ಬದಲಾಗಲಿದೆ ಆಪಲ್‌!...ಐಫೋನ್‌ ಸೇರಲಿವೆ ವಿಶೇಷ ಆಯ್ಕೆಗಳು!

|

ಆಪಲ್‌ ಕಂಪನಿಯ ಡಿವೈಸ್‌ಗಳನ್ನು ಬಳಸುತ್ತಿರುವ ಮತ್ತು ಸದ್ಯ ಬಳಸಲು ಮುಂದಾಗುತ್ತಿರುವ ಗ್ರಾಹಕರಿಗೆ ಖುಷಿ ಸುದ್ದಿ. ಕಂಪನಿಯು ತನ್ನ ಆಪರೇಟಿಂಗ್‌ ಸಿಸ್ಟಮ್‌ನಲ್ಲಿ ಹೊಸ ವರ್ಷನ್‌ ಅನ್ನು ಅಳವಡಿಸಿಕೊಳ್ಳಲು ಮುಂದಾಗಿದ್ದು, ಹೊಸ iOS 13 ಓಎಸ್‌ ಭಾರಿ ಬದಲಾವಣೆಗಳನ್ನು ಸೇರಿಸಿಕೊಳ್ಳಲಿದೆ. ಹೀಗಾಗಿ ಇನ್ಮುಂದೆ ಆಪಲ್‌ ಗ್ರಾಹಕರು ತಮ್ಮ ಐಫೋನ್‌ ಮತ್ತು ಐಪೋಡ್‌ ಡಿವೈಸ್‌ಗಳ ಆಪರೇಟಿಂಗ್‌ನಲ್ಲಿ ಹೊಸತನವನ್ನು ನಿರೀಕ್ಷಿಸಬಹುದಾಗಿದೆ.

ಬದಲಾಗಲಿದೆ ಆಪಲ್‌!...ಐಫೋನ್‌ ಸೇರಲಿವೆ ವಿಶೇಷ ಆಯ್ಕೆಗಳು!

ಹೌದು, ಆಪಲ್‌ ಕಂಪನಿಯು ಇದೇ ಜೂನ್ ತಿಂಗಳಲ್ಲಿ ಕ್ಯಾಲಿಫೊರ್ನಿಯದಲ್ಲಿ ನಡೆಯುವ 'ವರ್ಲ್ಡ್‌ ವೈಡ್‌ ಡೆವಲಪರ್ಸ್ ಕಾನ್ಫರೆಸ್ಸ್‌'ನಲ್ಲಿ(WWDC) ಹೊಸ iOS 13 ಓಎಸ್‌ ಅನ್ನು ಪರಿಚಯಿಸಲಿದೆ. ತನ್ನ ಹೊಸ iOS, macOS ಮತ್ತು watchOS ಕಾರ್ಯವೈಖರಿಯ ಬಗ್ಗೆ ತಿಳಿಸಲಿದೆ. ಹೊಸ ಅಪ್‌ಡೇಟ್‌ IOS 13 ವರ್ಷನ್‌ ಹಲವು ಇನ್‌ಬಿಲ್ಟ್‌ ಫೀಚರ್ಸ್‌ಗಳನ್ನು ಮತ್ತು ಆಪ್‌ಗಳನ್ನು ಒಳಗೊಂಡಿರಲಿದೆ. ಹಾಗಾದರೇ ಆಪಲ್‌ iOS 13 ಓಎಸ್‌ನಲ್ಲಿ ನಿರೀಕ್ಷಿಸಬಹುದಾದ ಪ್ರಮುಖ ಫೀಚರ್ಸ್‌ಗಳು ಯಾವುವು ಅವುಗಳ ವಿಶೇಷತೆ ಏನು ಎಂಬುದನ್ನು ತಿಳಿಯಲು ಮುಂದೆ ಓದಿರಿ.

ಓದಿರಿ : ನ್ಯೂ ಲುಕ್‌ನಲ್ಲಿ ಕಾಣಿಸಿಕೊಳ್ಳಲಿದೆ 'ಗೂಗಲ್ ಸರ್ಚ್'! ಓದಿರಿ : ನ್ಯೂ ಲುಕ್‌ನಲ್ಲಿ ಕಾಣಿಸಿಕೊಳ್ಳಲಿದೆ 'ಗೂಗಲ್ ಸರ್ಚ್'!

ಫೈಲ್‌ ಶೇರಿಂಗ್

ಫೈಲ್‌ ಶೇರಿಂಗ್

ಹೊಸ ಓಎಸ್‌ ಆಪಲ್‌ ಡಿವೈಸ್‌ಗಳನ್ನು ಸೇರಿಕೊಳ್ಳಲಿದ್ದು, ಹಲವು ನೂತನ ಆಯ್ಕೆಗಳನ್ನು ಪರಿಚಯಿಸಲಿದೆ. ಅವುಗಳಲ್ಲಿ ಆಪಲ್‌ ಡಿವೈಸ್‌ಗಳ ನಡುವೆ ಫೈಲ್‌ ಶೇರಿಂಗ್ ಆಯ್ಕೆಯಲ್ಲಿ ಹೊಸತನಗಳು ಕಾಣಿಸಿಕೊಳ್ಳಲಿದ್ದು, ವೇಗವಾಗಿ ಡೇಟಾಗಳನ್ನು ಟ್ರಾನ್ಸ್‌ಫರ್‌ ಮಾಡಬಹುದಾಗಿದೆ.

ಸ್ವಂತ ಇಮೋಜಿ

ಸ್ವಂತ ಇಮೋಜಿ

ಸದ್ಯ ಮೆಸೆಜ್‌ಗಳಲ್ಲಿ ಇಮೋಜಿ ಆಯ್ಕೆಗಳು ಬಹಳ ಹುರುಪು ತುಂಬುತ್ತಿದ್ದು, ಬಳಕೆದಾರರು ಚಾಟಿಂಗ್‌ನಲ್ಲಿ ಹೆಚ್ಚಾಗಿ ಇಮೋಜಿಗಳನ್ನು ಬಳಸಿಕೊಳ್ಳುತ್ತಿದ್ದಾರೆ. ಇದೀಗ ಆಪಲ್‌ ಕಂಪನಿಯು ಸ್ವಂತ ಇಮೋಜಿಗಳನ್ನು ಪರಿಚಯಿಸಲಿದ್ದು, ಹಲವು ವಿವಿಧ ಆಕರ್ಷಕ ಇಮೋಜಿಗಳು ಐಫೋನ್‌ ಸೇರಿಕೊಳ್ಳಲಿವೆ.

ಐ ಮೆಸ್ಸೆಜ್‌ ಆಪ್‌

ಐ ಮೆಸ್ಸೆಜ್‌ ಆಪ್‌

ಐ ಮೆಸ್ಸೆಜ್‌ ಆಪ್‌ ವಾಟ್ಸಪ್‌ ಮೆಸ್ಸೆಜ್‌ ರೀತಿಯಲ್ಲಿಯೇ ಇರಲಿದ್ದು, ಪ್ರೋಫೈಲ್‌ ಪಿಚ್ಚರ್‌ ಮತ್ತು ಡಿಸ್‌ಪ್ಲೇ ನೇಮ್‌ ಆಯ್ಕೆಗಳನ್ನು ಹೊಂದಿರಲಿದೆ. ಈ ಐ ಮೆಸ್ಸೆಜ್‌ ಆಪ್‌ನಲ್ಲಿ ಪ್ರೈವೆಸ್ಸಿ ಸೆಟ್ಟಿಂಗ್‌ ಮಾಡಿಕೊಳ್ಳಲು ಆಯ್ಕೆ ಇದ್ದು, ಯಾರು ನನ್ನ ಪ್ರೊಫೈಲ್‌ ನೋಡಬಹುದು ಎಂಬುದನ್ನು ನಿಯಂತ್ರಿಸಬಹುದಾಗಿದೆ. ಹಾಗೇ ಮೆಮ್ಸ್‌, ಇಮೋಜಿಗಳು, ಎನಿಮೋಜಿಗಳು, ಸ್ಟಿಕ್ಕರ್ ಆಯ್ಕೆಗಳು ಸಹ ಇರಲಿವೆ.

ಓದಿರಿ : 'ಗೂಗಲ್ ಮ್ಯಾಪ್‌'ನ ಈ ಫೀಚರ್ಸ್‌ಗಳ ಬಗ್ಗೆ ನೀವು ತಿಳಿದುಕೊಳ್ಳಲೇಬೇಕು! ಓದಿರಿ : 'ಗೂಗಲ್ ಮ್ಯಾಪ್‌'ನ ಈ ಫೀಚರ್ಸ್‌ಗಳ ಬಗ್ಗೆ ನೀವು ತಿಳಿದುಕೊಳ್ಳಲೇಬೇಕು!

ರಿಮೈಂಡರ್‌ ಆಪ್‌

ರಿಮೈಂಡರ್‌ ಆಪ್‌

ಹೊಸ ಓಎಸ್‌ನಲ್ಲಿ ರಿಮೈಂಡರ್‌ ಮತ್ತು ಬುಕ್ಸ್‌ ಆಪ್‌ ಇರಲಿದ್ದು, ಇದು ನಾಲ್ಕು ಡಿಫಾಲ್ಟ್‌ ಆಯ್ಕೆಗಳನ್ನು ಹೊಂದಿರಲಿದೆ. ಅವುಗಳೆಂದರೇ ಆಲ್‌ ಟಾಸ್ಕ್‌, ಶೆಡ್ಯುಲ್ಡ್‌ ಟಾಸ್ಕ್‌, ಟಾಸ್ಕ್‌ ಟು ಬಿ ಡನ್‌ ಟುಡೇ ಮತ್ತು ಫ್ಲ್ಯಾಗ್ಡ್‌ ಟಾಸ್ಕ್‌. ಇವು ಬಳಕೆದಾರರಿಗೆ ನೆನೆಪಿಸುವ ಕೆಲಸ ಮಾಡಲಿದ್ದು, ರಿಮೈಂಡರ್‌ ಸೆಟ್ಟ್ ಮಾಡಿಕೊಳ್ಳಬೇಕು. ಬುಕ್ಸ್‌ಗೆ ಸಂಭಂದಿತ ಆಪ್‌ ಸಹ ಇರಲಿದೆ.

ಡಾರ್ಕ್‌ ಮೋಡ್‌

ಡಾರ್ಕ್‌ ಮೋಡ್‌

ಈ ಹಿಂದಿನ ವರ್ಲ್ಡ್‌ ವೈಡ್‌ ಡೆವಲಪರ್ಸ್ ಕಾನ್ಫರೆಸ್ಸ್‌'ನಲ್ಲಿ ಕಂಪನಿ ಹೊಸ ಓಎಸ್‌ ಅನ್ನು ಪರಿಚಯಿಸಿದ್ದು, ಹಾಗೇ ಈ ಸರತಿಯು iOS 13 ಓಎಸ್‌ ಪರಿಚಯಿಸಲಿದ್ದು, ಅದರ ವಿಶೇಷತೆಗಳನ್ನು ಪ್ರದರ್ಶಿಸಲಿದೆ. ಈ ಓಎಸ್‌ನ ವಿಶೇಷತೆ ಡಾರ್ಕ್‌ ಮೋಡ್ ಆಯ್ಕೆ ಆಗಿದ್ದು, ಇನ್‌ಬಿಲ್ಟ್‌ ಹೊಂದಿರಲಿದೆ. ಹೀಗಾಗಿ ಮುಂದಿನ ಐಫೋನ್‌ ಮತ್ತು ಐಫೋಡ್‌ಗಳಲ್ಲಿ ಬಳಕೆದಾರರು ಡಾರ್ಕ್‌ ಮೋಡ್‌ ಫೀಚರ್‌ ಲಭ್ಯವಾಗಲಿದೆ.

ಫೈಂಡ್‌ ಮೈ ಐಫೋನ್‌

ಫೈಂಡ್‌ ಮೈ ಐಫೋನ್‌

ಆಪಲ್‌ 'ಫೈಂಡ್‌ ಮೈ ಐಫೋನ್‌' ಮತ್ತು 'ಫೈಂಡ್‌ ಮೈ ಫ್ರೆಂಡ್ಸ್‌' ಎರಡನ್ನು ಒಂದೇ ಆಪ್‌ನಲ್ಲಿ ವಿಲೀನ್‌ ಮಾಡಿದ್ದು, ಸದ್ಯ ಗ್ರೀನ್‌ಟಚ್‌ ಆಯ್ಕೆಯಿಂದ ಗುರುತಿಸಿಕೊಂಡಿದೆ. ಈ ಆಪ್‌ ಮೂಲಕ ಐಫೋನ್‌ ಹುಡುಕಬಹುದಾಗಿದ್ದು, ಜೊತೆಗೆ ಫೈಂಡ್‌ ಮೈ ಫ್ರೆಂಡ್‌ ಫೀಚರ್‌ ಸೇರಿಸಲಾಗಿದೆ. ಹಾಗೇ ಈ ಹಿಂದೆ ಆಪಲ್‌ ಬಾಹ್ಯವಾಗಿ ಫೋನ್‌ ಹುಡುಕುವ ಆಯ್ಕೆ ಪರಿಚಯಿಸಲಿದೆ ಎನ್ನವ ಮಾತುಗಳು ಇದ್ದವು.

ಓದಿರಿ : ಗೂಗಲ್‌ ಸರ್ಚ್‌ ಹಿಸ್ಟರಿ ಆಫ್‌ ಮಾಡಬೇಕೆ?..ಹೀಗೆ ಮಾಡಿ! ಓದಿರಿ : ಗೂಗಲ್‌ ಸರ್ಚ್‌ ಹಿಸ್ಟರಿ ಆಫ್‌ ಮಾಡಬೇಕೆ?..ಹೀಗೆ ಮಾಡಿ!

Best Mobiles in India

English summary
new iPhone, iPad features that invite for Apple's biggest event of 2019 reveals.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X