ವಿದ್ಯುತ್ ಬೇಕಾಗಿಯೇ ಇಲ್ಲದ ಫ್ರಿಡ್ಜ್ ನಿಮಗೂ ಬೇಕೇ?

By Shwetha
|

ನೀವು ಹೊರಗೆ ಪ್ರಯಾಣ ಮಾಡಬೇಕಾದ ಸಂದರ್ಭದಲ್ಲಿ, ಸೌಲಭ್ಯವಿರುವ ರೆಫ್ರಿಜರೇಟರ್ ನಿಮಗೆ ದೊರಕುವುದು ಕಷ್ಟ. ಆಹಾರವನ್ನು ಕೆಡದಂತೆ ತಂಪಾಗಿರಿಸುವ ರೆಫ್ರಿಜರೇಟರ್ ನಿಮಗೆ ಎಲ್ಲಾ ಕಾಲಕ್ಕೂ ಬೇಕಾದ್ದೆ. ಆದರೆ ನೀವು ಮನೆ ಬಿಟ್ಟು ಹೊರಹೋದ ಸಂದರ್ಭದಲ್ಲಿ ಆಹಾರವನ್ನು ಕಡೆದಂತೆ ರೆಫ್ರಿಜರೇಟರ್‌ನಲ್ಲಿರಿಸುವುದು ತುಸು ಕಷ್ಟವೇ. ಆದರೆ ನಮ್ಮ ತಂತ್ರಜ್ಞಾನ ಈ ಕಷ್ಟವನ್ನು ಪರಿಹರಿಸುವ ಸಲುವಾಗಿ ಅತ್ಯುತ್ತಮ ಯೋಜನೆಯೊಂದಿಗೆ ಬಂದಿದೆ.

ಓದಿರಿ: ಪ್ರೀತಿಪಾತ್ರರಿಗಾಗಿ ಅತ್ಯಮೂಲ್ಯ ಗ್ಯಾಜೆಟ್ ಕೊಡುಗೆಗಳು

ಈ ರೆಫ್ರಿಜರೇಟರ್ ಬಳಸಲು ವಿದ್ಯುತ್ ಬೇಕಾಗಿಯೇ ಇಲ್ಲ. ವಾತಾವರಣದ ಆವಿಯಾಗುವಿಕೆ ತಂತ್ರಜ್ಞಾನವನ್ನು ಬಳಸಿಕೊಂಡು ಈ ರೆಫ್ರಿಜರೇಟರ್ ಕಾರ್ಯನಿರ್ವಹಿಸುತ್ತದೆ. ಇಂದಿನ ಲೇಖನದಲ್ಲಿ ಈ ರೆಫ್ರಿಜರೇಟರ್ ಕುರಿತ ಇನ್ನಷ್ಟು ಮಾಹಿತಿಗಳನ್ನು ತಿಳಿದುಕೊಳ್ಳೋಣ.

ಬಯೋಮಿಕ್ರಿ ಗ್ಲೋಬಲ್ ಡಿಸೈನ್ ಕಾಂಪಿಟೇಶನ್ ಕೆನಡಾ

ಬಯೋಮಿಕ್ರಿ ಗ್ಲೋಬಲ್ ಡಿಸೈನ್ ಕಾಂಪಿಟೇಶನ್ ಕೆನಡಾ

ಕ್ಯಾನೆಡಾದ ಬಯೋಮಿಕ್ರಿ ಗ್ಲೋಬಲ್ ಡಿಸೈನ್ ಕಾಂಪಿಟೇಶನ್ ಕೆನಡಾ ಈ ಯೋಜನೆಯನ್ನು ಪ್ರಸ್ತುತಪಡಿಸಿದೆ.

ಪೃಕೃತಿಯಿಂದ ಪ್ರೇರಿತ

ಪೃಕೃತಿಯಿಂದ ಪ್ರೇರಿತ

ಪೃಕೃತಿಯಿಂದ ಪ್ರೇರಿತವಾಗಿರುವ ಈ ಯೋಜನೆಯು ಕಡಿಮೆ ಖರ್ಚಿನಲ್ಲೇ ಅತ್ಯುತ್ತಮ ಸೇವೆಯನ್ನು ಒದಗಿಸಲಿದೆ.

ವಿದ್ಯುತ್ ಸಮಸ್ಯೆ

ವಿದ್ಯುತ್ ಸಮಸ್ಯೆ

ವಿಶ್ವದಲ್ಲಿ ವಿದ್ಯುತ್ ಸಮಸ್ಯೆಯಿಂದ ಬಳಲುತ್ತಿರುವ 1.3 ಬಿಲಿಯನ್ ಜನರಿಗೆ ಇದು ವರದಾನವಾಗಿ ಪರಿಣಮಿಸಲಿದೆ.

ಅತಿ ಕನಿಷ್ಟ ಸಂಪನ್ಮೂಲ

ಅತಿ ಕನಿಷ್ಟ ಸಂಪನ್ಮೂಲ

ಆಹಾರವನ್ನು ರೆಫ್ರಿಜರೇಟರ್‌ನಲ್ಲಿ ಇಟ್ಟು ಸಂರಕ್ಷಿಸುವುದರ ಜೊತೆಗೆ ಅತಿ ಕನಿಷ್ಟ ಸಂಪನ್ಮೂಲಗಳಲ್ಲಿ ತಯಾರಿಸಿದ ಆಹಾರ ಹಾಳಾಗುವಿಕೆಯನ್ನು ತಪ್ಪಿಸುವುದೂ ಇದರ ಉದ್ದೇಶವಾಗಿದೆ.

ವಿದ್ಯುತ್ ರಹಿತ ರೆಫ್ರಿಜರೇಟರ್‌

ವಿದ್ಯುತ್ ರಹಿತ ರೆಫ್ರಿಜರೇಟರ್‌

ವಿದ್ಯುತ್ ರಹಿತ ರೆಫ್ರಿಜರೇಟರ್‌ನಲ್ಲಿ ನೀರನ್ನು ಸಂಗ್ರಹಿಸಿಟ್ಟು ಅತಿ ದೀರ್ಘ ಸಮಯದವರೆಗೆ ಅದನ್ನು ತಂಪಾಗಿ ಇರಿಸಬಹುದಾಗಿದೆ. ಇನ್ನು ನಿಮಗೆ ಬೇಕಾದಾಗ ಇದನ್ನು ಬಳಸಿಕೊಳ್ಳಬಹುದು.

ಫ್ರಿಡ್ಜ್‌ನಲ್ಲಿ ಸಂಗ್ರಹಿಸಿಡಬಹುದು

ಫ್ರಿಡ್ಜ್‌ನಲ್ಲಿ ಸಂಗ್ರಹಿಸಿಡಬಹುದು

ಒಂಟೆ ಮತ್ತು ಆನೆಗಳಂತಹ ಪ್ರಾಣಿಗಳು ನೀರನ್ನು ಹೇಗೆ ಶೇಖರಿಸಿಡುತ್ತವೆಯೋ ಅಂತೆಯೇ ನೀರನ್ನು ಈ ಫ್ರಿಡ್ಜ್‌ನಲ್ಲಿ ಸಂಗ್ರಹಿಸಿಡಬಹುದು.

ವಿಂಡ್ ಚಿಲ್

ವಿಂಡ್ ಚಿಲ್

ಈ ರೆಫ್ರಿಜರೇಟರ್‌ಗೆ ವಿಂಡ್ ಚಿಲ್ ಎಂಬ ಹೆಸರನ್ನಿಡಲಾಗಿದ್ದು ಸರಳವಾದ ಬಿಸಿ ವರ್ಗಾವಣೆ ತಂತ್ರಜ್ಞಾನವನ್ನು ಬಳಸಿಕೊಂಡು ಆಹಾರವನ್ನು ಇದು ತಣ್ಣಗಿರಿಸುತ್ತದೆ.

ಅಂಡರ್ ಗ್ರೌಂಡ್ ಪೈಪ್‌

ಅಂಡರ್ ಗ್ರೌಂಡ್ ಪೈಪ್‌

ಬೆಚ್ಚಗಿನ ಗಾಳಿಯು ಅಂಡರ್ ಗ್ರೌಂಡ್ ಪೈಪ್‌ನಲ್ಲಿ ಹಾದು ಹೋಗಲಿದ್ದು ಬಾಷ್ಪೀಕರಣ ಚೇಂಬರ್‌ನಲ್ಲಿ ಇರುವ ಒದ್ದೆ ಸುರುಳಿಯಾಕಾರದ ಪೈಪ್‌ಗೆ ಗಾಳಿಯನ್ನು ತಂಪಾಗಿರಿಸುತ್ತದೆ. ಪೈಪ್‌ನಲ್ಲಿರುವ ತೇವಾಂಶದಿಂದಾಗಿ ಒಳಭಾಗದಲ್ಲಿರುವ ನೀರು ಬಾಷ್ಪೀಕರಣ ಕ್ರಿಯೆಯಿಂದ ತಂಪಾಗಿಸುತ್ತದೆ.

ಆಹಾರವು ತಾಜಾ

ಆಹಾರವು ತಾಜಾ

ಈ ತಂಪಾದ ಗಾಳಿಯು ರೆಫ್ರಿಜರೇಟರ್‌ನ ತಂಪು ವಿಭಾಗದಲ್ಲಿ ಇರುತ್ತದೆ. ಉಷ್ಣತೆಯನ್ನು 40 ಫ್ಯಾರನ್ ಹೀಟ್‌ನಲ್ಲಿ ಇರಿಸಬಹುದಾಗಿದ್ದು ಆಹಾರವು ತಾಜಾ ಆಗಿರುತ್ತದೆ. ಆಹಾರವನ್ನು ತಾಜಾ ಆಗಿರಿಸಲು ಅಗತ್ಯವಾಗಿರುವ ಹೆಚ್ಚು ತಾಪಮಾನ ಇದಾಗಿದೆ.

ಪ್ರಥಮ ಬಹುಮಾನ

ಪ್ರಥಮ ಬಹುಮಾನ

ಈ ವಿನ್ಯಾಸವು ಗ್ಲೋಬಲ್ ಬಯೋಮಿಮಿಕ್ರಿ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನವನ್ನು ಪಡೆದುಕೊಂಡಿದ್ದು, ವಿಶ್ವದ ವಿದ್ಯುತ್ ಅಭಾವ ಇರುವ ಪ್ರಾಂತ್ಯಗಳಲ್ಲಿ ಕಮಾಲನ್ನೇ ಉಂಟುಮಾಡಲಿದೆ ಎಂಬುದಾಗಿ ನಂಬಲಾಗಿದೆ.

Most Read Articles
Best Mobiles in India

English summary
There are countless portable refrigerators available in the market, but most of them focus on keeping the cold inside with insulation and minimum exposure.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X