iPhone: ಇನ್ಮುಂದೆ ಆಪಲ್ ಐಫೋನ್‌ಗಳು ಉತ್ತಮ ಬ್ಯಾಟರಿ ಬ್ಯಾಕಪ್ ನೀಡಲಿವೆ! ಎಲ್ಲವೂ ಸ್ಯಾಮ್‌ಸಂಗ್ ದಯೆ!
ಆಪಲ್ ಐಫೋನ್‌ಗಳು (Apple iPhone) ಎಲ್ಲಾ ರೀತಿಯಲ್ಲಿ ಮುಂದು. ಆದರೆ, ಬ್ಯಾಟರಿ ವಿಚಾರದಲ್ಲಿ ಮಾತ್ರ ತೀರಾ ಹಿಂದುಳಿದಿವೆ. ಈ ಕಾರಣಕ್ಕೆ ಸಾಕಷ್ಟು ಜನರು ಈ ಬ್ಯಾಟರಿ ಸಾಮರ್ಥ್ಯ ಹೆಚ್ಚು ಮಾಡುವಂತೆ ವಿವಿಧ ರೀತಿಯಲ್ಲಿ ಆಗ್ರಹ ಮಾಡುತ್ತಲೇ ಬಂದಿದ್ದಾರೆ. ಕೊನೆಗೂ ಎಚ್ಚೆತ್ತುಕೊಂಡಿರುವ ಆಪಲ್ ಇದೀಗ ಗುಡ್ ನ್ಯೂಸ್ ನೀಡಿದೆ.
ಹೌದು, ಮುಂದಿನ ಸರಣಿಯ ಐಫೋನ್‌ಗಳಲ್ಲಿ ಬ್ಯಾಟರಿ ವಿಚಾರಕ್ಕೆ ಸಂಬಂಧಪಟ್ಟಂತೆ ಗುಡ್ ನ್ಯೂಸ್ ಸಿಕ್ಕಿದೆ. ಪರಿಣಾಮ ಐಫೋನ್ ಪ್ರಿಯರು ಯಾವುದೇ ಬ್ಯಾಟರಿ ಸಮಸ್ಯೆ ಎದುರಿಸುವುದಿಲ್ಲ. ಹಾಗಿದ್ರೆ ಏನಿದು ಹೊಸ ವಿಚಾರ?, ಐಫೋನ್‌ಗಳಲ್ಲಿ ಬ್ಯಾಟರಿ ಸಾಮರ್ಥ್ಯ ಹೆಚ್ಚಾಗುತ್ತಿದೆಯಾ?, ಅಥವಾ ಬೇರೆ ಏನಾದರೂ ಹೊಸ ಸೌಲಭ್ಯವನ್ನು ಈ ಉದ್ದೇಶಕ್ಕೆ ನೀಡಲಾಗುತ್ತಿದೆಯಾ? ಎಂಬ ಮಾಹಿತಿ ಇಲ್ಲಿದೆ ನೋಡಿ.

ಇನ್ಮುಂದೆ ಐಫೋನ್‌ಗಳಲ್ಲಿ ಬ್ಯಾಟರಿ ಸಮಸ್ಯೆ ಇರೋಲ್ಲ: ಸ್ಮಾರ್ಟ್‌ಫೋನ್‌ಗಳನ್ನು ತಯಾರು ಮಾಡಲು ಒಂದು ಕಂಪನಿಯು ಮತ್ತೊಂದು ಕಂಪೆನಿಯನ್ನು ಅವಲಂಭಿಸುವುದು ಸರ್ವೇ ಸಾಮಾನ್ಯವಾದ ವಿಷಯ. ಅದರಂತೆ ಸ್ಯಾಮ್‌ಸಂಗ್ ಹಾಗೂ ಆಪಲ್ ಒಂದಕ್ಕೊಂದು ಸಹಕಾರದಲ್ಲಿ ಈಗಾಗಲೇ ವಿವಿಧ ರೀತಿಯ ಪ್ರತ್ಯೇಕ ಫೋನ್‌ಗಳನ್ನು ಲಾಂಚ್ ಮಾಡಿವೆ. ಇದರ ಜೊತೆಗೆ ಈಗ ಸ್ಯಾಮ್‌ಸಂಗ್‌ನ ಹೊಸ OLED ಪ್ಯಾನೆಲ್‌ಗಳು ಆಪಲ್ ಐಫೋನ್‌ಗಳಲ್ಲಿ ಕಾಣಿಸಿಕೊಳ್ಳಲಿದೆ.
ಈ ವಿಷಯ ಕೇಳಿದ್ರೆ ನಿಮಗೆ ಖಂಡಿತಾ ವಿಶೇಷ ಅನಿಸಬಹುದು. ಯಾಕೆಂದರೆ ಈ ಸ್ಯಾಮ್‌ಸಂಗ್‌ನ ಹೊಸ OLED ಪ್ಯಾನೆಲ್‌ಗಳು ವರ್ಧಿತ ಬ್ಯಾಟರಿ ಅವಧಿಯ ಭರವಸೆ ನೀಡುತ್ತವೆ. ಈ ವಿಶೇಷ ತಂತ್ರಜ್ಞಾನವು 2026 ರಲ್ಲಿ ಐಫೋನ್ 18 ನಲ್ಲಿ ಪದಾರ್ಪಣೆ ಮಾಡುವ ನಿರೀಕ್ಷೆಯಿದೆ ಎಂದು ತಿಳಿದುಬಂದಿದೆ. ಹೊಸ ತಂತ್ರಜ್ಞಾನವು OLED ಪ್ಯಾನೆಲ್‌ಗಳಲ್ಲಿ ಬೆಳಕಿನ ಉತ್ಪಾದನೆಯನ್ನು ಹೆಚ್ಚಿಸಲು ನೀಲಿ ಫಾಸ್ಫೊರೆಸೆಂಟ್ ವಸ್ತುಗಳನ್ನು ಬಳಕೆ ಮಾಡುತ್ತದಂತೆ. ಇದರಿಂದ ಹೊಳಪು ಮತ್ತು ವಿದ್ಯುತ್ ದಕ್ಷತೆಯನ್ನು ಹೆಚ್ಚಿಸುತ್ತದೆ ಎಂದು ಹೇಳಲಾಗಿದೆ.

ಇನ್ನು ಯುಬಿಐ ರಿಸರ್ಚ್ ಡೆಪ್ಯೂಟಿ ಡೈರೆಕ್ಟರ್ ಡೇಜಿಯಾಂಗ್ ಯೂನ್ ಅವರು ಸ್ಯಾಮ್‌ಸಂಗ್‌ನ ಗ್ರ್ಯಾಂಡ್ OLED ಯೋಜನೆಗಳ ಮೇಲೆ ಹೂಡಿಕೆ ಮಾಡಿದ್ದಾರೆ ಎಂದು ದಿ ಎಲೆಕ್ ವರದಿ ಮಾಡಿದೆ. ಪರಿಣಾಮ ಸ್ಯಾಮ್‌ಸಂಗ್ ತನ್ನ ಡಿಸ್‌ಪ್ಲೇ ವಿಭಾಗದಲ್ಲಿ OLED ಪ್ಯಾನೆಲ್‌ಗಳಲ್ಲಿ ಬೆಳಕಿನ ಉತ್ಪಾದನೆಯನ್ನು ಸೂಪರ್‌ಚಾರ್ಜ್ ಮಾಡಲು ನೀಲಿ ಫಾಸ್ಫೊರೆಸೆಂಟ್ ವಸ್ತುಗಳನ್ನು ತಯಾರು ಮಾಡುವಲ್ಲಿ ನಿರತವಾಗಿದೆ ಎಂದು ಹೇಳಲಾಗಿದೆ. ಸಿಯೋಲ್‌ನಲ್ಲಿ ನಡೆದ H2 2023 UBI ಸಂಶೋಧನಾ ವಿಶ್ಲೇಷಕ ಸೆಮಿನಾರ್‌ನಲ್ಲಿ ಈ ಮಾಹಿತಿಯನ್ನು ಹಂಚಿಕೊಂಡಿದ್ದಾರೆ.
ಹೊಸ ನೀಲಿ ಫಾಸ್ಫೊರೆಸೆಂಟ್ ವಸ್ತುಗಳನ್ನು B1 ಎಂಬ ಘಟಕಗಳ ಗುಂಪಿಗೆ ಸೇರಿಸಲಾಗಿದೆ ಎಂದು ತಿಳಿದುಬಂದಿದ್ದು, ಸ್ಯಾಮ್‌ಸಂಗ್ ಡಿಸ್‌ಪ್ಲೇ ಘಟಕಗಳು ಪ್ರಸ್ತುತ ಕೆಂಪು ಮತ್ತು ಹಸಿರು ರಂಜಕ ವಸ್ತುಗಳನ್ನು ಒಳಗೊಂಡಿವೆ ಜೊತೆಗೆ ಪ್ರತಿದೀಪಕ ವಸ್ತುಗಳ ಬದಲಿಗೆ ನೀಲಿ ಫಾಸ್ಫೊರೆಸೆಂಟ್ ವಸ್ತುಗಳ ಬಳಕೆಯು ಈ ಹೊಸ OLED ಪ್ಯಾನೆಲ್‌ಗಳ ಬ್ರೈಟ್‌ನೆಸ್ ಮತ್ತು ಶಕ್ತಿಯ ಸಾಮರ್ಥ್ಯವನ್ನು ಹೆಚ್ಚಿಸಬಹುದು ಎಂದು ಹೇಳಲಾಗಿದೆ.
OLED ಮೆಟೀರಿಯಲ್ ಸೆಟ್ M15 ನಲ್ಲಿ B1 ಕಾಂಪೊನೆಂಟ್ ಸೆಟ್ ಅನ್ನು ಬಳಸಲಾಗುವುದು ಎಂದು ವಿಶ್ಲೇಷಕರು ಅಂದಾಜಿಸಿದ್ದಾರೆ. ಅದರಲ್ಲೂ ಇದನ್ನು ಫೋಲ್ಡ್ ಮಾಡಬಹುದಾದ ಡಿಸ್‌ಪ್ಲೆಗಳನ್ನು ತಯಾರಿಸಲು ಬಳಸಲಾಗುತ್ತದೆ ಎಂದೈ ಸಹ ಉಲ್ಲೇಖಿಸಲಾಗಿದೆ. ಅದಾಗ್ಯೂ ಈ ಹೊಸ ನೀಲಿ ಫಾಸ್ಫೊರೆಸೆಂಟ್ ವಸ್ತುವಿನಿಂದ ಮಾಡಿದ OLED ಪ್ಯಾನೆಲ್‌ಗಳನ್ನು ನಾವು ನೋಡಬೇಕು ಎಂದರೆ ಸುಮಾರು ಕಾಲ ಕಾಯಬೇಕಿದೆ.

2024 ರಲ್ಲಿ ಸ್ಯಾಮ್‌ಸಂಗ್‌ನ ಮೆಟೀರಿಯಲ್ ಸೆಟ್ M14 ಅನ್ನು ಬಳಸಿಕೊಂಡು ರಚಿಸಲಾದ OLED ಪ್ಯಾನೆಲ್‌ನೊಂದಿಗೆ ಐಫೋನ್ 16 ಅನ್ನು ನೋಡಬಹುದು ಎಂದು ವಿಶ್ಲೇಷಕರು ತಿಳಿಸಿದ್ದು, ಇದೇ ಅದೇ ಘಟಕಗಳಿಂದ ಮಾಡಿದ ಡಿಸ್‌ಪ್ಲೇನೊಂದಿಗೆ ಐಫೋನ್ 17 ಕಾಣಿಸಿಕೊಳ್ಳಲಿವೆ ಎಂದು ತಿಳಿದುಬಂದಿದೆ. ಇದಾದ ನಂತರದಲ್ಲಿ ಐಫೋನ್ 18 ಫೋನ್‌ಗಳು 2026 ರ ದ್ವಿತೀಯಾರ್ಧದಲ್ಲಿ ಪದಾರ್ಪಣೆ ಮಾಡುವ ನಿರೀಕ್ಷೆಯಿದ್ದು, ಸಂಪೂರ್ಣವಾಗಿ ಈ ವಿಶೇಷ ಡಿಸ್‌ಪ್ಲೇ ಈ ಫೋನ್‌ಗಳಲ್ಲಿ ಇರಲಿದೆ ಎಂದು ಅಂದಾಜಿಸಲಾಗಿದೆ.


Click it and Unblock the Notifications








