Home
ಸುದ್ದಿಜಾಲ

ಕೆನಡಾದಲ್ಲಿ ಫೇಸ್‌ಬುಕ್, ಇನ್‌ಸ್ಟಾಗ್ರಾಮ್‌ನಿಂದ ಸುದ್ದಿ ನಿರ್ಬಂಧ: ಕಾರಣ ಏನು?

ಜಗತ್ತಿನ ಹಲವಾರು ದೇಶಗಳು ತಮ್ಮದೇ ಆದ ಕಾನೂನು ಕಟ್ಟಳೆಗಳನ್ನು ಹೊಂದಿರುತ್ತದೆ. ಅದರಲ್ಲೂ ಬೆಳೆಯುತ್ತಿರುವ ತಂತ್ರಜ್ಞಾನ ಯುಗದಲ್ಲಿ ಈ ಸಂಬಂಧದ ಕಾನೂನುಗಳು ಸಹ ಮಹತ್ವ ಪಡೆದುಕೊಳ್ಳುತ್ತಿದ್ದು, ಈ ಕಾರಣಕ್ಕಾಗಿಯೇ ಇನ್ಮುಂದೆ ಈ ದೇಶದಲ್ಲಿ ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಮ್‌ನಲ್ಲಿ ಯಾವುದೇ ಸುದ್ದಿ ಲಭ್ಯವಿರುವುದಿಲ್ಲ.

ಹೌದು, ಕೆನಡಾದಲ್ಲಿ ಇನ್ಮುಂದೆ ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಮ್‌ನಲ್ಲಿ ಸುದ್ದಿಗಳು ಕಾಣಸಿಗುವುದಿಲ್ಲ. ಈ ಪ್ಲಾಟ್‌ಫಾರ್ಮ್‌ನಲ್ಲಿ ಪ್ರಸಾರ ಆಗುವ ಸುದ್ದಿಗಳನ್ನು ವೀಕ್ಷಣೆ ಮಾಡುವುದನ್ನು ತಡೆಯುವ ಮಸೂದೆಯನ್ನು ಜಾರಿ ಮಾಡಲಾಗಿದೆ. ಹಾಗಿದ್ರೆ, ಕೆನಡಾದಲ್ಲಿ ಯಾಕೆ ಈ ಬದಲಾವಣೆ ಮಾಡಲಾಗಿದೆ? ಫೇಸ್‌ಬುಕ್‌ ಹಾಗೂ ಇನ್‌ಸ್ಟಾಗ್ರಾಮ್‌ನ ಮುಂದಿನ ನಡೆ ಏನು ಎಂಬಿತ್ಯಾದಿ ಮಾಹಿತಿಗಾಗಿ ಈ ಲೇಖನ ಓದಿರಿ.

ಕೆನಡಾದಲ್ಲಿ ಫೇಸ್‌ಬುಕ್, ಇನ್‌ಸ್ಟಾಗ್ರಾಮ್‌ನಿಂದ ಸುದ್ದಿ ನಿರ್ಬಂಧ: ಕಾರಣ ಏನು?

ಕೆನಡಾದಲ್ಲಿ ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಸುದ್ದಿಗೆ ಬ್ರೇಕ್: ಕೆನಡದಲ್ಲಿನ ಹೊಸ ಬಿಲ್‌ನಿಂದಾಗಿ ಸುದ್ದಿ ಫೀಡ್‌ಗಳನ್ನು ನಿಷೇಧಿಸಲು ಮೆಟಾ ನಿರ್ಧರಿಸಿದೆ. ಈ ಕಾರಣಕ್ಕೆ ಅಲ್ಲಿ ಇನ್ಮುಂದೆ ಇನ್‌ಸ್ಟಾಗ್ರಾಮ್ ಮತ್ತು ಫೇಸ್‌ಬುಕ್ ಬಳಕೆದಾರರು ಸುದ್ದಿಗಳನ್ನು ವೀಕ್ಷಣೆ ಮಾಡಲು ಸಾಧ್ಯವಾಗುವುದಿಲ್ಲ. ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಮ್‌ನ ಮೂಲ ಕಂಪನಿಯಾದ ಮೆಟಾ ಸಂಸತ್ತಿನಲ್ಲಿ ಶಾಸನವನ್ನು ಅನುಮೋದಿಸಿದ ನಂತರ ಕೆನಡಾದ ಎಲ್ಲಾ ಬಳಕೆದಾರರಿಗೆ ಸುದ್ದಿಗಳಿಗೆ ಪ್ರವೇಶವನ್ನು ನಿರ್ಬಂಧಿಸುವುದಾಗಿ ತಿಳಿಸಿದೆ.

ಕೆನಡಾದ ಮಾಧ್ಯಮ ಮಸೂದೆಯಲ್ಲೇನಿದೆ?; ಆನ್‌ಲೈನ್ ನ್ಯೂಸ್ ಆಕ್ಟ್ ಎಂದು ಕರೆಯಲ್ಪಡುವ ಈ ಹೊಸ ಶಾಸನ ಇದೀಗ ಭಾರೀ ಸದ್ದು ಮಾಡುತ್ತಿದೆ. ಇದು ಕೆನಡಾದ ಮಾಧ್ಯಮ ಉದ್ಯಮದ ದೂರುಗಳ ನಂತರ ಮುನ್ನೆಲೆಗೆ ಬಂದಿದೆ. ಈ ಮೂಲಕ ಆನ್‌ಲೈನ್ ಜಾಹೀರಾತು ಮಾರುಕಟ್ಟೆಯಿಂದ ಸುದ್ದಿ ವ್ಯವಹಾರಗಳನ್ನು ಗುಂಪುಗೂಡದಂತೆ ತಡೆಯಲು ಟೆಕ್ ಕಂಪನಿಗಳ ಮೇಲೆ ಕಠಿಣ ನಿಯಂತ್ರಣವನ್ನು ಹೊಂದಿದೆ. ಯಾಕೆಂದರೆ ಕಳೆದ ದಶಕದಲ್ಲಿ ನೂರಾರು ಸಂಸ್ಥೆಗಳನ್ನು ಮುಚ್ಚಲಾಗಿದ್ದು, ಆದರೀಗ ಕೆನಡಾದ ಸುದ್ದಿ ವಲಯವನ್ನು ಬೆಂಬಲಿಸುವ ಉದ್ದೇಶದಿಂದ ಈ ಶಾಸನವನ್ನು ರೂಪಿಸಲಾಗಿದೆ.

2021 ರ ಆಸ್ಟ್ರೇಲಿಯನ್ ಕಾನೂನು ಕೆನಡಾದ ಈ ಶಾಸನಕ್ಕೆ ಸ್ಫೂರ್ತಿಯಾಗಿದೆ ಎನ್ನಲಾಗಿದೆ. ಕ್ಯಾಲಿಫೋರ್ನಿಯಾದಲ್ಲಿ ಇದೇ ರೀತಿಯ ಯೋಜನೆಯನ್ನು ಜಾರಿಗೆ ತರಲಾಗುತ್ತಿದೆ. ಬಿಲ್ C-18 ಆಸ್ಟ್ರೇಲಿಯಾದ ಟೆಕ್ ಕಂಪನಿಗಳ ವಿರುದ್ಧ ಕಠಿಣ ನಿಯಮಗಳನ್ನು ಆಧರಿಸಿದ್ದು, ಸುದ್ದಿ ಕಂಟೆಂಟ್‌ ಪ್ರವೇಶಕ್ಕಾಗಿ ಡಿಜಿಟಲ್ ಕಂಪನಿಗಳನ್ನು ಪಾವತಿಸಲು ಒತ್ತಾಯಿಸಿದ ಮೊದಲ ದೇಶ ಆಸ್ಟ್ರೇಲಿಯಾ ಆಗಿದೆ. ಅದರಂತೆ 2008ರಿಂದ ಕೆನಡಾದಲ್ಲಿ470ಕ್ಕೂ ಹೆಚ್ಚು ಮಾಧ್ಯಮಗಳು ಬಂದ್‌ ಆಗಿದ್ದು, ಪತ್ರಿಕೋದ್ಯಮದ ಮೂರನೇ ಒಂದು ಭಾಗದಷ್ಟು ಉದ್ಯೋಗಗಳು ಕಳೆದುಹೋಗಿವೆ. ಈ ಎಲ್ಲಾ ಸಮಸ್ಯೆಗಳಿಂದ ಕೆನಡಾ ಈ ನಿರ್ಧಾರ ಮಾಡಿದೆ.

ಮೆಟಾ ಮತ್ತು ಗೂಗಲ್ ಹೇಳೋದೇನು?: ಈ ದೊಡ್ಡ ಟೆಕ್ ಕಂಪನಿಗಳು ಕೆನಡಾದ ಕಾನೂನನ್ನು ತೀವ್ರವಾಗಿ ವಿರೋಧಿಸಿವೆ. ಅದಾಗ್ಯೂ ಆನ್‌ಲೈನ್ ಸುದ್ದಿ ಕಾಯ್ದೆ ಜಾರಿಗೆ ಬರುವ ಮೊದಲೇ ಕೆನಡಾದ ಎಲ್ಲಾ ಬಳಕೆದಾರರಿಗೆ ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಮ್‌ನಲ್ಲಿ ಸುದ್ದಿ ಲಭ್ಯತೆಯನ್ನು ಕೊನೆಗೊಳಿಸಲಾಗುವುದು ಎಂದು ಮೆಟಾ ತಿಳಿಸಿದೆ. ಜೊತೆಗೆ ಫೇಸ್‌ಬುಕ್ ಸುದ್ದಿ ಸಂಸ್ಥೆಗೆ ಯಾವುದೇ ಆರ್ಥಿಕ ಮೌಲ್ಯವನ್ನು ಹೊಂದಿಲ್ಲ ಹಾಗೂ ಬಳಕೆದಾರರು ಸುದ್ದಿಗಾಗಿ ಈ ಪ್ಲಾಟ್‌ಫಾರ್ಮ್‌ ಅನ್ನೇ ಬಳಸುವುದಿಲ್ಲ ಎಂದು ಈ ಹಿಂದೆಯೂ ಮೆಟಾ ಹೇಳಿತ್ತು.

ಕೆನಡಾದಲ್ಲಿ ಫೇಸ್‌ಬುಕ್, ಇನ್‌ಸ್ಟಾಗ್ರಾಮ್‌ನಿಂದ ಸುದ್ದಿ ನಿರ್ಬಂಧ: ಕಾರಣ ಏನು?

ಈ ಹೊಸ ಕಾನೂನನ್ನು ಆನ್‌ಲೈನ್ ನ್ಯೂಸ್ ಆಕ್ಟ್ ಎಂದು ಕರೆಯಲಾಗುತ್ತಿದ್ದು, ಇದು ಡಿಜಿಟಲ್ ಜಗತ್ತನ್ನು ಕಂಟ್ರೋಲ್‌ ಮಾಡಲು ಮತ್ತು ಟೆಕ್ ದೈತ್ಯರಿಗೆ ನೀಡಲಾದ ಅಧಿಕಾರವನ್ನು ನಿರ್ಬಂಧಿಸಲು ಕೆನಡಾದ ಸರ್ಕಾರದ ವ್ಯಾಪಕ ಪ್ರಯತ್ನದ ಭಾಗವಾಗಿದೆ. ಈ ರೀತಿಯ ನಿಯಮವನ್ನು ಇದೇ ಮೊದಲ ಬಾರಿಗೆ ಜಾರಿ ಮಾಡಿಲ್ಲ. ಬದಲಾಗಿ ಈ ಹಿಂದೆ ಕೆನಡಾದ ವಿಷಯವನ್ನು ತಮ್ಮ ಬಳಕೆದಾರರಿಗೆ ಪ್ರಚಾರ ಮಾಡಲು ನೆಟ್‌ಫ್ಲಿಕ್ಸ್‌ ನಂತಹ ಸ್ಟ್ರೀಮಿಂಗ್ ಪ್ಲಾಟ್‌ಫಾರ್ಮ್‌ಗಳನ್ನು ನಿರ್ದೇಶಿಸುವ ಕಾನೂನನ್ನು ಸಹ ಅಂಗೀಕರಿಸಿತ್ತು.

Best Mobiles in India

English summary
Meta has decided to ban news feeds due to a new bill in Canada. Because of this, Instagram and Facebook users will not be able to see the news in the future.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+