Nothing Phone: ನಥಿಂಗ್ ಫೋನ್ (2a) ಹೇಗಿರಲಿದೆ ಗೊತ್ತಾ? ಟೀಸರ್‌ನಲ್ಲಿ ಕಂಡುಬಂದಿದ್ದೇನು?
ನಥಿಂಗ್ (Nothing) ತನ್ನದೇ ಆದ ಭಿನ್ನ ಶೈಲಿಯ ಸ್ಮಾರ್ಟ್‌ಫೋನ್‌ಗಳ ಮೂಲಕ ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ ಸಂಚಲನ ಉಂಟು ಮಾಡಿದೆ. ಈ ನಡುವೆ ಅನಾವರಣ ಆಗುವ ಮುನ್ನವೇ ಜಾಗತಿಕವಾಗಿ ಬಹಳ ಸೌಂಡ್ ಮಾಡುತ್ತಿರುವ ನಥಿಂಗ್ ಫೋನ್ (2a) (Nothing Phone 2a) ಬಗ್ಗೆ ಕೆಲವು ಮಾಹಿತಿ ಈಗಾಗಲೇ ಲೀಕ್ ಆಗಿವೆ.
ಹೌದು, ನಥಿಂಗ್ ಫೋನ್ (2a) ಫೋನ್ ಖರೀದಿ ಮಾಡಲು ಗ್ರಾಹಕರು ತುದಿಗಾಲಲ್ಲಿ ನಿಂತಿದ್ದಾರೆ. ಈ ಫೋನ್ ಈಗಾಗಲೇ ಸಾಕಷ್ಟು ಕ್ರೇಜ್ ಉಂಟು ಮಾಡಿದ್ದು, ವಿಶೇಷ ಫೀಚರ್ಸ್ ಹೊಂದಿರಲಿದೆ ಎಂದು ಹೇಳಲಾಗಿದೆ. ಆದರೆ ಈಗ ನಥಿಂಗ್ ಶೇರ್ ಮಾಡಿದ ಟೀಸರ್‌ನಲ್ಲಿ ಮತ್ತೊಂದು ವಿಶೇಷ ಮಾಹಿತಿ ಅಧಿಕೃತವಾಗಿ ತಿಳಿದುಬಂದಿದೆ. ಹಾಗಿದ್ರೆ, ಈ ಫೋನ್‌ನ ನಿರೀಕ್ಷಿತ ಫೀಚರ್ಸ್ ಏನು?, ಇದು ಹೇಗಿರಲಿದೆ ಎಂಬ ಮಾಹಿತಿ ಇಲ್ಲಿದೆ ನೋಡಿ.

ನಥಿಂಗ್ ಫೋನ್ (2a): ನಥಿಂಗ್ ಫೋನ್ (2a) ಜಾಗತಿಕವಾಗಿ ಮತ್ತು ಭಾರತದಲ್ಲಿ ಮಾರ್ಚ್ 5 ರಂದು ಲಾಂಚ್ ಆಗುತ್ತಿದೆ. ನಥಿಂಗ್ ನಿಂದ ಹೆಚ್ಚು ನಿರೀಕ್ಷಿತ ಸ್ಮಾರ್ಟ್‌ಫೋನ್ ಆಗಿ ಇದು ಗುರುತಿಸಿಕೊಂಡಿದೆ. ಅಲ್ಲದೆ ಬೆಲೆ ಸಹ ಕಡಿಮೆ ಇರಬಹುದು ಎಂದು ಹೇಳಲಾಗಿದೆ. ಇದರ ವಿನ್ಯಾಸವು ಇತ್ತೀಚಿನ ಸೋರಿಕೆಯಾದ ರೆಂಡರ್‌ಗಳಲ್ಲಿ ಬಹಿರಂಗಪಡಿಸಿದಂತೆಯೇ ಇದೆ. ಇದು ನಥಿಂಗ್ ಫೋನ್ (2) ನಂತಹ ಟ್ರಾನ್ಫರೆಂಟ್ ಬಾಡಿಯನ್ನು ಹೊಂದಿದ್ದು, ಸೀಮಿತ ಗ್ಲಿಫ್ ಇಂಟರ್ಫೇಸ್ (Glyph interface) ಅನ್ನು ಹೊಂದಿರಲಿದೆ ಎಂದು ಈ ಟೀಸರ್ ಮೂಲಕ ತಿಳಿದುಬಂದಿದೆ.
ಇನ್ನು ರಿಯರ್ ಕ್ಯಾಮೆರಾ ಲೆನ್ಸ್ ಸುತ್ತಲೂ ಮೂರು ಎಲ್ಇಡಿ ಲೈಟ್ಸ್ ಆಯ್ಕೆ ಇದ್ದು, ಡ್ಯುಯಲ್ ಕ್ಯಾಮೆರಾ ರಚನೆ ಪಡೆದಿದೆ ಅನ್ನೋದು ಟೀಸರ್ ಮೂಲಕ ಸ್ಪಷ್ಟವಾಗಿ ತಿಳಿಯಬಹುದಾಗಿದೆ. ರಿಯರ್ ಪ್ಯಾನಲ್ ಗ್ಲಿಫ್ ಇಂಟರ್ಫೇಸ್ ವಿನ್ಯಾಸ ಭಿನ್ನವಾಗಿದ್ದು, ಎಲ್ಇಡಿ ಲೈಟ್ಸ್‌ನ ಸೀಮಿತ ಬಳಕೆಯನ್ನು ಇದರಲ್ಲಿ ಕಾಣಬಹುದಾಗಿದೆ. ಈ ಮೂಲಕ ನಥಿಂಗ್ ಫೋನ್ (2) ನ ಹೆಚ್ಚು ಕೈಗೆಟುಕುವ ಆವೃತ್ತಿಯಾಗಲಿದೆ ಎಂದು ತೋರುತ್ತದೆ.
ಈ ಟೀಸರ್ ನಥಿಂಗ್ ಫೋನ್ (2a) ಬಿಳಿ ಬಣ್ಣದ ವೇರಿಯಂಟ್ ನಲ್ಲಿ ಲಭ್ಯ ಇರಲಿದೆ ಎಂದು ತೋರಿಸಿದೆ. ಅದಾಗ್ಯೂ ಈ ಫೋನ್ ಕಪ್ಪು ಬಣ್ಣದಲ್ಲಿಯೂ ಲಾಂಚ್ ಆಗುವ ಸಾಧ್ಯತೆ ಇದೆ ಎಂದು ವರದಿಗಳಿಂದ ತಿಳಿದುಬಂದಿದೆ. ಈ ಫೋನ್ ಸಮತಟ್ಟಾದ ಅಂಚುಗಳನ್ನು ಹೊಂದಿದ್ದು, ಡಿಸ್‌ಪ್ಲೇಯು ಪಂಚ್-ಹೋಲ್ ಆಯ್ಕೆ ಪಡೆದಂತೆ ತೋರುತ್ತಿದೆ. ಈ ನಡುವೆ ಕೆಲವು ವದಂತಿಗಳ ಪ್ರಕಾರ ಈ ಫೋನ್ ಏನೆಲ್ಲಾ ನಿರೀಕ್ಷಿತ ಫೀಚರ್ಸ್ ಪಡೆದಿರಲಿದೆ ಅನ್ನೋದನ್ನು ಗಮನಿಸೋಣ ಬನ್ನಿ.
ನಥಿಂಗ್ ಫೋನ್ (2a) 120Hz ರಿಫ್ರೆಶ್ ರೇಟ್ ಆಯ್ಕೆಯೊಂದಿಗೆ 6.7ಇಂಚಿನ FHD+ OLED ಡಿಸ್‌ಪ್ಲೇಯನ್ನು ಹೊಂದಿರಲಿದೆ ಎಂದು ನಿರೀಕ್ಷೆಯಿದೆ. ಜೊತೆಗೆ ಮೀಡಿಯಾ ಟೆಕ್ ಡೈಮೆನ್ಸಿಟಿ 7200 ಪ್ರೊ ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸಲಿದ್ದು, 50MP ಪ್ರಾಥಮಿಕ ಕ್ಯಾಮೆರಾ ಮತ್ತು 50MP ಅಲ್ಟ್ರಾ-ವೈಡ್ ಆಂಗಲ್ ಲೆನ್ಸ್ ಮತ್ತು 32MP ಸೆಲ್ಫಿ ಕ್ಯಾಮೆರಾವನ್ನು ಪಡೆಯಲಿದೆ ಎಂದು ತಿಳಿದುಬಂದಿದೆ.

ಇದರ ಜೊತೆಗೆ ನಥಿಂಗ್ ಫೋನ್ (2a) ಅಂಡ್ರಾಯ್ಡ್ 14 ಅನ್ನು ಆಧರಿಸಿದ ನಥಿಂಗ್ಓಎಸ್ 2.5 ಅನ್ನು ರನ್ ಮಾಡುತ್ತದೆ ಎನ್ನಲಾಗಿದೆ. ಇದರ ಜೊತೆಗೆ ಈ ಸ್ಮಾರ್ಟ್‌ಫೋನ್ 45W ವೇಗದ ಚಾರ್ಜಿಂಗ್ ಬೆಂಬಲದೊಂದಿಗೆ ಬರಲಿದೆ ಎಂದು ತಿಳಿದುಬಂದಿದೆ. ಹಾಗೆಯೇ ಈ ಫೋನ್ 4500 mAh ಸಾಮರ್ಥ್ಯದ ಬ್ಯಾಟರಿ ಆಯ್ಕೆ ಪಡೆಯಲಿದೆ ಎಂದೂ ಸಹ ಹೇಳಲಾಗಿದೆ. ಅದಾಗ್ಯೂ ಈ ಫೋನ್ ಲಾಂಚ್‌ಗೆ ದಿನಗಣನೆ ಆರಂಭ ಆಗಿದ್ದು, ನಿಖರ ಮಾಹಿತಿಗಾಗಿ ಮಾರ್ಚ್ 5 ರ ವರೆಗೆ ಕಾಯಬಹುದಾಗಿದೆ.


Click it and Unblock the Notifications








