Home
ಸುದ್ದಿಜಾಲ

ವಾಟ್ಸಾಪ್‌ನ ಸ್ಟೇಟಸ್‌ ವಿಭಾಗದಲ್ಲಿ ನೂತನ ಫೀಚರ್ಸ್‌; ಏನೆಂದು ತಿಳಿಯಿರಿ!

ವಾಟ್ಸಾಪ್‌ನಲ್ಲಿ ಈಗಾಗಲೇ ಬಳಕೆದಾರರಿಗೆ ಹಲವಾರು ಅನುಕೂಲ ಕಲ್ಪಿಸುವ ಅಗತ್ಯ ಫೀಚರ್ಸ್‌ಗಳನ್ನು ಕಲ್ಪಿಸಲಾಗಿದ್ದು, ವಾಟ್ಸಾಪ್ ಹಿಂದೆಂದಿಗಿಂತಲೂ ಈಗ ವಿಶೇಷವಾಗಿ ಕಾಣಿಸಿಕೊಳ್ಳುತ್ತಿದೆ. ಅದರಂತೆ ವಾಟ್ಸಾಪ್‌ ಕಾಲಕಾಲಕ್ಕೆ ಅಗತ್ಯ ಫೀಚರ್ಸ್‌ಗಳನ್ನು ಪರಿಚಯಿಸುತ್ತಿದ್ದು, ಇದೀಗ ಮತ್ತೊಂದು ಹೊಸ ಸೌಲಭ್ಯ ಬಳಕೆದಾರರಿಗೆ ಲಭ್ಯವಾಗಿದೆ. ಈ ಮೂಲಕ ವಾಟ್ಸಾಪ್‌ನಲ್ಲಿನ ಸ್ಟೇಟಸ್‌ ವಿಭಾಗದಲ್ಲಿ ಬಳಕೆದಾರರು ಹೊಸ ಅನುಭವ ಪಡೆದುಕೊಳ್ಳಬಹುದಾಗಿದೆ.

ವಾಟ್ಸಾಪ್‌ನ ಸ್ಟೇಟಸ್‌ ವಿಭಾಗದಲ್ಲಿ ನೂತನ ಫೀಚರ್ಸ್‌; ಏನೆಂದು ತಿಳಿಯಿರಿ!

ಹೌದು, ವಾಟ್ಸಾಪ್ ಇನ್ಮುಂದೆ ಈ ಬಳಕೆದಾರರಿಗೆ ಸ್ಟೇಟಸ್‌ ಅಪ್‌ಡೇಟ್‌ನಲ್ಲಿ ವಾಯ್ಸ್‌ ನೋಟ್‌ ಫೀಚರ್ಸ್‌ ಅನ್ನು ಪರಿಚಯಿಸಿದೆ. ಅದರಲ್ಲೂ ವಾಟ್ಸಾಪ್‌ ಸ್ಟೇಟಸ್ ಅಪ್‌ಡೇಟ್‌ಗಳಂತೆ ಹಂಚಿಕೊಳ್ಳಲಾದ ವಾಯ್ಸ್‌ ನೋಟ್‌ ಸಹ ಎನ್‌ಕ್ರಿಪ್ಟ್ ಆಗಿರಲಿವೆ. ಹಾಗಿದ್ರೆ, ಈ ಫೀಚರ್ಸ್‌ ಯಾರಿಗೆಲ್ಲ ಲಭ್ಯ?, ಇದರ ಬಳಕೆ ಹೇಗೆ?, ಎಷ್ಟು ಸಮಯದ ವರೆಗೆ ರೆಕಾರ್ಡ್‌ ಮಾಡಬಹುದು? ಎಂಬಿತ್ಯಾದಿ ಮಾಹಿತಿಯನ್ನು ಈ ಲೇಖನದಲ್ಲಿ ವಿವರಿಸಿದ್ದೇವೆ ಓದಿರಿ.

ಏನಿದು ವಾಯ್ಸ್‌ ನೋಟ್‌
ಮೆಟಾ ಮಾಲೀಕತ್ವದ ಇನ್‌ಸ್ಟಂಟ್‌ ಮೆಸೆಜ್‌ ಪ್ಲಾಟ್‌ಫಾರ್ಮ್‌ ವಾಟ್ಸಾಪ್‌ನಲ್ಲಿ ಈ ಹೊಸ ಸೌಕರ್ಯ ನೀಡಲಾಗಿದ್ದು, ಈ ಮೂಲಕ ವಾಯ್ಸ್‌ ನೋಟ್‌ ಅನ್ನು ಶೇರ್‌ ಮಾಡಿಕೊಳ್ಳಬಹುದಾಗಿದೆ. ಇದು ಈಗಾಗಲೇ ನೀವು ಸ್ಟೇಟಸ್‌ನಲ್ಲಿ ಶೇರ್‌ ಮಾಡಿಕೊಳ್ಳುತ್ತಿರುವ ಫೋಟೋ ಹಾಗೂ ವಿಡಿಯೋದ ಶೈಲಿಯಲ್ಲಿಯೇ ಇರಲಿದ್ದು, ವಿಭಿನ್ನ ಅನುಭವವನ್ನು ನೀಡಲಿದೆ.

ಯಾರಿಗೆ ಲಭ್ಯ?
ಈ ಸಂಬಂಧ WaBetaInfo ಮಾಹಿತಿ ನೀಡಿದ್ದು, ಹೊಸ ಫೀಚರ್ಸ್‌ ಪ್ರಸ್ತುತ ಗೂಗಲ್‌ ಪ್ಲೇ ಸ್ಟೋರ್‌ನಲ್ಲಿ ಲಭ್ಯವಿರುವ ಆಂಡ್ರಾಯ್ಡ್‌ 2.23.2.8 ನವೀಕರಣದಲ್ಲಿ ಇತ್ತೀಚಿನ ವಾಟ್ಸಾಪ್ ಬೀಟಾದೊಂದಿಗೆ ಲಭ್ಯವಿರಲಿದೆ ಎಂದು ಉಲ್ಲೇಖಿಸಿದೆ. ಅದರಂತೆ ಆಂಡ್ರಾಯ್ಡ್‌ ಬೀಟಾ ಪರೀಕ್ಷಕರು ವಾಯ್ಸ್‌ ನೋಟ್ಸ್‌ ಅನ್ನು ಸ್ಟೇಟಸ್‌ನಲ್ಲಿ ಶೇರ್‌ ಮಾಡಿಕೊಳ್ಳಬಹುದಾಗಿದೆ. ಹಾಗೆಯೇ ಈ ಫೀಚರ್ಸ್‌ ಟೆಕ್ಸ್ಟ್‌ ಸ್ಟೇಟಸ್‌ ವಿಭಾಗದಲ್ಲಿ ಕಾಣಿಸಿಕೊಳ್ಳಲಿದ್ದು, ಈ ಮೂಲಕ ವಾಟ್ಸಾಪ್ ಬಳಕೆದಾರರಿಗೆ ತಮ್ಮ ವಾಯ್ಸ್‌ ರೆಕಾರ್ಡಿಂಗ್‌ಗಳ ಮೇಲೆ ಹೆಚ್ಚಿನ ಕಂಟ್ರೋಲ್‌ ಅನ್ನು ನೀಡಲಿದೆ. ಇದಿಷ್ಟೇ ಅಲ್ಲದೆ ಶೇರ್‌ ಮಾಡುವ ಮೊದಲು ರೆಕಾರ್ಡಿಂಗ್ ಅನ್ನು ತಿರಸ್ಕರಿಸಲು ಸಹ ಅನುವು ಮಾಡಿಕೊಡುತ್ತದೆ.

ವಾಟ್ಸಾಪ್‌ನ ಸ್ಟೇಟಸ್‌ ವಿಭಾಗದಲ್ಲಿ ನೂತನ ಫೀಚರ್ಸ್‌; ಏನೆಂದು ತಿಳಿಯಿರಿ!

ಎಷ್ಟು ಸಮಯ ರೆಕಾರ್ಡ್‌ ಮಾಡಬಹುದು?
ವಾಯ್ಸ್‌ ನೋಟ್ಸ್‌ ಫೀಚರ್ಸ್‌ನಲ್ಲಿ ಗರಿಷ್ಠ ರೆಕಾರ್ಡಿಂಗ್ ಸಮಯ 30 ಸೆಕೆಂಡುಗಳಾಗಿದೆ. ಹಾಗೆಯೇ ಸ್ಟೇಟಸ್‌ನಲ್ಲಿ ಶೇರ್ ಮಾಡಿಕೊಳ್ಳುವ ಯಾವುದೇ ವಾಯ್ಸ್‌ ನೋಟ್‌ ಅನ್ನು ಸಹ ಎನ್‌ಕ್ರಿಪ್ಟ್ ಮಾಡಲಾಗುತ್ತದೆ. ಅಂತೆಯೇ ಈಗಾಗಲೇ ವಾಟ್ಸಾಪ್‌ ಸ್ಟೇಟಸ್‌ ನಲ್ಲಿ ಶೇರ್‌ ಮಾಡಿಕೊಳ್ಳಲಾಗುತ್ತಿರುವ ಫೋಟೋ ಹಾಗೂ ವಿಡಿಯೋದಂತೆಯೇ 24 ಗಂಟೆಗಳ ನಂತರ ಕಣ್ಮರೆಯಾಗುತ್ತದೆ. ಇದಿಷ್ಟೇ ಅಲ್ಲದೆ, ಸ್ಟೇಟಸ್‌ ಅಪ್‌ಡೇಟ್‌ ನಲ್ಲಿ ಪೋಸ್ಟ್‌ ಮಾಡಿದ ನಂತರ ಬಳಕೆದಾರರು ಅದನ್ನು ಡಿಲೀಟ್ ಮಾಡುವ ಆಯ್ಕೆಯನ್ನೂ ಸಹ ಪಡೆದುಕೊಂಡಿರುತ್ತಾರೆ ಎಂಬುದು ಗಮನಾರ್ಹ ವಿಷಯ.

ಫಾರ್ವರ್ಡ್ ಮೀಡಿಯಾದಲ್ಲಿ ಶೀರ್ಷಿಕೆ ಫೀಚರ್ಸ್‌
ಇದರ ನಡುವೆ ವಾಟ್ಸಾಪ್‌ ಮತ್ತೊಂದು ಫೀಚರ್ಸ್ ಅನ್ನು ಈಗಾಗಲೇ ಪರಿಚಯಿಸಿದೆ, ಅದುವೇ ಫಾರ್ವರ್ಡ್ ಮೀಡಿಯಾಗೆ ಶೀರ್ಷಿಕೆ ನೀಡುವ ಸೌಲಭ್ಯ. ಈ ಫೀಚರ್ಸ್‌ ಇದೀಗ ಆಂಡ್ರಾಯ್ಡ್‌ ಬಳಕೆದಾರರಿಗೆ ಲಭ್ಯವಾಗುತ್ತಿದ್ದು, ಬಳಕೆದಾರರಿಗೆ ಮೀಡಿಯಾ ಫೈಲ್‌ಗಳಿಗೆ ಶೀರ್ಷಿಕೆಗಳನ್ನು ಸೇರಿಸಲು ಸಹಾಯ ಮಾಡುತ್ತದೆ. ಹಾಗೆಯೇ ಶೀರ್ಷಿಕೆಯಿಂದ ಕೀವರ್ಡ್‌ಗಳನ್ನು ಹುಡುಕುವ ಮೂಲಕ ಹಳೆಯ ಫೈಲ್‌ಗಳನ್ನು ತ್ವರಿತವಾಗಿ ಹುಡುಕಲು ಅನುಕೂಲ ಮಾಡಿಕೊಡಲಿದೆ.

ವಾಟ್ಸಾಪ್‌ನ ಸ್ಟೇಟಸ್‌ ವಿಭಾಗದಲ್ಲಿ ನೂತನ ಫೀಚರ್ಸ್‌; ಏನೆಂದು ತಿಳಿಯಿರಿ!

ಇನ್ನು ಶೀರ್ಷಿಕೆಯೊಂದಿಗೆ ಮೀಡಿಯಾವನ್ನು ಫಾರ್ವರ್ಡ್ ಮಾಡಿದ ನಂತರ, ಡಿಸ್‌ಪ್ಲೇ ಕೆಳಭಾಗದಲ್ಲಿ ಹೊಸ ವೀಕ್ಷಣೆ ಹೊರಹೊಮ್ಮುತ್ತದೆ. ಈ ಫೀಚರ್ಸ್‌ ಸಕ್ರಿಯಗೊಳಿಸಲಾಗಿದೆಯೇ ಅಥವಾ ಇಲ್ಲವೇ ಎಂಬುದನ್ನು ತಿಳಿದುಕೊಳ್ಳಲು ಇದು ಸಹಾಯಕ. ಇದಲ್ಲದೆ, ಯಾವುದೇ ಬಳಕೆದಾರರು ಮೆಸೆಜ್‌ ಅನ್ನು ಫಾರ್ವರ್ಡ್ ಮಾಡದಿರಲು ನಿರ್ಧರಿಸಿದರೆ ಅದನ್ನು ಫಾರ್ವರ್ಡ್ ಮಾಡುವ ಮೊದಲು ಚಿತ್ರದಿಂದ ಶೀರ್ಷಿಕೆಯನ್ನು ಅಳಿಸಲು ಡಿಸ್‌ಮಿಸ್‌‌ ಬಟನ್‌ ಆಯ್ಕೆ ನೀಡಲಾಗಿದೆ.

Best Mobiles in India

English summary
New features have been given in WhatsApp status and status can be made more entertaining through these voice note features. Full details in Kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+