Home
ಸುದ್ದಿಜಾಲ

WhatsApp: ಸ್ಟೇಟಸ್ ಅಪ್‌ಡೇಟ್‌ಗಾಗಿ ವಾಟ್ಸಾಪ್‌ನಲ್ಲಿ ಹೊಸ ಇಂಟರ್‌ಫೇಸ್‌!

ವಾಟ್ಸಾಪ್‌ (Whatsapp) ಆಗಾಗ್ಗೆ ತನ್ನ ಬಳಕೆದಾರರಿಗೆ ಹೊಸತನವನ್ನು ಪರಿಚಯಿಸುತ್ತಲೇ ಇರುತ್ತದೆ. ಈ ಮೂಲಕ ಗ್ರಾಹಕರು ಬೇರೆ ಆಪ್‌ ಕಡೆ ಕಣ್ಣೆತ್ತಿಯೂ ನೋಡದಂತೆ ಮಾಡುವ ಫೀಚರ್ಸ್‌ಗಳನ್ನು ಪರಿಚಯಿಸುತ್ತಿದ್ದು, ಈ ನಡುವೆ ಸ್ಟೇಟಸ್ ಅಪ್‌ಡೇಟ್‌ಗಾಗಿ (Status update) ಹೊಸ ಇಂಟರ್‌ಫೇಸ್‌ನಲ್ಲಿ ವಾಟ್ಸಾಪ್‌ ಕಾರ್ಯನಿರ್ವಹಿಸುತ್ತಿದೆ ಎಂದು ತಿಳಿದುಬಂದಿದೆ.

ಹೌದು, ವಾಟ್ಸಾಪ್ ತನ್ನ ಸ್ಟೇಟಸ್ ಅಪ್‌ಡೇಟ್ ಇಂಟರ್‌ಫೇಸ್‌ನಲ್ಲಿ (Status update interface) ದೊಡ್ಡ ವಿನ್ಯಾಸ ಬದಲಾವಣೆಯನ್ನು ಮಾಡಲು ಮುಂದಾಗಿದೆ ಎಂದು ತಿಳಿದುಬಂದಿದೆ. ಈ ಮೂಲಕ ಇನ್ಮುಂದೆ ಬಳಕೆದಾರರು ಬೇರೆಯದೇ ನೋಟವನ್ನು ಗಮನಿಸಬಹುದಾಗಿದೆ. ಹಾಗಿದ್ರೆ, ಮುಂದಿನ ಬದಲಾವಣೆಯನ್ನು ನೀವು ಏನನ್ನು ಗಮನಿಸಬಹುದು?, ಇದನ್ನು ಯಾಕೆ ಮಾಡಲಾಗುತ್ತಿದೆ ಎನ್ನುವ ಮಾಹಿತಿಯನ್ನು ತಿಳಿಸಿಕೊಡಲಾಗಿದೆ ಓದಿರಿ.

ಸ್ಟೇಟಸ್ ಅಪ್‌ಡೇಟ್‌ಗಾಗಿ ವಾಟ್ಸಾಪ್‌ನಲ್ಲಿ ಹೊಸ ಇಂಟರ್‌ಫೇಸ್‌!

ವಾಟ್ಸಾಪ್‌ನಲ್ಲಿ ಹೊಸ ಸೌಲಭ್ಯ: ಸ್ಟೇಟಸ್ ವಿಭಾಗದಲ್ಲಿ ವಾಟ್ಸಾಪ್‌ ಹೊಸ ಪ್ರಯೋಜನ ಕಲ್ಪಿಸಿಕೊಡಲು ಮುಂದಾಗಿದೆ. ಈ ಮೂಲಕ ಬಳಕೆದಾರರು ಫೇಸ್‌ಬುಕ್ ಸ್ಟೇಟಸ್ ಅಪ್ ಡೇಟ್ ಗಳಂತೆಯೇ ಬಳಕೆದಾರರ ಸ್ಟೇಟಸ್ ಅಪ್‌ಡೇಟ್‌ಗಳು ಕಾರ್ಡ್ ರೂಪದಲ್ಲಿ ಕಾಣಿಸಿಕೊಳ್ಳಲಿದೆ ಎಂದು ತಿಳಿದುಬಂದಿದೆ. ಅದರಲ್ಲೂ ಕೆಲವು ವರದಿಗಳ ಪ್ರಕಾರ ಸ್ಟೇಟಸ್‌ ಅಪ್‌ಡೇಟ್‌ ನಲ್ಲಿ ಬದಲಾವಣೆ ಮಾತ್ರವಲ್ಲದೆ ಸಂಪೂರ್ಣ ಇಂಟರ್ಫೇಸ್‌ಗೆ ಬದಲಾವಣೆಗಳನ್ನು ಮಾಡುತ್ತಿದೆ ಎಂದು ತಿಳಿದುಬಂದಿದೆ.

WA ಬೀಟಾ ಈ ಸಂಬಂಧ ವರದಿ ಮಾಡಿದ್ದು, ಅದರ ಪ್ರಕಾರ ಸ್ಟೇಟಸ್‌ ಅಪ್‌ಡೇಟ್‌ನೊಂದಿಗೆ ಬಳಕೆದಾರರ ಅನುಭವವನ್ನು ಹೆಚ್ಚಿಸಲು ವಾಟ್ಸಾಪ್‌ ಹೊಸ ಟೂಲ್ಸ್‌ ಅನ್ನು ಅನ್ವೇಷಿಸುತ್ತಿದೆ, ಆಂಡ್ರಾಯ್ಡ್‌ 2.24.7.16 ಅಪ್‌ಡೇಟ್‌ಗಾಗಿ ಗೂಗಲ್‌ ಪ್ಲೇ ಸ್ಟೋರ್‌ನಲ್ಲಿ ಲಭ್ಯವಿದೆ. ಜೊತೆಗೆ ಸ್ಟೇಟಸ್ ಅಪ್‌ಡೇಟ್‌ಗಳಿಗಾಗಿ ಹೊಸ ಇಂಟರ್‌ಫೇಸ್‌ ಅನ್ನು ಅಭಿವೃದ್ಧಿ ಪಡಿಸುತ್ತಿರುವಂತೆ ಕಾಣುತ್ತಿದೆ ಎಂದು ಉಲ್ಲೇಖಿಸಲಾಗಿದೆ.

ಸ್ಟೇಟಸ್ ಅಪ್‌ಡೇಟ್‌ಗಾಗಿ ವಾಟ್ಸಾಪ್‌ನಲ್ಲಿ ಹೊಸ ಇಂಟರ್‌ಫೇಸ್‌!

ಈ ಸಂಬಂಧ ಸ್ಕ್ರೀನ್‌ಶಾಟ್ ಒಂದನ್ನೂ ಸಹ ಶೇರ್‌ ಮಾಡಲಾಗಿದೆ. ಅದರ ಪ್ರಕಾರ, ಸ್ಟೇಟಸ್ ಅಪ್‌ಡೇಟ್‌ಗಾಗಿ ಹೊಸ ಸಂಯೋಜಕವನ್ನು ವಿನ್ಯಾಸಗೊಳಿಸುತ್ತಿದೆ ಎಂದು ವರದಿಯಾಗಿದೆ. ಹಂಚಿಕೆಗಾಗಿ ವಿವಿಧ ಮೀಡಿಯಾ ಸ್ವರೂಪಗಳ ನಡುವೆ ಬದಲಾಯಿಸಲು ಬಳಕೆದಾರರಿಗೆ ಅನುವು ಮಾಡಿಕೊಡುತ್ತದೆ. ಸ್ಟೇಟಸ್ ಅಪ್‌ಡೇಟ್‌ ಡಿಸ್‌ಪ್ಲೇನ ಕೆಳಭಾಗದಲ್ಲಿ ಕಂಡುಬರಲಿದ್ದು, ಬಳಕೆದಾರರು ಟೆಕ್ಸ್ಟ್, ವಿಡಿಯೋಗಳು ಅಥವಾ ಫೋಟೋಗಳನ್ನು ಶೇರ್‌ ಮಾಡಲು ಇದು ಆಯ್ಕೆಯಗಳನ್ನು ನೀಡಲಿದೆ ಎನ್ನಲಾಗಿದೆ.

ಇದರಿಂದ ಬಳಕೆದಾರರಿಗೆ ಏನೆಲ್ಲಾ ಪ್ರಯೋಜನ?: ಈ ವಿನ್ಯಾಸ ಬದಲಾವಣೆಯು ಹಲವಾರು ಪ್ರಯೋಜನಗಳನ್ನು ನೀಡುತ್ತದೆ ಎಂದು ವರದಿಗಳಿಂದ ತಿಳಿದುಬಂದಿದೆ. ಗಮನಾರ್ಹವಾಗಿ ಟೆಕ್ಸ್ಟ್‌ ಮತ್ತು ಮೀಡಿಯಾದ ನಡುವೆ ಬದಲಾಯಿಸಲು ಅಗತ್ಯವಿರುವ ಹಂತಗಳನ್ನು ಕಡಿಮೆ ಮಾಡುತ್ತದೆ. ಇದಲ್ಲದೆ, ಸ್ಟೇಟಸ್ ಅಪ್‌ಡೇಟ್‌ ಅನ್ನು ಹಂಚಿಕೊಳ್ಳಲು ಹೆಚ್ಚು ಅರ್ಥಗರ್ಭಿತ ಮತ್ತು ಸುಸಂಬದ್ಧ ಇಂಟರ್ಫೇಸ್ ಅನ್ನು ಪ್ರಸ್ತುತಪಡಿಸುವ ಮೂಲಕ ಬಳಕೆದಾರರಿಗೆ ಆಗುವ ಗೊಂದಲವನ್ನು ಕಡಿಮೆ ಮಾಡಲಿದೆ ಎಂದು ತಿಳಿದುಬಂದಿದೆ.

ಸ್ಟೇಟಸ್ ಅಪ್‌ಡೇಟ್‌ಗಾಗಿ ವಾಟ್ಸಾಪ್‌ನಲ್ಲಿ ಹೊಸ ಇಂಟರ್‌ಫೇಸ್‌!

ಎಐ ಚಾಲಿತ ಇಮೇಜ್ ಎಡಿಟರ್: ಈ ನಡುವೆ ಮತ್ತೊಂದು ನಿರೀಕ್ಷಿತ ಫೀಚರ್‌ ಬಗ್ಗೆ WA ಬೀಟಾ ವರದಿ ಮಾಡಿದೆ. ಅಂದರೆ ವಾಟ್ಸಾಪ್‌ ಶೀಘ್ರದಲ್ಲೇ ಎಐ-ಚಾಲಿತ ಇಮೇಜ್ ಎಡಿಟರ್ ಅನ್ನು ಪಡೆದುಕೊಳ್ಳಬಹುದು ಎನ್ನಲಾಗಿದೆ. ಇದು ಬಳಕೆದಾರರಿಗೆ ಆಪ್‌ನಿಂದಲೇ ಫೋಟೋಗಳನ್ನು ಎಡಿಟ್‌ ಮಾಡಲು ಅನುಮತಿಸುತ್ತದಂತೆ. ಆಂಡ್ರಾಯ್ಡ್‌ಗಾಗಿ ಇತ್ತೀಚಿನ ಬೀಟಾ ಅಪ್‌ಡೇಟ್ (ಆವೃತ್ತಿ 2.24.7.13) ಎಐ ಚಾಲಿತ ಇಮೇಜ್ ಎಡಿಟರ್‌ಗಾಗಿ ಕೋಡ್ ಅನ್ನು ಒಳಗೊಂಡಿದೆ ಎಂದು ಉಲ್ಲೇಖಿಸಲಾಗಿದೆ. ಈ ಫೀಚರ್ಸ್‌ ಇನ್ನೂ ಅಭಿವೃದ್ಧಿ ಹಂತದಲ್ಲಿದೆ.

ಇನ್ನು ಈ ಮುಂಬರುವ ಟೂಲ್ಸ್ ವಾಟ್ಸಾಪ್‌ನ ನ ಇಮೇಜ್ ಕಳುಹಿಸುವ ಇಂಟರ್ಫೇಸ್‌ನಲ್ಲಿ ಕಾಣಿಸಿಕೊಳ್ಳಲಿದೆ ಎನ್ನಲಾಗಿದೆ. ಹೆಚ್‌ಡಿ ಐಕಾನ್ ಬಳಿ ಗುರುತಿಸಬಹುದಾದ ಹಸಿರು ಐಕಾನ್ ಬ್ಯಾಕ್‌ಡ್ರಾಪ್, ರಿಸ್ಟೈಲ್ ಮತ್ತು ಎಕ್ಸ್‌ಪಾಂಡ್‌ನಂತಹ ಆಯ್ಕೆಗಳನ್ನು ಕಾಣಬಹುದಾಗಿದೆ. ಪ್ರತಿಯೊಂದೂ ಸಹ ಅನನ್ಯ ಎಡಿಟಿಂಗ್‌ ಸಾಮರ್ಥ್ಯಗಳನ್ನು ಹೊಂದಿರಲಿವೆ ಎಂದು ತಿಳಿದುಬಂದಿದೆ.

Best Mobiles in India

English summary
It is known that WhatsApp is going to make a big design change in its status update interface.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+