Home
ಸುದ್ದಿಜಾಲ

New Parliament: ಹೊಸ ಸಂಸತ್‌ ಭವನದಲ್ಲಿ ಏನೆಲ್ಲಾ ನೂತನ ತಂತ್ರಜ್ಞಾನ ವ್ಯವಸ್ಥೆ ಇದೆ!?

ಭಾರತೀಯ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಹೊಸ ಯುಗ ಆರಂಭ ಆಗಿದ್ದು, ನೂತನ ಸಂಸತ್ ಭವನವನ್ನು (New Parliament) ಪ್ರಧಾನಿ ಮೋದಿ ಉದ್ಘಾಟನೆ ಮಾಡಿದ್ದಾರೆ. ಈ ಭವನ ಪರ ಹಾಗೂ ವಿರೋಧಗಳ ನಡುವೆ ಭಾರೀ ಚರ್ಚೆಗೆ ಗ್ರಾಸವಾಗಿದ್ದು, ಈ ನಡುವೆ ಹಳೆಯ ಸಂಸತ್ ಭವನಕ್ಕೂ ಈಗ ಉದ್ಘಾಟನೆಯಾದ ಸಂಸತ್ ಭವನಕ್ಕೂ ಭಾರೀ ವ್ಯತ್ಯಾಸ ಕಂಡುಬಂದಿದೆ. ಸುಧಾರಿತ ತಂತ್ರಜ್ಞಾನ ಅಳವಡಿಕೆಯಿಂದಾಗಿ ಹೆಚ್ಚು ಆಕರ್ಷಿತವಾಗಿದೆ ಎಂದರೆ ತಪ್ಪಾಗಲಾರದು.

ಹೌದು, ಮೇ 28 ರಂದು ಅಂದರೆ ನಿನ್ನೆ ಈ ಸಂಸತ್‌ ಭವನವನ್ನು ಉದ್ಘಾಟನೆ ಮಾಡಲಾಗಿದೆ. ಭವಿಷ್ಯದಲ್ಲಿ ಸಂಸದರ ಸಂಖ್ಯೆಯನ್ನು ಹೆಚ್ಚಿಸುವ ಅಗತ್ಯವಿದ್ದು, ಎಲ್ಲರೂ ಕುಳಿತುಕೊಳ್ಳಲು ಸ್ಥಳಾವಕಾಶ ಇರುವುದರಿಂದ ಹೊಸ ಸಂಸತ್ ಭವನದ ಆವಶ್ಯಕತೆ ಇತ್ತು. ಅದನ್ನು ಈಗ ನಿರ್ಮಾಣ ಮಾಡಿದ್ದೇವೆ ಎಂದು ಮೋದಿ ಹೇಳಿದ್ದಾರೆ. ಹಾಗಿದ್ರೆ, ಈ ಹೊಸ ಸಂಸತ್‌ ಭವನದಲ್ಲಿ ಏನೆಲ್ಲಾ ಹೊಸ ತಂತ್ರಜ್ಞಾನ ಇದೆ?. ಇದರಿಂದ ಸಂಸದರಿಗೆ ಹೇಗೆ ಪ್ರಯೋಜನಕಾರಿ? ಎಂಬ ಇಂಟ್ರೆಸ್ಟಿಂಗ್‌ ಮಾಹಿತಿಗಾಗಿ ಈ ಲೇಖನ ಓದಿರಿ.

ಹೊಸ ಸಂಸತ್‌ ಭವನದಲ್ಲಿ ಏನೆಲ್ಲಾ ನೂತನ ತಂತ್ರಜ್ಞಾನ ವ್ಯವಸ್ಥೆ ಇದೆ!?

ಭಾಷಾನುವಾದ: ಭಾರತದ ಹೊಸ ಸಂಸತ್ತಿನ ಕಟ್ಟಡ ಭಾರೀ ವಿಶೇಷತೆಗಳಿಂದ ಕೂಡಿದ್ದು, ಡಿಜಿಟಲ್ ಡಿಸ್‌ಪ್ಲೇಯಿಂದ ಆರಂಭ ಆಗಿ ಎಐ ಆಧಾರಿತ ಭಾಷಾನುವಾದದವರೆಗೆ ಹೊಸ ತಂತ್ರಜ್ಞಾನವನ್ನು ಅಳವಡಿಸಿಕೊಂಡಿದೆ. ಅಂದರೆ ಸಂಸದರು ತಮ್ಮ ಮಾತೃಭಾಷೆಯಲ್ಲಿಯೇ ಮಾತನಾಡಬಹುದಾಗಿದ್ದು, ಇದನ್ನು ಅಲ್ಲಿರುವ ಎಲ್ಲರೂ ಸಹ ಅರ್ಥ ಮಾಡಿಕೊಳ್ಳಬಹುದಾಗಿದೆ. ಯಾಕೆಂದರೆ ಡಿಜಿಟಲ್ ಅನುವಾದದ ಸೌಲಭ್ಯ ಇದ್ದು, ಈ ಮೂಲಕ ವಿವಿಧ ಭಾಷೆಗಳಲ್ಲಿ ನಡಾವಳಿಗಳನ್ನು ಕೇಳಬಹುದು ಮತ್ತು ಓದಬಹುದು. ಅದರಲ್ಲೂ ಎಐ ಮೂಲಕ ಸದನದ ಪ್ರಕ್ರಿಯೆಗಳನ್ನು ನೈಜ ಸಮಯದಲ್ಲಿ ಲಿಪ್ಯಂತರ ಮಾಡಲಾಗುತ್ತದೆ.

ಡಿಜಿಟಲ್ ಸಂಸತ್ತು: ಈ ಮೊದಲು ಸಂಸತ್‌ನಲ್ಲಿ ಕಾಗದದ ದಾಖಲೆ ಬಳಕೆ ಮಾಡಿಕೊಂಡು ಚರ್ಚೆ ನಡೆಸಲಾಗುತ್ತಿತ್ತು. ಆದರೆ, ಇನ್ಮುಂದೆ ಸಂಸದರು, ಸರ್ಕಾರಿ ಅಧಿಕಾರಿಗಳು, ನಾಗರಿಕರು ಮತ್ತು ಇತರ ಮಧ್ಯಸ್ಥಗಾರರ ನಡುವೆ ಸಂವಹನವನ್ನು ಖಚಿತಪಡಿಸಿಕೊಳ್ಳಲು ಕಾಗದರಹಿತ ವೇದಿಕೆ ನಿರ್ಮಾಣ ಮಾಡಲಾಗಿದೆ. ಇದಕ್ಕಾಗಿ ಎಐ ಅನ್ನು ಬಳಕೆ ಮಾಡಲಾಗುತ್ತದೆ. ಜೊತೆಗೆ ಶಾಸಕರಿಗೆ ತಮ್ಮ ಕೆಲಸದ ಹರಿವನ್ನು ಪರಿಹರಿಸಲು ಟ್ಯಾಬ್ಲೆಟ್‌ಗಳು ಮತ್ತು ಕಂಪ್ಯೂಟರ್‌ಗಳನ್ನು ನೀಡಲಾಗುತ್ತದೆ.

ಈ ವಿಭಾಗದಲ್ಲಿ ಎಲ್ಲಾ ಸಂಸದರು ವೇಳಾಪಟ್ಟಿ, ಇ-ನೋಟಿಸ್‌ಗಳು, ಪಾವತಿಗಳು ಮತ್ತು ಇನ್ನೂ ಅನೇಕ ವಿಷಯಗಳನ್ನು ಮೇಲ್ವಿಚಾರಣೆ ಮಾಡಲು ವೈಯಕ್ತೀಕರಿಸಿದ ಡ್ಯಾಶ್‌ಬೋರ್ಡ್ ಆಯ್ಕೆಯನ್ನು ಹೊಂದಿರುತ್ತಾರೆ. ಇದರೊಂದಿಗೆ ಆಪ್‌ ವ್ಯವಸ್ಥೆ ಇದ್ದು, ನಾಗರಿಕರನ್ನು ಅವರ ಪ್ರತಿನಿಧಿಗಳೊಂದಿಗೆ ಸಂಪರ್ಕಿಸಲು ಕ್ಷೇತ್ರ ಸಂಪರ್ಕ ಫೀಚರ್ಸ್‌ ಸಹ ಈ ವ್ಯವಸ್ಥೆಯಲ್ಲಿದೆ. ಇದರಿಂದಾಗಿ ಸಾಮಾನ್ಯ ಜನರು ಸಹ ಎಲ್ಲಾ ಮಾಹಿತಿಯನ್ನು ಮುಕ್ತವಾಗಿ ಪಡೆದುಕೊಳ್ಳಬಹುದಾಗಿದೆ

ಹೊಸ ಸಂಸತ್‌ ಭವನದಲ್ಲಿ ಏನೆಲ್ಲಾ ನೂತನ ತಂತ್ರಜ್ಞಾನ ವ್ಯವಸ್ಥೆ ಇದೆ!?

ಪ್ರೋಗ್ರಾಮೆಬಲ್ ಮೈಕ್ರೊಫೋನ್‌ಗಳು: ಪ್ರೋಗ್ರಾಮೆಬಲ್ ಮೈಕ್ರೊಫೋನ್‌ ಆಯ್ಕೆ ನೀಡಲಾಗಿದ್ದು, ಇದು ಸದನದ ವಾತಾವರಣಕ್ಕೆ ತಕ್ಕಂತೆ ಸಂಸದರು ವಾಲ್ಯೂಮ್ ಅನ್ನು ಕಂಟ್ರೋಲ್‌ ಮಾಡಲು ಅನುವು ಮಾಡಿಕೊಡುತ್ತದೆ. ಈ ಮೂಲಕ ತಮ್ಮ ಮಾತುಗಳು ಚೇಂಬರ್‌ನಾದ್ಯಂತ ತಲುಪುವುದನ್ನು ಖಚಿತಪಡಿಸಿಕೊಳ್ಳಲು ಸುಲಭ ಮಾರ್ಗ ಕಲ್ಪಿಸಿಕೊಡಲಾಗಿದೆ. ಜೊತೆಗೆ ಸ್ಪಷ್ಟ ಸೌಂಡ್‌ ಉದ್ದೇಶದಿಂದ ಸದನದಲ್ಲಿ ವಿಶೇಷ ತಂತ್ರಜ್ಞಾನ ಅಳವಡಿಕೆ ಮಾಡಲಾಗಿದೆ.

ಸಂಸದರಿಗೆ ಬಯೋಮೆಟ್ರಿಕ್ಸ್: ಇನ್ನು ಹೊಸ ಕಟ್ಟಡವು ಬಯೋಮೆಟ್ರಿಕ್ ದೃಢೀಕರಣವನ್ನು ಸಹ ಹೊಂದಿದ್ದು, ಇದರೊಂದಿಗೆ ಮತದಾನವನ್ನು ಸುಲಭಗೊಳಿಸಲು ಲೋಕಸಭೆ ಮತ್ತು ರಾಜ್ಯಸಭೆಯಲ್ಲಿ ಡಿಜಿಟಲ್ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ತಿಳಿದುಬಂದಿದೆ. ಇದು ಸದಸ್ಯರ ಎಲ್ಲಾ ಮತದಾನ ಹಾಗೂ ಹಾಜರಾತಿ ಕೆಲಗಳನ್ನು ಅತ್ಯಂತ ಸರಳಗೊಳಿಸುತ್ತದೆ. ಇದರೊಂದಿಗೆ ಮತದಾನದ ಫಲಿತಾಂಶಗಳನ್ನು ಪ್ರಸಾರ ಮಾಡಲು ಮತ್ತು ಪ್ರಕ್ರಿಯೆಗಳನ್ನು ಸ್ಟ್ರೀಮ್ ಮಾಡಲು, ಸ್ಮಾರ್ಟ್ ಭವನದ ಒಳಗೆ ಮಲ್ಟಿಮೀಡಿಯಾ ಡಿಸ್‌ಪ್ಲೇ ಘಟಕ ಸ್ಥಾಪಿಸಲಾಗಿದೆ.

ಹೊಸ ಸಂಸತ್‌ ಭವನದಲ್ಲಿ ಏನೆಲ್ಲಾ ನೂತನ ತಂತ್ರಜ್ಞಾನ ವ್ಯವಸ್ಥೆ ಇದೆ!?

ಆಟೋಮ್ಯಾಟಿಕ್‌ ಕ್ಯಾಮೆರಾ ಕಂಟ್ರೋಲ್‌: ಹೊಸ ಸಂಸತ್‌ ಭವನ ಸಂಬಂಧ ಅಪ್‌ಲೋಡ್‌ ಮಾಡಲಾದ ವಿಡಿಯೋದಲ್ಲಿ ಕಾಣಿಸಿವಂತೆ ಈ ಭವನ ಆಟೋಮ್ಯಾಟಿಕ್‌ ಕ್ಯಾಮೆರಾ ಕಂಟ್ರೋಲ್‌ ಫೀಚರ್ಸ್‌ ಅನ್ನು ಹೊಂದಿದೆ ಎನ್ನಲಾಗಿದೆ. ಒಟ್ಟಾರೆ 1,272 ಆಸನಗಳ ವ್ಯವಸ್ಥೆ ಹೊಂದಿದ್ದು, ಅದರಲ್ಲಿ ಲೋಕಸಭೆಯಲ್ಲಿ 888 ಮತ್ತು ರಾಜ್ಯಸಭೆಯಲ್ಲಿ 384 ಆಸನಗಳಿವೆ. ಈ ಭವನ 64,500 ಚದರ ಮೀಟರ್ ಪ್ರದೇಶದಲ್ಲಿ ವಿಸ್ತರಿಸುತ್ತದೆ.

Best Mobiles in India

English summary
Parliament House was inaugurated on 28th May. New smart technology from digital parliament to AI has been implemented in this building, and the people of the country and parliamentarians will get a new experience.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+