Subscribe to Gizbot

IPL ಆಗಿದೆ ಸ್ಮಾರ್ಟ್‌: ಇಲ್ಲಿದೆ ನೂತನ ತಂತ್ರಜ್ಞಾನ ಪ್ರಮುಖ ಅಂಶ..!!

Written By:

ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ IPL ಈಗಾಗಲೇ ಆರಂಭವಾಗಿದ್ದು, ಒಂದು ಮ್ಯಾಚ್ ಆಗಲೇ ಮುಗಿದಿದೆ. ಈಗಾಗಲೇ ಕಳೆದ 10 ಸೀಸನ್ ಗಳಲ್ಲಿ IPL ಸೂಪರ್ ಹಿಟ್ ಆಗಿದ್ದು, ಕ್ರಿಕೆಟ್ ಅಭಿಮಾನಿಗಳಿಗೆ ಭರಪೂರ ಮನರಂಜನೆ ನೀಡಿದೆ. ಅಲ್ಲದೇ ಮುಂದೆಯೂ ನೀಡಲಿದೆ. ಕ್ರಿಕೆಟ್ ಭಾರತೀಯ ಉಸಿರು ಎಂದರೆ ತಪ್ಪಾಗುವುದಿಲ್ಲ. ಈ ಹಿನ್ನಲೆಯಲ್ಲಿ ಪ್ರತಿ IPL ಹಲವು ಹೊಸತನಗಳಿಗೆ ಸಾಕ್ಷಿಯಾಗಲಿದೆ.

IPL ಆಗಿದೆ ಸ್ಮಾರ್ಟ್‌: ಇಲ್ಲಿದೆ ನೂತನ ತಂತ್ರಜ್ಞಾನ ಪ್ರಮುಖ ಅಂಶ..!!

ಈ ಬಾರಿಯ 11ನೇ IPL ಸಹ ಹಲವು ಹೊಸತನಗಳಿಗೆ ಸಾಕ್ಷಿಯಾಗುತ್ತಿದೆ. ಟೆಕ್ನಾಲಜಿಯನ್ನು ಯಶಸ್ವಿಯಾಗಿ ಬಳಕೆ ಮಾಡಿಕೊಳ್ಳಲು ಮುಂದಾಗಿದೆ. ಈ ಹಿನ್ನಲೆಯಲ್ಲಿ ಈ ಬಾರಿಯ IPLನಲ್ಲಿ ಕಾಣ ಸಿಗುವ ಹೊಸ ತಂತ್ರಜ್ಞಾನಗಳ ಬಗ್ಗೆ ಮಾಹಿತಿ ಇಲ್ಲಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
 ಮೈದಾನದಲ್ಲಿ 5G ಸೇವೆ:

ಮೈದಾನದಲ್ಲಿ 5G ಸೇವೆ:

ಈ ಬಾರಿ IPL ಮ್ಯಾಚ್‌ಗಳು ನಡೆಯುವ ಮೈದಾನದಲ್ಲಿ MIMO ಪ್ರಿ 5G ಸೇವೆಯನ್ನು ಏರ್‌ಟೆಲ್ ಮತ್ತು ಜಿಯೋ ನೀಡುತ್ತಿವೆ. 5G ಸೇವೆಯನ್ನು ಪರೀಕ್ಷೆ ಮಾಡಲು ಮುಂದಾಗಿರುವ ಜಿಯೋ-ಏರ್‌ಟೆಲ್ IPL ಅನ್ನು ಬಳಕೆ ಮಾಡಿಕೊಳ್ಳು ಮುಂದಾಗಿದೆ. ಇದು ಬಳಕೆದಾರರಿಗೆ ಹೊಸ ಸೇವೆಯ ಅನುಭವನ್ನು ನೀಡಲಿದೆ.

ಸ್ಮಾರ್ಟ್‌ಫೋನಿನಲ್ಲಿ IPL:

ಸ್ಮಾರ್ಟ್‌ಫೋನಿನಲ್ಲಿ IPL:

ಈ ಬಾರಿ ಸ್ಮಾರ್ಟ್‌ಫೋನಿನಲ್ಲಿ ಲೈವ್ ಮ್ಯಾಚ್ ನೋಡುವ ಸಲುವಾಗಿ ದೈತ್ಯ ಟೆಲಿಕಾಂ ಕಂಪನಿಗಳಾದ BSNL, ಜಿಯೋ ಮತ್ತು ಏರ್‌ಟೆಲ್ ಬಳಕೆದಾರರಿಗೆ ಹೆಚ್ಚುವರಿ ಡೇಟಾ ಆಫರ್ ಅನ್ನು ನೀಡುತ್ತಿವೆ. ಈ ಹಿನ್ನಲೆಯಲ್ಲಿ ಈ ಬಾರಿ IPL ಅನ್ನು ಸ್ಮಾರ್ಟ್‌ IPL ಎಂದರೆ ತಪ್ಪಾಗುವುದಿಲ್ಲ.

ವಿಆರ್ (V R) ನಲ್ಲಿ IPL ನೋಡಿ:

ವಿಆರ್ (V R) ನಲ್ಲಿ IPL ನೋಡಿ:

ಇದೇ ಮೊದಲ ಬಾರಿಗೆ IPL ಪಂದ್ಯಗಳನ್ನು ಸ್ಚಾರ್ ಇಂಡಿಯಾ ವಿಆರ್ (Virtual Reality) ನಲ್ಲಿ ಪ್ರಸಾರ ಮಾಡಲಿದೆ. ಹಾಟ್ ಸ್ಟಾರ್ ಮೂಲಕ ಸ್ಮಾರ್ಟ್‌ಫೋನಿನಲ್ಲಿ ಮ್ಯಾಚ್ ಅನ್ನು ನೋಡಲು ಅವಕಾಶವನ್ನು ನೀಡಲಿದೆ. ಇದಾದ ನಂತರದಲ್ಲಿ ವಿಆರ್ ಗ್ಲಾಸ್ ಮೂಲಕ ನೇರ ಪ್ರಸಾರವನ್ನು ನೀಡಲು ಮುಂದಾಗಿದೆ. ಐಪಿಎಲ್ ಟೂರ್ನಿಯನ್ನು ಮೊಬೈಲ್ ನಲ್ಲಿ ವೀಕ್ಷಿಸುವ ಹೊಸ ಅವಕಾಶವನ್ನು ಮಾಡಿಕೊಡಲಿದೆ.

ದೂರದರ್ಶನದಲ್ಲಿಯೂ IPL:

ದೂರದರ್ಶನದಲ್ಲಿಯೂ IPL:

ಈ ಬಾರಿ ದೂರದರ್ಶನದಲ್ಲಿಯೂ IPL ನೋಡುವ ಅವಕಾಶವನ್ನು ಮಾಡಿಕೊಡಲಾಗಿದೆ. ಖಾಸಗಿ ಚಾನಲ್ ನಲ್ಲಿ ಮಾತ್ರವೇ ಪ್ರಸಾರವಾಗುತ್ತಿದ್ದ IPL ಪಂದ್ಯವನ್ನು ಸರಕಾರಿ ಚಾನಲ್ ನಲ್ಲಿಯೂ ಪ್ರಸಾರವನ್ನು ಮಾಡಲು ಮುಂದಾಗಿದೆ. ದೇಶದ ಅತೀ ದೊಡ್ಡ ವಾಹಿನಿ ದೂರದರ್ಶನದಲ್ಲಿ ಐಪಿಎಲ್ ಸೀಸನ್ 11 ಪಂದ್ಯಗಳು ನೇರ ಪ್ರಸಾರವಾಗಲಿದೆ. ಈ ಸಂಬಂಧ ಸ್ಟಾರ್ ಇಂಡಿಯಾ ಮತ್ತು ದೂರದರ್ಶನ ಒಪ್ಪಂದ ಮಾಡಿಕೊಂಡಿದೆ.

IPLನಲ್ಲಿ DRS ಬಳಕೆ:

IPLನಲ್ಲಿ DRS ಬಳಕೆ:

T20 ವಿಶ್ವಕಪ್‌ನಲ್ಲಿ ಬಳಕೆ ಮಾಡಿಕೊಳ್ಳಲಿದ್ದ DRS (ಡಿಸಿಷನ್ ರಿವ್ಯೂ ಸಿಸ್ಟಮ್) ಅನ್ನು IPL ನಲ್ಲಿ ಬಳಕೆ ಮಾಡಿಕೊಳ್ಳಲು ಯೋಜನೆಯನ್ನು ಮಾಡಲಾಗಿದೆ. ICC ಮನವಿಗೆ ಇದೇ ಮೊದಲ ಬಾರಿಗೆ BCCI ಒಪ್ಪಿಗೆ ನೀಡಿದೆ. ಪ್ರಸಕ್ತ ವರ್ಷದಿಂದ IPL ನಲ್ಲೂ DRS ಅಳವಡಿಸಲಾಗಿದ್ದು, ಇದು ಪಂದ್ಯದ ರೋಚಕತೆ ಹೆಚ್ಚಿಸಲು ನೆರವಾಗಲಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Facebook ನಲ್ಲಿ ಫೇಸ್‌ ರೆಕಗ್ನಿಷನ್ ಆಯ್ಕೆಯನ್ನು ಬಳಸುವುದು ಹೇಗೆ?

ಓದಿರಿ: IPL ಕಿಚ್ಚಿಗೆ ಬೆಂಕಿ ಹಚ್ಚಿದ BSNL ಆಫರ್: ಜಿಯೋ-ಏರ್‌ಟೆಲ್‌ ಕೊಟ್ಟಿದ್ದು ಇದರ ಮುಂದೆ ಏನಿಲ್ಲ..!

English summary
new technology in ipl 2018. to know more visit kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot