ಭಾರತದಲ್ಲಿ ಅನಾವರಣಗೊಂಡ ನಿಕಾನ್ Z f ಕ್ಯಾಮೆರಾ! ಇದರ ವಿನ್ಯಾಸವೇ ಬಲು ಅಚ್ಚರಿ!
ಬದಲಾಗುತ್ತಿರುವ ಕ್ಯಾಮೆರಾ ಜಮಾನದಲ್ಲಿ ನಿಕಾನ್ ಸಂಸ್ಥೆ ತನ್ನದೇ ಆದ ಪ್ರಾಬಲ್ಯವನ್ನು ಉಳಿಸಿಕೊಂಡಿದೆ. ಇಂದಿನ ಕಲರ್‌ಫುಲ್ ಕ್ಯಾಮೆರಾ ಪ್ರಪಂಚಕ್ಕೆ ಸೂಕ್ತ ಎನಿಸುವ ಕ್ಯಾಮೆರಾಗಳನ್ನು ಪರಿಚಯಿಸುವ ಮೂಲಕ ವೃತ್ತಿಪರ ಫೋಟೋಗ್ರಾಫರ್‌ಗಳಿಗೆ ಬೆಸ್ಟ್ ಬ್ರ್ಯಾಂಡ್ ಎನಿಸಿಕೊಂಡಿದೆ. ಇದರ ಮುಂದುವರೆದ ಭಾಗವಾಗಿ ಹೊಸ ನಿಕಾನ್Z f ಫುಲ್ ಫ್ರೇಮ್ ಮಿರರ್‌ಲೆಸ್ ಕ್ಯಾಮೆರಾವನ್ನು ಬಿಡುಗಡೆ ಮಾಡಿದೆ.
ಹೌದು, ನಿಕಾನ್ Z f ಫುಲ್ ಫ್ರೇಮ್ ಮಿರರ್‌ಲೆಸ್ ಕ್ಯಾಮೆರಾ ಭಾರತದಲ್ಲಿ ಬಿಡುಗಡೆ ಆಗಿದೆ. ಅತ್ಯಾಧುನಿಕ ಫೀಚರ್ಸ್‌ಗಳೊಂದಿಗೆ ವಿಶೇಷ ಸಾಮರ್ಥ್ಯಗಳನ್ನು ಕೂಡ ಪಡೆದುಕೊಂಡಿದೆ. ಇನ್ನು ಈ ಕ್ಯಾಮೆರಾ EXPEED 7 ಇಮೇಜ್-ಪ್ರೊಸೆಸಿಂಗ್ ಎಂಜಿನ್ ಮೂಲಕ ಕಾರ್ಯನಿರ್ವಹಿಸಲಿದೆ. ಇದು 24.5-ನೊಂದಿಗೆ ಸಜ್ಜುಗೊಂಡಿದ್ದು, ಮೆಗಾಪಿಕ್ಸೆಲ್ CMOS ಸೆನ್ಸಾರ್ ಅನ್ನು ಹೊಂದಿದೆ. ಇನ್ನುಳಿದಂತೆ ಕ್ಯಾಮೆರಾ ಯಾವೆಲ್ಲಾ ಫೀಚರ್ಸ್‌ಗಳನ್ನು ಒಳಗೊಂಡಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ನಿಕಾನ್ Z f ಕ್ಯಾಮೆರಾ ಫೀಚರ್ಸ್ ಹೇಗಿದೆ?
ನಿಕಾನ್ Z f ಫುಲ್ ಫ್ರೇಮ್ ಮಿರರ್‌ಲೆಸ್ ಕ್ಯಾಮೆರಾ N-Log ಮತ್ತು HLG ರೆಕಾರ್ಡಿಂಗ್‌ಗೆ ಬೆಂಬಲ ನೀಡಲಿದೆ. ಇದು H.265 10-ಬಿಟ್ ಸ್ವರೂಪದಲ್ಲಿ ಇನ್-ಕ್ಯಾಮೆರಾ ರೆಕಾರ್ಡಿಂಗ್ ಸಾಮರ್ಥ್ಯಗಳನ್ನು ಹೊಂದಿದೆ. ಇನ್ನು ಕ್ಯಾಮೆರಾವು ಬಳಕೆದಾರರಿಗೆ ಸಂಕೀರ್ಣವಾದ ವಿವರಗಳನ್ನು ಸೆರೆಹಿಡಿಯಲು ಅವಕಾಶ ನೀಡಲಿದೆ. ಇದರಿಂದ ಈ ಕ್ಯಾಮೆರಾ ವಿವಾಹ ಸಮಾರಂಭಗಳು, ವನ್ಯಜೀವಿ ಛಾಯಾಗ್ರಹಣ ಮಾಡಲು ಬಯಸುವವರಿಗೆ ಸೂಕ್ತವಾಗಿದೆ.
ನಿಕಾನ್ Z f ಫೋಕಸ್ ಪಾಯಿಂಟ್ VR ಅನ್ನು ಸಹ ಸಂಯೋಜಿಸಿದ್ದು, ಕಂಟೆಂಟ್‌ನ ಬ್ಲರ್ ಅನ್ನು ಲೋ ಮಾಡಲಿದೆ. ಇದು ವಿವಿಧ ಶೂಟಿಂಗ್ ಸನ್ನಿವೇಶಗಳಲ್ಲಿ ಕ್ಯಾಮರಾದ ಉಪಯುಕ್ತತೆಯನ್ನು ಹೆಚ್ಚಿಸುತ್ತದೆ. ಇನ್ನು ಫೋಟೋ ಮೋಡ್‌ನಲ್ಲಿ 3D-ಟ್ರ್ಯಾಕಿಂಗ್ ಅನ್ನು ಬೆಂಬಲಿಸಲಿದೆ. ಇದು ಚಿಕ್ಕದಾಗಿ ಕಾಣುವ ಮನುಷ್ಯರ ಮುಖಗಳನ್ನು ಕೂಡ ಪತ್ತೆ ಮಾಡಲಿದೆ. ಹಾಗೆಯೇ ಕಡಿಮೆ-ಬೆಳಕಿನ ಪರಿಸರ ವ್ಯವಸ್ಥೆಯಲ್ಲಿಯು ಸಹ ನಿಖರವಾದ ಫೋಟೋ ಶೂಟ್ ಮಾಡಲಿದೆ.
ಇದಲ್ಲದೆ ನಿಕಾನ್ Z f ಕ್ಯಾಮೆರಾ ವೇರಿ-ಆಂಗಲ್ ಮಾನಿಟರ್ ಅನ್ನು ಹೊಂದಿದೆ. ಇದರಿಂದ ಛಾಯಾಗ್ರಾಹಕರಿಗೆ ವಿವಿಧ ಕೋನಗಳಿಂದ ಚಿತ್ರಗಳನ್ನು ಸಂಯೋಜಿಸಲು ಅನುವು ಮಾಡಿಕೊಡುತ್ತದೆ. ಇದರಲ್ಲಿ 14fps RAW ಮತ್ತು 30fps jpeg ನಲ್ಲಿ ರೆಕಾರ್ಡ್ ಮಾಡುವ ಸಾಮರ್ಥ್ಯವನ್ನು ಸಹ ನೀಡಲಾಗಿದೆ. ಇನ್ನು ಕ್ಯಾಮೆರಾ ಉತ್ಕೃಷ್ಟ ಬಣ್ಣದ ಆಳ ಮತ್ತು ವಿವರಗಳಿಗಾಗಿ 10-ಬಿಟ್ HEIF ಅನ್ನು ಸಹ ಬೆಂಬಲಿಸಲಿದೆ. ವೀಡಿಯೊಗ್ರಾಫರ್‌ಗಳಿಗಾಗಿ, 60fps ನಲ್ಲಿ 4K ವೀಡಿಯೊ ರೆಕಾರ್ಡಿಂಗ್‌ಗೆ ಬೆಂಬಲವನ್ನು ಸಹ ನೀಡಲಿದೆ.
ನಿಕಾನ್ ಕಂಪೆನಿಯ ಈ ಕ್ಯಾಮೆರಾದಲ್ಲಿ ಮೀಸಲಾದ ಏಕವರ್ಣದ ಸೆಲೆಕ್ಟರ್ ಅನ್ನು ಹೊಂದಿದೆ. ಇದು ವಿವಿಧ ಸೆಟ್ಟಿಂಗ್‌ಗಳೊಂದಿಗೆ ಏಕವರ್ಣದ ಫೋಟೋಗಳು ಮತ್ತು ವೀಡಿಯೊಗಳನ್ನು ರಚಿಸಲು ಬಳಕೆದಾರರನ್ನು ಸಕ್ರಿಯಗೊಳಿಸಲಿದೆ. ಇದು ಸ್ಟಿಲ್‌ಗಳು ಮತ್ತು ವೀಡಿಯೊಗಳೆರಡಕ್ಕೂ ಸೃಜನಾತ್ಮಕ ನಿಯಂತ್ರಣಗಳನ್ನು ನೀಡಲಿದೆ ಎಂದು ಹೇಳಲಾಗಿದೆ. ಛಾಯಾಗ್ರಾಹಕರು ತಮ್ಮ ಕಲಾತ್ಮಕ ದೃಷ್ಟಿಯನ್ನು ಕಲರ್ ಮತ್ತು ಟೋನ್ ಮೂಲಕ ವ್ಯಕ್ತಪಡಿಸುವುದಕ್ಕೆ ಅನುವು ಮಾಡಿಕೊಡಲಿದೆ. ಇನ್ನು ಕ್ಯಾಮೆರಾದಲ್ಲಿ ಪೋರ್ಟ್ರೇಟ್ ಇಂಪ್ರೆಷನ್ ಬ್ಯಾಲೆನ್ಸ್ ಮತ್ತು ಸ್ಕಿನ್ ಮೃದುಗೊಳಿಸುವಿಕೆ ಸೇರಿದಂತೆ AI ಚಾಲಿತ ಫೀಚರ್ಸ್‌ಗಳನ್ನು ನೀಡಲಿದೆ.
ನಿಕಾನ್ Z f ಕ್ಯಾಮೆರಾ ಬೆಲೆ ಮತ್ತು ಲಭ್ಯತೆ
ಭಾರತದಲ್ಲಿ ನಿಕಾನ್ Z f ಕ್ಯಾಮೆರಾ 1,76,995ರೂ ಬೆಲೆಯನ್ನು ಹೊಂದಿದೆ. ಇದೇ ಅಕ್ಟೋಬರ್ 12 ರಿಂದ ಸೇಲ್ ಪ್ರಾರಂಭವಾಗಲಿದೆ. ಇದು ಯಾವೆಲ್ಲಾ ಕಲರ್ ಆಯ್ಕೆಗಳಲ್ಲಿ ಬರಲಿದೆ ಎಂಬುದರ ಬಗ್ಗೆ ಯಾವುದೇ ಮಾಹಿತಿ ಬಹಿರಂಗವಾಗಿಲ್ಲ.


Click it and Unblock the Notifications








