ಆಪಲ್‌ನ ಒಂದು ಸಣ್ಣ ಮಿಸ್ಟೇಕ್ 'ಐಫೋನ್ 11' ಬಗ್ಗೆ ಭಯ ಹುಟ್ಟಿಸುತ್ತಿದೆ!..ಏಕೆ?
ಇಡೀ ವಿಶ್ವವೇ ಕಾತುರದಿಂದ ಎದುರು ನೋಡುತ್ತಿದ್ದ ಬಹುನಿರೀಕ್ಷಿತ 'ಐಫೋನ್ 11' ಸರಣಿ ಇದೇ ಸೆಪ್ಟೆಂಬರ್ 10ರಂದು ಬಿಡುಗಡೆ ಆಗಿದೆ. ಈ ಐಫೋನ್ ಸರಣಿಯು ನಿರೀಕ್ಷೆಯಂತೆ ಅತ್ಯುತ್ತಮ ಹೈ ಎಂಡ್ ಫೀಚರ್ಸ್‌ಗಳು, ಅಪ್‌ಗ್ರೇಡ್ ಕ್ಯಾಮೆರಾ ಮತ್ತು ವೇಗದ A13 ಬಯೋನಿಕ್ ಪ್ರೊಸೆಸರ್ ಫೀಚರ್ಸ್‌ಗಳನ್ನು ಒಳಗೊಂಡಿದ್ದು, ಗ್ರಾಹಕರನ್ನು ಆಕರ್ಷಿಸಿದೆ. ಆದರೆ ಐಫೋನ್ 11 ಸರಣಿಯ ಒಂದು ಸಣ್ಣ ಮಿಸ್ಟೇಕ್ ಗ್ರಾಹಕರಲ್ಲಿ ಭಯ ಹುಟ್ಟಿಸುತ್ತಿದೆ.

ಹೌದು, ಬಹುನಿರೀಕ್ಷಿತ ಆಪಲ್ ಐಫೋನ್ 11 ಸರಣಿ ಬಿಡುಗಡೆ ಆಗಿದ್ದು, ಈ ಸರಣಿಯು ಐಫೋನ್ 11, ಐಫೋನ್ 11 ಪ್ರೊ ಮತ್ತು ಐಫೋನ್ 11 ಪ್ರೊ ಮ್ಯಾಕ್ಸ್ ಫೋನ್‌ಗಳನ್ನು ಒಳಗೊಂಡಿದೆ. ಮೂರು ಐಫೋನ್‌ಗಳು A13 ಬಯೋನಿಕ್ ಪ್ರೊಸೆಸರ್ ಸಾಮರ್ಥ್ಯವನ್ನು ಪಡೆದಿದ್ದು, 12ಎಂಪಿ ಕ್ಯಾಮೆರಾ ಸೆನ್ಸಾರ್ ಹೊಂದಿವೆ. ಆದ್ರೆ ಇದೇ ನೋಡಿ ಗ್ರಾಹಕರಿಗೆ ಈಗ ಅನ್ ಕಂಫರ್ಟೆಬಲ್‌ಗೆ ಕಾರಣವಾಗಿದೆ. ಹಾಗಾದರೇ ಐಫೋನ್ 11 ಫೋನ್‌ಗಳಲ್ಲಿ ಗ್ರಾಹಕರಿಗೆ ಭಯ ಅನಿಸುವಂತಹದ್ದು ಏನಿದೆ?.ಯಾಕೆ ಈ ರೀತಿ ಅಭಿಪ್ರಾಯಗಳು ವ್ಯಕ್ತವಾಗಿವೆ ಎಂಬುದನ್ನು ಮುಂದೆ ನೋಡೋಣ ಬನ್ನಿರಿ.

12ಎಂಪಿ ಕ್ಯಾಮೆರಾ ಸೆನ್ಸಾರ್
ಆಪಲ್ ಕಂಪನಿಯು ಐಫೋನ್ 11 ಫೋನ್ ಹಿಂಬದಿಯಲ್ಲಿ ಎರಡು ರಿಯರ್ ಕ್ಯಾಮೆರಾಗಳನ್ನು ನೀಡಲಾಗಿದೆ. 'ಐಫೋನ್ 11 ಪ್ರೊ' ಮತ್ತು 'ಐಫೋನ್ 11 ಪ್ರೊ ಮ್ಯಾಕ್ಸ್' ಫೋನ್‌ಗಳಲ್ಲಿ ಮೂರು ರಿಯರ್ ಕ್ಯಾಮೆರಾ ಸೆಟ್‌ಅಪ್ ನೀಡಿದೆ. ಹಾಗೆಯೇ ಸೆಲ್ಫಿ ಕ್ಯಾಮೆರಾಗಳು ಸೇರಿದಂತೆ, ಎಲ್ಲ ರಿಯರ್ ಕ್ಯಾಮೆರಾಗಳು 12ಎಂಪಿ ಸೆನ್ಸಾರ್‌ನಲ್ಲಿವೆ. ಅತ್ಯುತ್ತಮ ರೆಸಲ್ಯೂಶನ್ ಸಾಮರ್ಥ್ಯವನ್ನು ಸಹ ಪಡೆದಿವೆ. ಆದ್ರೆ ಕ್ಯಾಮೆರಾ ರಚನೆ ಭಯಪಡುವಂತೆ ಮಾಡಿದೆ.

ಭಯಕ್ಕೆ ಕಾರಣ
ಆಪಲ್ 11 ಸರಣಿಯ ಐಫೋನ್‌ಗಳ ಡಿಸೈನ್ ಆಕರ್ಷಕವಾಗಿದ್ದು, ಆದ್ರೆ ಕ್ಯಾಮೆರಾ ಡಿಸೈನ್ ಹೋಲ್‌ಗಳು ನೋಡಲು ಜೇನುಗೂಡಿನ (Trypophobia-ಅಸ್ತವ್ಯಸ್ತವಾಗಿ ಕಾಣುವ ರಂಧ್ರಗಳ ಭಯ) ಹೋಲ್‌ಗಳಂತೆ ಕಾಣಿಸುತ್ತಿವೆ. ಹೀಗಾಗಿ ಐಫೋನ್ 11 ಫೋನಿನ ಕ್ಯಾಮೆರಾ ಹೋಲ್‌ಗಳು ಭಯ ಮೂಡಿಸುತ್ತಿವೆ ಎನ್ನುವ ಅಭಿಪ್ರಾಯಗಳನ್ನು ಬಹುತೇಕ ಗ್ರಾಹಕರು ಟ್ವಿಟರ್ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿದ್ದು, ಈಗ ವೈರಲ್ ಆಗಿವೆ.

ಐಫೋನ್ 11, 6.1 ಇಂಚಿನ ಡಿಸ್‌ಪ್ಲೇ ಮತ್ತು ಡ್ಯುಯಲ್ ಕ್ಯಾಮೆರಾ ಆಯ್ಕೆಯನ್ನು ಒಳಗೊಂಡಿದೆ. ವೇಗದ ಚಿಪ್‌ಸೆಟ್ ಬೆಂಬಲದೊಂದಿಗೆ A13 ಬಯೋನಿಕ್ ಪ್ರೊಸೆಸರ್ ನೀಡಲಾಗಿದ್ದು, ಆಪಲ್ ಎಕ್ಸ್‌ಆರ್‌ಗಿಂತ ಬ್ಯಾಟರಿ ಲೈಫ್ ಅಧಿಕವಾಗಿದೆ. ಎರಡು ಕ್ಯಾಮೆರಾಗಳು 12ಎಂಪಿ ಸೆನ್ಸಾರ್ ಬೆಂಬಲವನ್ನು ಪಡೆದಿದ್ದು, ಇದರೊಂದಿಗೆ ನೈಟ್‌ಮೋಡ್, 4K ವಿಡಿಯೊ, ಸ್ಲೋ ಮೋಶನ್ ಫೀಚರ್ಸ್‌ಗಳನ್ನು ಪಡೆದಿದೆ. ಆರಂಭಿಕ ಬೆಲೆಯು 64,900ರೂ. ಆಗಿದ್ದು, ಇದೇ ಸೆಪ್ಟಂಬರ್ 13ರಿಂದ ಪ್ರಿ ಆರ್ಡರ್ ಶುರು.

ಐಫೋನ್ 11 ಪ್ರೊ
ಐಫೋನ್ 11 ಪ್ರೊ, 5.8 ಇಂಚಿನ ಸೂಪರ್ ರೇಟಿನಾ XDR ಡಿಸ್‌ಪ್ಲೇ ಮತ್ತು ತ್ರಿವಳಿ ಕ್ಯಾಮೆರಾ ಆಯ್ಕೆಯನ್ನು ಒಳಗೊಂಡಿದೆ. A13 ಬಯೋನಿಕ್ ಪ್ರೊಸೆಸರ್ ನೀಡಲಾಗಿದ್ದು, ಮೂರು ಕ್ಯಾಮೆರಾಗಳು ಸಹ 12ಎಂಪಿ ಸೆನ್ಸಾರ್ ಬೆಂಬಲವನ್ನು ಪಡೆದಿವೆ. ಐಫೋನ್ ಎಕ್ಸ್‌ಎಸ್‌ಗಿಂತ ಬ್ಯಾಟರಿ ಉತ್ತಮವಾಗಿದ್ದು, ಜೊತೆಗೆ 18W ಸಾಮರ್ಥ್ಯ ಚಾರ್ಜರ್ ಬೆಂಬಲ ಹೊಂದಿದೆ. 64GB, 256GB ಮತ್ತು 512GB ಸ್ಟೋರೇಜ್ ಆಯ್ಕೆಗಳನ್ನು ಒಳಗೊಂಡಿದೆ. ಬೆಲೆಯು 99,900ರೂ. ಆಗಿದೆ.

ಐಫೋನ್ 11 ಪ್ರೊ ಮ್ಯಾಕ್ಸ್
ಈ ಐಫೋನ್ 6.5 ಇಂಚಿನ ಸೂಪರ್ ರೇಟಿನಾ XDR ಡಿಸ್‌ಪ್ಲೇ ಮತ್ತು ತ್ರಿವಳಿ ಕ್ಯಾಮೆರಾ ಆಯ್ಕೆಯನ್ನು ಒಳಗೊಂಡಿದೆ. A13 ಬಯೋನಿಕ್ ಪ್ರೊಸೆಸರ್ ನೀಡಲಾಗಿದ್ದು, ಈ ಫೋನ್ ಸಹ ಮೂರು ಕ್ಯಾಮೆರಾಗಳನ್ನು ಹೊಂದಿದ್ದು, ಅವುಗಳು 12ಎಂಪಿ ಸೆನ್ಸಾರ್ ಬೆಂಬಲವನ್ನು ಪಡೆದಿವೆ. 'ಐಫೋನ್ ಎಕ್ಸ್‌ಎಸ್ ಮ್ಯಾಕ್ಸ್'ಗಿಂತ ಬ್ಯಾಟರಿ ಉತ್ತಮವಾಗಿದ್ದು, ಜೊತೆಗೆ 18W ಸಾಮರ್ಥ್ಯ ಚಾರ್ಜರ್ ಬೆಂಬಲ ಹೊಂದಿದೆ. ಐಫೋನ್ ಮ್ಯಾಕ್ಸ್ ಸಹ 64GB, 256GB ಮತ್ತು 512GB ಸ್ಟೋರೇಜ್ ಆಯ್ಕೆಗಳನ್ನು ಒಳಗೊಂಡಿದೆ. ಬೆಲೆಯು 109,900ರೂ. ಆಗಿದೆ.


Click it and Unblock the Notifications



