Subscribe to Gizbot

ಕಣ್ಣಿನ ಪರೀಕ್ಷೆ ಇನ್ನು ಸ್ಮಾರ್ಟ್‌ಫೋನ್‌ನಲ್ಲಿ

Written By:

ಹೊಸ ಅನ್ವೇಷಣೆಗಾಗಿ ಹಣ ಸಂಗ್ರಹಿಸುವುದಕ್ಕೆ ಕ್ರೌಡ್ ಫಂಡಿಂಗ್ ಕ್ಯಾಂಪೈನ್ ಅನ್ನು ಲಾಂಚ್ ಮಾಡಿದ್ದು ಸ್ಮಾರ್ಟ್‌ಫೋನ್ ಆಧಾರಿತ ಪೋರ್ಟೇಬಲ್ ಕಣ್ಣು ಪರೀಕ್ಷಾ ಕಿಟ್ ಈ ದಿಸೆಯಲ್ಲಿ ಕಾರ್ಯನಿರ್ವಹಿಸುತ್ತಿದೆ.

ಇದನ್ನೂ ಓದಿ: ಹೊಟ್ಟೆಕಿಚ್ಚು ಉಂಟುಮಾಡುವ ಐಫೋನ್ ಆಪ್ಸ್‌ಗಳಿವು

ಪೀಕ್ ಸ್ಮಾರ್ಟ್‌ಫೋನ್ ಅಪ್ಲಿಕೇಶನ್ ಆಗಿದ್ದು ವೃತ್ತಿಪರ ಕಣ್ಣು ಪರೀಕ್ಷೆಯನ್ನು ಜಗತ್ತಿನ ಯಾವ ಕಡೆ ಬೇಕಾದರೂ ಇದು ಸಕ್ರಿಯಗೊಳಿಸುತ್ತದೆ. ನೇತ್ರ ತಜ್ಞರು ಇದನ್ನು ಅಭಿವೃದ್ಧಿಪಡಿಸಿದ್ದು ಇದನ್ನು ಜಗತ್ತಿನಾದ್ಯಂತ ಉತ್ತಮ ಗುಣಮಟ್ಟದ ಕಣ್ಣು ಪರಿಶೀಲನಾ ಕಿಟ್ ಅನ್ನಾಗಿ ರೂಪುಗೊಳಿಸುವ ನಿಟ್ಟಿನಲ್ಲಿದೆ.

ಕಣ್ಣು ಪರೀಕ್ಷೆಗಾಗಿ ಫೋನ್‌ನಲ್ಲಿ ಹೊಸ ಆಪ್ಸ್

ಹೈಜೀನ್ ಮತ್ತು ಟ್ರಾಪಿಕಲ್ ಮೆಡಿಸಿನ್ ಸ್ಕೂಲ್ ಲಂಡನ್ ನಡುವಿನ ಸಮ್ಮಿಶ್ರಣದಲ್ಲಿ ಈ ಪರಿಕರವನ್ನು ಅಭಿವೃದ್ಧಿಪಡಿಸಿದ್ದು ಕಣ್ಣಿನ ಒಳಭಾಗದ ಚಿತ್ರವನ್ನು ಇದು ತೆಗೆದು ಕಣ್ಣಿನ ಪರೀಕ್ಷೆಗಾಗಿ ತಜ್ಞರಿಗೆ ಕಳುಹಿಸುವ ಅನುಕೂಲವನ್ನು ಇದು ಹೊಂದಿದೆ. ಜಗತ್ತಿನ ಯಾವ ಭಾಗದಲ್ಲಿ ಬೇಕಾದರೂ ಇದನ್ನು ಬಳಸಿಕೊಂಡು ಅತ್ಯುನ್ನತ ಕ್ಯಾಮೆರಾ ಮಾಡುವ ಕೆಲಸವನ್ನು ಮಾಡಬಹುದಾಗಿದೆ.

ಈ ಕಿಟ್ ಪ್ರಸ್ತುತ ಸ್ಯಾಮ್‌ಸಂಗ್ ಎಸ್‌3 ಯಲ್ಲಿ ಮಾತ್ರವೇ ಕಾರ್ಯನಿರ್ವಹಿಸುತ್ತಿದ್ದು ಇದನ್ನು ವಿಶ್ವಕ್ಕೆ ಅರಿಯುವಂತೆ ಮಾಡಲು ದುಡ್ಡಿನ ಅಗತ್ಯವಿದೆ. ಇದು ಎಫ್‌ಡಿಎ ಅನುಮೋದನೆಯನ್ನು ಪಡೆದುಕೊಂಡಿಲ್ಲದ ಕಾರಣ ಇದನ್ನು ಯುಎಸ್‌ಗೆ ಕಳುಹಿಸುವುದು ಕೂಡ ಅಸಾಧ್ಯವಾಗಿದೆ.

English summary
This article tells about The team behind a smartphone-based portable eye examination kit have just launched a crowdfunding campaign to raise money for new innovation.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot