ಸ್ಮಾರ್ಟ್‌ಫೋನ್‌ಗಳಿಗೆ ಮಿಂಚಿನ ವೇಗ ನೀಡಲಿದೆ ಹೊಸ 'ಮೀಡಿಯಾ ಟೆಕ್‌ 5G' ಪ್ರೊಸೆಸರ್!

|

ಸ್ಮಾರ್ಟ್‌ಫೋನ್‌ಗಳು ಅತ್ಯುತ್ತಮವಾಗಿ ಕಾರ್ಯನಿರ್ವಹಿಸಲು ಪ್ರೊಸೆಸರ್‌ಗಳ ಪಾತ್ರ ಅತೀ ಮಹತ್ವದ್ದಾಗಿದೆ. ಇತ್ತೀಚಿನ ಪ್ರಮುಖ ಸ್ಮಾರ್ಟ್‌ಪೋನ್‌ಗಳಲ್ಲಿ ಸ್ನ್ಯಾಪ್‌ಡ್ರಾಗನ್‌ ಮತ್ತು ಮೀಡಿಯಾ ಟೆಕ್‌ ಪ್ರೊಸೆಸರ್‌ಗಳ ಹೆಸರುಗಳನ್ನು ಹೆಚ್ಚಾಗಿ ಕೇಳಿರುತ್ತಿರಿ. ಅವುಗಳಲ್ಲಿ ತೈವಾನ್‌ ಮೂಲಕದ ಮೀಡಿಯಾ ಟೆಕ್‌ ಚಿಪ್‌ ತಯಾರಿಕಾ ಕಂಪನಿಯು ಉನ್ನತ ಸಾಮರ್ಥ್ಯದ ಪ್ರಸೆಸರ್‌ಗಳನ್ನು ಪರಿಚಯಿಸಿದ್ದು, ಇದೀಗ ಹೊಸ ಪ್ರೊಸೆಸರ್‌ ಬಿಡುಗಡೆ ಮಾಡಲಿದೆ.

ಸ್ಮಾರ್ಟ್‌ಫೋನ್‌ಗಳಿಗೆ ಮಿಂಚಿನ ವೇಗ ನೀಡಲಿದೆ ಹೊಸ ಮೀಡಿಯಾ ಟೆಕ್ 5G ಪ್ರೊಸೆಸರ್!

ಹೌದು, ಮೀಡಿಯಾ ಟೆಕ್‌ ಹೊಸದಾಗಿ ಮೀಡಿಯಾ ಟೆಕ್‌ 5G SoC ಪ್ರೊಸೆಸರ್‌ ಅನ್ನು ರಿಲೀಸ್‌ ಮಾಡಲಿದ್ದು, ಈ ಕುರಿತು ತೈವಾನ್‌ನಲ್ಲಿ ನಡೆಯುತ್ತಿರುವ ಕಂಪ್ಯೂಟೆಕ್ಸ್‌ ಮೇಳದಲ್ಲಿ ಘೋಷಿಸಿದೆ. ಈ ಪ್ರೊಸೆಸರ್‌ 5G ಸ್ಮಾರ್ಟ್‌ಫೋನ್‌ಗಳಿಗೆ ಅತ್ಯುತ್ತಮ ಬೆಂಬಲ ನೀಡಲಿದ್ದು, ಕಡಿಮೆ ಬೆಲೆಯ ಫ್ಲ್ಯಾಗ್‌ಶಿಪ್‌ ಮಾದರಿಯ ಸ್ಮಾರ್ಟ್‌ಫೋನ್‌ಗಳಗೆ ಈ ಪ್ರೊಸೆಸರ್‌ ಅನ್ನು ತಯಾರಿಸಲಾಗಿದೆ ಎನ್ನಲಾಗಿದೆ.

ಸ್ಮಾರ್ಟ್‌ಫೋನ್‌ಗಳಿಗೆ ಮಿಂಚಿನ ವೇಗ ನೀಡಲಿದೆ ಹೊಸ ಮೀಡಿಯಾ ಟೆಕ್ 5G ಪ್ರೊಸೆಸರ್!

ಸದ್ಯ ಯುರೋಪ್‌ನಲ್ಲಿ 5G ನೆಟವರ್ಕ್‌ ಬೆಂಬಲಿತ, ಗ್ಯಾಲ್ಯಾಕ್ಸಿ ಎಸ್‌10 5G, ಹುವಾವೆ ಮೇಟ್‌ 20ಎಕ್ಸ್ ಮತ್ತು ಒಪ್ಪೊ ರೆನೊ 5G ಸ್ಮಾರ್ಟ್‌ಫೋನ್‌ಗಳು ದುಬಾರಿ ಬೆಲೆಯ ಫ್ಲ್ಯಾಗ್‌ಶಿಪ್‌ ಮಾದರಿಯಲ್ಲಿವೆ. ಆದರೆ ಮೀಡಿಯಾಟೆಕ್‌ ಕಡಿಮೆ ಬೆಲೆಯ ಫ್ಲ್ಯಾಗ್‌ಶಿಪ್‌ ಮಾದರಿಯ ಸ್ಮಾರ್ಟ್‌ಫೋನ್‌ಗಳಿಗೆ ಬೆಂಬಲ ನೀಡಲಿದೆ. ಹಾಗಾದರೇ ಮೀಡಿಯಾ ಟೆಕ್‌ 5G SoC ಚಿಪ್‌ನ ವಿಶೇಷ ಫೀಚರ್ಸ್‌ಗಳೆನು ಎಂಬುದನ್ನು ಮುಂದೆ ನೋಡೋಣ ಬನ್ನಿರಿ.

ಮಲ್ಟಿಮೋಡ್‌ ಸಪೋರ್ಟ್‌

ಮಲ್ಟಿಮೋಡ್‌ ಸಪೋರ್ಟ್‌

ಸದ್ಯ ಮಾರುಕಟ್ಟೆಯಲ್ಲಿರುವ ಸ್ಮಾರ್ಟ್‌ಫೋನ್‌ಗಳು ಎರಡು ಚೀಪ್‌ಸೆಟ್‌ನಲ್ಲಿ ಕಾರ್ಯನಿರ್ವಹಿಸುತ್ತವೆ. 5G ಗಾಗಿ (ಸ್ನ್ಯಾಪ್‌ಡ್ರಾಗನ್‌ x50 ಮೋಡಮ್‌) ಮತ್ತು ಮೀಡಿಯಾ ಟೆಕ್‌ನ SoC ಇಂಟಿಗ್ರೇಟೆಡ್‌ ಮೋಡೆಮ್‌. ಆದರೆ ಹೊಸ ಮೀಡಿಯಾ ಟೆಕ್‌ ಚೀಪ್‌ ಸೆಟ್‌ ಮಲ್ಟಿ ಕೆಲಸಗಳನ್ನು ಮಾಡಲಿದ್ದು, ಹೀಗಾಗಿ ಪ್ರತ್ಯೇಕವಾಗಿ LET ಮೋಡೆಮ್‌ ಅವಶ್ಯಕತೆ ಇರುವುದಿಲ್ಲ.

ಮೀಡಿಯಾ ಟೆಕ್‌ SoC

ಮೀಡಿಯಾ ಟೆಕ್‌ SoC

ಇತ್ತೀಚಿಗೆ ARM ಘೋಷಿಸಿರುವ ಬಿಡುಗಡೆ ಆಗಿರುವ ಮೀಡಿಯಾ ಟೆಕ್‌ ಚಿಪ್‌ ಸೆಟ್‌ ಹೊಸ ತಲೆಮಾರಿನ Cortex-A77 CPU ಮತ್ತು Mali-G77 GPU ಗಳನ್ನು ಒಳಗೊಂಡಿದ್ದು, ಅತ್ಯುತ್ತಮ ರಚನೆಯನ್ನು ಪಡೆದಿವೆ. ಈ ಚಿಪ್‌ ಸೆಟ್‌ APU(AI ಪ್ರೊಸೆಸಿಂಗ್ ಯೂನಿಟ್‌) ಬೆಂಬಲ ಪಡೆದಿದ್ದು, ಹಲವು ಫೀಚರ್ಸ್‌ಗಳನ್ನು ಈ ಚಿಪ್‌ ಸೆಟ್‌ ಒಳಗೊಂಡಿರಲಿದೆ.

ಪ್ರಮುಖ ಫೀಚರ್ಸ್‌ಗಳು

ಪ್ರಮುಖ ಫೀಚರ್ಸ್‌ಗಳು

ಮೀಡಿಯಾ ಟೆಕ್‌ ಚಿಪ್‌ ಸೆಟ್‌ AI ಕೃತಕ್‌ ಬುದ್ಧಿಮತ್ತೆ ಸಾಮರ್ಥ್ಯವನ್ನು ಹೊಂದಿದ್ದು, ಇದರ ನೆರವಿನಿಂದ ಹಲವು ಫೀಚರ್ಸ್‌ಗಳು ಆಟೋಮ್ಯಾಟಿಕ್‌ ಆಗಿ ಕಾರ್ಯನಿರ್ವಹಿಸಲಿವೆ. ಅವುಗಳಲ್ಲಿ ರಿಯಲ್‌ ಟೈಮ್‌ ಆಟೋ ಫೋಕಸ್‌, ಆಟೋ ಎಕ್ಸ್‌ಫೋಸರ್‌, ಆಟೋ ವೈಟ್‌ ಬ್ಯಾಲೆನ್ಸ್‌, ಫೋಟೊ ಬ್ಲರ್‌ ಆಯ್ಕೆ, ಮತ್ತು ಬ್ಯೂಟಿಫಿಕೇಶನ್‌ ಆಯ್ಕೆಗಳು ಸೇರಿವೆ.

ಕ್ಯಾಮೆರಾ ಸೆನ್ಸಾರ್‌

ಕ್ಯಾಮೆರಾ ಸೆನ್ಸಾರ್‌

ಈ ಚಿಪ್‌ ಸೆಟ್‌ 80ಎಂಪಿ ಸಾಮರ್ಥ್ಯದ ಅತ್ಯುತ್ತಮ ಕ್ಯಾಮೆರಾ ಸೆನ್ಸಾರ್‌ ಅನ್ನು ಹೊಂದಿರಲಿದ್ದು, ಫೋಟೊಗಳ ಗುಣಮಟ್ಟ ಉನ್ನತವಾಗಿರಲಿವೆ. ಇದರೊಂದಿಗೆ 4K ವಿಡಿಯೊ ಎನ್‌ಕೋಡಿಂಗ್‌ ಮತ್ತು ಡಿಕೋಡಿಂಗ್‌ ಆಯ್ಕೆಗಳನ್ನು ಹೊಂದಿರಲಿದೆ. ವಿಡಿಯೊ ರೆಕಾರ್ಡಿಂಗ್ ವೇಗದ ಸಾಮರ್ಥ್ಯವು 60fps ಆಗಿರಲಿದೆ.

ಡೌನ್‌ಲೋಡ್‌ ಸ್ಪೀಡ್‌

ಡೌನ್‌ಲೋಡ್‌ ಸ್ಪೀಡ್‌

ಮೀಡಿಯಾ ಟೆಕ್‌ 5G SoC ಪ್ರೊಸೆಸರ್ ಕಾರ್ಯವೈಖರಿಯು ವೇಗವಾಗಿ ಇರಲಿದ್ದು, ಡೌನ್‌ಲೋಡ್‌ ವೇಗವು 4.7Gbps ಸಾಮರ್ಥ್ಯದಲ್ಲಿರಲಿದೆ. ಹಾಗೆಯೇ ವಿಡಿಯೊ ಅಪ್‌ಲೋಡಿಂಗ್‌ ವೇಗವು 2.7Gbps ಸಾಮರ್ಥ್ಯದಲ್ಲಿರಲಿದೆ. ಇದರೊಂದಿಗೆ ಮೀಡಿಯಾ ಟೆಕ್‌ 5G SoC ಪ್ರೊಸೆಸರ್ 6Ghz ಫ್ರೀಕ್ವೆನ್ಸಿ ಬೆಂಬಲ ನೀಡಲಿದೆ.

ಯಾವ ಫೋನ್‌ಗಳಲ್ಲಿ ಲಭ್ಯ

ಯಾವ ಫೋನ್‌ಗಳಲ್ಲಿ ಲಭ್ಯ

ಹೊಸ ಮೀಡಿಯಾ ಟೆಕ್‌ 5G SoC ಚಿಪ್ ಸೆಟ್‌ ಕಡಿಮೆ ದರದ ಫ್ಲ್ಯಾಗ್‌ಶಿಪ್‌ ಮತ್ತು ಪ್ರೀಮಿಯರ್‌ ಮಿಡ್‌ರೇಂಜ್‌ ಸ್ಮಾರ್ಟ್‌ಫೋನ್‌ ಮಾದರಿಗಳಲ್ಲಿ ಅಳವಡಿಕೆ ಆಗಲಿದೆ ಎಂದು ನಿರೀಕ್ಷೆ ಮಾಡಲಾಗಿದೆ. ಈ ವರ್ಷದ ಅಂತ್ಯದೊಳಗೆ ಈ ಚಿಪ್‌ ಸೆಟ್‌ ಬಿಡುಗಡೆ ಆಗುವ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿದೆ.

Best Mobiles in India

English summary
MediaTek wants to change this with its new 5G SoC. For some reason, this Taiwanese chipmaker has decided to call it simply as the MediaTek 5G SoC. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X