Home
ಸುದ್ದಿಜಾಲ

ISRO NavIC: ಲಕ್ಷಾಂತರ ಸ್ಮಾರ್ಟ್‌ಫೋನ್‌ಗಳಲ್ಲಿ ಸೇರಲಿದೆ ಇಸ್ರೋದ 'ದೇಶಿ' ಟೆಕ್ನಾಲಜಿ!

ಸದ್ಯದಲ್ಲಿಯೇ ಭಾರತದ ಲಕ್ಷಾಂತರ ಆಂಡ್ರಾಯ್ಡ್‌ ಸ್ಮಾರ್ಟ್‌ಫೋನ್‌ಗಳಲ್ಲಿ ಇಸ್ರೋದ ನ್ಯಾವಿಕ್-NavIC ಟೆಕ್ನಾಲಜಿ ಸೇರಿಕೊಳ್ಳಲಿದೆ. ಇಸ್ರೋದ NavIC ಟೆಕ್ನಾಲಜಿ, ಜಿಪಿಎಸ್‌ ನ್ಯಾವಿಗೇಶನ್‌ಗೆ ಪರ್ಯಾಯವಾಗಿದ್ದು, ವಿಶ್ವದ ಅತೀ ದೊಡ್ಡ ಚಿಪ್‌ಸೆಟ್ ತಯಾರಿಕಾ ಸಂಸ್ಥೆಯಾಗಿರುವ ಕ್ವಾಲ್ಕಮ್, ಇದೀಗ ಈ ಹೊಸ ನ್ಯಾವಿಗೇಶನ್ ಟೆಕ್ನಾಲಜಿ ವ್ಯವಸ್ಥೆಯನ್ನು ಅಳವಡಿಸಿಕೊಳ್ಳಲು ಮುಂದಾಗಿದೆ.

ಕ್ವಾಲ್ಕಮ್ ಚಿಪ್‌ಸೆಟ್

ಹೌದು, ಕ್ವಾಲ್ಕಮ್ ಚಿಪ್‌ಸೆಟ್ ಆಧಾರಿತ ಮುಂಬರುವ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್ ಇಸ್ರೋ ಸಂಸ್ಥೆಯು ನ್ಯಾವಿಕ್ ನ್ಯಾವಿಗೇಶ್ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳಲಿವೆ. ನ್ಯಾವಿಕ್ ತಂತ್ರಜ್ಞಾನವು ಪ್ರಸ್ತುತ ಬಳಕೆಯಲ್ಲಿರುವ ಜಿಪಿಎಸ್‌ಗೆ (GPS-Global Positioning System) ಪರ್ಯಾಯ ಆಯ್ಕೆ ಆಗಿ ಬಳಕೆ ಆಗಲಿದೆ. ಈ ತಂತ್ರಜ್ಞಾನವು ನಿಖರ ನ್ಯಾವಿಗೇಶನ್ ಮಾಹಿತಿ ಒದಗಿಸುವ ಸೌಲಭ್ಯಗಳನ್ನು ಪಡೆದಿದೆ.

ಏನಿದು ನ್ಯಾವಿಕ್‌ NavIC ಟೆಕ್ನಾಲಜಿ?

ಏನಿದು ನ್ಯಾವಿಕ್‌ NavIC ಟೆಕ್ನಾಲಜಿ?

ನ್ಯಾವಿಕ್-NavIC ದೇಶಿ ನ್ಯಾವಿಗೇಶನ್ ತಂತ್ರಜ್ಞಾನವಾಗಿದ್ದು, ಇದನ್ನು ಇಸ್ರೋ ಸಂಸ್ಥೆಯು ಅಭಿವೃದ್ಧಿ ಪಡೆಸಿದೆ. ಸದ್ಯ ಬಳಕೆಯಲ್ಲಿರುವ ಜಿಪಿಎಸ್‌ ಟೆಕ್ನಾಲಜಿಯಂತೆ ಈ ನ್ಯಾವಿಕ್ ತಂತ್ರಜ್ಞಾನವು ಕಾರ್ಯನಿರ್ವಹಿಸಲಿದೆ. ನಿಖರವಾಗಿ ರಿಯಲ್‌ಟೈಮ್ ಹಾಗೂ ಟೈಮಿಂಗ್ ಬಗ್ಗೆ ಮಾಹಿತಿ ಒದಗಿಸಲಿದೆ. ಇದೀಗ ಈ ತಂತ್ರಜ್ಞಾನವನ್ನು ಆಂಡ್ರಾಯ್ಡ್‌ ಸ್ಮಾರ್ಟ್‌ಫೋನ್‌ಗಳ ಅಳವಡಿಕೆ ಮಾಡಲಾಗುತ್ತಿದೆ.

ಶಿಯೋಮಿ ಫೋನಗಳಲ್ಲಿಯೂ ಈ ಟೆಕ್ನಾಲಜಿ

ಶಿಯೋಮಿ ಫೋನಗಳಲ್ಲಿಯೂ ಈ ಟೆಕ್ನಾಲಜಿ

ಜನಪ್ರಿಯ ಶಿಯೋಮಿ ಮತ್ತು ರಿಯಲ್‌ ಮಿ ಕಂಪನಿಗಳು ನ್ಯಾವಿಕ್ ನ್ಯಾವಿಗೇಶನ್ ತಂತ್ರಜ್ಞಾನವನ್ನು ವ್ಯವಸ್ಥೆಯನ್ನು ಮೊದಲು ಅಳವಡಿಸಿಕೊಳ್ಳುವ ಸಾಧ್ಯತೆಯಿದೆ. ಈ ಎರಡು ಕಂಪನಿಗಳ ಸ್ಮಾರ್ಟ್‌ಫೋನ್‌ಗಳು ಕ್ವಾಲ್ಕಮ್ ಚಿಪ್‌ಸೆಟ್‌ ಸಾಮರ್ಥ್ಯವನ್ನು ಪಡೆದಿವೆ. ಮುಂಬರುವ ಹೊಸ ಸ್ಮಾರ್ಟ್‌ಫೋನ್‌ಗಳಲ್ಲಿಯೂ ಅಧಿಕ ಸಾಮರ್ಥ್ಯದ ಕ್ವಾಲ್ಕಮ್ ಚಿಪ್‌ಸೆಟ್‌ ಅಳವಡಿಸುವ ಸಾಧ್ಯತೆಗಳು ಹೆಚ್ಚಿವೆ.

ಕ್ವಾಲ್ಕಮ್ ಪ್ರಯತ್ನ ತೃಪ್ತಿ ತಂದಿದೆ

ಕ್ವಾಲ್ಕಮ್ ಪ್ರಯತ್ನ ತೃಪ್ತಿ ತಂದಿದೆ

ಸ್ಮಾರ್ಟ್‌ಫೋನ್‌ಗಳಲ್ಲಿ ಹೊಸ ನ್ಯಾವಿಕ್ ನ್ಯಾವಿಗೇಶ್ ತಂತ್ರಜ್ಞಾನವನ್ನು ಸಂಯೋಜಿಸಲಿರುವ ಕ್ವಾಲ್ಕಾಮ್ ಟೆಕ್ನಾಲಜೀಸ್ ಪ್ರಯತ್ನವು ಇಸ್ರೋಗೆ ತೃಪ್ತಿ ತಂದಿದೆ. ಮತ್ತು ಭಾರತದಲ್ಲಿ ಭವಿಷ್ಯದ ಹ್ಯಾಂಡ್ಸೆಟ್ ಉಡಾವಣೆಗಳಿಗಾಗಿ ಅದನ್ನು ಹತೋಟಿಗೆ ತರಲು ನಾವು (OEMs ) ಒಇಎಂಗಳನ್ನು ಒತ್ತಾಯಿಸುತ್ತೇವೆ ಎಂದು ಇಸ್ರೋ ಅಧ್ಯಕ್ಷ ಡಾ.ಕೆ.ಶಿವನ್ ಹೇಳಿದ್ದಾರೆ.

ಜಿಪಿಎಸ್‌ ಬಳಕೆ ಕಡಿಮೆ ಆಗಲಿದೆ

ಜಿಪಿಎಸ್‌ ಬಳಕೆ ಕಡಿಮೆ ಆಗಲಿದೆ

ಮುಂಬರುವ ಸ್ಮಾರ್ಟ್‌ಫೋನ್‌ಗಳಲ್ಲಿ ಹೊಸ ನ್ಯಾವಿಕ್ ನ್ಯಾವಿಗೇಶ್ ತಂತ್ರಜ್ಞಾನವನ್ನು ಅಳವಡಿಕೆಯ ನಂತರ ಅಮೆರಿಕಾದ ಜಿಪಿಎಸ್‌ ಟೆಕ್ನಾಲಜಿ ಬಳಕೆ ಕಡಿಮೆ ಆಗಲಿದ ಎನ್ನಲಾಗಿದೆ. ನ್ಯಾವಿಕ್ ಅತ್ಯುತ್ತಮ ಮತ್ತು ನಿಖರ ಮ್ಯಾಪಿಂಗ್ ಸೌಲಭ್ಯಗಳನ್ನು ಹೊಂದಿದೆ. ಸ್ಮಾರ್ಟ್‌ಫೋನ್‌ಗಳಲ್ಲಿ ಲೊಕೇಶನ್ ಆಯ್ಕೆಯಲ್ಲಿ ಈ ನ್ಯಾವಿಕ ಬಳಕೆ ಹೆಚ್ಚಾಗಲಿದೆ.

ಏಲ್ಲೆಲ್ಲಿ ಬಳಕೆ ಸಾಧ್ಯತೆ

ಏಲ್ಲೆಲ್ಲಿ ಬಳಕೆ ಸಾಧ್ಯತೆ

ಈ ತಂತ್ರಜ್ಞಾನವನ್ನು ವೇಹಿಕಲ್ ಟ್ರಾಕಿಂಗ್ ಮತ್ತು ಫ್ಲೀಟ್ ನಿರ್ವಹಣೆ, ನಿಖರವಾದ ಸಮಯ, ಪಾದಯಾತ್ರಿಕರಿಗೆ ಮತ್ತು ಪ್ರಯಾಣಿಕರಿಗೆ ಭೂಮಿಯ ನ್ಯಾವಿಗೇಷನ್ ಸಹಾಯಕವಾಗಿ ಬಳಕೆ ಆಗಲಿದೆ. ಚಾಲಕರಿಗೆ ದೃಶ್ಯ ಮತ್ತು ಧ್ವನಿ ನ್ಯಾವಿಗೇಶನ್ ಆಗಿ ಸಹಾಯಕವಾಗಲಿದೆ. ಇನ್ನು ವೈಮಾನಿಕ ಮತ್ತು ಸಮುದ್ರದ/ಜಲಮಾರ್ಗದ ನ್ಯಾವಿಗೇಶನ್ ಆಗಿಯೂ ಸಹ ಸಹಾಯಕವಾಗಲಿದೆ.

Best Mobiles in India

English summary
Qualcomm chipset companie, is bringing ISRO’s GPS-alternative to millions of Android phones in India. to know more visit to kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+