ಹೊಸ ಆವಿಷ್ಕಾರಗಳಿಂದ ವಿಶ್ವದ ಗಮನ ಸೆಳೆದಿರುವ ಭಾರತದ ಯುವಕರು!

|

ವಿಶ್ವ ಟೆಕ್‌ ಕ್ಷೇತ್ರದಲ್ಲಿ ಮಹತ್ತರ ಬೆಳವಣಿಗೆಗಳನ್ನು ನಾವಿಂದು ಕಾಣುತ್ತಿದ್ದವೇ, ಇದರಲ್ಲಿ ಭಾರತದ ಪಾಲು ಇದೆ ಎನ್ನುವುದು ಹೆಮ್ಮೆಯ ವಿಷಯ. ಸದ್ಯ ದೇಶದ ಯುವಸಮೂಹ ಹೊಸ ತಂತ್ರಜ್ಞಾನದ ಆವಿಷ್ಕಾರಗಳನ್ನು ಅಭಿವೃದ್ಧಿ ಪಡಿಸುವತ್ತ ಹೆಚ್ಚಿನ ಒಲವನ್ನು ನೀಡುತ್ತಿದ್ದು, ಜನರ ದಿನನಿತ್ಯದ ಅಗತ್ಯ ತಂತ್ರಜ್ಞಾನಗಳನ್ನು ಆವಿಷ್ಕರಿಸುತ್ತಿದ್ದಾರೆ. ಆ ಪೈಕಿ ಆರು ಯುವಕರು ಈ ವರ್ಷ ಸದ್ದಿಲ್ಲದೇ ಸಾಧನೆ ಮಾಡಿದ್ದಾರೆ.

ಹೊಸ ಆವಿಷ್ಕಾರಗಳಿಂದ ವಿಶ್ವದ ಗಮನ ಸೆಳೆದಿರುವ ಭಾರತದ ಯುವಕರು!

ಹೌದು, ಭಾರತದ 21 ವರ್ಷ ವಯೋಮಾನದೊಳಗಿನ ಆರು ಯುವಕರು ಈ ವರ್ಷ್ (2019) ಟೆಕ್‌ ಜಗತ್ತಿಗೆ ತಮ್ಮ ನೂತನ ತಂತ್ರಜ್ಞಾನಗಳನ್ನು ಪರಿಚಯಿಸಿ ದೇಶದ ಕೀರ್ತಿಯನ್ನು ಹೆಚ್ಚಿಸಿದ್ದಾರೆ. ಈ ಯುವಕರು ಅಂಧರಿಗಾಗಿ ನ್ಯಾವಿಗೇಶನ್ ಕನ್ನಡಕ, ಮಿನಿ ಸ್ಯಾಟಲೈಟ್‌, ಜೇನುಗಳ ರಕ್ಷಣೆ, ಇಂಧನ ದಕ್ಷತೆಯ ಕಾರು, 3D ಪ್ರಿಂಟೆಡ್ ಸ್ಯಾನಿಟರಿ ಪ್ಯಾಡ್‌ ಮತ್ತು ಹಾರ್ಟ್‌ ಅಟ್ಯಾಕ್‌ ಪತ್ತೆ ಮಾಡುವ ತಂತ್ರಜ್ಞಾನಗಳ ಅಭಿವೃದ್ದಿ ಪಡಿಸಿದ್ದಾರೆ. ಹಾಗಾದರೇ ಆ ಯುವ ಟೆಕ್‌ ಸಾಧಕರ ಕಿರು ಪರಿಚಯವನ್ನು ಮುಂದೆ ನೋಡೋಣ ಬನ್ನಿರಿ.

ಓದಿರಿ : ಏರ್‌ಟೆಲ್‌ ಗ್ರಾಹಕರೇ 4G ಸಿಮ್‌ ಆಕ್ಟಿವ್‌ ಮಾಡಲು ಹೀಗೆ ಮಾಡಿ!

ಅಂಧರಿಗಾಗಿ ನ್ಯಾವಿಗೇಶನ್ ಕನ್ನಡಕ

ಅಂಧರಿಗಾಗಿ ನ್ಯಾವಿಗೇಶನ್ ಕನ್ನಡಕ

ಅರುಣಾಚಲ ಪ್ರದೇಶದ 'ಆನಂಗ್ ತಡಾರ್' (Anang Tadar) ಎಂಬ ಹನ್ನೊಂದನೇ ತರಗತಿ (PUC 1st) ಓದುತ್ತಿರುವ ಈ ವಿದ್ಯಾರ್ಥಿಯು ಅಂಧರಿಗಾಗಿ ನ್ನ್ಯಾವಿಗೇಶನ್ ಆಧಾರಿತ ಕನ್ನಡಕವನ್ನು ಶೋಧಿಸಿದ್ದಾನೆ. ಈ ಕನ್ನಡಕದಲ್ಲಿ ಎಥಲಾಜಿಕಲ್ ತಂತ್ರಜ್ಞಾನವನ್ನು ಬಳಸಲಾಗಿದ್ದು, ಸುಮಾರು ಎರಡು ಮೀಟರ್‌ ವ್ಯಾಪ್ತಿಯ ಸುತ್ತಲಿನ ಪ್ರದೇಶದ ಸನ್ನಿವೇಶಗಳ ಕುರಿತು ದಿವ್ಯಾಂಗರಿಗೆ ಮಾಹಿತಿ ಲಭ್ಯವಾಗಲಿದೆ. ಯುವಕನ ಈ ಶೋಧನೆಗಾಗಿ ಕಳೆದ ಮಾರ್ಚ್‌ನಲ್ಲಿ (2019) 'ದಿನನಾಥ್ ಪಾಂಡೆ ಸ್ಮಾರ್ಟ್ ಐಡಿಯಾ ಇನ್ನೋವೇಶನ್ ಪ್ರಶಸ್ತಿ' ಲಭ್ಯವಾಗಿದ್ದು, UNICEF ಸಂಸ್ಥೆಯು ಇದನ್ನು ಮಾರುಕಟ್ಟೆಗೆ ಪರಿಚಯಿಸಲು ಆಸಕ್ತಿ ತೋರಿಸಿದೆ.

ಜೇನುನೋಣಗಳ ಉಳಿವಿಗೆ ತಂತ್ರಜ್ಞಾನ

ಜೇನುನೋಣಗಳ ಉಳಿವಿಗೆ ತಂತ್ರಜ್ಞಾನ

ದೆಹಲಿ ಮೂಲದ ಹನ್ನೇರಡು ವರ್ಷದ ಕಾವ್ಯ ವಿಘ್ನೇಶ ಎಂಬ ತರುಣಿ ಜೇನುನೋಣಗಳ ಉಳಿವಿಗಾಗಿ ಹೊಸದೊಂದು ತಂತ್ರಜ್ಞಾನವನ್ನು ಪರಿಚಯಿಸಿದ್ದು, ಅದಕ್ಕೆ Lightnight McQueen ಎಂದು ಹೆಸರಿಸಿದ್ದಾಳೆ. ಅದಕ್ಕಾಗಿ ಲೆಗೊ ಮೈಂಡ್‌ಸ್ಟಾರ್ಮ್ಸ್ ಇವಿ 3 ರೊಬೊಟಿಕ್ಸ್ ಕಿಟ್ ಅನ್ನು ಅಭಿವೃದ್ಧಿ ಮಾಡಿರುವ ಈಕೆ ಜೇನುನೋಣಗಳು ನಮ್ಮ ಆಹಾರ ಸರವಳಿ ಕ್ರಮಕ್ಕೆ ಅಗತ್ಯ ಹೀಗಾಗಿ ಜೇನುಗಳು ಉಳಿಯಬೇಕು ಎಂದಿದ್ದಾಳೆ. ಮೇ-2019 ತಿಂಗಳಿನಲ್ಲಿ ಯುರೋಪ್‌ ರೋಬೋಟಿಕ್ಸ್‍ ಸ್ಪರ್ಧೆಯಲ್ಲಿ ಪ್ರಶಸ್ತಿ ಪಡೆದಿದ್ದಾಳೆ.

ಓದಿರಿ : ಯೂಟ್ಯೂಬ್‌ ಮೂಲಕ ಹಣಗಳಿಸಬಹುದು!..ಹೇಗೆ ಅಂತೀರಾ?

ವಿಶ್ವದ ಚಿಕ್ಕ ಸ್ಯಾಟ್‌ಲೈಟ್‌

ವಿಶ್ವದ ಚಿಕ್ಕ ಸ್ಯಾಟ್‌ಲೈಟ್‌

ತಮಿಳುನಾಡಿನ ಕನ್ನೂರು ಪ್ರದೇಶದ ಹದಿನೆಂಟು ವರ್ಷದ ರಫಿತ್‌ ಶಾರೂಖ್ ಎಂಬ ಯುವಕ ಚಿಕ್ಕ ಸ್ಯಾಟ್‌ಲೈಟ್‌ ನಿರ್ಮಿಸಿ ವಿಶ್ವದ ನಾಸಾದ ಗಮನ ಸೆಳೆದಿದ್ದಾನೆ. ಇತ್ತೀಚಿಗೆ ನಾಸಾ ಕಳುಹಿಸಿದ 3D ಸ್ಯಾಟ್‌ಲೈಟ್‌ನ ಉಡಾವಣೆ ಮಾಡಿದೆ. ಈ ಯುವಕ ಕಳೆದ ಜೂನ್‌ನಲ್ಲಿ ನಿರ್ಮಿಸಿದ ಪುಟಾಣಿ ಸ್ಯಾಟ್‌ಲೈಟ್‌ ಈಗ ವಿಶ್ವ ಚಿಕ್ಕ ಸ್ಯಾಟ್‌ಲೈಟ್‌ ಖ್ಯಾತಿ ಪಡೆದಿದ್ದು, ಅದರ ತೂಕ 64ಗ್ರಾಂಗಳು ಮಾತ್ರ. ಎಪಿಜೆ ಅಬ್ದುಲ್ ಕಲಾಮ್‌ ನೆನಪಿಗಾಗಿ ಯುವಕ ಸ್ಯಾಟ್‌ಲೈಟ್‌ಗೆ KalamSat ಎಂದು ಹೆಸರಿದ್ದಾನೆ.

ಹೆಚ್ಚು ಮೈಲೇಜ್‌ ನೀಡುವ ವಾಹನ

ಹೆಚ್ಚು ಮೈಲೇಜ್‌ ನೀಡುವ ವಾಹನ

ದೆಹಲಿಯ ಇಂದಿರಾಗಾಂಧಿ ಟೆಕ್ನಿಕಲ್ ಯುನಿವರ್ಸಿಟಿಯ 15 ಯುವತಿರ ತಂಡ ಶಕ್ತಿಯುತ ದಕ್ಷ ವಾಹನ (energy-efficient vehicle) ನಿರ್ಮಿಸಿ ಸಿಂಗಪೂರ್‌ದಲ್ಲಿ ನಡೆದ ಶೆಲ್‌ ಇಕೋ ಮ್ಯಾರಥನ್‌ ಗೌರವಕ್ಕೆ ಪಾತ್ರರಾಗಿದ್ದಾರೆ. ಈ ಎಲ್ಲ ಯುವತಿಯರು 18 ರಿಂದ 21 ವರ್ಷದೊಳಗೆ ಇದ್ದು, ಮೂರು ಚಕ್ರದ ದಕ್ಷ ವಾಹನವನ್ನು ತಯಾರಿಸಿದ್ದಾರೆ ಅದಕ್ಕೆ ಐರಿಸ್‌ 2.0 ಎಂದು ಕರೆದಿದ್ದಾರೆ. 300ಕೀ.ಮೀ ಮೈಲೇಜ್‌ ನೀಡಲಿದೆ ಎಂದಿದ್ದಾರೆ. ಈ ಸಾಧನೆಗಾಗಿ ಪ್ರಶಸ್ತಿಗೂ ಭಾಜನರಾಗಿದ್ದಾರೆ.

ಓದಿರಿ : ಒರೈಮೊದ ಹೊಸ 10,000mAh ಪವರ್‌ಬ್ಯಾಂಕ್ ಲಾಂಚ್!.ಫಾಸ್ಟ್‌ ಚಾರ್ಜಿಂಗ್ ಸೌಲಭ್ಯವಿದೆ!

ಮೈನರ್‌ ಹಾರ್ಟ್‌ ಅಟ್ಯಾಕ್‌ ಪತ್ತೆಮಾಡುವ ಟೆಕ್ನಾಲಜಿ

ಮೈನರ್‌ ಹಾರ್ಟ್‌ ಅಟ್ಯಾಕ್‌ ಪತ್ತೆಮಾಡುವ ಟೆಕ್ನಾಲಜಿ

ಸ್ಕಿನ್‌ ಪಾಥ್‌ ತಂತ್ರಜ್ಞಾನದಿಂದ ಮೈನರ್ ಹಾರ್ಟ್‌ ಅಟ್ಯಾಕ್‌ ಅನ್ನು ಗುರುತಿಸುವ ಟೆಕ್ನಾಲಜಿಯನ್ನು ತಮಿಳುನಾಡಿನ ಹತ್ತನೇ ತರಗತಿಯಲ್ಲಿ ಓದುತ್ತಿರುವ ಆಕಾಶ ಮನೋಜ್ ಎಂಬ ಯುವಕ ಅಭಿವೃದ್ಧಿ ಪಡಿಸಿದ್ದಾನೆ. ಈ ಸ್ಕಿನ್‌ ಪಾಥ್‌ ಡಿವೈಸ್‌ ಅನ್ನು ವ್ಯಕ್ತಿಯ ಕಿವಿಗೆ ಮತ್ತು ಮುಂಗೈಗೆ ಹಾಕುವು ಮೂಲಕ ಮೈನರ್‌ ಹಾರ್ಟ್‌ ಅಟ್ಯಾಕ್‌ ಬಗ್ಗೆ ಪತ್ತೆ ಮಾಡಬಹುದಾಗಿದೆ. ಇತ್ತೀಚಿಗೆ ರಾಷ್ಟ್ರಪತಿ ಭವನದಲ್ಲಿ ನಡೆದ ಇನ್ನೊವೇಶನ್‌ ಸ್ಕಾಲರ್‌ನಲ್ಲಿ ಭಾಗವಹಿಸಿದ್ದನು.

3D ಸ್ಯಾನಿಟರಿ ನ್ಯಾಪ್‌ಕಿನ್‌ ವಿತರಕ ಯಂತ್ರ

3D ಸ್ಯಾನಿಟರಿ ನ್ಯಾಪ್‌ಕಿನ್‌ ವಿತರಕ ಯಂತ್ರ

ಮುಂಬೈ ನಗರದ ಕ್ಯಾಥೆಡ್ರಲ್ ಮತ್ತು ಜಾನ್ ಕಾನನ್ ಶಾಲೆಯ ಹನ್ನೇರಡನೇ ತರಗತಿಯ ಮೂವರು ಯುವತಿಯರು ಕಳೆದ ಏಪ್ರಿಲ್-2019ರಲ್ಲಿ 3D ಸ್ಯಾನಿಟರಿ ನ್ಯಾಪ್‌ಕಿನ್‌ ವಿತರಕ ಯಂತ್ರವನ್ನು ಅವರ ಶಾಲೆಗಾಗಿ ತಯಾರಿಸಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ದೇವಿಕಾ ಮಲ್ಹೋತ್ರಾ, ಮಾಲಿನಿ ದಾಸ್‌ಗುಪ್ತಾ, ಮತ್ತು ಅದಿತಿ ಆರ್ಯ ಯುವತಿಯರು ಕ್ವಾಯಿಲ್ ಮತ್ತು ಲೈಟ್‌ ಸೆನ್ಸಾರ್‌ ಬಳಸಿ ಈ ಯಂತ್ರವನ್ನು ಅಭಿವೃದ್ಧಿ ಮಾಡಿದ್ದಾರೆ. ಈ ಉತ್ಪನ್ನವು NGO ಮೂಲಕ ಮಹಿಳೆಯರಿಗೆ ತಲುಪಬೇಕು ಎನ್ನುವುದು ಅವರ ಆಶಯವಾಗಿದೆ.

ಓದಿರಿ : ಆಶ್ಚರ್ಯಕರ ಘಟನೆ!..ಕಳೆದುಹೋದ ಗಂಡ ಟಿಕ್‌ಟಾಕ್‌ ನೆರವಿನಿಂದ ಪತ್ತೆ!

Most Read Articles
Best Mobiles in India

English summary
Here’s a list of Indians under the age of 21, who have been silently working to ease our troubles with their inventions this year. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Gizbot sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Gizbot website. However, you can change your cookie settings at any time. Learn more