೆದು ಸೇವ್ ಆಯ್ಕೆಯನ್ನು ಆರಿಸಿದ್ದಲ್ಲಿ ನಿಮ್ಮ ಟೈಮ್‌ಲೈನ್‌ಲ್ಲಿಈ ಹೊಸ ವಿಶೇಷತೆಯಿರುವ Register to Vote ಕಾಣುತ್ತಿರುತ್ತದೆ.

ಮತದಾನದ ಬಗ್ಗೆ ಫೇಸ್‌ಬುಕ್‌ನಿಂದ ಯುವಜನತೆಗೆ ಜಾಗೃತಿ
ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಬಹುದು:www.facebook.com


Click it and Unblock the Notifications








