ಜಾಗತಿಕವಾಗಿ ಕೆಲವೇ ದಿನಗಳಲ್ಲಿ ಕಾಣಿಸಿಕೊಳ್ಳಲಿವೆ HMD ಬ್ರ್ಯಾಂಡ್ ಫೋನ್‌ಗಳು!
ಹೆಚ್ಎಮ್‌ಡಿ (HMD) ಕೆಲವೇ ದಿನಗಳ ಹಿಂದೆ ನೋಕಿಯಾ (Nokia) ಬ್ರ್ಯಾಂಡಿಂಗ್ ಅನ್ನು ಕೈಬಿಡುವುದಾಗಿ ಘೋಷಣೆ ಮಾಡಿದೆ. ಅಂದರೆ ಎಲ್ಲಾ ಟ್ಯಾಬ್ಲೆಟ್‌ಗಳು, ಇಯರ್‌ಬಡ್‌ಗಳು ಮತ್ತು ಸ್ಮಾರ್ಟ್‌ಫೋನ್‌ಗಳು ಹೆಚ್ಎಮ್‌ಡಿ ಬ್ರ್ಯಾಂಡ್ ಹೆಸರಲ್ಲಿ ಇನ್ಮುಂದೆ ಕಾಣಿಸಿಕೊಳ್ಳಲಿವೆ. ಅದರಂತೆ ಈಗ 9 ಹೊಸ HMD ಬ್ರ್ಯಾಂಡ್ ಫೋನ್‌ಗಳು ಜಾಗತಿಕವಾಗಿ ಕೆಲವೇ ದಿನಗಳಲ್ಲಿ ಕಾಣಿಸಿಕೊಳ್ಳಲಿವೆ ಎನ್ನಲಾಗಿದೆ.
ಹೌದು, ಈವರೆಗೆ ನೋಕಿಯಾ ಹೆಸರಲ್ಲೇ ಸಾಕಷ್ಟು ಸ್ಮಾರ್ಟ್‌ಫೋನ್‌ಗಳನ್ನು ಅನಾವರಣ ಮಾಡಲಾಗಿದೆ. ಆದರೆ ಇನ್ಮುಂದೆ ಈ ಹೆಸರಲ್ಲಿ ಯಾವುದೇ ಸ್ಮಾರ್ಟ್‌ಫೋನ್‌ಗಳು ಕಾಣಿಸಿಕೊಳ್ಳುವುದಿಲ್ಲ ಎಂದು ಕಂಪೆನಿ ಅಧಿಕೃತವಾಗಿ ಮಾಹಿತಿ ನೀಡಿದ ಕೆಲವೇ ದಿನಗಳಲ್ಲಿ ಹೆಚ್ಎಮ್‌ಡಿ ಹೆಸರಿನಲ್ಲಿ ಒಂಬತ್ತು ಸ್ಮಾರ್ಟ್‌ಫೋನ್‌ಗಳು ಅನಾವರಣ ಆಗಲಿದೆ ಎಂಬ ಮಾಹಿತಿ ತಿಳಿದುಬಂದಿದೆ. ಹಾಗಿದ್ರೆ, ಈ ವಿಷಯ ತಿಳಿದುಬಂದಿದ್ದು ಹೇಗೆ?, ಯಾವಾಗ ಈ ಫೋನ್‌ಗಳು ಅನಾವರಣ ಆಗಲಿವೆ ಅನ್ನೋ ಮಾಹಿತಿ ಇಲ್ಲಿದೆ ನೋಡಿ.

ಹೆಚ್ಎಮ್ಡಿ ಸ್ಮಾರ್ಟ್‌ಫೋನ್‌ಗಳು: IMEI ಪ್ರಮಾಣೀಕರಣದಲ್ಲಿ ಗುರುತಿಸಲಾದ 9 ಹೊಸ ಹೆಚ್ಎಮ್‌ಡಿ ಬ್ರಾಂಡ್ ಸ್ಮಾರ್ಟ್‌ಫೋನ್‌ಗಳು ಜಾಗತಿಕ ಬಿಡುಗಡೆಗೆ ಸನ್ನಿಹಿತವಾಗಿವೆ ಎಂದು ತಿಳಿದುಬಂದಿದೆ. ಅಲ್ಲದೆ, ಈ ಸ್ಮಾರ್ಟ್‌ಫೋನ್‌ಗಳು ಏಪ್ರಿಲ್‌ನಲ್ಲಿ ಪ್ರಾರಂಭವಾಗುವ ನಿರೀಕ್ಷೆಯಿದೆ. ಈ ನಡುವೆ ಈಗ ನೋಕಿಯಾದ ವೆಬ್‌ಸೈಟ್ ಈಗ ಹೆಚ್ಎಮ್‌ಡಿ ಬ್ರ್ಯಾಂಡಿಂಗ್ ಅನ್ನು ತೋರಿಸುತ್ತಿದೆ.
ಹೆಚ್ಎಮ್‌ಡಿ ಗ್ಲೋಬಲ್ ತ್ವರಿತವಾಗಿ ಹೆಚ್ಎಮ್‌ಡಿ ಫೋನ್‌ಗಳನ್ನು ಪರಿಚಯಿಸಲು ಮತ್ತು ನಿಧಾನವಾಗಿ ನೋಕಿಯಾ ಬ್ರ್ಯಾಂಡಿಂಗ್‌ನಿಂದ ದೂರ ಸರಿಯಲು ಎಲ್ಲಾ ರೀತಿಯ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ. ಈ ಕಾರಣಕ್ಕೆ ಕಂಪನಿಯು ತನ್ನ ವೆಬ್‌ಸೈಟ್‌ನಲ್ಲಿ ಗ್ರಾಫಿಕ್ಸ್ ಅನ್ನು ಬದಲಾಯಿಸಿದೆ ಮತ್ತು ಹೊಸ ಸ್ಮಾರ್ಟ್‌ಫೋನ್ ವಿನ್ಯಾಸಗಳೊಂದಿಗೆ ಅದನ್ನು ನವೀಕರಿಸಿದೆ.

ಇನ್ನು ಮೊದಲ ಬ್ಯಾಚ್‌ನಲ್ಲಿ ಒಟ್ಟು ಮೂರು ಫೋನ್‌ಗಳನ್ನು ಪರಿಚಯಿಸಬಹುದು ಎಂದು ತಿಳಿದುಬಂದಿದ್ದು, ಇವುಗಳು ಏಪ್ರಿಲ್‌ನಲ್ಲಿ ಪ್ರಾರಂಭವಾಗಬಹುದು ಎಂದು ವರದಿಗಳಿಂದ ತಿಳಿದುಬಂದಿದೆ. ಈ ನಡುವೆ ಒಂಬತ್ತು ಹೊಸ ಹೆಚ್ಎಮ್‌ಡಿ ಬ್ರ್ಯಾಂಡ್ ಫೋನ್‌ಗಳನ್ನು IMEI ಡೇಟಾಬೇಸ್‌ನಲ್ಲಿ ಪಟ್ಟಿ ಮಾಡಲಾಗಿದೆ.
IMEI ಡೇಟಾಬೇಸ್‌ನಲ್ಲಿ ಗುರುತಿಸಲಾದ ಒಂಬತ್ತು ಹೊಸ ಹೆಚ್ಎಮ್‌ಡಿ ಬ್ರ್ಯಾಂಡ್ ಫೋನ್‌ಗಳು TA-1584, TA-1594, TA-1595, TA-1588, TA-1589, TA-1592, TA-1602, TA-1605 ಮತ್ತು TA-1631 ಮಾದರಿ ಸಂಖ್ಯೆಗಳನ್ನು ಹೊಂದಿವೆ. ಡೇಟಾಬೇಸ್ ಪಟ್ಟಿಯು ಫೋನ್‌ಗಳ ಕುರಿತು ಯಾವುದೇ ವಿವರಗಳನ್ನು ಬಹಿರಂಗಪಡಿಸಿಲ್ಲ.
ಕೆಲವು ವರದಿಗಳ ಪ್ರಕಾರ ಈ ಫೋನ್‌ಗಳು ವಿಭಿನ್ನ RAM ಹಾಗೂ ಇಂಟರ್ ಸ್ಟೋರೇಜ್ ವೇರಿಯಂಟ್‌ಗಳಾಗಿರಬಹುದು ಅಥವಾ ಸಂಪೂರ್ಣವಾಗಿ ವಿಭಿನ್ನ ಫೋನ್‌ಗಳಾಗಿರಬಹುದು ಎಂದೂ ಸಹ ಹೇಳಲಾಗುತ್ತಿದೆ. ಹಾಗೆಯೇ ಈ ಸ್ಮಾರ್ಟ್‌ಫೋನ್‌ಗಳು ಹಸಿರು, ಗುಲಾಬಿ ಮತ್ತು ನೀಲಿ ಬಣ್ಣಗಳಲ್ಲಿ ಕಾಣಿಸಿಕೊಳ್ಳಲಿವೆ ಎಂದು ತಿಳಿದುಬಂದಿದೆ. ಅಷ್ಟೇ ಅಲ್ಲದೆ ಈ ಡಿವೈಸ್‌ಗಳಲ್ಲಿ
ಒಂದು OIS ಜೊತೆಗೆ 108 ಮೆಗಾಪಿಕ್ಸೆಲ್ ಪ್ರಾಥಮಿಕ ಸೆನ್ಸರ್ ಹೊಂದಿರಬಹುದು ಎಂದು ತಿಳಿದುಬಂದಿದೆ.

ನವೀಕರಿಸಿದ ವೆಬ್‌ಸೈಟ್‌ನಲ್ಲಿ ಇರುವ ಮಾಹಿತಿಯಂತೆ, ಪ್ರಕಾಶಮಾನವಾದ ಬಣ್ಣಗಳಲ್ಲಿ ಮೂರು ಫೋನ್‌ಗಳನ್ನು ಶೀಘ್ರದಲ್ಲೇ ಪರಿಚಯಿಸಲಿದೆ. ವಿನ್ಯಾಸದ ರೂಪರೇಖೆಯು ಹಿಂದಿನ ದಿನದಿಂದ ನೋಕಿಯಾ ಲೂಮಿಯಾ ಫೋನ್‌ಗಳಂತೆಯೇ ಕಾಣುತ್ತವೆ. ಫೋನ್‌ಗಳಲ್ಲಿ ಒಂದು ಹಿಂಭಾಗದಲ್ಲಿ ದೊಡ್ಡ ಆಯತಾಕಾರದ ಮಾಡ್ಯೂಲ್, ದುಂಡಾಗಿರುವ ಎಡ್ಜ್ ಮತ್ತು ವಿಶೇಷ ಅಂಚುಗಳನ್ನು ಹೊಂದಿರಲಿದೆ ಎಂದು ಹೇಳಲಾಗುತ್ತಿದೆ. ಇನ್ನೊಂದರಲ್ಲಿ ಲಂಬವಾಗಿ ಸ್ಟ್ರ್ಯಾಪ್ ಮಾಡಿದ ಟ್ರಿಪಲ್ ಕ್ಯಾಮೆರಾಗಳು, ಯುಎಸ್‌ಬಿ ಟೈಪ್-ಸಿ ಪೋರ್ಟ್ ಮತ್ತು ಕೆಳಭಾಗದಲ್ಲಿ 3.5 ಎಂಎಂ ಆಡಿಯೊ ಜ್ಯಾಕ್ ಆಯ್ಕೆಯನ್ನು ಕಾಣಬಹುದಾಗಿದೆ.
ಈ ಹೆಚ್ಎಮ್‌ಡಿ ಬ್ರ್ಯಾಂಡ್ ಮಾಡೆಲ್‌ಗಳು ಆನ್‌ಲೈನ್‌ನಲ್ಲಿ ಮಾರಾಟವಾಗುತ್ತಿವೆ ಎಂದು ವರದಿಯಾಗಿದೆ. ಅದಾಗ್ಯೂ ನೋಕಿಯಾ ಸ್ಮಾರ್ಟ್‌ಫೋನ್‌ಗಳು ಆಫ್‌ಲೈನ್ ಮಾರುಕಟ್ಟೆಗಳಲ್ಲೂ ಕಾಣಿಸಿಕೊಳ್ಳಬಹುದು ಎಂದು ತಿಳಿದುಬಂದಿದೆ. ಆದರೆ, ಈ ಟೈಮ್‌ನಲ್ಲಿ ಫೋನ್‌ಗಳ ಯಾವುದೇ ಹಾರ್ಡ್‌ವೇರ್ ಫೀಚರ್ಸ್ ಅನ್ನು ಬಹಿರಂಗಪಡಿಸಲಾಗಿಲ್ಲ. ಈ ನಡುವೆ ಈ ಫೋನ್‌ಗಳ ಬಗ್ಗೆ ಹೆಚ್ಚಿನ ಮಾಹಿತಿ ಬೇಕು ಎಂದರೆ ಗಿಜ್‌ಬಾಟ್‌ನೊಂದಿಗೆ ನಿರಂತರ ಸಂಪರ್ಕದಲ್ಲಿರಿ.


Click it and Unblock the Notifications








