Home
ಸುದ್ದಿಜಾಲ

Google Chrome: ನೀವು ಫೋನ್‌ನಲ್ಲಿ ಗೂಗಲ್‌ ಕ್ರೋಮ್‌ ಬಳಕೆ ಮಾಡುತ್ತೀರಾ? ಹಾಗಿದ್ರೆ ಈ ಸುದ್ದಿ ಓದಿ..

ಗೂಗಲ್‌ (Google) ತನ್ನದೇ ಆದ ವಿಶೇಷ ಸೌಲಭ್ಯಗಳನ್ನು ಸ್ಮಾರ್ಟ್‌ಫೋನ್‌ ಬಳಕೆದಾರರಿಗೆ ಕಲ್ಪಿಸಿಕೊಟ್ಟಿದೆ. ಇದರಲ್ಲಿ ಗೂಗಲ್‌ ಕ್ರೋಮ್‌ (Google Chrome) ಸಹ ಪ್ರಮುಖವಾಗಿದೆ. ಈ ಮೂಲಕ ಬಳಕೆದಾರರು ಯಾವುದೇ ಮಾಹಿತಿಯನ್ನು ಕ್ಷಣ ಮಾತ್ರದಲ್ಲಿ ಜಾಲಾಡಬಹುದಾಗಿದೆ.

ಹೌದು, ಗೂಗಲ್‌ ಕ್ರೋಮ್‌ ಬಳಕೆದಾರರಿಗೆ ಗೂಗಲ್‌ ವಿವಿಧ ರೀತಿಯ ಅನುಕೂಲ ಮಾಡಿಕೊಟ್ಟಿದೆ. ಆದರೆ ಕೆಲವು ಸ್ಕ್ಯಾಮರ್‌ಗಳು ಇದರಲ್ಲೂ ತಮ್ಮ ಬೇಳೆ ಬೇಯಿಸಿಕೊಳ್ಳಲು ಮುಂದಾಗಿದ್ದಾರೆ. ಈ ಮೂಲಕ ಯಾರೆಲ್ಲಾ ಕ್ರೋಮ್‌ ಬಳಕೆ ಮಾಡುತ್ತಿದ್ದಾರೊ ಅವರು ಕ್ಷಣ ಕಾಲ ಆತಂಕದಲ್ಲಿ ಇರುವಂತೆ ಮಾಡಿದ್ದಾರೆ. ಅಷ್ಟಕ್ಕೂ ಗೂಗಲ್‌ ಕ್ರೋಮ್‌ ವಿಷಯದಲ್ಲಿ ಆಗಿದ್ದೇನು?, ಈ ರೀತಿಯ ಸಮಸ್ಯೆಗಳಿಂದ ಎಚ್ಚೆತ್ತುಕೊಳ್ಳುವುದು ಹೇಗೆ ಅನ್ನೋ ಮಾಹಿತಿಯನ್ನು ತಿಳಿಸಿಕೊಡಲಾಗಿದೆ ಓದಿರಿ.

ನೀವು ಫೋನ್‌ನಲ್ಲಿ ಗೂಗಲ್‌ ಕ್ರೋಮ್‌ ಬಳಕೆ ಮಾಡುತ್ತೀರಾ? ಹಾಗಿದ್ರೆ ಈ ಸುದ್ದಿ ಓದಿ

ಗೂಗಲ್‌ ಕ್ರೋಮ್‌ ಬಳಕೆದಾರರಿಗೆ ಎಚ್ಚರಿಕೆ: ಇದೀಗ ಹೊಸ ಮಾಲ್‌ವೇರ್ ಆಂಡ್ರಾಯ್ಡ್‌ ಬಳಕೆದಾರರನ್ನು ಗುರಿಯಾಗಿಸಿಕೊಂಡಿದೆ. 'ರೋಮಿಂಗ್ ಮ್ಯಾಂಟಿಸ್'ಗೆ (Roaming Mantis) ಲಿಂಕ್ ಮಾಡಲಾದ ಮಾಲ್‌ವೇರ್, ಬಳಕೆದಾರರ ಸಂವಹನವಿಲ್ಲದೆಯೇ ಸ್ವತಃ ಕಾರ್ಯಗತಗೊಳ್ಳುತ್ತದಂತೆ. ಇದು ಸೂಕ್ಷ್ಮ ಮಾಹಿತಿಯನ್ನು ಕದಿಯುವ ಕೆಲಸ ಮಾಡುತ್ತದೆ ಎಂದು ತಿಳಿದುಬಂದಿದೆ.

ಸೈಬರ್ ಸೆಕ್ಯುರಿಟಿ ತಜ್ಞರ ಇತ್ತೀಚಿನ ಸಂಶೋಧನೆಗಳು ಮೊಬೈಲ್ ಸುರಕ್ಷತೆಗೆ ಸಂಬಂಧಿಸಿದಂತೆ ಗಮನಾರ್ಹ ಬೆದರಿಕೆಯನ್ನು ಬಹಿರಂಗಪಡಿಸುತ್ತಿವೆ. ಅದರಲ್ಲೂ ಆಂಡ್ರಾಯ್ಡ್‌ನಲ್ಲಿ ಗೂಗಲ್‌ ಕ್ರೋಮ್‌ ಬಳಕೆದಾರರಿಗೆ ಈ ಬೆದರಿಕೆ ಹೆಚ್ಚಾಗಿಯೇ ಇದೆ. ಈ ರೋಮಿಂಗ್ ಮ್ಯಾಂಟಿಸ್ ಆಂಡ್ರಾಯ್ಡ್‌ ಎಕ್ಸ್ ಲೋಡರ್‌ ಮಾಲ್‌ವೇರ್‌ನ (XLoader Malware) ಸುಧಾರಿತ ಆವೃತ್ತಿ ಆಗಿದೆ ಎನ್ನಲಾಗಿದೆ.

ನೀವು ಫೋನ್‌ನಲ್ಲಿ ಗೂಗಲ್‌ ಕ್ರೋಮ್‌ ಬಳಕೆ ಮಾಡುತ್ತೀರಾ? ಹಾಗಿದ್ರೆ ಈ ಸುದ್ದಿ ಓದಿ

ಗಮನಿಸಬೇಕಾದ ವಿಷಯ ಏನೆಂದರೆ ಬ್ಲೀಪಿಂಗ್ ಕಂಪ್ಯೂಟರ್ ನ ವರದಿಯನ್ನು McAfee ಉಲ್ಲೇಖ ಮಾಡಿದ್ದು, ಇದು ಕ್ರೋಮ್‌ನಂತೆ ಕಾಣುವ ಅಪಾಯಕಾರಿ ಮಾಲ್‌ವೇರ್‌ ಆಗಿದೆ. ಮತ್ತು ಎಸ್‌ಎಂಎಸ್ ಲಿಂಕ್ ಮೂಲಕ ನಿಮ್ಮ ಫೋನ್‌ಗೆ ನುಸುಳುವ ಸಾಮರ್ಥ್ಯವನ್ನು ಪಡೆದಿದ್ದು, ಎಪಿಕೆ ಫೈಲ್ (APK file) ಮೂಲಕ ದುರುದ್ದೇಶಪೂರಿತ ಆಪ್‌ನ ಇನ್‌ಸ್ಟಾಲ್‌ಗೆ ಕಾರಣವಾಗುತ್ತದೆ.

ಬಲಿಪಶು ಲಿಂಕ್ ಅನ್ನು ಕ್ಲಿಕ್ ಮಾಡಿದಾಗ, ಅವರು ಕ್ರೋಮ್‌ (Chrome) ಪದವನ್ನು ನೋಡುತ್ತಾರೆ. ಒಮ್ಮೆ ಬಳಕೆದಾರರು ಆ ಲಿಂಕ್ ಅನ್ನು ಕ್ಲಿಕ್ ಮಾಡಿದರೆ, ಎಲ್ಲಾ ರೀತಿಯ ಖಾಸಗಿ ಮಾಹಿತಿಯನ್ನು ಕಲೆ ಹಾಕುವ ಕೆಲಸ ಮಾಡುತ್ತದೆ. ಇದು ಕ್ರೋಮ್‌ನಂತೆಯೇ ಇದ್ದು ಬಲಿಪಶುಗಳು ಸುಲಭವಾಗಿ ಇದನ್ನು ನಂಬುತ್ತಾರೆ.

ನೀವು ಫೋನ್‌ನಲ್ಲಿ ಗೂಗಲ್‌ ಕ್ರೋಮ್‌ ಬಳಕೆ ಮಾಡುತ್ತೀರಾ? ಹಾಗಿದ್ರೆ ಈ ಸುದ್ದಿ ಓದಿ

ಈ ಹೊಸ ಮಾಲ್‌ವೇರ್‌ ಫೋನ್‌ನಲ್ಲಿ ಏನನ್ನು ಕದಿಯುತ್ತದೆ?: ಈ ಮಾಲ್‌ವೇರ್ ಫೋನ್‌ನಲ್ಲಿ ಎಸ್‌ಎಎಮ್‌ಎಸ್‌ ಸಂದೇಶಗಳಿಗೆ ಪ್ರವೇಶವನ್ನು ಪಡೆಯುತ್ತದೆ. ಇದು ಹಿನ್ನೆಲೆಯಲ್ಲಿ ಕಾರ್ಯನಿರ್ವಹಿಸಲಿದ್ದು, ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿ ಸ್ಟೋರ್‌ ಆಗಿರುವ ಪಾಸ್‌ವರ್ಡ್‌ಗಳು, ಫೋಟೋಗಳು, ಸಂಪರ್ಕ ವಿವರಗಳು ಮತ್ತು ಡಿವೈಸ್‌ನ ಮಾಹಿತಿಯನ್ನು ಕದಿಯಲು ಹ್ಯಾಕರ್‌ಗಳಿಗೆ ಅನುಕೂಲ ಮಾಡಿಕೊಡುತ್ತದೆ.

ಈ ಮಾಲ್‌ವೇರ್‌ ಬಗ್ಗೆ McAfee ಈಗಾಗಲೇ ಗೂಗಲ್‌ಗೆ ಮಾಹಿತಿ ನೀಡಿದೆ. ಅದರಂತೆ ಕಂಪನಿಯು ಮಾಲ್ ವೇರ್ ಅನ್ನು ತೆಗೆದುಹಾಕಿದೆ ಎಂದು ತಿಳಿದುಬಂದಿದೆ. ಆದರೂ ಸಹ ಗೂಗಲ್ ಪ್ಲೇ ಸ್ಟೋರ್‌ನ ಹೊರಗೆ ಏನೆಲ್ಲಾ ಆಗುತ್ತದೆ ಎಂಬುದನ್ನು ಕಂಟ್ರೋಲ್‌ ಮಾಡಲು ಗೂಗಲ್‌ಗೆ ಸಾಧ್ಯವಿಲ್ಲ. ಇದರಿಂದ ಬಳಕೆದಾರರೇ ಮುನ್ನೆಚ್ಚರಿಕೆ ತೆಗೆದುಕೊಳ್ಳಬೇಕಿದೆ.

ಇದಕ್ಕಾಗಿ ಬಳಕೆದಾರರು ತಮ್ಮ ಫೋನ್‌ನಲ್ಲಿ ಗೂಗಲ್ ಪ್ಲೇ ಸ್ಟೋರ್ (Google Play Store) ಓಪನ್‌ ಮಾಡಿ ನಂತರ ಮೇಲಿನ ಬಲ ಮೂಲೆಯಲ್ಲಿರುವ ಪ್ರೊಫೈಲ್ ಚಿತ್ರವನ್ನು ಕ್ಲಿಕ್ ಮಾಡಿ. ಬಳಿಕ ಪ್ಲೇ ಪ್ರೊಟೆಕ್ಟ್ (Play Protect) ಅನ್ನು ಟ್ಯಾಪ್ ಮಾಡಿ. ಇದನ್ನು ಮಾಡಿದ ಮೇಲೆ ಸೇವೆಯನ್ನು ಸಕ್ರಿಯಗೊಳಿಸಲು 'ಆನ್' ಆಯ್ಕೆಮಾಡಿ.

ಇದನ್ನು ಮಾಡಿದ್ರೆ ವಿಶ್ವಾಸಾರ್ಹವಲ್ಲದ ವೆಬ್‌ಸೈಟ್‌ಗಳಿಗೆ ಭೇಟಿ ನೀಡುವುದನ್ನು ಮತ್ತು ಅನಧಿಕೃತ ಮೂಲಗಳಿಂದ ಏನನ್ನಾದರೂ ಡೌನ್‌ಲೋಡ್ ಮಾಡುವುದನ್ನು ತಡೆಯುತ್ತದೆ. ಅದರಲ್ಲೂ ನೀವೇನಾದರೂ ಹೊಸ ಸಾಫ್ಟ್‌ವೇರ್ ಅನ್ನು ಡೌನ್‌ಲೋಡ್ ಮಾಡಲು ಇಚ್ಚಿಸಿದ್ರೆ ಡೆವಲಪರ್‌ನ ಅಧಿಕೃತ ವೆಬ್‌ಸೈಟ್‌ಗಳಿಗೆ ಭೇಟಿ ನೀಡಿ.

Best Mobiles in India

English summary
Google Chrome users are warned. That means now New malware disguised as Google Chrome. this is targeted android users.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+