ಜಿಯೋ ಟೆಲಿಕಾಂನಿಂದ ಮತ್ತೆ ಹೊಸ ಪ್ಲ್ಯಾನ್ ಲಾಂಚ್; ಅಧಿಕ ಪ್ರಯೋಜನ!
ದೇಶದ ಮೂಂಚೂಣಿಯ ಟೆಲಿಕಾಂ ಆಗಿ ಗುರುತಿಸಿಕೊಂಡಿರುವ ರಿಲಯನ್ಸ್ ಜಿಯೋ ಈಗಾಗಲೇ ಪ್ರೀಪೇಯ್ಡ್ ಪ್ಲ್ಯಾನ್‌ಗಳ ಜೊತೆಗೆ ಅತ್ಯುತ್ತಮ ಪೋಸ್ಟ್‌ಪೇಯ್ಡ್ ಪ್ಲ್ಯಾನ್‌ಗಳ ಆಯ್ಕೆ ಹೊಂದಿದೆ. ಅದೇ ರೀತಿ ಈಗ ಮತ್ತೆ ಜಿಯೋ 399ರೂ ಪೋಸ್ಟ್‌ಪೇಯ್ಡ್ ಪ್ಲಸ್ ಪ್ಲ್ಯಾನ್ ಅನ್ನು ಪರಿಚಯಿಸಿದೆ. ಈ ನೂತನ ಪೋಸ್ಟ್‌ಪೇಯ್ಡ್ ಯೋಜನೆ ಹಿಂದಿನ ಪ್ಲ್ಯಾನ್‌ಗಿಂತ ಹೆಚ್ಚು ಆಕರ್ಷಕ ಆಗಿವೆ.
ಹೌದು, ಜಿಯೋ ಟೆಲಿಕಾಂ ಹೊಸದಾಗಿ ಜಿಯೋ 399ರೂ, ಹಾಗೂ 696ರೂ. ಫ್ಯಾಮಿಲಿ ಪೋಸ್ಟ್‌ಪೇಯ್ಡ್ ಪ್ಲಸ್ ಪ್ಲ್ಯಾನ್ ಅನ್ನು ಲಾಂಚ್ ಮಾಡಿದೆ. ಜಿಯೋ 399ರೂ. ಪ್ಲ್ಯಾನ್ 3 ಕುಟುಂಬದ ಸದಸ್ಯರ ಆಡ್-ಆನ್ ಅನ್ನು ತಲಾ 99ರೂ. ನೀಡುತ್ತದೆ. ಅದೇ ನಾಲ್ಕು ಜನರ ಕುಟುಂಬಕ್ಕೆ ಒಟ್ಟು 696ರೂ. ಆಗಿದೆ. ಹೊಸ ಯೋಜನೆಯು ಅನಿಯಮಿತ ಕರೆ, ಡೇಟಾ, ಎಸ್‌ಎಮ್‌ಎಸ್ ಸೌಲಭ್ಯ ಪಡೆದಿದೆ.

ಹಾಗೆಯೇ ಈ ಪೋಸ್ಟ್‌ಪೇಯ್ಡ್ ಯೋಜನೆಯು ಡೇಟಾ, ಎಸ್‌ಎಮ್‌ಎಸ್ ಜೊತೆಗೆ ಓಟಿಟಿ ಪ್ರಯೋಜನಗಳನ್ನು ಒಳಗೊಂಡಿದ್ದು, ಗ್ರಾಹಕರನ್ನು ಆಕರ್ಷಿಸಿದೆ. ಹಾಗಾದರೇ ಈ ನೂತನ ಪೋಸ್ಟ್‌ಪೇಯ್ಡ್ ಯೋಜನೆಗಳ ಒಟ್ಟಾರೇ ಪ್ರಯೋಜನಗಳ ಬಗ್ಗೆ ಹಾಗೂ ಇತರೆ ಜನಪ್ರಿಯ ಪೋಸ್ಟ್‌ಪೇಯ್ಡ್ ಪ್ಲ್ಯಾನ್‌ಗಳ ಬಗ್ಗೆ ಮುಂದೆ ತಿಳಿಯೋಣ ಬನ್ನಿರಿ.
ಜಿಯೋ 399ರೂ. ಪೋಸ್ಟ್‌ಪೇಯ್ಡ್ ಯೋಜನೆಯು ಕುಟುಂಬ ಯೋಜನೆಯಾಗಿ ಕಾಣಿಸಿಕೊಂಡಿದೆ. ಮೂರು ಕುಟುಂಬ ಸದಸ್ಯರನ್ನು ಸೇರಿಸಬಹುದಾಗಿದ್ದು, ಪ್ರತಿ ಸದಸ್ಯರಿಗೆ 99ರೂ. ಶುಲ್ಕ ಇದೆ. ಹಾಗೆಯೇ ಈ ಯೋಜನೆಯು ನಾಲ್ಕು ಸದಸ್ಯರ ಕುಟುಂಬಕ್ಕೆ 696ರೂ. ವರೆಗೆ ಆಗುತ್ತದೆ. ಇನ್ನು ಆಡ್-ಆನ್ ಸಿಮ್‌ಗಳು ಪ್ರತಿ ತಿಂಗಳು 5GB ಡೇಟಾವನ್ನು ಪಡೆಯುತ್ತವೆ. ಪ್ರಾಥಮಿಕ ಸಿಮ್ ಹೊಂದಿರುವವರು 75GB ಡೇಟಾವನ್ನು ಪಡೆಯುತ್ತಾರೆ.

ಇದರೊಂದಿಗೆ ಎಲ್ಲಾ ನಾಲ್ಕು ಕನೆಕ್ಷನ್‌ಗಳಿಗೆ ಅನಿಯಮಿತ ಕರೆ ಮತ್ತು ಅನಿಯಮಿತ ಎಸ್‌ಎಮ್‌ಎಸ್ ಪ್ರಯೋಜನಗಳು ಲಭ್ಯವಾಗಲಿವೆ. ಈ ಯೋಜನೆಯು ಬಳಕೆದಾರರಿಗೆ ಹೆಚ್ಚುವರಿಯಾಗಿ ನೆಟ್‌ಫ್ಲಿಕ್ಸ್ ಮೊಬೈಲ್ ಮತ್ತು ಅಮೆಜಾನ್ ಪ್ರೈಮ್ ಚಂದಾದಾರಿಕೆಗಳನ್ನು ಸಹ ನೀಡುತ್ತದೆ. ಇನ್ನು ಹಳೆಯ 399ರೂ. ಪೋಸ್ಟ್‌ಪೇಯ್ಡ್ ಯೋಜನೆಯು ದಿನಕ್ಕೆ 100 ಎಸ್‌ಎಮ್‌ಎಸ್ ಸೌಲಭ್ಯ ಹೊಂದಿದೆ.
ಹಾಗೆಯೇ ಜಿಯೋ 599 ರೂ. ಪೋಸ್ಟ್‌ಪೇಯ್ಡ್ ಯೋಜನೆಯಲ್ಲಿ ಗ್ರಾಹಕರಿಗೆ 100 GB ಡೇಟಾದೊಂದಿಗೆ ಅನಿಯಮಿತ ವಾಯಿಸ್ ಕರೆ ಮಾಡುವ ಸೌಲಭ್ಯ ದೊರೆಯುತ್ತದೆ. ಇದರ ಜೊತೆಗೆ ಪ್ರತಿದಿನ 100 ಎಸ್‌ಎಮ್‌ಎಸ್ ಕಳುಹಿಸುವ ಅವಕಾಶವು ಸಿಗಲಿದೆ. ಹಾಗೆಯೇ ಈ ಪ್ಲ್ಯಾನಿನಲ್ಲಿ 200 GB ಡೇಟಾ ರೋಲ್ ಓವರ್ ಆಯ್ಕೆಯೂ ದೊರೆಯಲಿದೆ ಮತ್ತು ಹೆಚ್ಚುವರಿ ಒಂದು ಸಿಮ್ ಕನೆಕ್ಟಿವಿಟಿ ಸೌಲಭ್ಯ ಪಡೆದಿದೆ.

ಇನ್ನುಳಿದಂತೆ ಈ ಯೋಜನೆಯಲ್ಲಿ ಹೆಚ್ಚುವರಿ ಯಾಗಿ ನೆಟ್‌ಫ್ಲಿಕ್ಸ್ ಚಂದಾದಾರಿಕೆ, ಒಂದು ವರ್ಷದ ಅಮೆಜಾನ್ ಪ್ರೈಮ್ ವಿಡಿಯೋ ಚಂದಾದಾರಿಕೆ ಸಿಗಲಿದೆ. ಇದಲ್ಲದೆ, ಜಿಯೋ ಟಿವಿ, ಜಿಯೋ ಸಿನಿಮಾ, ಜಿಯೋ ಸಾವನ್ ಹಾಗೂ ಅನ್‌ಲಿಮಿಟೆಡ್ ಕಾಲರ್ ಟ್ಯೂನ್ ಸೌಲಭ್ಯಗಳು ಲಭ್ಯವಾಗಲಿವೆ.
ಅದೇ ರೀತಿ ಜಿಯೋ 799 ರೂ. ಪೋಸ್ಟ್‌ಪೇಯ್ಡ್ ಯೋಜನೆಯಲ್ಲಿ ಗ್ರಾಹಕರಿಗೆ 150 GB ಡೇಟಾದೊಂದಿಗೆ ಅನಿಯಮಿತ ವಾಯಿಸ್ ಕರೆ ಮಾಡುವ ಸೌಲಭ್ಯ ದೊರೆಯುತ್ತದೆ. ಇದರ ಜೊತೆಗೆ ಗ್ರಾಹಕರಿಗೆ ಪ್ರತಿದಿನ 100 ಎಸ್‌ಎಮ್‌ಎಸ್ ಕಳುಹಿಸುವ ಅವಕಾಶವು ಸಿಗಲಿದೆ. ಹಾಗೆಯೇ ಈ ಪ್ಲ್ಯಾನಿನಲ್ಲಿ 200 GB ಡೇಟಾ ರೋಲ್ ಓವರ್ ಆಯ್ಕೆಯೂ ದೊರೆಯಲಿದೆ ಮತ್ತು ಹೆಚ್ಚುವರಿ ಎರಡು ಸಿಮ್ ಕನೆಕ್ಟಿವಿಟಿ ಸೌಲಭ್ಯ ಪಡೆದಿದೆ.

ಇದರೊಂದಿಗೆ ಈ ಪೋಸ್ಟ್‌ಪೇಯ್ಡ್ ಯೋಜನೆಯಲ್ಲಿ ಹೆಚ್ಚುವರಿ ಯಾಗಿ ಗ್ರಾಹಕರಿಗೆ ನೆಟ್‌ಫ್ಲಿಕ್ಸ್ ಚಂದಾದಾರಿಕೆ, ಒಂದು ವರ್ಷದ ಅಮೆಜಾನ್ ಪ್ರೈಮ್ ವಿಡಿಯೋ ಚಂದಾದಾರಿಕೆ ಸಿಗಲಿದೆ. ಇದಲ್ಲದೆ, ಜಿಯೋ ಟಿವಿ, ಜಿಯೋ ಸಿನಿಮಾ, ಜಿಯೋ ಸಾವನ್ ಹಾಗೂ ಅನ್‌ಲಿಮಿಟೆಡ್ ಕಾಲರ್ ಟ್ಯೂನ್ ಸೌಲಭ್ಯಗಳು ಲಭ್ಯವಾಗಲಿವೆ.


Click it and Unblock the Notifications








