Home
ಸುದ್ದಿಜಾಲ

ಏರ್‌ಟೆಲ್‌ನಿಂದ ದೀರ್ಘಾವಧಿಯ ಪ್ಲ್ಯಾನ್‌ಗಳು : ಅಧಿಕ ವ್ಯಾಲಿಡಿಟಿ, ಅನಿಯಮಿತ ಕರೆ!

ಜಿಯೋ ಟೆಲಿಕಾಂ ವಲಯಕ್ಕೆ ಎಂಟ್ರಿ ಕೊಟ್ಟಾಗಿನಿಂದ ಹಲವು ಅತ್ಯುತ್ತಮ ಆಫರ್‌ಗಳನ್ನು ಗ್ರಾಹಕರಿಗೆ ಪರಿಚಯಿಸಿತು. ಆದ್ರೆ ಅವಾಗಿಂದಲೂ ಜಿಯೋಗೆ ಟಫ್‌ ಪೈಪೋಟಿ ನೀಡುತ್ತಾ ಬಂದಿರುವ ಟೆಲಿಕಾಂ ಸಂಸ್ಥೆಯೆಂದರೇ ಅದು ಏರ್‌ಟೆಲ್. ಈಗಾಗಲೇ ಹಲವು ವಿಭಿನ್ನ ಪ್ಲ್ಯಾನ್‌ಗಳಿಂದ ಜಿಯೋಗೆ ಎದುರೇಟು ನೀಡಿರುವ ಏರ್‌ಟೆಲ್‌, ಇದೀಗ ಮತ್ತಷ್ಟು ನೂತನ ದೀರ್ಘಾವಧಿಯ ಪ್ರೀಪೇಡ್‌ ಪ್ಲ್ಯಾನ್‌ಗಳನ್ನು ಬಿಡುಗಡೆ ಮಾಡಿದೆ.

ದೀರ್ಘಾವಧಿಯ ಪ್ಲ್ಯಾನ್

ಹೌದು, ಏರ್‌ಟೆಲ್‌ ಸಂಸ್ಥೆಯು ಸದ್ಯ ದೀರ್ಘಾವಧಿಯ ಪ್ಲ್ಯಾನ್‌ಗಳ ಮೂಲಕ ಗ್ರಾಹಕರನ್ನು ಸೆಳೆಯುವ ಪ್ರಯತ್ನ ನಡೆಸಿದ್ದು, ಅದಕ್ಕಾಗಿ ನಾಲ್ಕು ಹೊಸ ಲಾಂಗ್-ಟರ್ಮ್‌ ಪ್ರೀಪೇಡ್‌ ಪ್ಲ್ಯಾನ್‌ಗಳನ್ನು ಹೊರತಂದಿದೆ. ಅವುಗಳು ಕ್ರಮವಾಗಿ 597ರೂ. ಪ್ಲ್ಯಾನ್‌, 599ರೂ.ಪ್ಲ್ಯಾನ್‌, 998ರೂ.ಪ್ಲ್ಯಾನ್‌ ಮತ್ತು 1699ರೂ. ಪ್ಲ್ಯಾನ್‌ ಆಗಿವೆ. ಈ ನಾಲ್ಕು ಪ್ರೀಪೇಡ್‌ ಪ್ಲ್ಯಾನ್‌ಗಳು ಹೆಚ್ಚು ವ್ಯಾಲಿಡಿಟಿ ಅವಧಿಯನ್ನು ಒಳಗೊಂಡಿರುವುದು ವಿಶೇಷ. ಹಾಗಾದರೇ ಏರ್‌ಟೆಲ್‌ನ ಈ ನಾಲ್ಕು ದೀರ್ಘಾವಧಿಯ ಪ್ಲ್ಯಾನ್‌ಗಳ ಕುರಿತು ತಿಳಿಯಲು ಮುಂದೆ ಓದಿರಿ.

597ರೂ. ಪ್ರೀಪೇಡ್‌ ಪ್ಲ್ಯಾನ್‌

597ರೂ. ಪ್ರೀಪೇಡ್‌ ಪ್ಲ್ಯಾನ್‌

ಏರ್‌ಟೆಲ್‌ನ 597ರೂ. ಪ್ರೀಪೇಡ್‌ ಪ್ಲ್ಯಾನ್‌ ಒಟ್ಟು 168 ದಿನಗಳ ವ್ಯಾಲಿಡಿಟಿ ಅವಧಿಯನ್ನು ಒಳಗೊಂಡಿದ್ದು, ಈ ಅವಧಿಗೆ 6GB ಡೇಟಾ ಸೌಲಭ್ಯ ನೀಡುತ್ತದೆ. ಇದರೊಂದಿಗೆ ಅನಿಯಮಿತ ಉಚಿತ ಕರಗೆಳು ಲಭ್ಯವಾಗಲಿದ್ದು, ಹಾಗೂ 28ದಿನಗಳಿಗೆ ಪ್ರತಿ ದಿನ 300ಎಸ್‌ಎಮ್‌ಎಸ್‌ ಉಚಿತವಾಗಿರುತ್ತವೆ. ಈ ಪ್ಲ್ಯಾನಿನಲ್ಲಿ ಡೇಟಾ ಸೌಲಭ್ಯವು ಕಡಿಮೆ ನೀಡಿರುವುದರಿಂದ, ಈ ಪ್ಲ್ಯಾನ್‌ ಹೆಚ್ಚು ವ್ಯಾಲಿಡಿಟಿ ಬಯಸುವ ಮತ್ತು ಕರೆಗಳನ್ನು ಹೆಚ್ಚಾಗಿ ಮಾಡುವ ಗ್ರಾಹಕರಿಗೆ ಉತ್ತಮ ಎನ್ನಬಹುದಾಗಿದೆ. ಜೊತೆಗೆ ಏರ್‌ಟೆಲ್ ಮ್ಯೂಸಿಕ್ ಮತ್ತು Norton ಮೊಬೈಲ್ ಸೆಕ್ಯುರಿಟಿ ಆಯ್ಕೆ ಸಿಗಲಿದೆ.

998ರೂ. ಪ್ರೀಪೇಡ್‌ ಪ್ಲ್ಯಾನ್‌

998ರೂ. ಪ್ರೀಪೇಡ್‌ ಪ್ಲ್ಯಾನ್‌

ಏರ್‌ಟೆಲ್‌ನ 998ರೂ. ಪ್ರೀಪೇಡ್‌ ಪ್ಲ್ಯಾನ್‌ ಸಹ ಡೇಟಾ ಬಳಕೆಗಿಂತ ಕರೆಗಳನ್ನು ಹೆಚ್ಚಾಗಿ ಮಾಡುವ ಮತ್ತು ಅಧಿಕ ವ್ಯಾಲಿಡಿಟಿ ಬಯಸುವ ಗ್ರಾಹಕರಿಗೆ ಬೆಸ್ಟ್‌ ಆಗಿದೆ. ಈ ಪ್ಲ್ಯಾನ್‌ 336 ದಿನಗಳ ವ್ಯಾಲಿಡಿಟಿ ಅವಧಿಯನ್ನು ಹೊಂದಿದ್ದು, ಪೂರ್ಣ ವ್ಯಾಲಿಡಿಟಿ ಅವಧಿಗೆ 12GB ಡೇಟಾ ಪ್ರಯೋಜನವನ್ನು ಒದಗಿಸಲಿದೆ. 28 ದಿನಗಳಿಗೆ ಪ್ರತಿ ದಿನ 300ಎಸ್‌ಎಮ್‌ಎಸ್‌ ಉಚಿತವಾಗಿರಲಿದ್ದು, ಜೊತೆಗೆ ಏರ್‌ಟೆಲ್ ಮ್ಯೂಸಿಕ್ ಮತ್ತು Norton ಮೊಬೈಲ್ ಸೆಕ್ಯುರಿಟಿ ಆಯ್ಕೆ ದೊರೆಯಲಿದೆ.

1699ರೂ. ಪ್ರೀಪೇಡ್‌ ಪ್ಲ್ಯಾನ್‌

1699ರೂ. ಪ್ರೀಪೇಡ್‌ ಪ್ಲ್ಯಾನ್‌

ಏರ್‌ಟೆಲ್‌ನಲ್ಲಿ ದೀರ್ಘಾವಧಿ ಪ್ಲ್ಯಾನ್‌ಗಳಲ್ಲಿಯೇ 1699ರೂ. ಪ್ರೀಪೇಡ್‌ ಪ್ಲ್ಯಾನ್‌ ಗ್ರಾಹಕರಿಂದ ಉತ್ತಮ ಪ್ರತಿಕ್ರಿಯೆ ಪಡೆದಿದೆ. ಈ ಪ್ಲ್ಯಾನ್‌ ಒಟ್ಟು 365 ದಿನಗಳ ವ್ಯಾಲಿಡಿಟಿ ಅವಧಿಯನ್ನು ಹೊಂದಿದ್ದು, ಈ ಅವಧಿಯಲ್ಲಿ ಪ್ರತಿದಿನ 1.4GB ಡೇಟಾ ಪ್ರಯೋಜನ ನೀಡಲಿದೆ. ಇದರೊಂದಿಗೆ ಅನಿಯಮಿತ ಕರೆಗಳು ಹಾಗೂ ಪ್ರತಿದಿನ 100 ಉಚಿತ ಎಸ್‌ಎಮ್‌ಎಸ್‌ಗಳು ಲಭ್ಯವಾಗಲಿವೆ. ಉಳಿದಂತೆ ಏರ್‌ಟೆಲ್ ಮ್ಯೂಸಿಕ್ ಮತ್ತು Norton ಮೊಬೈಲ್ ಸೆಕ್ಯುರಿಟಿ ಆಯ್ಕೆಯು ಸಹ ಲಭ್ಯವಾಗಲಿದೆ.

599ರೂ. ಪ್ರೀಪೇಡ್‌ ಪ್ಲ್ಯಾನ್‌

599ರೂ. ಪ್ರೀಪೇಡ್‌ ಪ್ಲ್ಯಾನ್‌

ಏರ್‌ಟೆಲ್‌ನ 599ರೂ. ಪ್ರೀಪೇಡ್‌ ಪ್ಲ್ಯಾನ್‌ ದೀರ್ಘಾವಧಿಯ ಎಂಟ್ರಿ ಲೆವೆಲ್ ಪ್ಲ್ಯಾನ್‌ ಇದ್ದಂತೆ. ಈ ಪ್ಲ್ಯಾನಿನಲ್ಲಿ ಒಟ್ಟು 84 ದಿನಗಳ ವ್ಯಾಲಿಡಿಟಿ ಲಭ್ಯವಾಗಲಿದ್ದು, ಈ ಅವಧಿಯಲ್ಲಿ ಪ್ರತಿದಿನ 2GB ಡೇಟಾ ಹಾಗೂ ಪ್ರತಿದಿನ 100 ಉಚಿತ ಎಸ್‌ಎಮ್‌ಎಸ್‌ಗಳ ಪ್ರಯೋಜನ ದೊರೆಯಲಿದೆ. ಇದರೊಂದಿಗೆ 4ಲಕ್ಷದ ಭಾರ್ತಿ AXA ಲೈಫ್‌ ಇನ್ಸೂರೆನ್ಸ್‌ ಸೌಲಭ್ಯವು ಸಹ ಗ್ರಾಹಕರಿಗೆ ಸಿಗಲಿದೆ. ಇದಲ್ಲದೇ ಏರ್‌ಟೆಲ್ ಮ್ಯೂಸಿಕ್ ಮತ್ತು Norton ಮೊಬೈಲ್ ಸೆಕ್ಯುರಿಟಿ ಪ್ರಯೋಜನಗಳಿರಲಿವೆ.

ನೀವು ಏರ್‌ಟೆಲ್‌ ಗ್ರಾಹಕರಾಗಿದ್ದರೇ ಈ ಪ್ಲ್ಯಾನ್‌ಗಳಲ್ಲಿ ಒಂದನ್ನು ಆಯ್ದುಕೊಳ್ಳಿ!

ನೀವು ಏರ್‌ಟೆಲ್‌ ಗ್ರಾಹಕರಾಗಿದ್ದರೇ ಈ ಪ್ಲ್ಯಾನ್‌ಗಳಲ್ಲಿ ಒಂದನ್ನು ಆಯ್ದುಕೊಳ್ಳಿ!

ದೇಶದ ಟೆಲಿಕಾಂ ವಲಯದಲ್ಲಿ ಸದ್ಯ ಜಿಯೋಗೆ ಸ್ಟ್ರಾಂಗ್‌ ಪೈಪೋಟಿ ನೀಡುತ್ತಿರುವ ಟೆಲಿಕಾಂ ಸಂಸ್ಥೆಯೆಂದರೇ ಅದುವೇ ಭಾರ್ತಿ ಏರ್‌ಟೆಲ್ ಆಗಿದೆ. ಈಗಾಗಲೇ ತನ್ನ ಪ್ರೀಪೇಡ್‌ ಪ್ಲ್ಯಾನ್‌ಗಳಲ್ಲಿ ಸಾಕಷ್ಟು ಬದಲಾವಣೆಗಳನ್ನು ಮಾಡಿದ್ದು, ಅಲ್ಪಾವಧಿಯ ಪ್ಲ್ಯಾನ್‌ಗಳಿಂದ, ದೀರ್ಘಾವಧಿಯ ಹಲವು ಆಕರ್ಷಕ ಪ್ಲ್ಯಾನ್‌ಗಳನ್ನು ಪರಿಚಯಿಸಿದೆ. ಹಾಗೆಯೇ ಏರ್‌ಟೆಲ್ ಮ್ಯೂಸಿಕ್ ಸೇವೆಯ ಚಂದಾದಾರತ್ವ ನೀಡುತ್ತಿದೆ.

ಹೌದು, ಏರ್‌ಟೆಲ್ ಕಂಪನಿಯು ಇತ್ತೀಚಿಗೆ ವಾರ್ಷಿಕ ಅವಧಿಯ ಪ್ಲ್ಯಾನ್‌ಗಳನ್ನು ಲಾಂಚ್ ಮಾಡಿದ್ದು, ಇದರೊಂದಿಗೆ ಕಡಿಮೆ ಅವಧಿಯ ಪ್ಲ್ಯಾನ್‌ಗಳಲ್ಲಿಯೂ ಸಹ ಹೆಚ್ಚುವರಿ ಡೇಟಾ, ಉಚಿತ ಕರೆ, ಉಚಿತ ಎಸ್‌ಎಮ್‌ಎಸ್‌ ಸೌಲಭ್ಯಗಳನ್ನು ನೀಡುತ್ತಿದೆ. ಹಾಗಾದರೇ ಏರ್‌ಟೆಲ್‌ನ ಜನಪ್ರಿಯ ಪ್ರೀಪೇಡ್‌ ಪ್ಲ್ಯಾನ್‌ಗಳು ಯಾವುವು ಮತ್ತು ಅವುಗಳ ಸೌಲಭ್ಯಗಳೆನು ಎನ್ನುವುದನ್ನು ಮುಂದೆ ನೋಡೋಣ ಬನ್ನಿರಿ.

1699ರೂ. ಪ್ಲ್ಯಾನ್

1699ರೂ. ಪ್ಲ್ಯಾನ್

ಏರ್‌ಟೆಲ್ ಸಂಸ್ಥೆಯು ಇತ್ತೀಚಿಗೆ 1699ರೂ. ಪ್ಲ್ಯಾನ್‌ ಅನ್ನು ಬಿಡುಗಡೆ ಮಾಡಿದ್ದು, ಈ ಪ್ಲ್ಯಾನ್‌ 365 ದಿನಗಳ ವ್ಯಾಲಿಡಿಟಿ ಅವಧಿಯನ್ನು ಒಳಗೊಂಡಿದೆ. ಈ ಅವಧಿಯಲ್ಲಿ ಅನಿಯಮಿತ ಉಚಿತ ರಾಷ್ಟ್ರೀಯ ಮತ್ತು ಲೋಕಲ್ ಕರೆಗಳು, ಪ್ರತಿದಿನ 100ಎಸ್‌ಎಮ್‌ಎಸ್‌ಗಳು ಹಾಗೂ ಪ್ರತಿದಿನ 1.4GB ಡೇಟಾ ಸೌಲಭ್ಯ ಇರಲಿದೆ. ಇದರೊಂದಿಗೆ ಏರ್‌ಟೆಲ್ Wynk ಮ್ಯೂಸಿಕ್ ಚಂದಾದಾರತ್ವವು ಸಿಗಲಿದೆ.

499ರೂ. ಪ್ಲ್ಯಾನ್‌

499ರೂ. ಪ್ಲ್ಯಾನ್‌

ಏರ್‌ಟೆಲ್‌ 499ರೂ.ಗಳ ವಿಶೇಷ ಪ್ಲ್ಯಾನ್‌ ಅನ್ನು ಪರಿಚಯಿಸಿದ್ದು, ಈ ಪ್ಲ್ಯಾನ್‌ 82 ದಿನಗಳ ವ್ಯಾಲಿಡಿಟಿ ಅವಧಿಯನ್ನು ಒಳಗೊಂಡಿದೆ. ವಿಶೇಷವೆಂದರೇ ಈ ಪ್ಲ್ಯಾನಿನಲ್ಲಿ ಪ್ರತಿದಿನ 2GB ಡೇಟಾ ಸೌಲಭ್ಯ ಸಿಗಲಿದ್ದು, ಉಳಿದಂತೆ ಅನಿಯಮಿತ ಉಚಿತ ಕರೆಗಳು, ಉಚಿತ ಎಸ್‌ಎಮ್‌ಎಸ್‌ಗಳು ಲಭ್ಯವಾಗಲಿವೆ. ಹಾಗೆಯೇ ಈ ಪ್ಲ್ಯಾನಿನೊಂದಿಗೂ ಸಹ ಏರ್‌ಟೆಲ್ Wynk ಮ್ಯೂಸಿಕ್ ಚಂದಾದಾರತ್ವವು ಸಿಗಲಿದೆ.

299ರೂ. ಪ್ಲ್ಯಾನ್

299ರೂ. ಪ್ಲ್ಯಾನ್

ಇದೊಂದು ಶಾರ್ಟ್‌ ಟರ್ಮ್ ಪ್ಲ್ಯಾನ್ ಆಗಿದ್ದು, 28ದಿನಗಳ ವ್ಯಾಲಿಡಿಟಿ ಅವಧಿಯನ್ನು ಹೊಂದಿದೆ. ಈ ಅವಧಿಯಲ್ಲಿ ಪ್ರತಿದಿನ 2.5GB ಡೇಟಾ, ಅನಿಯಮಿತ ಉಚಿತ ಕರೆಗಳು, ಉಚಿತ ಎಸ್‌ಎಮ್‌ಎಸ್‌ಗಳು ಲಭ್ಯವಾಗಲಿವೆ. ಇದರೊಂದಿಗೆ ಅಮೆಜಾನ್ ಪ್ರೈಮ್‌ ಬೇನಿಫಿಟ್ಸ್‌ ಸಹ ಸಿಗಲಿದ್ದು, ಜೊತೆಗೆ ಏರ್‌ಟೆಲ್ Wynk ಮ್ಯೂಸಿಕ್ ಚಂದಾದಾರತ್ವವು ದೊರೆಯಲಿದೆ.

ಯಾವ ಪ್ಲ್ಯಾನ್ ಸೂಕ್ತ

ಯಾವ ಪ್ಲ್ಯಾನ್ ಸೂಕ್ತ

ಬಹುತೇಕ ಬಳಕೆದಾರರು ವಾರ್ಷಿಕ ಪ್ಲ್ಯಾನ್‌ಗಳನ್ನು ಹೆಚ್ಚು ಬಯಸುತ್ತಾರೆ. ಅಂತಹ ಗ್ರಾಹಕರಿಗೆ ಏರ್‌ಟೆಲ್‌ನ 1699ರೂ.ವಾರ್ಷಿಕ ಪ್ಲ್ಯಾನ್‌ ಸೂಕ್ತ ಎನಿಸುತ್ತದೆ. ಹಾಗೆಯೇ ಬಿಎಸ್‌ಎನ್‌ಎಲ್, ವೊಡಾಫೋನ್ ಮತ್ತು ಜಿಯೋ ಸಹ ಅದೇ ಬೆಲೆಯ ವಾರ್ಷಿಕ ಪ್ಲ್ಯಾನ್‌ಗಳನ್ನು ಪರಿಚಯಿಸಿವೆ. ವಾರ್ಷಿಕ ಪ್ಲ್ಯಾನ್‌ ಜೊತೆಗೆ ಹಲವು ಪ್ರಯೋಜನಗಳನ್ನು ಸಹ ಕಂಪನಿಯುಗಳು ಗ್ರಾಹಕರಿಗೆ ನೀಡುತ್ತವೆ.

Best Mobiles in India

English summary
Bharti Airtel has four long-term prepaid plans which include options like Rs 599, Rs 597 and more. to know more visit to kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+