Subscribe to Gizbot

ಕಂಪ್ಯೂಟರ್‌ ಲೋಕವನ್ನೇ ಮುಳುಗಿಸಲಿದೆ ಇಂಟೆಲ್‌ ಸೆಕ್ಯೂರಿಟಿ ಫೇಲ್: ವಿಶ್ವದ ಎಲ್ಲಾ PC ಗಳು ಅಪಾಯದಲ್ಲಿ..!

Written By:

ಇಂಟೆಲ್ ಪ್ರೋಸೆಸರ್‌ನಲ್ಲಿ ತಪ್ಪೊಂದು ಕಾಣಿಸಿಕೊಂಡಿದ್ದು, ಇದು ಮಿಲಿಯನ್‌ಗಟ್ಟಲೇ ಕಂಪ್ಯೂಟರ್ ಗಳನ್ನು ಅಪಾಯಕ್ಕೆ ದೂಡಿದೆ ಎನ್ನಲಾಗಿದೆ. ಇಂಟೆಲ್ ಪ್ರೋಸೆಸರ್ ನಲ್ಲಿ ಕಾಣಿಸಿಕೊಂಡಿರುವ ಬಗ್‌, ಹ್ಯಾಕ್ ಮಾಡಲು ಕಾಯ್ದು ಕುಳಿತಿರುವ ಹ್ಯಾಕರ್ಸ್‌ಗಳಿಗೆ ಕಂಪ್ಯೂಟರ್ ಬಾಗಿಲನ್ನು ತೆರೆದು ಕೊಟ್ಟಿದೆ ಎನ್ನಲಾಗಿದೆ. ಸದ್ಯ ಬಳಕೆ ಮಾಡಿಕೊಳ್ಳುತ್ತಿರುವ ಎಲ್ಲಾ ಇಂಟೆಲ್ ಕಂಪ್ಯೂಟರ್‌ಗಳು ಸೆಕ್ಯೂರಿಟಿ ಸಮಸ್ಯೆಯನ್ನು ಎದುರಿಸುತ್ತಿದ್ದು, ಇಂಟೆಲ್ ಬಗ್‌ ಬಳಕೆದಾರರ ಮಾಹಿತಿಗೆ ರಕ್ಷಣೆ ಇಲ್ಲದಂತೆ ಮಾಡಿದೆ.

ಕಂಪ್ಯೂಟರ್‌ ಲೋಕವನ್ನೇ ಮುಳುಗಿಸಲಿದೆ ಇಂಟೆಲ್‌ ಪ್ರೋಸೆಸರ್ ಸೆಕ್ಯೂರಿಟಿ ಫೇಲ್..!

ಓದಿರಿ: ಶೇ.80% 4G ಸ್ಮಾರ್ಟ್‌ಫೋನ್‌ನಲ್ಲಿ ಜಿಯೋನೇ ಇರಬೇಕು: ಅಂಬಾನಿ ಬೆಸ್ಟ್ ಪ್ಲಾನ್‌..!!

ಸದ್ಯ ಮಾರುಕಟ್ಟೆಯಲ್ಲಿ ಲಭ್ಯವಿರುವ ಕಂಪ್ಯೂಟರ್‌ಗಳಲ್ಲಿ ಸಾಮಾನ್ಯವಾಗಿ ಇಂಟೆಲ್‌ ಪ್ರೋಸೆಸರ್ ಅನ್ನು ಕಾಣಬಹದಾಗಿದ್ದು, ಈ ಇಂಟೆಲ್‌ ಪ್ರೋಸೆಸರ್ ಹೊಂದಿರುವ ಕಂಪ್ಯೂಟರ್‌ಗಳಲ್ಲಿ ಬಗ್‌ವೊಂದರಿಂದ ಸೆಕ್ಯೂರಿಟಿ ಪ್ಲೋ ಫೇಲ್ ಆಗಿದೆ ಎನ್ನಲಾಗಿದೆ. ಇದರಿಂದಾಗಿ ಹ್ಯಾಕರ್ಸ್‌ ಸುಲಭವಾಗಿ ಕಂಪ್ಯೂಟರ್ ಪ್ರವೇಶವನ್ನು ಪಡೆಯಬಹುದಾಗಿದ್ದು, ನಿಮ್ಮ ಕಂಪ್ಯೂಟರ್ ಮತ್ತು ಲ್ಯಾಪ್‌ ಟಾಪ್‌ನಲ್ಲಿರುವ ಮಾಹಿತಿಗೆ ಯಾವುದೇ ರಕ್ಷಣೆ ಇಲ್ಲದಂತಾಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಯಾವ ಯಾವ ಪ್ರೋಸೆಸರ್:

ಯಾವ ಯಾವ ಪ್ರೋಸೆಸರ್:

ಸದ್ಯ ಮಾರುಕಟ್ಟೆಯಲ್ಲಿ ತನ್ನ ಯಾವ ಪ್ರೋಸೆಸರ್ ಗಳು ಸೆಕ್ಯೂರಿಟಿ ಸಮಸ್ಯೆ ಎದುರಿಸುತ್ತಿದೆ ಎನ್ನುವ ಪಟ್ಟಿಯನ್ನು ಇಂಟೆಲ್ ಬಿಡುಗಡೆ ಮಾಡಿದ್ದು, ಇಂಟೆಲ್ ಕೋರ್ i3, ಇಂಟೆಲ್ ಕೋರ್ i5, ಇಂಟೆಲ್ ಕೋರ್ i7 ಪ್ರೋಸೆಸರ್, ಇಂಟೆಲ್ ಕೋರ್ M ಪ್ರೋಸೆಸರ್, ಇಂಟೆಲ್ ಕೋರ್ M 2 ಜನರೇಷನ್ ಪ್ರೋಸೆಸರ್, ಇಂಟೆಲ್ ಕೋರ್ M 3 ಜನರೇಷನ್ ಪ್ರೋಸೆಸರ್, ಇಂಟೆಲ್ ಕೋರ್ M 4 ಜನರೇಷನ್ ಪ್ರೋಸೆಸರ್, ಇಂಟೆಲ್ ಕೋರ್ M 5 ಜನರೇಷನ್ ಪ್ರೋಸೆಸರ್, ಇಂಟೆಲ್ ಕೋರ್ M 6 ಜನರೇಷನ್ ಪ್ರೋಸೆಸರ್, ಇಂಟೆಲ್ ಕೋರ್ M 7 ಜನರೇಷನ್ ಪ್ರೋಸೆಸರ್, ಇಂಟೆಲ್ ಕೋರ್ M 8 ಜನರೇಷನ್ ಪ್ರೋಸೆಸರ್ ಗಳು ಸೇರಿದಂತೆ ಇನ್ನು ಹಲವು ಪ್ರೋಸೆಸರ್‌ಗಳು ತೊಂದರೆಗೆ ಸಿಲುಕಿಕೊಂಡಿದೆ.

Aadhaar Number ವೆರಿಫಿಕೇಷನ್ ಮಾಡುವುದು ಹೇಗೆ..?
ಅಪ್‌ಡೇಟ್ ಮಾಡಿಕೊಳ್ಳಿ:

ಅಪ್‌ಡೇಟ್ ಮಾಡಿಕೊಳ್ಳಿ:

ಸದ್ಯ ಸೆಕ್ಯೂರಿಟಿ ತೊಂದರೆಗೆ ಸಿಲುಕಿರುವ ಕಂಪ್ಯೂಟರ್ ಮತ್ತು ಲ್ಯಾಪ್‌ ಟಾಪ್‌ಗಳನ್ನು ರಕ್ಷಿಸುವ ಸಲುವಾಗಿ ಇಂಟೆಲ್ ಆಪ್‌ಡೇಟ್ ವೊಂದನ್ನು ಲಾಂಚ್ ಮಾಡಿದ್ದು, ಶೀಘ್ರವೇ ಎಲ್ಲಾ ಬಳಕೆದಾರರು ಅದನ್ನು ಇನ್‌ಸ್ಟಾಲ್ ಮಾಡಿಕೊಳ್ಳಬೇಕಾಗಿದೆ. ಇದು ಬಗ್‌ ನಿರ್ವಾರಣೆ ಮಾಡಲಿದ್ದು, ಇದರಿಂದ ಕಂಪ್ಯೂಟರ್ ಸೇಫ್ ಆಗಲಿದೆ. ಇಲ್ಲವಾದರೆ ತೊಂದರೆ ಎದುರಿಸುವುದು ಅನಿವಾರ್ಯವಾಗಲಿದೆ.

ಜಾಗತಿಕ ಸಮಸ್ಯೆ:

ಜಾಗತಿಕ ಸಮಸ್ಯೆ:

ಇಂಟೆಲ್ ಮಾಡಿರುವ ಒಂದು ತಪ್ಪಿಸಿಂದ ಕೋಟ್ಯಾಂತರ ಕಂಪ್ಯೂಟರ್‌ಗಳು ತೊಂದರೆಯಲ್ಲಿ ಸಿಲುಕಿಕೊಂಡಿವೆ ಎನ್ನಲಾಗಿದೆ. ಈ ಕುರಿತು ಗೂಗಲ್, ಅಮೆಜಾನ್ ಸೇರಿದಂತೆ ದೈತ್ಯ ಸಾಫ್ಟ್‌ವೇರ್ ಕಂಪನಿಗಳು ತಲೆ ಕಡಿಸಿಕೊಂಡಿದ್ದು, ಗ್ರಾಹಕರ ನೆರವಿಗೆ ಧಾವಿಸಿವೆ ಎನ್ನಲಾಗಿದೆ. ಅಲ್ಲದೇ ಈ ಕುರಿತು ಗ್ರಾಹಕರನ್ನು ಎಚ್ಚರಿಸುವ ಕೆಲಸವನ್ನು ಮಾಡುತ್ತಿವೆ. ಇದಕ್ಕಾಗಿ ಆಪ್‌ಡೇಟ್ ವೊಂದನ್ನು ನೀಡಿವೆ. ನೀವು ಮಾರುಕಟ್ಟೆಯಲ್ಲಿ ಲಭ್ಯವಿರುವ ಆಪ್‌ಡೇಟ್ ಅನ್ನು ಶೀಘ್ರವೇ ಬಳಕೆ ಮಾಡಿಕೊಂಡಿಲ್ಲವಾದರೆ ನೀವು ತೊಂದರೆಯಲ್ಲಿ ಸಿಲುಕಿಕೊಳ್ಳುವುದು ಅನಿವಾರ್ಯವಾಗಲಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
New Intel chipset security flaw puts millions of PC at risk. to know more visit kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot