Home
ಸುದ್ದಿಜಾಲ

Whatsapp: ವಾಟ್ಸಾಪ್‌ಗೆ ಸೇರಲಿದೆ ಭರ್ಜರಿ ಫೀಚರ್ಸ್‌: ನಿಯರ್‌ಬೈ ಶೇರ್‌, ಆಪಲ್ ಏರ್‌ಡ್ರಾಪ್‌ಗೆ ಪೈಪೋಟಿ

ವಾಟ್ಸಾಪ್‌ನಲ್ಲಿ (Whatsapp) ಈಗಾಗಲೇ ಸಾಕಷ್ಟು ವಿಶೇಷ ಫೀಚರ್ಸ್‌ ಅನ್ನು ನೀವು ಬಳಕೆ ಮಾಡಿರಬಹುದು. ಕೆಲವು ಫೀಚರ್ಸ್‌ ಭದ್ರತೆಗೆ ಸಂಬಂಧಿಸಿದ್ರೆ ಇನ್ನೂ ಕೆಲವು ಫೀಚರ್ಸ್‌ ಮೂಲಕ ಬಳಕೆದಾರರು ಪ್ಲಾಟ್‌ಫಾರ್ಮ್‌ನಲ್ಲಿ ಉತ್ತಮ ಅನುಭವ ಪಡೆಯುವಂತೆ ಅನುಕೂಲ ಆಗುತ್ತಿದ್ದವು. ಅದರಂತೆ ಈಗ ಪರಿಚಯಿಸಲು ಮುಂದಾಗಿರುವ ಫೀಚರ್ಸ್‌ ಮೆಸೆಜಿಂಗ್‌ ಆಪ್ ವಿಭಾಗದಲ್ಲಿ ದೊಡ್ಡ ಮಟ್ಟದ ಸೌಂಡ್‌ ಮಾಡಲಿದೆ.

ಹೌದು, ವಾಟ್ಸಾಪ್‌ ಬಳಕೆದಾರರು ಈಗಾಗಲೇ ಸಾಕು ಎನಿಸುವಷ್ಟು ಫೀಚರ್ಸ್‌ ಅನ್ನು ಪಡೆದಿದ್ದಾರೆ. ಈ ಮೂಲಕ ಹೆಚ್ಚಿನ ಭದ್ರತೆಯನ್ನು ಖಾತರಿಪಡಿಸಲಾಗಿದೆ. ಈ ನಡುವೆ ಸ್ಮಾರ್ಟ್‌ಫೋನ್‌ನಲ್ಲಿ ಸಿನಿಮಾ ವೀಕ್ಷಣೆ ಮಾಡುವರು ಹಾಗೂ ದೊಡ್ಡ ಮಟ್ಟದ ಫೋಟೋಗಳನ್ನು ಪರಸ್ಪರ ಶೇರ್‌ ಮಾಡುವವರಿಗೆ ಅನುಕೂಲ ಆಗುವ ವಿಶೇಷ ಫೀಚರ್ಸ್‌ ಅನ್ನು ವಾಟ್ಸಾಪ್‌ ಘೋಷಣೆ ಮಾಡಲಿದೆ. ಹಾಗಿದ್ರೆ, ಯಾವುದು ಈ ವಿಶೇಷ ಫೀಚರ್ಸ್‌?, ಇದರಿಂದ ಏನೆಲ್ಲಾ ಅನುಕೂಲ ಎಂಬಿತ್ಯಾದಿ ಮಾಹಿತಿ ಇಲ್ಲಿದೆ ನೋಡಿ.

ವಾಟ್ಸಾಪ್‌ಗೆ ಸೇರಲಿದೆ ಭರ್ಜರಿ ಫೀಚರ್ಸ್‌..

ಶೀಘ್ರದಲ್ಲೇ ವಾಟ್ಸಾಪ್‌ನಲ್ಲಿ ನಿಯರ್‌ಬೈ ಶೇರ್‌ ಫೀಚರ್ಸ್: ಕಳೆದ ವರ್ಷವಷ್ಟೇ ವಾಟ್ಸಾಪ್ 2GB ಗಾತ್ರದವರೆಗೆ ಹೆಚ್‌ಡಿ ಫೈಲ್ ಶೇರ್‌ ಮಾಡುವ ಫೀಚರ್ಸ್‌ ಅನ್ನು ಲಾಂಚ್‌ ಮಾಡಿತ್ತು. ಈಗ, ಇತರೆ ಪ್ಲಾಟ್‌ಫಾರ್ಮ್‌ಗಳಾದ್ಯಂತ ಫೈಲ್ ಶೇರ್‌ ಆಯ್ಕೆಯನ್ನು ಸರಳಗೊಳಿಸಲು ಪ್ಲಾಟ್‌ಫಾರ್ಮ್ ಇನ್ನಷ್ಟು ಮಾರ್ಗಗಳನ್ನು ಅನ್ವೇಷಿಸುತ್ತಿದೆ ಎಂದು ಈ ಮೂಲಕ ಕಂಡುಕೊಳ್ಳಬಹುದಾಗಿದೆ. ಇದರ ಭಾಗವಾಗಿಯೇ ಈಗ ಫೈಲ್‌ ಶೇರಿಂಗ್‌ ಫೀಚರ್ಸ್‌ ಘೋಷಣೆಗೆ ಎಲ್ಲಾ ತಯಾರಿ ನಡೆದಿದೆ.

ಅಂದರೆ ಈ ಫೀಚರ್ಸ್‌ ಬಳಕೆದಾರರು ಹತ್ತಿರದ ಜನರೊಂದಿಗೆ ಫೈಲ್‌ಗಳನ್ನು ಸುಲಭವಾಗಿ ಶೇರ್‌ ಮಾಡಿಕೊಳ್ಳಬಹುದಾಗಿದೆ. ಉದಾಹರಣೆಗೆ ಹೇಳುವುದಾದರೆ ಇದು ಆಂಡ್ರಾಯ್ಡ್‌ ನ ನಿಯರ್‌ಬೈ ಶೇರ್‌ ಕಾರ್ಯವನ್ನೇ ಹೋಲಲಿದೆ ಎಂದು ತಿಳಿದುಬಂದಿದೆ. ಆಂಡ್ರಾಯ್ಡ್ 2.24.2.17 ನಲ್ಲಿ ವಾಟ್ಸಾಪ್ ಬೀಟಾ ಬಳಕೆದಾರರಿಗೆ ಈಗ ಹೊಸ ಫೈಲ್ ಶೇರ್‌ ಫೀಚರ್ಸ್‌ ಆಯ್ಕೆಯನ್ನು ನೀಡಲಾಗಿದೆ. ಹಾಗೆಯೇ ಈ ವಿಷಯದ ಬಗ್ಗೆ WABetaInfo ವರದಿ ಮಾಡಿದೆ.

ವಾಟ್ಸಾಪ್‌ಗೆ ಸೇರಲಿದೆ ಭರ್ಜರಿ ಫೀಚರ್ಸ್‌..

WABetaInfo ಶೇರ್‌ ಮಾಡಿಕೊಂಡ ಹೊಸ ಫೀಚರ್ಸ್‌ನ ಸ್ಕ್ರೀನ್‌ಶಾಟ್ ಪ್ರಕಾರ, ಹೊಸ ಫೀಚರ್ಸ್ ಬೀಟಾ ಪರೀಕ್ಷಕರಿಗೆ ಫೈಲ್‌ಗಳನ್ನು ಶೇರ್‌ ಮಾಡಿಕೊಳ್ಳುವ ಹೊಸ ಮಾರ್ಗವನ್ನು ಪ್ರಯತ್ನಿಸಲು ಅನುಮತಿಸುತ್ತದೆ ಎಂದು ತಿಳಿದುಬರುತ್ತದೆ. ಈ ಫೀಚರ್ಸ್‌ ಅನ್ನು ಬಳಕೆ ಮಾಡಲು ಬಳಕೆದಾರರು ಫೈಲ್‌ಗಳನ್ನು ಕಳುಹಿಸಲು ಮತ್ತು ಸ್ವೀಕರಿಸಲು ಹೊಸ ವಿಭಾಗಕ್ಕೆ ನ್ಯಾವಿಗೇಟ್ ಮಾಡಬೇಕಾಗುತ್ತದೆ.

ಎರಡೂ ಬಳಕೆದಾರರು ತಮ್ಮ ಫೈಲ್‌ಗಳನ್ನು ಎಕ್ಸ್‌ಚೇಂಜ್‌ ಮಾಡಿಕೊಳ್ಳಲು ಈ ವಿಭಾಗವನ್ನು ಪ್ರವೇಶಿಸಬೇಕಿದೆ. ಕಡಿಮೆ ಅಂತರದಲ್ಲಿ ಸುರಕ್ಷಿತ ಶೇರ್‌ ಅನ್ನು ಈ ಮೂಲಕ ಖಾತ್ರಿಪಡಿಸಿಕೊಳ್ಳಬೇಕು ಎಂದು ಸ್ಕ್ರೀನ್‌ಶಾಟ್ ತೋರಿಸುತ್ತಿದೆ. ಫೈಲ್ ವರ್ಗಾವಣೆಯನ್ನು ಪರಿಣಾಮಕಾರಿಯಾಗಿ ನಿಯಂತ್ರಣದಲ್ಲಿಡುತ್ತದೆ ಎಂದು ತಿಳಿದುಬಂದಿದ್ದು, ಗಮನಾರ್ಹವಾಗಿ, ಈ ಫೀಚರ್ಸ್‌ ಎಂಡ್-ಟು-ಎಂಡ್ ಎನ್‌ಕ್ರಿಪ್ಶನ್‌ ಅನ್ನೂ ಸಹ ಹೊಂದಿದೆ ಎಂದು ಹೇಳಲಾಗಿದೆ.

ಇದರಲ್ಲಿ ಗಮನಿಸುವ ವಿಷಯ ಏನೆಂದರೆ ವಾಟ್ಸಾಪ್‌ ಚಾಟ್‌ನಲ್ಲಿ ಇಲ್ಲದಿದ್ದರೂ ಅಥವಾ ಪರಿಚಯವಿಲ್ಲದ ನೆಟ್‌ವರ್ಕ್ ಸೆಟ್ಟಿಂಗ್‌ಗಳಲ್ಲಿ ಫೈಲ್ ವರ್ಗಾವಣೆಗಳು ಸುರಕ್ಷಿತವಾಗಿರುವುದನ್ನು ಖಚಿತಪಡಿಸುತ್ತದೆ. ಇದರಿಂದ ನೀವು ಈ ವಿಭಾಗದಲ್ಲಿ ಯಾವುದೇ ಸಮಸ್ಯೆ ಇಲ್ಲದೆ ಯಾರ ಜೊತೆಗೆ ಬೇಕಾದರೂ ಸುಲಭವಾಗಿ ಯಾವುದೇ ಫೈಲ್‌ಗಳನ್ನು ಶೇರ್‌ ಮಾಡಿಕೊಳ್ಳಬಹುದಾಗಿದೆ.

ಮೊದಲೇ ತಿಳಿಸಿದಂತೆ ಆಂಡ್ರಾಯ್ಡ್ ಫೋನ್‌ಗಳು ಈಗಾಗಲೇ ನಿಯರ್ ಬೈ ಶೇರ್‌ ಸೌಲಭ್ಯ ನೀಡುತ್ತಿದ್ದು, ಆಪಲ್ ಏರ್‌ಡ್ರಾಪ್ ಸೌಲಭ್ಯವನ್ನು ನೀಡಿದೆ. ಅದರಂತೆ ವಾಟ್ಸಾಪ್‌ನ ಮುಂಬರುವ ಫೀಚರ್ಸ್‌ ಅದರ ವರ್ಧಿತ ಎನ್‌ಕ್ರಿಪ್ಶನ್ ಮತ್ತು ಗೌಪ್ಯತೆ ಪ್ರಯೋಜನಗಳಿಂದ ವಿಶೇಷವಾಗಿ ಕಾಣಿಸಿಕೊಳ್ಳಬಹುದು ಎಂದು ತಿಳಿದುಬಂದಿದೆ. ಅದರಲ್ಲೂ ಸಾರ್ವಜನಿಕ ಸ್ಥಳಗಳಲ್ಲಿ ಫೈಲ್‌ಗಳನ್ನು ಶೇರ್‌ ಮಾಡುವಾಗ ಇದು ವಿಶೇಷವಾಗಿ ಪ್ರಸ್ತುತ ಎನಿಸುವಂತೆ ಆಗಿದೆ.

ವಾಟ್ಸಾಪ್‌ಗೆ ಸೇರಲಿದೆ ಭರ್ಜರಿ ಫೀಚರ್ಸ್‌..

ಇದಕ್ಕೆ ಕಾರಣ ಏನೆಂದರೆ ನಿಮ್ಮ ಫೋನ್ ಸಂಖ್ಯೆಯು ಸಂಪರ್ಕ-ಅಲ್ಲದವರಿಂದ ಮರೆಮಾಡಲ್ಪಡುತ್ತದೆ. ಈ ಫೀಚರ್ಸ್‌ ಇನ್ನೂ ಅಭಿವೃದ್ಧಿ ಹಂತದಲ್ಲಿದ್ದು, ಸ್ವಲ್ಪ ಸಮಯದ ನಂತರ ಘೋಷಣೆ ಆಗಲಿದೆ ಎಂದು ತಿಳಿದುಬಂದಿದೆ. ಈ ನಡುವೆ ವಾಟ್ಸಾಪ್‌ ವಿವಿಧ ಭಿನ್ನ ಫೀಚರ್ಸ್‌ ಅನ್ನೂ ಸಹ ಕೆಲವು ದಿನಗಳ ಹಿಂದೆ ಘೋಷಣೆ ಮಾಡಿದೆ. ಇದು ವಾಟ್ಸಾಪ್ ಚಾನೆಲ್‌ ಬಳಕೆದಾರರಿಗೆ ವಿವಿಧ ಪ್ರಯೋಜನ ನೀಡಲಿದೆ.

ಅಂದರೆ ವಾಟ್ಸಾಪ್‌ ತನ್ನ ಚಾನೆಲ್‌ಗಳಿಗಾಗಿ ಹಲವಾರು ಹೊಸ ಫೀಚರ್ಸ್‌ ಅನ್ನು ಹೊರತಂದಿದ್ದು, ಬಳಕೆದಾರರಿಗೆ ಹೆಚ್ಚಿನ ಪ್ರೇಕ್ಷಕರಿಗೆ ಮೆಸೆಜ್‌ಗಳನ್ನು ಪ್ರಸಾರ ಮಾಡಲು ಅನುವು ಮಾಡಿಕೊಡುತ್ತದೆ. ಕಳೆದ ವಾರ ಮಾರ್ಕ್ ಜುಕರ್‌ಬರ್ಗ್ ಘೋಷಿಸಿದ ಹೊಸ ಫೀಚರ್ಸ್‌ನಲ್ಲಿ ವಾಯ್ಸ್ ನವೀಕರಣಗಳು, ಸಮೀಕ್ಷೆಗಳು, ಸ್ಟೇಟಸ್ ಹಂಚಿಕೆ ಮತ್ತು ಬಹು ನಿರ್ವಾಹಕ ಫೀಚರ್ಸ್‌ ಸಾಕಷ್ಟು ಸದ್ದು ಮಾಡುತ್ತಿವೆ. ಇವು ಬಳಕೆದಾರರು ಹೆಚ್ಚಿನ ಸಮಯ ಇಲ್ಲಿ ತೊಡಗಿಕೊಳ್ಳುವಂತೆ ಪ್ರೇರೇಪಿಸುತ್ತವೆ.

Best Mobiles in India

English summary
WhatsApp users have already got enough features. Meanwhile, it will soon announce file sharing features similar to Nearby Share features.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+