ಮತದಾರರ ಪಟ್ಟಿಯಲ್ಲಿ ನಿಮ್ಮ ಹೆಸರನ್ನು ನೀವೇ ಹುಡುಕಿ

By Ashwath
|

ಲೋಕಸಭಾ ಚುನಾವಣೆಗೆ ಇನ್ನೇನು ಕೆಲವೇ ದಿನಗಳಿವೆ.ಈ ಚುನಾವಣೆಯ ಸಂದರ್ಭದಲ್ಲಿ ಬಹಳಷ್ಟು ಮಂದಿ ಮತದಾನದ ದಿನ ಮತಗಟ್ಟೆಗೆ ಹೋಗಿ ತಮ್ಮ ಮತದಾರರ ಪಟ್ಟಿಯಲ್ಲಿ ನಮ್ಮ ಹೆಸರಿಲ್ಲ,ತಮಗೆ ವೋಟ್‌ ಹಾಕಲು ಸಾಧ್ಯವಾಗಿಲ್ಲ ಎಂದು ಮಂದಿ ದೂರು ನೀಡುತ್ತಾರೆ. ಈ ರೀತಿ ದೂರು ನೀಡುವುದರಲ್ಲಿ ಯಾವುದೇ ಅರ್ಥವಿಲ್ಲ.ಅದಕ್ಕಾಗಿ ನೀವೇ ನಿಮ್ಮ ಹೆಸರು ಮತದಾನದ ಪಟ್ಟಿಯಲ್ಲಿ ಇದೆಯೋ ಇಲ್ಲವೋ ಎಂದು ಪರೀಕ್ಷಿಸಿಕೊಳ್ಳಬಹುದು.

ಕರ್ನಾಟಕ ಚುನಾವಣಾ ಆಯೋಗ ತನ್ನ ವೆಬ್‌ಸೈಟ್‌ನಲ್ಲಿ ಕರ್ನಾಟಕದ ಎಲ್ಲಾ ಜಿಲ್ಲೆಗಳ ಮತದಾರರ ಪಟ್ಟಿಯನ್ನು ದಾಖಲಿಸಿದ್ದು ಕೇವಲ ಮೂವತ್ತು ಸೆಕೆಂಡ್‌ನಲ್ಲೇ ನೀವೇ ಮತದಾರರ ಪಟ್ಟಿಯಲ್ಲಿ ನಿಮ್ಮ ಹೆಸರು ಇದೆಯೋ/ ಇಲ್ಲವೋ ಎಂಬುದನ್ನು ಪರೀಕ್ಷಿಸಬಹುದು. ಹೇಗೆ ನೀವು ಪರೀಕ್ಷಿಸಬಹುದು ಎಂಬುದಕ್ಕೆ ಮುಂದಿನ ಪುಟಗಳಲ್ಲಿ ವಿವರಿಸಲಾಗಿದೆ. ಒಂದೊಂದೆ ಪುಟ ತಿರುಗಿಸಿ ನೋಡಿಕೊಂಡು ಹೋಗಿ. ನಂತರ ಚುನಾವಣಾ ಆಯೋಗದ ವೆಬ್‌ಸೈಟ್‌ನಲ್ಲಿ ಪರೀಕ್ಷಿಸಿಕೊಳ್ಳಿ.

ಇದನ್ನೂ ಓದಿ: ಲೋಕಸಭಾ ಚುನಾವಣೆ-ಉಪಯುಕ್ತ ಜಾಲತಾಣಗಳು

ಮತದಾರರ ಪಟ್ಟಿಯಲ್ಲಿ ನಿಮ್ಮ ಹೆಸರನ್ನು ನೀವೇ ಹುಡುಕಿ

ಮತದಾರರ ಪಟ್ಟಿಯಲ್ಲಿ ನಿಮ್ಮ ಹೆಸರನ್ನು ನೀವೇ ಹುಡುಕಿ

ಮೂರು ರೀತಿಯಲ್ಲಿ ನಿಮ್ಮ ಹೆಸರು ಇದೆಯೋ ಇಲ್ಲವೋ ಎಂಬುದನ್ನು ಪರೀಕ್ಷಿಸಿಕೊಳ್ಳಬಹುದು.
1.ಗುರುತಿನ ಚೀಟಿ ಸಂಖ್ಯೆಯಿಂದ ಹುಡುಕಿ
2.ಹೆಸರು ಮತ್ತು ಇತರ ವಿವರಗಳಿಂದ ಹುಡುಕಿ
3.ಅರ್ಜಿ ಸ್ವೀಕೃತಿ ಸಂಖ್ಯೆಯಿಂದ ಹುಡುಕಿ

ಮತದಾರರ ಪಟ್ಟಿಯಲ್ಲಿ ನಿಮ್ಮ ಹೆಸರನ್ನು ನೀವೇ ಹುಡುಕಿ

ಮತದಾರರ ಪಟ್ಟಿಯಲ್ಲಿ ನಿಮ್ಮ ಹೆಸರನ್ನು ನೀವೇ ಹುಡುಕಿ

ಗುರುತಿನ ಚಿಟಿ ಸಂಖ್ಯೆಯಿಂದ ಹುಡುಕಿ ಆಯ್ಕೆಯನ್ನು ನೀವು ಸೆಲೆಕ್ಟ್‌ ಮಾಡಿದ್ದಲ್ಲಿ ನಿಮ್ಮ ಜಿಲ್ಲೆ ಮತ್ತು ಗುರುತಿನ ಚೀಟಿ ಸಂಖ್ಯೆಯನ್ನು ಟೈಪ್‌ ಮಾಡಿ ಪರೀಕ್ಷಿಸಿಕೊಳ್ಳಬಹುದು.

ಮತದಾರರ ಪಟ್ಟಿಯಲ್ಲಿ ನಿಮ್ಮ ಹೆಸರನ್ನು ನೀವೇ ಹುಡುಕಿ

ಮತದಾರರ ಪಟ್ಟಿಯಲ್ಲಿ ನಿಮ್ಮ ಹೆಸರನ್ನು ನೀವೇ ಹುಡುಕಿ

ಒಂದು ವೇಳೆ ಗುರುತಿನ ಚೀಟಿ ಸಂಖ್ಯೆ ನೆನಪಿಲ್ಲದಿದ್ದಲ್ಲಿ ನೀವು ಎರಡನೇ ಆಯ್ಕೆ ಆರಿಸಿಕೊಳ್ಳಬಹುದು. ಇಲ್ಲಿ ನಿಮ್ಮ ಹೆಸರು, ಜಿಲ್ಲೆ, ಸಂಬಂಧಿಯ ಹೆಸರು, ಲಿಂಗ, ವಿಧಾನಸಭಾ ಕ್ಷೇತ್ರ ಹೆಸರನ್ನು ಟೈಪ್ ಮಾಡಿ ಪರೀಕ್ಷಿಸಿಕೊಳ್ಳಬಹುದು.

ಮತದಾರರ ಪಟ್ಟಿಯಲ್ಲಿ ನಿಮ್ಮ ಹೆಸರನ್ನು ನೀವೇ ಹುಡುಕಿ

ಮತದಾರರ ಪಟ್ಟಿಯಲ್ಲಿ ನಿಮ್ಮ ಹೆಸರನ್ನು ನೀವೇ ಹುಡುಕಿ

ಮತದಾನ ಅರ್ಜಿಯ ಸ್ವೀಕೃತಿ ಸಂಖ್ಯೆ ನಮೂದಿಸಿ ಸರ್ಚ್ ಮಾಡಿದ್ದಲ್ಲಿ ಅರ್ಜಿಯ ಪ್ರಗತಿ ತಿಳಿಯುತ್ತದೆ.

ಮತದಾರರ ಪಟ್ಟಿಯಲ್ಲಿ ನಿಮ್ಮ ಹೆಸರನ್ನು ನೀವೇ ಹುಡುಕಿ

ಮತದಾರರ ಪಟ್ಟಿಯಲ್ಲಿ ನಿಮ್ಮ ಹೆಸರನ್ನು ನೀವೇ ಹುಡುಕಿ

ಮೂರು ಹಂತಗಳನ್ನು ತಿಳಿದ ಬಳಿಕ ತಡ ಯಾಕೆ? ಈಗಲೇ ಕರ್ನಾಟಕ ಚುನಾವಣಾ ಆಯೋಗದ ವೆಬ್‌ಸೈಟ್‌ನಲ್ಲಿ ಮತದಾರರ ಪಟ್ಟಿಯಲ್ಲಿ ನಿಮ್ಮ ಹೆಸರು ಇದೆಯೋ ಇಲ್ಲವೋ ಎಂಬುದನ್ನು ಪರೀಕ್ಷಿಸಿಕೊಳ್ಳಿ. ಚುನಾವಣಾ ಆಯೋಗದ ವೆಬ್‌ಸೈಟ್‌ಗಾಗಿ ಇಲ್ಲಿ ಭೇಟಿ ನೀಡಿ :ceokarnataka.kar.nic.in

Best Mobiles in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X