10000 MBPS ವೇಗ ಆಪ್ಟಿಕಲ್ ಫೈಬರ್: ಬದಲಾಗಲಿದೆ ಬ್ರಾಡ್ ಬ್ಯಾಂಡ್..!!
ಇದು ಅತೀ ಕಡಿಮೆ ವೆಚ್ಚದಾಯಕ ಎನ್ನಲಾಗಿದ್ದು, ಅದರಲ್ಲೂ ಸದ್ಯ ಹೊಸದಾಗಿ ಫೈಬರ್ ಜಾಲ ನಿರ್ಮಿಸುವವರಿಗೆ ಹೇಳಿ ಮಾಡಿಸಿದಂತಹ ತಂತ್ರಜ್ಷಾನ ಎನ್ನಲಾಗಿದೆ. ಭವಿಷ್ಯದ ಸಂಪರ್ಕ ಜಾಲದ ದಿಕ್ಕನ್ನು ಬದಲಾಯಿಸಲಿದೆ ಈ ತಂತ್ರಜ್ಞಾನ.
ಈಗಾಗಲೇ ಬ್ರಾಡ್ ಬ್ಯಾಂಡ್ ಸೇವೆಯಲ್ಲಿ ಅತೀ ವೇಗದ ಇಂಟರ್ನೆಟ್ ಅನ್ನು ನಾವು ಕಾಣಬಹುದಾಗಿದೆ. ಆದರೆ ಸದ್ಯ ಮತ್ತೊಂದು ಹೊಸ ಮಾದರಿ ಟೆಕ್ನಾಲಾಜಿಯು ಅಭಿವೃದ್ಧಿಯಾಗಿದ್ದು, ಇದು 10000 MBPS ವೇಗದಲ್ಲಿ ಕಾರ್ಯನಿರ್ವಹಿಸಲಿದೆ ಎನ್ನಲಾಗಿದೆ.

ಓದಿರಿ: ದೀಪಾವಳಿಯಂದು ಕೈ ಸೇರಿದ ಜಿಯೋ ಫೋನ್ ಬ್ಲಾಸ್ಟ್: ಕಾರಣ ತಿಳಿಯಿರಿ, ನೀವು ಎಚ್ಚರವಹಿಸಿ.!
ಅಲ್ಲದೇ ಇದು ಅತೀ ಕಡಿಮೆ ವೆಚ್ಚದಾಯಕ ಎನ್ನಲಾಗಿದ್ದು, ಅದರಲ್ಲೂ ಸದ್ಯ ಹೊಸದಾಗಿ ಫೈಬರ್ ಜಾಲ ನಿರ್ಮಿಸುವವರಿಗೆ ಹೇಳಿ ಮಾಡಿಸಿದಂತಹ ತಂತ್ರಜ್ಷಾನ ಎನ್ನಲಾಗಿದೆ. ಭವಿಷ್ಯದ ಸಂಪರ್ಕ ಜಾಲದ ದಿಕ್ಕನ್ನು ಬದಲಾಯಿಸಲಿದೆ ಈ ತಂತ್ರಜ್ಞಾನ.

ಆಪ್ಟಿಕಲ್ ಫೈಬರ್ ರಿಸಿವರ್ ಟೆಕ್:
ವಿಜ್ಞಾನಿಗಳು ಹೊಸದೊಂದು ಡಿವೈಸ್ ಅನ್ವೆಷಣೆಯನ್ನು ಮಾಡಿದ್ದು, ಇದು ನಿಮ್ಮ ಫೈಬರ್ ಜಾಲದಲ್ಲಿ ಸಿಗ್ನಲ್ ಸೋರಿಕೆಗೆ ಅವಕಾಶ ಮಾಡಿಕೊಡದೆ ಹೆಚ್ಚಿನ ಪ್ರಮಾಣದ ಸಿಗ್ನಲ್ ಅನ್ನು ಸೆಳೆಯಲಿದೆ.

10000 MBPS ವೇಗದಲ್ಲಿ ಕಾರ್ಯ:
ಈ ಟೆಕ್ನಾಲಜಿಯೂ 2020ಕ್ಕೆ ಕಾರ್ಯರೂಪಕ್ಕೆ ಬರಲಿದ್ದು, ಅಂದು ಈ ಫೈಬರ್ ಜಾಲದ ಇಂಟರನೆಟ್ ವೇಗ ಸರಿ ಸುಮಾರು 10000 MBPS ವೇಗವಾಗಲಿದೆ. ನೀವು-ನಾವು ಈ ವೇಗವನ್ನು ಊಹಿಸಲು ಸಾಧ್ಯವಿಲ್ಲ ಎನ್ನಲಾಗಿದೆ.

ಇಂಗ್ಲೆಂಡ್ ವಿಜ್ಞಾನಿಗಳು:
ಈ ಭವಿಷ್ಯದ ತಂತ್ರಜ್ಞಾನವನ್ನು ಆವಿಷ್ಕಾರಿಸಿರುವುದು ಇಂಗ್ಲೆಂಡ್ ವಿಜ್ಞಾನಿಗಳು ಎನ್ನಲಾಗಿದ್ದು, ಇದು ಇನ್ನು ಅಭಿವೃದ್ಧಿ ಹಂತದಲ್ಲಿದ್ದು, ಶೀಘ್ರವೇ ಮಾರುಕಟ್ಟೆಯಲ್ಲಿ ಕಾಣಿಸಿಕೊಳ್ಳಲಿದೆ.

ವಿವಿಧ ಮಾರ್ಗದ ಬಳಕೆ:
ಈ ಹೊಸ ವಿಧಾನದಲ್ಲಿ ಡೇಟಾ ಹೆಚ್ಚು ವೇಗವಾಗಿ ಸಾಗುವುದರಕ್ಕಾಗಿ ವಿವಿಧ ವೇವ್‌ಲೈನ್‌ಗಳು, ವಿವಿಧ ಬಣ್ಣಗಳ ಲೈಟ್ ಗಳನ್ನು ಬಳಕೆ ಮಾಡಿಕೊಳ್ಳಲಾಗುವುದು ಎನ್ನಲಾಗಿದೆ. ಇದು ಸರಳ ಮತ್ತು ಸುಲಭ ಮಾರ್ಗವಾಗಿರಲಿದೆ.


Click it and Unblock the Notifications








