Home
ಸುದ್ದಿಜಾಲ

ಇದು ಜಿಯೋ ಅಲ್ಲ ನಿಯೋ ಫೋನ್‌! ಹೆಸರಷ್ಟೇ ಅಲ್ಲ ವಿನ್ಯಾಸವೂ ಕೂಡ ಫುಲ್‌ ಡಿಫರೆಂಟ್!

ಟೆಕ್‌ ಮಾರುಕಟ್ಟೆಗೆ ನಿಯೋ ಕಂಪೆನಿಯ ಹೊಸ ಫೋನ್‌ ಎಂಟ್ರಿ ನೀಡಿದೆ. ಇದು ಕಂಪೆನಿಯ ಮೊದಲ ಸ್ಮಾರ್ಟ್‌ಫೋನ್‌ ಆಗಿದ್ದು ಮೂರು RAM ವೇರಿಯೆಂಟ್‌ ಆಯ್ಕೆಗಳಲ್ಲಿ ಲಭ್ಯವಾಗಲಿದೆ. ಇನ್ನು ಸ್ಮಾರ್ಟ್‌ಫೋನ್‌ 6.81-ಇಂಚಿನ LTPO OLED ಡಿಸ್‌ಪ್ಲೇಯನ್ನು ಹೊಂದಿದ್ದು, 120Hz ರಿಫ್ರೆಶ್‌ ರೇಟ್‌ ಬೆಂಬಲದೊಂದಿಗೆ ಬರಲಿದೆ.

ಹೌದು, ನಿಯೋ ಫೋನ್‌ ಮಾರುಕಟ್ಟೆಗೆ ಎಂಟ್ರಿ ನೀಡ್ತಿದ್ದ ಹಾಗೇ ಭಾರಿ ಸಂಚಲನ ಮೂಡಿಸಿದೆ. ಇದರ ಹೆಸರಿನಂತೆಯೇ ವಿನ್ಯಾಸವೂ ಕೂಡ ಸಿಕ್ಕಾಪಟ್ಟೆ ವೈರಲ್‌ ಆಗುತ್ತಿದೆ. ಈ ಸ್ಮಾರ್ಟ್‌ಫೋನ್‌ 5,200mAh ಸಾಮರ್ಥ್ಯದ ಬ್ಯಾಟರಿಯನ್ನು ಒಳಗೊಂಡಿದ್ದು, 66W ವೇಗದ ವೈರ್ಡ್ ಚಾರ್ಜಿಂಗ್ ಅನ್ನು ಬೆಂಬಲಿಸಲಿದೆ. ಅಲ್ಲದೆ 50W ವಾಯರ್‌ಲೆಸ್ ಫ್ಲ್ಯಾಷ್ ಚಾರ್ಜಿಂಗ್‌ಗೆ ಬೆಂಬಲವನ್ನು ನೀಡಲಿದೆ. ಇನ್ನುಳಿದಂತೆ ಸ್ಮಾರ್ಟ್‌ಫೋನ್‌ ಯಾವೆಲ್ಲಾ ಫೀಚರ್ಸ್‌ ಒಳಗೊಂಡಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಇದು ಜಿಯೋ ಅಲ್ಲ ನಿಯೋ ಫೋನ್‌! ಹೆಸರಷ್ಟೇ ಅಲ್ಲ ವಿನ್ಯಾಸವೂ ಕೂಡ ಫುಲ್‌ ಡಿಫರೆಂಟ್!

ನಿಯೋ ಫೋನ್‌ ಡಿಸ್‌ಪ್ಲೇ ರಚನೆ
ನಿಯೋ ಫೋನ್ 6.81-ಇಂಚಿನ LTPO OLED ಡಿಸ್‌ಪ್ಲೇಯನ್ನು ಹೊಂದಿದೆ. ಈ ಡಿಸ್‌ಪ್ಲೇ 1440 x 3088 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯವನ್ನು ಪಡೆದಿದೆ. ಇನ್ನು ಡಿಸ್‌ಪ್ಲೇ 120Hz ರಿಫ್ರೆಶ್ ರೇಟ್‌ ಬೆಂಬಲದೊಂದಿಗೆ ಬರಲಿದ್ದು, 1800 ನಿಟ್ಸ್‌ ಗರಿಷ್ಠ ಬ್ರೈಟ್‌ನೆಸ್‌ ಲೆವೆಲ್‌ ಅನ್ನು ನೀಡಲಿದೆ. ಇದು HDR10+ ಪ್ರಮಾಣೀಕರಣದೊಂದಿಗೆ ಬರುತ್ತದೆ. ಇದಲ್ಲದೆ ಡಿಸ್‌ಪ್ಲೇಯು ಸೆಲ್ಫಿ ಕ್ಯಾಮೆರಾವನ್ನು ಟಾಪ್-ಸೆಂಟರ್‌ನಲ್ಲಿ ಹೊಂದಿದ್ದು, ಹೋಲ್-ಪಂಚ್ ಕಟೌಟ್ ಅನ್ನು ಹೊಂದಿದೆ.

ನಿಯೋ ಫೋನ್‌ ಪ್ರೊಸೆಸರ್‌
ನಿಯೋ ಫೋನ್‌ ಆಕ್ಟಾ-ಕೋರ್ ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 8 Gen 2 SoC ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸಲಿದೆ. ಇದು ಆಂಡ್ರಾಯ್ಡ್‌ 13 ಬೆಂಬಲದೊಂದಿಗೆ ಕಾರ್ಯನಿರ್ವಹಿಸಲಿದೆ. ಹಾಗೆಯೇ 12GB RAM + 512GB ಮತ್ತು 12GB RAM + 1TB ಹಾಗೂ 16GB RAM + 1TB ಇಂಟರ್‌ ಸ್ಟೋರೇಜ್‌ ಸಾಮರ್ಥ್ಯದ ಮೂರು ವೇರಿಯೆಂಟ್‌ ಆಯ್ಕೆಗಳಲ್ಲಿ ಲಭ್ಯವಾಗಲಿದೆ.

ನಿಯೋ ಫೋನ್‌ ಕ್ಯಾಮೆರಾ ಸೆಟ್‌ಅಪ್‌
ನಿಯೋ ಫೋನ್‌ ಟ್ರಿಪಲ್‌ ರಿಯರ್‌ ಕ್ಯಾಮೆರಾ ಸೆಟ್‌ಅಪ್‌ ಅನ್ನು ಹೊಂದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 50 ಮೆಗಾಪಿಕ್ಸೆಲ್ ಸೋನಿ IMX707 ಸೆನ್ಸಾರ್‌ ಅನ್ನು ಹೊಂದಿದೆ. ಎರಡನೇ ಕ್ಯಾಮೆರಾ 50 ಮೆಗಾಪಿಕ್ಸೆಲ್ ಸೆನ್ಸಾರ್‌ ಹಾಗೂ ಮೂರನೇ ಕ್ಯಾಮೆರಾ ಸಹ 50 ಮೆಗಾಪಿಕ್ಸೆಲ್‌ ಸೆನ್ಸಾರ್‌ ಪಡೆದುಕೊಂಡಿದೆ. ಇದರಲ್ಲಿ ಒಂದು ಕ್ಯಾಮೆರಾ OIS ಬೆಂಬಲವನ್ನು ಹೊಂದಿದ್ದು, ಇನ್ನೊಂದು ಕ್ಯಾಮೆರಾ 2.8x ಆಪ್ಟಿಕಲ್ ಜೂಮ್ ಅನ್ನು ನೀಡಲಿದೆ.

ನಿಯೋ ಫೋನ್‌ ಬ್ಯಾಟರಿ ಸಾಮರ್ಥ್ಯ ಎಷ್ಟಿದೆ?
ನಿಯೋ ಫೋನ್‌ 5,200mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ. ಇದು 66W ವೇಗದ ವೈರ್ಡ್ ಚಾರ್ಜಿಂಗ್ ಮತ್ತು 50W ವಾಯರ್‌ಲೆಸ್ ಫ್ಲ್ಯಾಷ್ ಚಾರ್ಜಿಂಗ್ ಅನ್ನು ಬೆಂಬಲಿಸಲಿದೆ. ಇನ್ನು ಕನೆಕ್ಟಿವಿಟಿ ಆಯ್ಕೆಗಳಲ್ಲಿ ಹಾಟ್‌ಸ್ಪಾಟ್‌, ವೈಫೈ, ಯುಎಸ್‌ಬಿ ಟೈಪ್‌ ಸಿ, ಹೆಡ್‌ಫೋನ್‌ ಜ್ಯಾಕ್‌ ಅನ್ನು ಒಳಗೊಂಡಿದೆ. ಇದಲ್ಲದೆ ನಿಯೋ ಫೋನ್‌ ತನ್ನ ಕಾರ್ ಕಂಟ್ರೋಲ್ ಕೀಯನ್ನು ಸಹ ನೀಡಲಾಗಿದೆ. ಇದನ್ನು ಫೋನ್‌ನ ಎಡಭಾಗದ ಫಲಕದಲ್ಲಿ ಇರಿಸಲಾಗುತ್ತದೆ. ಇದರಿಂದ ನಿಮ್ಮ ಕಾರನ್ನು ರಿಮೋಟ್ ಮೂಲಕ ನಿಯಂತ್ರಿಸಲು ಇದು ಸಹಾಯ ಮಾಡುತ್ತದೆ.

ನಿಯೋ ಫೋನ್ ಬೆಲೆ ಮತ್ತು ಲಭ್ಯತೆ
ನಿಯೋ ಫೋನ್ ಪ್ರಸ್ತುತ ಚೀನಾದಲ್ಲಿ ಬಿಡುಗಡೆ ಆಗಿದೆ. ಈ ಸ್ಮಾರ್ಟ್‌ಫೋನ್‌ನ 12GB RAM + 512GB ಸ್ಟೋರೇಜ್ ಆಯ್ಕೆಯ ಬೆಲೆ CNY 6,499 (ಸರಿಸುಮಾರು 73,800ರೂ)ಆಗಿದೆ. ಇದರ 12GB RAM + 1TB ಸ್ಟೋಯೇಜ್ ರೂಪಾಂತರ CNY 6,899 (ಅಂದಾಜು 78,350ರೂ) ಮತ್ತು 16GB RAM + 1TB ಸ್ಟೋರೇಜ್ ಆಯ್ಕೆಯು CNY 7,499 (ಸುಮಾರು 85,200ರೂ) ಬೆಲೆಯಲ್ಲಿ ಲಭ್ಯವಾಗಲಿದೆ. ಇದನ್ನು ನೀವು ಎಡೆಲ್‌ವೀಸ್ ವೈಟ್, ಯುವಾನ್ ಶಾನ್ ಡೈ, ಸ್ಟಾರ್ ಗ್ರೀನ್, ಮಿರರ್ ಎಂಪ್ಟಿ ಪೌಡರ್ , ಹೆಮೋಸ್ಫಿಯರ್ ಬ್ಲೂ, ಸ್ಟಾರ್ ಗ್ರೇ ಮತ್ತು ಇಂಕ್ ಬ್ಲೂ ಬಣ್ಣದಲ್ಲಿ ವಿಶೇಷ ಎಪಿಡಿಷನ್ ಕಲರ್‌ ಆಯ್ಕೆಗಳಲ್ಲಿ ಪರಿಚಯಿಸಲಾಗಿದೆ.

Best Mobiles in India

English summary
Nio Phone With Snapdragon 8 Gen 2 SoC Launched: Specifications details in kannada
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+