Subscribe to Gizbot

ಶಿಯೋಮಿಗೆ ಸೆಡ್ಡುಹೊಡೆದ ಸ್ಯಾಮ್‌ಸಂಗ್!..ಕೇವಲ 9,999ರೂ.ಗಳಿಗೆ ಗ್ಯಾಲಾಕ್ಸಿ ಆನ್ ನೆಕ್ಸ್ಟ್ ರಿಲೀಸ್!!

Written By:

ಚೀನಾ ಮೊಬೈಲ್ ಕಂಪೆನಿಗಳಿಗೆ ಸೆಡ್ಡು ಹೊಡೆಯುವ ನಿಟ್ಟಿನಲ್ಲಿ ಪ್ರಖ್ಯಾತ ಮೊಬೈಲ್ ಸಂಸ್ಥೆ ಸ್ಯಾಮ್‌ಸಂಗ್ ಬಜೆಟ್ ಬೆಲೆಯ ಫೋನ್ ಅನ್ನು ಬಿಡುಗಡೆ ಮಾಡಿದೆ. ಸ್ಯಾಮ್‌ಸಂಗ್‌ ಗ್ಯಾಲಾಕ್ಸಿ ಆನ್ ನೆಕ್ಸ್ಟ್ ಮಾಡೆಲ್‌ನ ನೂತನ ವೆರಿಯಂಟ್ ಸ್ಮಾರ್ಟ್‌ಫೋನ್ ಇದೀಗ ಫ್ಲಿಪ್‌ಕಾರ್ಟ್‌ನಲ್ಲಿ ಕೇವಲ 9,999ರೂ.ಗಳಿಗೆ ಲಭ್ಯವಿದೆ.!!

ಸ್ಮಾರ್ಟ್‌ಫೋನ್ ಬಳಕೆದಾರರು ಆಶಿಸುವ ಬಹುತೇಕ ಎಲ್ಲಾ ಫೀಚರ್‌ಗಳು ನೂತನ 16GB ವೆರಿಯಂಟ್ ಆನ್ ನೆಕ್ಸ್ಟ್ ಸ್ಮಾರ್ಟ್‌ಫೋನ್‌ನಲ್ಲಿದ್ದು, ಹಾಗಾದರೆ, ಸ್ಮಾರ್ಟ್‌ಫೋನ್ ಫೀಚರ್ಸ್‌ಗಳೇನು? ಸ್ಮಾರ್ಟ್‌ಫೋನ್ ಸೇಲ್ ಆರಂಭ ಯಾವಾಗ? ಸ್ಮಾರ್ಟ್‌ಫೋನ್ ಖರೀದಿಸಲು ಇರುವ ಆಫರ್‌ಗಳೇನು ಎಂಬುದನ್ನು ಕೆಳಗಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ.!!

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಡಿಸ್‌ಪ್ಲೇ ಮತ್ತು ಪ್ರೊಸೆಸರ್!?

ಡಿಸ್‌ಪ್ಲೇ ಮತ್ತು ಪ್ರೊಸೆಸರ್!?

ಸ್ಯಾಮ್‌ಸಂಗ್‌ ಗ್ಯಾಲಾಕ್ಸಿ ಆನ್ ನೆಕ್ಸ್ಟ್ 1080×1920 ರೆಸ್ಯುಲೇಷನ್ ಹೊಂದಿರುವ 5.5 ಇಂಚ್ ಫುಲ್ ಹೆಚ್‌ಡಿ ಡಿಸ್‌ಪ್ಲೇಯನ್ನು ಹೊಂದಿದೆ. ಇನ್ನು ಫೀಂಗರ್‌ಪ್ರಿಂಟ್ ಫೀಚರ್ ಸ್ಮಾರ್ಟ್‌ಫೋನ್ ಅಂದವನ್ನು ಹೆಚ್ಚಿಸಲಿದ್ದು, 1.6GHZ ಎಕ್ಟೆನಸ್ 7870 ಆಕ್ಟಕೋರ್ ಪ್ರೊಸೆಸರ್ ಸ್ಮಾರ್ಟ್‌ಫೋನ್ ಅನ್ನು ಅಲಂಕರಿಸಿದೆ.!!

How to Sharing a Mobile Data Connection with Your PC (KANNADA)
RAM ಮತ್ತು ಮೆಮೊರಿ.!!

RAM ಮತ್ತು ಮೆಮೊರಿ.!!

ಭಾರತದಲ್ಲಿ ಇದೀಗ ಮಾರಾಟಕ್ಕೆ ಬಂದಿರುವ 16GB ವೆರಿಯಂಟ್ ಆನ್ ನೆಕ್ಸ್ಟ್ ಸ್ಮಾರ್ಟ್‌ಫೋನ್‌ 3GB RAM ಅನ್ನು ಹೊಂದಿದೆ.! ಮೈಕ್ರೊ ಎಸ್‌ಡಿ ಕಾರ್ಡ್‌ ಮೂಲಕ ಸ್ಮಾರ್ಟ್‌ಫೋನ್ ಮೆಮೊರಿಯನ್ನು 256GB ವರೆಗೂ ವಿಸ್ತರಣೆ ಮಾಡಬಹುದಾದ ಅವಕಾಶ ಕೂಡ ಲಭ್ಯವಿದೆ.!!

ಆಂಡ್ರಾಯ್ಡ್ 7.0ಗೆ ಅಪ್‌ಡೇಟ್!!

ಆಂಡ್ರಾಯ್ಡ್ 7.0ಗೆ ಅಪ್‌ಡೇಟ್!!

ಪ್ರಸ್ತುತ ಮಾರಾಟಕ್ಕಿರುವ 16GB ವೆರಿಯಂಟ್ ಆನ್ ನೆಕ್ಸ್ಟ್ ಸ್ಮಾರ್ಟ್‌ಫೋನ್‌ ಆಂಡ್ರಾಂಯ್ಡ್ ಮಾರ್ಶಮಲ್ಲೊ 6.0 ಮೂಲಕ ಕಾರ್ಯನಿರ್ವಹಣೆ ನೀಡಲಿದೆ. ಸ್ಯಾಮ್‌ಸಂಗ್ ಆನ್ ನೆಕ್ಸ್ಟ್ ಸ್ಮಾರ್ಟ್‌ಫೋನ್‌ಗೆ ಈಗಷ್ಟೇ ಆಂಡ್ರಾಯ್ಡ್ 7.0 ನ್ಯೂಗಾ ಅಪ್‌ಡೇಟ್ ನೀಡಲಿದೆ ಎಂದು ಹೇಳಲಾಗಿದೆ.!!

ಕ್ಯಾಮೆರಾ ಹೇಗಿದೆ?

ಕ್ಯಾಮೆರಾ ಹೇಗಿದೆ?

ಎಫ್/1.9 ಅಪೆರ್ಚರ್, ಆಟೋಫೋಕಸ್ ಮತ್ತು ಎಲ್ಇಡಿ ಫ್ಲ್ಯಾಶ್‌ನೊಂದಿಗೆ ಹಿಂಭಾಗದಲ್ಲಿ 13 ಮೆಗಾಪಿಕ್ಸೆಲ್ ಕ್ಯಾಮೆರಾವನ್ನು ಆನ್ ನೆಕ್ಸ್ಟ್ ಫೋನಿನಲ್ಲಿ ಕಾಣಬಹುದು. ಮುಂಭಾಗದಲ್ಲಿ ಎಲ್ಇಡಿ ಫ್ಲ್ಯಾಷ್ ಹೊಂದಿರುವ 8 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾ ಲಭ್ಯವಿದೆ.!!

ಬ್ಯಾಟರಿ ಮತ್ತು ಇತರೆ ಫೀಚರ್ಸ್!!

ಬ್ಯಾಟರಿ ಮತ್ತು ಇತರೆ ಫೀಚರ್ಸ್!!

16GB ವೆರಿಯಂಟ್ ಸ್ಯಾಮ್‌ಸಂಗ್‌ ಗ್ಯಾಲಾಕ್ಸಿ ಆನ್ ನೆಕ್ಸ್ಟ್ 3300mAh ನಾನ್ ರಿಮೂವೆಬಲ್ ಬ್ಯಾಟರಿಯನ್ನು ಹೊಂದಿದೆ. 4G ವೋಲ್ಟ್ ವೋಲ್ಟ್, ಓಟಿಜಿ ಸಪೋರ್ಟೆಡ್, ಮೈಕ್ರೊ ಎಸ್‌ಡಿ ಕಾರ್ಡ್ ಸ್ಲಾಟ್‌ನಂತಹ ಅತ್ಯತ್ತಮ ಫೀಚರ್‌ಗಳನ್ನು ಹೊಂದಿದೆ.!!

ಓದಿರಿ:ಸಾಮಾಜಿಕ ಜವಾಬ್ದಾರಿ ಕೈಗೆತ್ತಿಕೊಂಡಿವೆ ಟೆಕ್ ಕಂಪೆನಿಗಳು!!..ಗೂಗಲ್, ಫೇಸ್‌ಬುಕ್‍, ಆಪಲ್ ಸಾಥ್!!

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
Samsung has launched a new 16GB storage variant of the Galaxy On Nxt in India . to know more visit to kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot