Home
ಸುದ್ದಿಜಾಲ

ಕ್ರಿಯೇಟರ್ಸ್‌ಗಳಿಗಾಗಿ ಇನ್‌ಸ್ಟಾಗ್ರಾಮ್‌ ರೀಲ್ಸ್‌ನಲ್ಲಿ ಹೊಸ ಬದಲಾವಣೆ: ಇದರಿಂದ ಏನೆಲ್ಲಾ ಲಾಭ?

ಮೆಟಾ ಒಡೆತನದ ಪ್ರಮುಖ ಪ್ಲಾಟ್‌ಫಾರ್ಮ್‌ ಆಗಿರುವ ಇನ್‌ಸ್ಟಾಗ್ರಾಮ್‌ನಲ್ಲಿ ಬಳಕೆದಾರರು ವಿವಿಧ ಫೀಚರ್ಸ್‌ ಸೌಲಭ್ಯ ಪಡೆದುಕೊಳ್ಳುವ ಮೂಲಕ ತಮ್ಮ ಭಾವನೆ, ಸಂತೋಷ, ನೀವು ನಲಿವುಗಳನ್ನು ಶೇರ್‌ ಮಾಡಿಕೊಳ್ಳುತ್ತಿದ್ದಾರೆ. ಈ ನಡುವೆ ಮೆಟಾ ಇನ್‌ಸ್ಟಾಗ್ರಾಮ್‌ನಲ್ಲಿ ಹೊಸ ಫೀಚರ್ಸ್‌ ಪರಿಚಯಿಸಿದ್ದು, ಈ ಮೂಲಕ ಬಳಕೆದಾರರು ಇನ್ನಷ್ಟು ಉತ್ತಮ ಅನುಭವ ಪಡೆದುಕೊಳ್ಳಬಹುದಾಗಿದೆ.

ಹೌದು, ಮೆಟಾ ಮಾಲೀಕತ್ವದ ಇನ್‌ಸ್ಟಾಗ್ರಾಮ್‌ ತನ್ನ ಶಾರ್ಟ್ಸ್‌ ವಿಡಿಯೋ ಮೇಕಿಂಗ್‌ ಆಪ್‌ನಲ್ಲಿ ಹೊಸ ಫೀಚರ್ಸ್‌ ಪ್ರಕಟಿಸಿದೆ. ಈ ಫೀಚರ್ಸ್‌ ನಲ್ಲಿ ಬಳಕೆದಾರರು ಇನ್‌ಸ್ಟಾಗ್ರಾಮ್ ರೀಲ್ಸ್‌ಗೆ ಮೀಸಲಾದ 'ಟ್ರೆಂಡ್ಸ್‌' ಎಂಬ ವಿಭಾಗವನ್ನು ಗಮನಿಸಬಹುದಾಗಿದೆ. ಹಾಗಿದ್ರೆ, ಏನಿದು ಟ್ರೆಂಡ್ಸ್?, ಇದರಿಂದ ಬಳಕೆದಾರರಿಗೆ ಆಗುವ ಅನುಕೂಲ ಏನು ಎಂಬಿತ್ಯಾದಿ ಮಾಹಿತಿಯನ್ನು ತಿಳಿದುಕೊಳ್ಳಿ.

ಕ್ರಿಯೇಟರ್ಸ್‌ಗಳಿಗಾಗಿ ಇನ್‌ಸ್ಟಾಗ್ರಾಮ್‌ ರೀಲ್ಸ್‌ನಲ್ಲಿ ಹೊಸ ಬದಲಾವಣೆ...

ಏನಿದು ಟ್ರೆಂಡ್ಸ್‌?: ರೀಲ್ಸ್ ವಿಭಾಗದಲ್ಲಿ ಟ್ರೆಂಡಿಂಗ್ ಏನಿದೆ ಎಂಬುದನ್ನು ರಚನೆಕಾರರು ನೋಡಲು ಸಾಧ್ಯವಾಗುವ ಹಾಗೆ ಮಾಡಿರುವ ಅಯ್ಕೆಯೇ ಟ್ರೆಂಡ್ಸ್‌. ಅಂದರೆ ಬಳಕೆದಾರರು ತಮ್ಮ ರೀಲ್‌ಗಳನ್ನು ಟ್ರೆಂಡಿಂಗ್ ಮಾಡಲು ಹ್ಯಾಶ್‌ಟ್ಯಾಗ್‌ಗಳನ್ನು ಈ ಮೂಲಕ ರಚಿಸಬಹುದಾಗಿದೆ. ಟ್ರೆಂಡಿಂಗ್ ಆಡಿಯೊ ಮತ್ತು ಹ್ಯಾಶ್‌ಟ್ಯಾಗ್‌ಗಳಿಗಾಗಿ ಮೀಸಲಾದ ಗಮ್ಯಸ್ಥಾನವೇ ಈ ವಿಭಾಗ ಇದು ಎಂದು ತಿಳಿಸಲಾಗಿದೆ.

ಇನ್ನು ವಿಡಿಯೋ ಕ್ಲಿಪ್‌ಗಳು, ಆಡಿಯೋ, ಸ್ಟಿಕ್ಕರ್‌ಗಳು ಮತ್ತು ಪಠ್ಯವನ್ನು ಏಕೀಕೃತ ಎಡಿಟಿಂಗ್ ಪರದೆಯಲ್ಲಿ ಒಟ್ಟುಗೂಡಿಸುವ ಮೂಲಕ ಇನ್‌ಸ್ಟಾಗ್ರಾಮ್‌ ನಲ್ಲಿ ನಿಮ್ಮ ರೀಲ್‌ಗಳನ್ನು ಎಡಿಟ್‌ ಮಾಡಲು ನಾವು ಸುಲಭಗೊಳಿಸುತ್ತಿದ್ದೇವೆ ಎಂದು ಮೆಟಾ ಮಾಹಿತಿ ನೀಡಿದೆ. ಇದು ನಿಮ್ಮ ರೀಲ್‌ನ ಕಂಟೆಂಟ್ ಅನ್ನು ಹೆಚ್ಚು ಪರಿಣಾಮಕಾರಿಯಾಗಿ ತೋರಿಸಲು ಸಹಾಯ ಮಾಡಲಿದೆ ಎಂದು ತಿಳಿಸಿದೆ.

ಹಾಗೆಯೇ ,ಈ ಫೀಚರ್ಸ್‌ ಆಂಡ್ರಾಯ್ಡ್‌ ಹಾಗೂ ಐಓಎಸ್‌ ಬಳಕೆದಾರರಿಗೆ ಲಭ್ಯ ಇದ್ದು, ಜಾಗತಿಕವಾಗಿ ಎಲ್ಲಾ ಬಳಕೆದಾರರು ಇದರ ಸೌಲಭ್ಯ ಪಡೆದುಕೊಳ್ಳಬಹುದು. ಅಂದರೆ ಇದರಲ್ಲಿ ರೀಲ್‌ಗಳಲ್ಲಿ ಸೇರಿಸಲಾದ ಎರಡು ಹೊಸ ಮೆಟ್ರಿಕ್‌ಗಳು ಒಟ್ಟು ವೀಕ್ಷಣೆ ಸಮಯ ಮತ್ತು ಸರಾಸರಿ ವೀಕ್ಷಣೆ ಸಮಯವನ್ನು ತಿಳಿಸುತ್ತವೆ. ಇದರಲ್ಲಿನ ಒಟ್ಟು ವೀಕ್ಷಣೆ ಸಮಯವು ನಿಮ್ಮ ರೀಲ್ ಅನ್ನು ಪ್ಲೇ ಮಾಡಿದ ಒಟ್ಟು ಸಮಯದ ಮಾಹಿತಿಯನ್ನು ತೋರಿಸುತ್ತದೆ.

ಕ್ರಿಯೇಟರ್ಸ್‌ಗಳಿಗಾಗಿ ಇನ್‌ಸ್ಟಾಗ್ರಾಮ್‌ ರೀಲ್ಸ್‌ನಲ್ಲಿ ಹೊಸ ಬದಲಾವಣೆ...

ಉದಾಹರಣೆಗೆ ಹೇಳುವುದಾದರೆ ನಿಮ್ಮ ಸರಾಸರಿ ವೀಕ್ಷಣೆ ಸಮಯ 17 ಸೆಕೆಂಡ್‌ಗಳಾಗಿದ್ದರೆ, ನಿಮ್ಮ ರೀಲ್ ಅನ್ನು ವೀಕ್ಷಿಸಿದ ಪ್ರತಿಯೊಬ್ಬರೂ ಸಹ ಸರಾಸರಿ 17 ಸೆಕೆಂಡುಗಳನ್ನು ವೀಕ್ಷಿಸಿದ್ದಾರೆ ಎಂದರ್ಥ. ಈ ಮೂಲಕ ಜನರು ಎಲ್ಲಿ ತೊಡಗಿಸಿಕೊಂಡಿದ್ದಾರೆ ಅಥವಾ ವೀಕ್ಷಕರು ಹೆಚ್ಚು ಸಮಯ ಉಳಿಯಲು ನೀವು ಬಲವಾದ ಹುಕ್ ಅನ್ನು ಎಲ್ಲಿ ರಚಿಸಬೇಕು ಎಂಬುದನ್ನು ಕ್ರಿಯೇಟರ್ಸ್‌ಗೆ ಉತ್ತಮವಾಗಿ ಅರ್ಥಮಾಡಿಕೊಳ್ಳಲು ಸಹಾಯ ಮಾಡುತ್ತದೆ.

ಈ ಬಗ್ಗೆ ಕಂಪೆನಿ ಮಾಹಿತಿ ನೀಡಿದ್ದು, ನಿಮ್ಮ ರೀಲ್‌ಗಳು ನಿಮ್ಮ ಬೆಳವಣಿಗೆಗೆ ಹೇಗೆ ಕೊಡುಗೆ ನೀಡುತ್ತಿವೆ ಎಂಬುದನ್ನು ನೋಡಲು ನಾವು ಹೊಸ ಮಾರ್ಗವನ್ನು ಕೂಡ ಸೇರಿಸುತ್ತಿದ್ದೇವೆ. ನಿಮ್ಮ ರೀಲ್‌ಗಳಿಂದ ಹೊಸ ಅನುಯಾಯಿಗಳೊಂದಿಗೆ ನೀವು ನೋಟಿಫಿಕೇಶನ್‌ ಸಹ ಸ್ವೀಕರಿಸುತ್ತೀರಿ ಎಂದು ಉಲ್ಲೇಖಿಸಿದೆ. ಹಾಗೆಯೇ ಆಸ್ಟ್ರೇಲಿಯಾ, ಕೆನಡಾ, ಫ್ರಾನ್ಸ್, ಮೆಕ್ಸಿಕೋ, ನ್ಯೂಜಿಲೆಂಡ್ ಮತ್ತು ಯುಕೆ ಸೇರಿದಂತೆ ಇತರ ದೇಶಗಳಿಗೆ ಉಡುಗೊರೆಗಳ ಫೀಚರ್ಸ್‌ ಅನ್ನು ವಿಸ್ತರಿಸುತ್ತಿದೆ.

ಈ ಹೊಸ ಫೀಚರ್ಸ್‌ ಮೂಲಕ ಯಾವ ಅಭಿಮಾನಿಗಳು ನಿಮಗೆ ಉಡುಗೊರೆಯನ್ನು ಕಳುಹಿಸಿದ್ದಾರೆ ಎಂಬುದನ್ನು ತೋರಿಸುತ್ತದೆ ಆದ್ದರಿಂದ ನಿಮ್ಮ ಫಾಲೋವರ್ಸ್‌ಗಳನ್ನು ನೀವು ಸುಲಭವಾಗಿ ಗುರುತಿಸಬಹುದು. ನಿಮ್ಮ ಬೆಂಬಲಿಗರ ಹೆಸರಿನ ಪಕ್ಕದಲ್ಲಿರುವ ಹೃದಯದ ಐಕಾನ್ ಅನ್ನು ನೀವು ಟ್ಯಾಪ್ ಮಾಡಿದಾಗ ನಿಮ್ಮ ಮತ್ತು ನಿಮ್ಮ ಅಭಿಮಾನಿಗಳ ನಡುವೆ ಇನ್ನೂ ಬಲವಾದ ಸಂಪರ್ಕ ವೃದ್ಧಿಯಾಗುತ್ತದೆ. ಜೊತೆಗೆ ನೀವು ಅವರ ಉಡುಗೊರೆಯನ್ನು ನೋಡಿದ್ದೀರಿ ಮತ್ತು ಗುರುತಿಸಿದ್ದೀರಿ ಎಂಬ ನೋಟಿಫಿಕೇಶನ್‌ ಅನ್ನು ಸಹ ಅವರು ಪಡೆಯುತ್ತಾರೆ.

ಕ್ರಿಯೇಟರ್ಸ್‌ಗಳಿಗಾಗಿ ಇನ್‌ಸ್ಟಾಗ್ರಾಮ್‌ ರೀಲ್ಸ್‌ನಲ್ಲಿ ಹೊಸ ಬದಲಾವಣೆ...

ಮೆಟಾ ತನ್ನ ಇನ್‌ಸ್ಟಾಗ್ರಾಮ್‌ ನ ರೀಲ್ಸ್‌ ವಿಭಾಗದಲ್ಲಿ ಹೆಚ್ಚು ಸಮರ್ಥನೀಯ ಮತ್ತು ಲಾಭದಾಯಕ ಕೆಲಸಕ್ಕೆ ಮುಂದಾಗಿದೆ. ಅಂದರೆ, ತನ್ನ ಶಾರ್ಟ್ಸ್‌ ವಿಡಿಯೋ ರೀಲ್‌ಗಳನ್ನು ಹಣಗಳಿಕೆ ಮಾಡಲು ಬಳಕೆ ಮಾಡುತ್ತಿದೆ. ಈ ಪ್ಲಾಟ್‌ಫಾರ್ಮ್‌ನಲ್ಲಿನ ಆದಾಯದಿಂದ ಕ್ರಿಯೇಟರ್ಸ್‌ಗೆ ಶೇಕಡಾವಾರು ಪಾಲನ್ನು ಗಳಿಸಲು ಅನುವು ಮಾಡಿಕೊಡುತ್ತದೆ.

Best Mobiles in India

English summary
Meta owned Instagram has announced new features in its shorts video making app. Among these features, users can notice a section called Trends dedicated to reels.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+