Just In
Don't Miss
- Sports
IND Vs NZ ODI: ನನ್ನ ಸಾಮರ್ಥ್ಯ ಸಾಬೀತುಪಡಿಸಲು ಇದು ಉತ್ತಮ ಅವಕಾಶ ಎಂದ ಯುವ ಕ್ರಿಕೆಟಿಗ
- Movies
Paaru: ಮಗನ ಮೇಲೆ ಮುನಿಸಿಕೊಂಡ ಅಖಿಲಾಂಡೇಶ್ವರಿ
- News
ಲೈಂಗಿಕ ಕಿರುಕುಳ ಪ್ರಕರಣ; ಕೇಂದ್ರ ಸರ್ಕಾರದ ಭರವಸೆಯ ಮೇರೆಗೆ ಧರಣಿ ಕೈ ಬಿಟ್ಟ ಕುಸ್ತಿಪಟುಗಳು
- Lifestyle
ದೇಹದಲ್ಲಿ ಮೆಗ್ನೇಸಿಯಂ ಕಡಿಮೆಯಾದ್ರೆ ಹೃದ್ರೋಗ ಖಚಿತ..! ಈ ಹತ್ತು ಆಹಾರಗಳು ನಿಮ್ಮ ಡಯಟ್ನಲ್ಲಿರಲಿ..
- Finance
Union Budget: ಕೇಂದ್ರ ಬಜೆಟ್ ಸಂಪೂರ್ಣ ವಿವರ ಮೊಬೈಲ್ನಲ್ಲಿ ಪಡೆಯುವುದು ಹೇಗೆ?
- Automobiles
ಸಾಮಾನ್ಯ ಜನರಲ್ಲದೇ ಸೆಲೆಬ್ರಿಟಿಗಳು ಕೂಡ ಟೊಯೊಟಾ ಇನೋವಾ ಕಾರನ್ನು ಇಷ್ಟಪಡಲು ಕಾರಣಗಳು...
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಇನ್‌ಸ್ಟಾಗ್ರಾಮ್‌ನಲ್ಲಿ ನೂತನ ಸೌಲಭ್ಯ!; ಟೀನೇಜರ್ಸ್‌ಗೆ ಸಖತ್ ಅನುಕೂಲ!
ಮೆಟಾ ಮಾಲೀಕತ್ವದ ಇನ್‌ಸ್ಟಾಗ್ರಾಮ್‌ನಲ್ಲಿ ಈಗಾಗಲೇ ಸಾಕಷ್ಟು ಫೀಚರ್ಸ್‌ಗಳು ಬಳಕೆದಾರರಿಗೆ ವಿಶೇಷ ಅನುಕೂಲ ಕಲ್ಪಿಸಿವೆ. ಈ ಮೂಲಕ ಹಲವಾರು ಗ್ರಾಹಕರು ಅವರ ಅಗತ್ಯಕ್ಕೆ ತಕ್ಕಂತೆ ಈ ಪ್ಲಾಟ್‌ಫಾರ್ಮ್ ಅನ್ನು ಬಳಕೆ ಮಾಡುತ್ತಿದ್ದಾರೆ. ಇದರ ನಡುವೆ ಇನ್‌ಸ್ಟಾಗ್ರಾಮ್‌ನಲ್ಲಿ ಹೊಸ ಫೀಚರ್ಸ್ ಅನ್ನು ಪರಿಚಯಿಸಲಾಗಿದ್ದು, ಈ ಫೀಚರ್ಸ್ ಮೂಲಕ ಪ್ಲಾಟ್‌ಫಾರ್ಮ್‌ನಲ್ಲಿ ನಿಮ್ಮ ಸಮಯವನ್ನು ನಿರ್ವಹಿಸಲು ಸಹಕಾರಿಯಾಗಲಿದೆ.

ಹೌದು, ಇನ್‌ಸ್ಟಾಗ್ರಾಮ್‌ನಲ್ಲಿ ಇದೀಗ ಬಳಕೆದಾರರ ಗೊಂದಲವನ್ನು ನಿವಾರಿಸುವ ಉದ್ದೇಶದಿಂದ 'ಕ್ವೈಟ್ ಮೋಡ್' ಅನ್ನು ಪರಿಚಯಿಸುತ್ತಿದೆ. ಈ ಫೀಚರ್ಸ್ ಮೂಲಕ ಇನ್‌ಸ್ಟಾಗ್ರಾಮ್ ಬಳಕೆದಾರರು ಅದರಲ್ಲೂ ಹದಿಹರೆಯದವರಿಗೆ ಬಹಳ ಅನುಕೂಲ ಮಾಡಿಕೊಡಲಿದೆ. ಹಾಗಿದ್ರೆ, ಇದು ಹೇಗೆಲ್ಲಾ ಕೆಲಸ ಮಾಡಲಿದೆ?. ಇದರಿಂದ ಆಗುವ ಪ್ರಮುಖ ಪ್ರಯೋಜನ ಏನು? ಎಂಬಿತ್ಯಾದಿ ಮಾಹಿತಿಯನ್ನು ಈ ಲೇಖನದಲ್ಲಿ ವಿವರಿಸಿದ್ದೇವೆ ಓದಿರಿ.
ಏನಿದು ಕ್ವೈಟ್ ಮೋಡ್?
ಕ್ವೈಟ್ ಮೋಡ್ ಮೂಲಕ ಬಳಕೆದಾರರು ತಮ್ಮ ಸಮಯವನ್ನು ನಿರ್ವಹಿಸಲು ಮತ್ತು ಸ್ನೇಹಿತರು ಮತ್ತು ಅನುಯಾಯಿಗಳೊಂದಿಗೆ ಸಂವಹನ ನಡೆಸಲು ಇದು ಸಹಾಯ ಮಾಡಲಿದೆ. ಈ ಫೀಚರ್ಸ್ ಅನ್ನು ಹದಿಹರೆಯದವರನ್ನು ಗುರಿಯಾಗಿಸಿಕೊಂಡು ಪರಿಚಯಿಸಲಾಗಿದ್ದು, ಈ ಮೂಲಕ ಬಳಕೆದಾರರು ಎಲ್ಲಾ ನೋಟಿಫಿಕೇಶನ್ ಅನ್ನು ವಿರಾಮಗೊಳಿಸಲು ಮತ್ತು ಪ್ರೊಫೈಲ್‌ನ ಚಟುವಟಿಕೆಯ ಸ್ಟೇಟಸ್ ಅನ್ನು 'ಇನ್ ಕ್ವೈಟ್ ಮೋಡ್‌ಗೆ' ಬದಲಾಯಿಸಲು ಅನುಮತಿಸುತ್ತದೆ.

ಆಟೋಮ್ಯಾಟಿಕ್ ಪ್ರತ್ಯುತ್ತರ ನೀಡಲಿದೆ
ಈ ಫೀಚರ್ಸ್ ಸಕ್ರಿಯವಾಗಿದ್ದಾಗ ಯಾರಾದರೂ ಡೈರೆಕ್ಟ್ ಮೆಸೆಜ್ ಮಾಡಲು ಮುಂದಾದರೆ ಅವರಿಗೆ ಕ್ವೈಟ್ ಮೋಡ್ ಆಕ್ಟಿವ್ ಆಗಿರುವ ಬಗ್ಗೆ ತಿಳಿಸುವ ಮೂಲಕ ಆಟೋಮ್ಯಾಟಿಕ್ ಆಗಿ ಪ್ರತ್ಯುತ್ತರವನ್ನು ನೀಡುತ್ತದೆ. ಇದರಿಂದ ಸಂಪರ್ಕದ ಅಂತರ ಕಾಪಾಡಿಕೊಳ್ಳಬಹುದಾಗಿದೆ.
ಎಲ್ಲೆಲ್ಲಿ ಲಭ್ಯ?
ಈ ಫೀಚರ್ಸ್ ಸದ್ಯಕ್ಕೆ ಯುಎಸ್, ಯುಕೆ, ಐರ್ಲೆಂಡ್, ಕೆನಡಾ, ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್‌ನ ಬಳಕೆದಾರರಿಗೆ ಲಭ್ಯವಾಗಲಿದ್ದು, ಭವಿಷ್ಯದಲ್ಲಿ ಇನ್ನಷ್ಟು ರಾಷ್ಟ್ರಗಳಿಗೆ ವಿಸ್ತರಿಸಲು ಯೋಜಿಸಲಾಗಿದೆ ಎಂದು ತಿಳಿದುಬಂದಿದೆ. ಈ ಬದಲಾವಣೆಯು ಬಳಕೆದಾರರಿಗೆ ತಮ್ಮ ಆನ್‌ಲೈನ್ ಅನುಭವ, ಅವರು ಅಲ್ಲಿ ಎಷ್ಟು ಸಮಯವನ್ನು ಕಳೆಯುತ್ತಾರೆ ಮತ್ತು ಅವರು ನೋಡುವ ವಿಷಯದ ಮೇಲೆ ಹೆಚ್ಚಿನ ನಿಯಂತ್ರಣವನ್ನು ನೀಡಲು ಸಹಾಯ ಮಾಡಲಿದೆ ಎಂದು ಸಂಸ್ಥೆ ತಿಳಿಸಿದೆ.

ಸ್ವಲ್ಪ ಸಮಯ ಈ ಪ್ಲಾಟ್‌ಫಾರ್ಮ್‌ನಿಂದ ದೂರ ಇರಬೇಕು ಎಂದವರಿಗೂ ಇದು ಅತ್ಯಂತ ಉಪಕಾರಿಯಾಗಿದೆ. ಈ ಸೌಲಭ್ಯದ ಮೂಲಕ ಅಧ್ಯಯನ ಮಾಡುವಾಗ ಯಾವುದೇ ತೊಂದರೆ ಆಗಬಾರದು ಎಂದರೆ ಅಥವಾ ಯಾವುದಾದರೂ ಕೆಲಸದಲ್ಲಿ ತಲ್ಲೀನವಾದಾಗ ಅಡಚಣೆ ಆಗಬಾರದು ಎಂದಾದರೆ ಈ ಫೀಚರ್ಸ್ ಅನ್ನು ಬಳಕೆದಾರರು ಸುಲಭವಾಗಿ ಬಳಸಿಕೊಳ್ಳಬಹುದಾಗಿದೆ.
ಕ್ವೈಟ್ ಮೋಡ್ ಅನ್ನು ಹೇಗೆ ಸಕ್ರಿಯಗೊಳಿಸುವುದು?
ಈ ಫೀಚರ್ಸ್ ಅನ್ನು ಭಾರತೀಯರಿಗೆ ಪರಿಚಯಿಸಿದ ನಂತರ ಸೆಟ್ಟಿಂಗ್ ವಿಭಾಗಕ್ಕೆ ಹೋದರೆ ಅಲ್ಲಿ ' ಕ್ವೈಟ್ ಮೋಡ್' ಎಂಬ ಆಯ್ಕೆ ಕಾಣಿಸಿಕೊಳ್ಳುತ್ತದೆ. ನಂತರ ಅದನ್ನು ಸಕ್ರಿಯಗೊಳಿಸಬಹುದು. ಆದರೆ, ಭಾರತವೂ ಸೇರಿದಂತೆ ಇನ್ನಿತರೆ ರಾಷ್ಟ್ರಗಳಿಗೆ ಈ ಫೀಚರ್ಸ್ ಯಾವಾಗ ಲಭ್ಯ ಎಂಬುದು ಇನ್ನೂ ಕುತೂಹಲದ ಪ್ರಶ್ನೆಯಾಗಿದೆ.

ಪೇಜ್‌ನಲ್ಲಿ ಬದಲಾವಣೆ
ಇದರೊಂದಿಗೆ ಕೆಲವು ದಿನಗಳ ಹಿಂದಷ್ಟೇ ಇನ್‌ಸ್ಟಾಗ್ರಾಮ್ ಮೇನ್ ಪೇಜ್‌ನಲ್ಲಿನ ಬದಲಾವಣೆ ಬಗ್ಗೆ ಪ್ಲಾಟ್‌ಫಾರ್ಮ್ ಮಾಹಿತಿ ನೀಡಿತ್ತು. ಅದರಂತೆ ಆಪ್‌ನ ಕೆಳಭಾಗದಲ್ಲಿದ್ದ ನ್ಯಾವಿಗೇಶನ್ ಬಾರ್ ವಿಭಾಗದಲ್ಲಿ '+' ಐಕಾನ್ ನೀಡಲಾಗಿದ್ದು, ಇದು ಕಂಟೆಂಟ್ ರಚಿಸಲು ಶಾರ್ಟ್‌ಕಟ್ ಮತ್ತು ಇದರ ಬಲಕ್ಕೆ ರೀಲ್ಸ್ ಟ್ಯಾಬ್ ಆಯ್ಕೆಯನ್ನು ನೀಡಿದೆ. ಈ ಬದಲಾವಣೆಯ ಭಾಗವಾಗಿ ಇನ್‌ಸ್ಟಾಗ್ರಾಮ್ ತನ್ನ ಶಾಪ್ ಟ್ಯಾಬ್ ಅನ್ನು ತೆಗೆದುಹಾಕಲು ಮುಂದಾಗಿದೆ.
ಶಾಪ್ ಟ್ಯಾಬ್ ಇನ್‌ಸ್ಟಾಗ್ರಾಮ್‌ನಲ್ಲಿ ಶಾಪಿಂಗ್ ಸೌಲಭ್ಯ ನೀಡುವ ಆಯ್ಕೆಯಾಗಿದ್ದು, ಈ ಮೂಲಕ ಬಳಕೆದಾರರು ಸುಲಭವಾಗಿ ತಮಗೆ ಬೇಕಾದ ಪ್ರೊಡಕ್ಟ್ ಅನ್ನು ಸುಲಭವಾಗಿ ಖರೀದಿ ಮಾಡಬಹುದಾಗಿದೆ.
-
54,999
-
36,599
-
39,999
-
38,990
-
1,29,900
-
79,990
-
38,900
-
18,999
-
19,300
-
69,999
-
79,900
-
1,09,999
-
1,19,900
-
21,999
-
1,29,900
-
12,999
-
44,999
-
15,999
-
7,332
-
17,091
-
29,999
-
7,999
-
8,999
-
45,835
-
77,935
-
48,030
-
29,616
-
57,999
-
12,670
-
79,470