Subscribe to Gizbot

ಆನ್‌ಲೈನಿನಲ್ಲಿ ರೂ.10 ಹೊಸ ನೋಟಿನದ್ದೇ ಸದ್ದು..!

Written By:

ದೇಶದಲ್ಲಿ ಹಳೇ ಕರೆಸ್ಸಿ ನೋಟಿನ ಜಾಗಕ್ಕೆ ಹೊಸ ಮಾದರಿಯ ನೋಟುಗಳು ಕಾಣಿಸಿಕೊಳ್ಳಲು ಶುರು ಆಗಿದೆ. ರೂ.2000ದ ನೋಟು, ರೂ.500ರ ಹೊಸ ನೋಟು ಮೊದಲಿಗೆ ಬಂದಿತ್ತು. ಇದಾದ ನಂತರದಲ್ಲಿ ಮೊದಲ ಬಾರಿಗೆ ರೂ.200 ಹೊಸ ನೋಟು ಕಾಣಿಸಿಕೊಂಡಿತ್ತು. ನಂತರದಲ್ಲಿ ರೂ.50ರ ಹೊಸ ನೋಟನ್ನು ಭಾರತೀಯ ರಿಸರ್ವ್‌ ಬ್ಯಾಂಕ್‌ ಪರಿಚಯ ಮಾಡಿತ್ತು. ಈಗ ಮತ್ತೊಂದು ಹೊಸ ನೋಟು ಕಾಣಿಸಿಕೊಂಡಿದ್ದು, ಆನ್‌ಲೈನಿನಲ್ಲಿ ಸಖತ್ ಸದ್ದು ಮಾಡುತ್ತಿದೆ.

ಆನ್‌ಲೈನಿನಲ್ಲಿ ರೂ.10 ಹೊಸ ನೋಟಿನದ್ದೇ ಸದ್ದು..!

ಓದಿರಿ: ಜಿಯೋ ಸುನಾಮಿ ಆಫರ್: ಹೆಚ್ಚು ವ್ಯಾಲಿಡಿಟಿ - 50% ಹೆಚ್ಚು ಡೇಟಾ - ರೂ.50 ಕಡಿತ...!

ಭಾರತೀಯ ರಿಸರ್ವ್‌ ಬ್ಯಾಂಕ್‌ (ಆರ್‌ಬಿಐ) 10 ರೂ. ಮುಖಬೆಲೆಯ ನೂತನ ನೋಟನ್ನು ಬಿಡುಗಡೆ ಮಾಡಿದ್ದು, ಜನರು ಹೆಚ್ಚಿನ ಆಸಕ್ತಿಯಿಂದ ಈ ಹೊಸ ನೋಟನ್ನು ಆನ್‌ಲೈನಿನಲ್ಲಿ ಹುಡುಕುತ್ತಿದ್ದಾರೆ ಎನ್ನಲಾಗಿದೆ. ಈ ಹಿನ್ನಲೆಯಲ್ಲಿ ರೂ.10 ಹೊಸ ನೋಟಿನ ಮಾಹಿತಿ ಇಲ್ಲಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಚಿಕ್ಕದಾದ ಚೊಕ್ಕ ನೋಟು:

ಚಿಕ್ಕದಾದ ಚೊಕ್ಕ ನೋಟು:

ರೂ.10 ಹೊಸ ನೋಟು ಪ್ರಸಕ್ತ ಚಾಲ್ತಿಯಲ್ಲಿರುವ ನೋಟಿನ ಅದೇ ಉದ್ದ ಹೊಂದಿದ್ದರೂ ಅಗಲ ಮಾತ್ರ ಕೊಂಚ ಕಡಿಮೆಯಾಗಿದೆ. ಮಹಾತ್ಮ ಗಾಂಧಿ ಸರಣಿಯ ಚಾಕಲೇಟ್ ಕಂದು ಬಣ್ಣದ ಈ ಹೊಸ ನೋಟುಗಳನ್ನು ಈಗಾಗಲೇ ಭಾರತೀಯ ರಿಸರ್ವ್ ಬ್ಯಾಂಕ್ ಮುದ್ರಿಸಿದೆ. ಹೊಸ ಬಣ್ಣದ ಬಗ್ಗೆ ಟ್ವಿಟರ್‌ನಲ್ಲಿ ಚರ್ಚೆ ಜೋರಾಗಿ ನಡೆಯುತ್ತಿದೆ.

ಸೂರ್ಯ ದೇವಾಲಯ:

ಸೂರ್ಯ ದೇವಾಲಯ:

ರೂ.10 ಹೊಸ ನೋಟಿನಲ್ಲಿ ಬಣ್ಣ ಹಾಗೂ ವಿನ್ಯಾಸದೊಂದಿಗೆ ಒಡಿಶಾದ ಕೋನರ್ಕ್ ಸೂರ್ಯ ದೇವಾಲಯದ ಚಿತ್ರವನ್ನು ಕಾಣಬಹುದು. ಹಳೇ ನೋಟಿನಲ್ಲಿ ಆನೆ, ಹುಲಿ ಹಾಗೂ ಘೇಂಡಾಮೃಗದ ಚಿತ್ರವಿದೆ. ಹೊಸ ನೋಟುಗಳಲ್ಲಿ ಎರಡೂ ನಂಬರ್ ಪ್ಯಾನೆಲ್‍ನಲ್ಲಿ ಎಲ್ ಅಕ್ಷರ ಹಾಗೂ ಊರ್ಜಿತ್ ಪಟೇಲ್ ಅವರ ಹಸ್ತಾಕ್ಷರವಿರಲಿದೆ.

2 ನಿಮಿಷದಲ್ಲಿ Aadhaar-ಮೊಬೈಲ್ ಲಿಂಕ್ ಮಾಡುವುದು ಹೇಗೆ..? ಸಿಂಪಲ್ ಟಿಪ್ಸ್..!
ಹಳೇ ನೋಟುಗಳು ಇರಲಿದೆ:

ಹಳೇ ನೋಟುಗಳು ಇರಲಿದೆ:

ಹೊಸದಾಗಿ ಬಿಡುಗಡೆಯಾಗುವ ಹೊಸ 10 ರೂ. ಮುಖಬೆಲೆಯ ನೋಟುಗಳೊಂದಿಗೆ ಹಳೇಯ ಹೊಸ ನೋಟುಗಳು ಚಲಾವಣೆಯಲ್ಲಿರಲಿವೆ ಎಂದು ಆರ್‌ಬಿಐ ಹೇಳಿದೆ. ಕೇಂದ್ರ ಸರಕಾರ ನೂತನವಾಗಿ ಬಿಡುಗಡೆಗೊಳಿಸಿದ ನೋಟುಗಳ ವಿನ್ಯಾಸ ಮತ್ತು ಬಣ್ಣವನ್ನು ಬದಲಿಸಿ ಹೆಚ್ಚಿನ ಭದ್ರತೆಯೊಂದಿಗೆ ಚಲಾವಣೆಗೆ ತರುತ್ತಿವೆ ಎನ್ನಲಾಗಿದೆ. ಹೊಸ ಬಣ್ಣದ ನೋಟಿಗೆ ಹಲವರು ಟೀಕೆ ಮಾಡಿದರೆ ಇನ್ನು ಕೆಲವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
New Rs. 10 Currency Notes Introduced, In Chocolate Brown Colour. to know more visit kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot