2 ಸಾವಿರದ ತನಕ ಡಿಜಿಟಲ್ ವಹಿವಾಟಿಗೆ 'ಎಂಡಿಆರ್' ಶುಲ್ಕ ತೆರವು!!..ಹೆಚ್ಚು ಹಣ ನೀಡಬೇಡಿ!!

ಭೀಮ್ ಆಪ್, ಡೆಬಿಟ್‌ಕಾರ್ಡ್‌ಗಳು ಸೇರಿ ಇತರೆ ಯಾವುದೇ ನಗದು ರಹಿತ ಸೇವೆಗಳಿಗೂ ನೂತನ ನಿಯಮ ಅನ್ವಯವಾಗಲಿದೆ ಎಂದು ಕೇಂದ್ರ ಸಚಿವ ಅರುಣ್ ಜೇಟ್ಲಿ ಹೇಳಿದ್ದಾರೆ.!!

|

ದೇಶದಾಧ್ಯಂತ ಡಿಜಿಟಲ್ ವಹಿವಾಟನ್ನು ಉತ್ತೇಜಿಸಲು 2 ಸಾವಿರ ವರೆಗಿನ ಮೊತ್ತ ಪಾವತಿಗೆ ಯಾವುದೇ ರೀತಿಯ ಶುಲ್ಕವಿಲ್ಲ ಎಂದು ಕೇಂದ್ರ ಸರ್ಕಾರ ತಿಳಿಸಿದೆ.!! ಭೀಮ್ ಆಪ್, ಡೆಬಿಟ್‌ಕಾರ್ಡ್‌ಗಳು ಸೇರಿ ಇತರೆ ಯಾವುದೇ ನಗದು ರಹಿತ ಸೇವೆಗಳಿಗೂ ನೂತನ ನಿಯಮ ಅನ್ವಯವಾಗಲಿದೆ ಎಂದು ಕೇಂದ್ರ ಸಚಿವ ಅರುಣ್ ಜೇಟ್ಲಿ ಹೇಳಿದ್ದಾರೆ.!!

ಡಿಜಿಟಲ್ ವಹಿವಾಟನ್ನು ಉತ್ತೇಜಿಸಲು ಈ ಹಿಂದೆಯೇ ಸರ್ಕಾರ ಶುಲ್ಕ ಕಡಿತಗೊಳಿಸುವ ನಿರ್ಧಾರವನ್ನು ತೆಗೆದುಕೊಂಡಿತ್ತು. ಅದರಂತೆ ನಡೆದಿದ್ದ ಸಚಿವ ಸಂಪುಟ ಸಭೆಯಲ್ಲಿ ಸರ್ಕಾರ ಎಂಡಿಆರ್ ಶುಲ್ಕವನ್ನು ರದ್ದುಗೊಳಿಸುವ ಸಂಬಂಧ ನಿರ್ಧಾರ ಕೈಗೊಂಡಿದೆ.! ಇದೀಗ ಈ ನಿಯಮವನ್ನು ಸರ್ಕಾರ ಕಟ್ಟುನಿಟ್ಟಾಗಿ ಜಾರಿಗೆ ತರಲು ಮುಂದಾಗಿದೆ ಎಂದು ಜೇಟ್ಲಿ ಹೇಳಿದ್ದಾರೆ.!!

2 ಸಾವಿರದ ತನಕ ಡಿಜಿಟಲ್ ವಹಿವಾಟಿಗೆ 'ಎಂಡಿಆರ್' ಶುಲ್ಕ ತೆರವು!!
Aadhaar Number ವೈರಿಫಿಕೇಷನ್ ಮಾಡುವುದು ಹೇಗೆ..?

ಪ್ರಸ್ತುತ ಸರ್ಕಾರ ಎಂಡಿಆರ್ ಶುಲ್ಕ ತೆರವು ನಿಯಮ ಜನವರಿ 1ರಿಂದಲೇ ಜಾರಿಗೆ ಬರಲಿದೆ ಎಂದು ಸರ್ಕಾರ ತಿಳಿಸಿದ್ದು, ಡಿಜಿಟಲ್ ವಹಿವಾಟುವಿನಲ್ಲಿ 2 ಸಾವಿರದ ತನಕ ಮೊತ್ತ ಪಾವತಿ ಮಾಡುವವರು ಎಂಡಿಆರ್ ಶುಲ್ಕವನ್ನು ಪಾವತಿ ಮಾಡುವಂತಿಲ್ಲ ಎಂದು ಸ್ಪಷ್ಟವಾಗಿ ಹೇಳಲಾಗಿದೆ.!!

2 ಸಾವಿರದ ತನಕ ಡಿಜಿಟಲ್ ವಹಿವಾಟಿಗೆ 'ಎಂಡಿಆರ್' ಶುಲ್ಕ ತೆರವು!!

ಇನ್ನು 2017ರಲ್ಲಿ ಭೀಮ್ ಆಪ್ ನ ಬಳಕೆಯಲ್ಲಿ ಗಣನೀಯ ಪ್ರಮಾಣದ ಏರಿಕೆಯಾಗಿದ್ದು, ವಹಿವಾಟಿನ ಪ್ರಮಾಣದಲ್ಲಿ ಶೇ,86ರಷ್ಚು ಹೆಚ್ಚಿದೆ. ಒಟ್ಟು ಸುಮಾರು 145.6 ಮಿಲಿಯನ್ ಬಳಕೆದಾರರು ಭೀಮ್ ಆಪ್ ಅನ್ನು ಬಳಕೆ ಮಾಡಿದ್ದು, ಒಟ್ಟು 13,174 ಕೋಟಿ ರೂಪಾಯಿಗಳ ವಹಿವಾಟು ನಡೆದಿದೆ ಎಂದು ಸರ್ಕಾರ ಮಾಹಿತಿ ನೀಡಿದೆ.!!

ಓದಿರಿ: ಶಿಯೋಮಿಗೆ ಸೆಡ್ಡುಹೊಡೆದ ಸ್ಯಾಮ್‌ಸಂಗ್!..ಕೇವಲ 9,999ರೂ.ಗಳಿಗೆ ಗ್ಯಾಲಾಕ್ಸಿ ಆನ್ ನೆಕ್ಸ್ಟ್ ರಿಲೀಸ್!!

Best Mobiles in India

English summary
BHIM UPI or Aadhaar-enabled payment systems to promote digital transactions..to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X