Subscribe to Gizbot

ಶೇ.80% 4G ಸ್ಮಾರ್ಟ್‌ಫೋನ್‌ನಲ್ಲಿ ಜಿಯೋನೇ ಇರಬೇಕು: ಅಂಬಾನಿ ಬೆಸ್ಟ್ ಪ್ಲಾನ್‌..!!

Written By:

ಮುಖೇಶ್ ಅಂಬಾನಿ ನೇತೃತ್ವದ ಜಿಯೋ ದೇಶಿಯ ಟೆಲಿಕಾಂ ಮಾರುಕಟ್ಟೆಯಲ್ಲಿ ಏಕಸ್ವಾಮ್ಯತೆಯನ್ನು ಸಾಧಿಸುವ ಸಲುವಾಗಿ ಹೊಸ ವರ್ಷದಲ್ಲಿ ಹೊಸ ಯೋಜನೆಯೊಂದನ್ನು ರೂಪಿಸಿದ್ದು, ದೇಶದಲ್ಲಿ ಲಭ್ಯವಿರುವ ಶೇ.80% 4G ಫೋನ್‌ಗಳಲ್ಲಿ ಜಿಯೋ ಬಳಕೆಯನ್ನು ಮಾಡುವಂತೆ ಮಾಡುವುದು ಮತ್ತು ಮಾರುಟಕ್ಟೆಗೆ 100 ಮಿಲಿಯನ್ ಫೀಚರ್ ಫೋನ್‌ಗಳನ್ನು ಬಿಡುಗಡೆ ಮಾಡುವ ಮೂಲಕ ಗ್ರಾಹಕರನ್ನು ಸೆಳೆಯುವ ಯೋಜನೆಯನ್ನು ರೂಪಿಸಿಕೊಂಡಿದೆ ಎನ್ನಲಾಗಿದೆ.

ಶೇ.80% 4G ಸ್ಮಾರ್ಟ್‌ಫೋನ್‌ನಲ್ಲಿ ಜಿಯೋನೇ ಇರಬೇಕು: ಅಂಬಾನಿ ಬೆಸ್ಟ್ ಪ್ಲಾನ್‌..!!

ಓದಿರಿ: ಅಮೆಜಾನ್ ಸಣ್ಣ ವಸ್ತುವಿಗೂ ದೊಡ್ಡ ಬಾಕ್ಸ್ ಕಳುಹಿಸುವುದು ಯಾಕೆ..? ಆಚ್ಚರಿಯ ಸತ್ಯ..!

ಈಗಾಗಲೇ 146 ಮಿಲಿಯನ್ ಬಳಕೆದಾರರನ್ನು ಹೊಂದಿರುವ ಜಿಯೋ, ತನ್ನ ಕುಟುಂಬವನ್ನು ಮತ್ತಷ್ಟು ವಿಸ್ತರಿಸಿಕೊಂಡು ದೇಶದ ಅತೀ ದೊಡ್ಡ ಟೆಲಿಕಾಂ ಸಂಸ್ಥೆ ಎನ್ನುವ ಪಟ್ಟವನ್ನು ಅಲಂಕರಿಬೇಕು ಎನ್ನುವ ಮಹಾದಾಸೆಯನ್ನು ಹೊಂದಿದ್ದು, ಈ ಹಿನ್ನಲೆಯಲ್ಲಿ ಹೊಸ ಯೋಜನೆಗಳನ್ನು ಜಾರಿಗೆ ಶೀಘ್ರವೇ ತರಲಿದೆ ಎನ್ನಲಾಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಹೊಸ ವರ್ಷಕ್ಕೆ ಮತ್ತೊಂದು Jio Surprise Cashback ಆಫರ್!!
ದೊಡ್ಡ ಯೋಜನೆ:

ದೊಡ್ಡ ಯೋಜನೆ:

ಈಗಾಗಲೇ ಮಾರುಕಟ್ಟೆಯಲ್ಲಿ ಸಾಕಷ್ಟು ಜನರನ್ನು ಸೆಳೆಯಲು ಮುಂದಾಗಿರುವ ಜಿಯೋ 2019ರ ಮಾರ್ಚ್ ವೇಳೆಗೆ ದೇಶದಲ್ಲಿ ಇರುವ 155 ಮಿಲಿಯನ್ ಸ್ಮಾರ್ಟ್‌ಫೋನ್‌ಗಳಲ್ಲಿ ಜಿಯೋವನ್ನೇ ಬಳಕೆ ಮಾಡುವಂತೆ ಮಾಡುವ ಗುರಿಯನ್ನು ಹೊಂದಿದೆ ಎನ್ನಲಾಗಿದೆ. ಇದಕ್ಕಾಗಿ ಆಕರ್ಷಕ ಪ್ಲಾನ್‌ಗಳು ಘೋಷಣೆಯಾಗಲಿದೆ.

100 ಮಿಲಿಯನ್ ಫೀಚರ್ ಪೋನ್:

100 ಮಿಲಿಯನ್ ಫೀಚರ್ ಪೋನ್:

ಇದಲ್ಲದೇ 2019ರ ಮಾರ್ಚ್ ವೇಳೆಗೆ ದೇಶದಲ್ಲಿ 100 ಮಿಲಿಯನ್ ಫೀಚರ್ ಪೋನ್ ಗಳನ್ನು ಲಾಂಚ್ ಮಾಡಲಿದ್ದು, ಈ ಮೂಲಕ ಫೀಚರ್ ಫೋನ್‌ ಮೂಲಕವೂ ಮಾರುಕಟ್ಟೆಯಲ್ಲಿ ಅತೀ ಹೆಚ್ಚಿನ ಜನರನ್ನು ಸೆಳೆಯಲಿದೆ ಎನ್ನಲಾಗಿದೆ. ಇದರಿಂದಾಗಿ ಗ್ರಾಹಕರ ಸಂಖ್ಯೆಯೂ ಹೆಚ್ಚಾಗಲಿದೆ.

ಇದಲ್ಲದೇ ಇನ್ನು ಇದೇ:

ಇದಲ್ಲದೇ ಇನ್ನು ಇದೇ:

ಕೇವಲ ಟೆಲಿಕಾಂ ಮಾರುಕಟ್ಟೆಯನ್ನು ಮಾತ್ರವಲ್ಲದೇ ಇಡೀ ದೇಶದ ಮೂಲೆ ಮೂಲೆಗೆ ಆಪ್ಟೀಕಲ್ ಫೈಬರ್ ಜಾಲವನ್ನು ವಿಸ್ತರಿಸುವುದಲ್ಲದೇ, DTH ಸೇವೆಯನ್ನು ಶೀಘ್ರವೇ ಆರಂಭಿಸಲಿದ್ದು, ಈ ಮೂಲಕ ಹೆಚ್ಚಿನ ಜನರನ್ನು ತಲುಪುವ ಪ್ರಯತ್ನವನ್ನು ಮಾಡಲಿದೆ ಎನ್ನಲಾಗಿದೆ.

ಏರ್‌ಟೆಲ್‌ ಮುಗಿಸುವ ಯೋಜನೆ:

ಏರ್‌ಟೆಲ್‌ ಮುಗಿಸುವ ಯೋಜನೆ:

ಈಗಾಗಲೇ ತಮ್ಮನ ರಿಲಯನ್ಸ್ ಕಮ್ಯೂನಿಕೇಷನ್ ಅನ್ನು ತನ್ನ ಒಡೆತನಕ್ಕೆ ಸೇರಿಕೊಂಡಿರುವ ಮುಖೇಶ್ ಅಂಬಾನಿ ಮುಂದಿನ ದಿನದಲ್ಲಿ ಏರ್‌ಟೆಲ್‌ ಅನ್ನು ಮುಗಿಸಿ, ಬ್ರಾಡ್‌ ಬ್ಯಾಂಡ್, DTH ಮತ್ತು ಟೆಲಿಕಾಂ ವಲಯದಲ್ಲಿ ತನ್ನದೇ ಅಧಿಪತ್ಯವನ್ನು ಸ್ಥಾಪಿಸುವ ಯೋಜನೆಯನ್ನು ರೂಪಿಸಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

English summary
Reliance Jio corners 80% of 4G smartphone. to know more visit kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot