Subscribe to Gizbot

ಪ್ರೀತಿಪಾತ್ರರಿಗಾಗಿ ಅತ್ಯಮೂಲ್ಯ ಗ್ಯಾಜೆಟ್ ಕೊಡುಗೆಗಳು

Written By:

ನಿಮ್ಮ ಪ್ರೀತಿಪಾತ್ರರಿಗೆ ಉತ್ತಮವಾದ ಕೊಡುಗೆಯನ್ನು ಆರಿಸುವುದು ಬಹು ಪ್ರಯಾಸದ ಕೆಲಸವಾಗಿದೆ. ಅವರಿಷ್ಟದ ವಸ್ತುವನ್ನೇ ನೀವು ಖರೀದಿ ಮಾಡಬೇಕಾಗುತ್ತದೆ ಮತ್ತು ನೀವು ಕೊಟ್ಟ ವಸ್ತು ಅವರಿಗೆ ಪ್ರಿಯವಾಗುವುದೂ ಅಂತೆಯೇ ನಿಮ್ಮ ನೆನಪನ್ನು ಅವರಲ್ಲಿ ಒಳಗೊಳ್ಳುವಂತೆ ಮಾಡುವುದು ಅತೀ ಮುಖ್ಯವಾಗಿದೆ.

ಓದಿರಿ: ಪ್ರಪಂಚದ ಸ್ಲಿಮ್ ಫೋನ್‌ಗಳತ್ತ ಒಂದು ನೋಟ

ಇಂತಹುದೇ ಅತಿವಿಶೇಷ ಗ್ಯಾಜೆಟ್ ಗಿಫ್ಟ್‌ನೊಂದಿಗೆ ನಾವು ಬಂದಿದ್ದು ಟೆಕ್ ಲೋಕವನ್ನು ಮೆಚ್ಚುವವರಿಗೆ ಈ ಕೊಡುಗೆ ಪ್ರಿಯವಾಗುವುದು ಖಂಡಿತ. ಫೋಟೋಗ್ರಫಿಗೆ ಸಂಬಂಧಿಸಿದ ಗ್ಯಾಜೆಟ್ ಕೊಡುಗೆಗಳು ಇವುಗಳಾಗಿದ್ದು ಕೆಳಗಿನ ಸ್ಲೈಡರ್‌ಗಳಲ್ಲಿ ಅದೇನು ಎಂಬುದನ್ನು ನೋಡೋಣ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಕ್ಯಾಮೆರಾ ಲೆನ್ಸ್

ಕ್ಯಾಮೆರಾ ಲೆನ್ಸ್ ಫೋಕಸ್ ಕಫ್

ಈ ಲೆನ್ಸ್ ಅನ್ನು ನಿಮ್ಮ ಕೈಗೆ ಆಭರಣದಂತೆ ತೊಟ್ಟುಕೊಳ್ಳಬಹುದಾಗಿದೆ.

ಕಾಫಿ ಟೇಬಲ್

ಫೋಟೋ ಆಲ್ಬಮ್ ಕಾಫಿ ಟೇಬಲ್

ನೋಟಕ್ಕೆ ಫೋಟೋ ಆಲ್ಬಮ್‌ನಂತೆ ಕಾಣುತ್ತಿರುವ ಇದು ಕಾಫಿ ಟೇಬಲ್ ಆಗಿದೆ.

ಫೋನ್ ಲೆನ್ಸ್

ಕ್ಯಾಮೆರಾ ಫೋನ್ ಲೆನ್ಸ್

ಈ ಲೆನ್ಸ್ ಅನ್ನು ನಿಮ್ಮ ಫೋನ್‌ಗೆ ಅಟ್ಯಾಚ್ ಮಾಡಿ ನಿಮ್ಮ ಫೋಟೋ ಹವ್ಯಾಸವನ್ನು ಆರಂಭಿಸಿ. ಇದು ಶೇಕ್ ಫ್ರಿಯಾಗಿದ್ದು ಉತ್ತಮ ಚಿತ್ರಗಳನ್ನು ನಿಮಗೆ ಒದಗಿಸುವುದು ಖಂಡಿತ.

ಕ್ಯಾಮೆರಾ ಲೆನ್ಸ್ ಮಗ್

ಕ್ಯಾಮೆರಾ ಲೆನ್ಸ್ ಮಗ್

ಇದು ಕ್ಯಾಮೆರಾ ಲೆನ್ಸ್ ಆಗಿದ್ದರೂ ಕಾಫಿ ಮಗ್ಗಾಗಿದೆ. ನಿಮ್ಮ ಕೊಡುಗೆ ಅದ್ಭುತ ಎಂದೆನಿಸುವುದರಲ್ಲಿ ಸಂಶಯವೇ ಇಲ್ಲ.

ಯುಎಸ್‌ಬಿ ಡ್ರೈವ್

ಕ್ಯಾಮೆರಾ ಯುಎಸ್‌ಬಿ ಡ್ರೈವ್

ನೈಜ ಡಿಎಸ್‌ಎಲ್‌ಆರ್‌ನಂತೆ ಕಾಣುವ ಕ್ಯಾಮೆರಾ ದೇಹರಚನೆ ಹೊಂದಿರುವ ಈ ಯುಎಸ್‌ಬಿ ಡ್ರೈವ್‌ಗಳು ಕೊಡುಗೆಗೆ ಅತ್ಯಂತ ಸೂಕ್ತ ಎಂದಿನಿಸಿವೆ.

ರಿಮೂವೇಬಲ್ ಲೆನ್ಸ್ ಹೂಡ್ಸ್

ಮಿನಿ ಮಾಡೆಲ್ ಕ್ಯಾಮೆರಾ

ಈ ಮಿನಿ ಕ್ಯಾಮೆರಾಗಳು ಬಟನ್, ಸ್ಕ್ರೀನ್, ಸ್ವಿಚ್ ಅನ್ನು ಒಳಗೊಂಡಿದ್ದು ರಿಮೂವೇಬಲ್ ಲೆನ್ಸ್ ಹೂಡ್ಸ್ ಅನ್ನು ಪಡೆದುಕೊಂಡಿದೆ.

ಬ್ರಾಸ್‌ಲೆಟ್‌

ಲೆನ್ಸ್ ಬ್ರಾಸ್‌ಲೆಟ್

ಈ ಮೃದುವಾದ ಬ್ರಾಸ್‌ಲೆಟ್‌ಗಳು ನಿಜಕ್ಕೂ ಅಪೂರ್ವ ಎಂದೆನಿಸಿವೆ.

ಕ್ಯಾಮೆರಾ ಕ್ಯೂಬ್

ಲೆವೆಲ್ ಕ್ಯಾಮೆರಾ ಕ್ಯೂಬ್

ಉತ್ತಮ ಫೋಟೋ ತೆಗೆಯಲು ಈ ಕ್ಯೂಬ್ ಸಹಕಾರಿ ಎಂದೆನಿಸಿದೆ.

ಕ್ಲಾಕ್ ಬ್ಯಾಗ್

ಕ್ಲಾಕ್ ಬ್ಯಾಗ್

ಫೋಟೋ ತೆಗೆಯುವಾಗ ಕ್ಯಾಮೆರಾದ ಸುರಕ್ಷತೆಯನ್ನು ಈ ಕ್ಲಾಕ್ ಬ್ಯಾಗ್ ಮಾಡುತ್ತದೆ.

ಕ್ಯಾಮೆರಾ ಸ್ಟ್ರಾಪ್

ಸೋಲಾರ್ ಪವರ್ ಉಳ್ಳ ಕ್ಯಾಮೆರಾ ಸ್ಟ್ರಾಪ್

ಈ ಕ್ಯಾಮೆರಾ ಸ್ಟ್ರಾಪ್ ಬ್ಯಾಟರಿ ಸಮಸ್ಯೆಯನ್ನು ದೂರ ಮಾಡಿ ನಿಮಗೆ ಉತ್ತಮ ಫೋಟೋ ತೆಗೆಯಲು ಅನುಕೂಲವನ್ನು ಒದಗಿಸುತ್ತದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
A good way to start is probably by trying to remember what that person likes doing, what his passion and hobbies are. Today, when almost everyone has a DSLR, and you probably can’t go wrong with a gift related to photography.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot