Subscribe to Gizbot

ಆಧಾರ್ ಜೋಡಿಸದ ಮೊಬೈಲ್ ಸಂಪರ್ಕ ಕಡಿತವಿಲ್ಲ!..ಸರ್ಕಾರ ಸ್ಪಷ್ಟನೆ!!

Written By:

ಮೊಬೈಲ್ ನಂಬರ್‌ಗೆ ಆಧಾರ್ ನಂಬರ್ ಜೋಡಣೆ ಮಾಡದಿದ್ದರೆ ಸಂಪರ್ಕ ಕಡಿತಗೊಳಿಸಲಾಗುವುದು ಎನ್ನುವ ಸುದ್ದಿಗೆ ಬ್ರೇಕ್ ಬಿದ್ದಿದೆ.! ಮೊಬೈಲ್‌ ನಂಬರ್‌ಗೆ ಆಧಾರ್ ನಂಬರ್ ಜೋಡಣೆ ಮಾಡಿಲ್ಲ ಎಂಬ ಕಾರಣಕ್ಕಾಗಿ ಮೊಬೈಲ್ ಸಂಪರ್ಕವನ್ನು ಕಡಿತಗೊಳಿಸುವುದಿಲ್ಲ ಎಂದು ಮಂಗಳವಾರ ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದೆ.!!

ಆಧಾರ್‌ಗೆ ಸಂಬಂಧಿಸಿದ ಅರ್ಜಿಗಳೂ ಸುಪ್ರೀಂಕೋರ್ಟ್ ವಿಚಾರಣೆಯಲ್ಲಿದ್ದು, ಆಧಾರ್ ಮತ್ತು ಮೊಬೈಲ್‌ ಸಂಖ್ಯೆ ಜೋಡಿಸದ ಗ್ರಾಹಕರ ವಿರುದ್ಧ ಯಾವ ಕ್ರಮ ಕೈಗೊಳ್ಳಬೇಕು ಎನ್ನುವುದನ್ನು ನ್ಯಾಯಾಲಯ ಆದೇಶದ ನಂತರ ನಿರ್ಧರಿಸುತ್ತೇವೆ ಎಂದು ದೂರಸಂಪರ್ಕ ಇಲಾಖೆಯ ಕಾರ್ಯದರ್ಶಿ ಅರುಣಾ ಸುಂದರರಾಜನ್ ಮಾಧ್ಯಮಗಳಿಗೆ ತಿಳಿಸಿದ್ದಾರೆ.!

ಆಧಾರ್ ಜೋಡಿಸದ ಮೊಬೈಲ್ ಸಂಪರ್ಕ ಕಡಿತವಿಲ್ಲ!..ಸರ್ಕಾರ ಸ್ಪಷ್ಟನೆ!!

ಆಧಾರ್ ಅನ್ನು ಸಿಮ್‌ನಂಬರ್‌ಗೆ ಲಿಂಕ್ ಮಾಡುವುದರಿಂದ ನಮ್ಮ ಖಾಸಾಗಿತನಕ್ಕೆ ಧಕ್ಕೆಯಾಗಲಿದೆ ಎಂಬ ಹೋರಾಟಕ್ಕೆ ಮಣಿದು ಸರ್ಕಾರ ಈ ಹೇಳಿಕೆ ನೀಡಿದ್ದು, ಸರ್ಕಾರದ ಮೂಲಕ ಈ ಯೋಜನೆ ಜಾರಿಯಾಗುವುದಕ್ಕಿಂತ ಸುಪ್ರೀಂಕೋರ್ಟ್ ವಿಚಾರಣೆ ನಂತರ ಮುಂದಿನ ಕ್ರಮ ಕೈಗೊಳ್ಳಲು ತೀರ್ಮಾನಿಸಿದೆ ಎನ್ನಲಾಗಿದೆ.!!

ಆಧಾರ್ ಜೋಡಿಸದ ಮೊಬೈಲ್ ಸಂಪರ್ಕ ಕಡಿತವಿಲ್ಲ!..ಸರ್ಕಾರ ಸ್ಪಷ್ಟನೆ!!

ಇನ್ನು ಆಧಾರ್ ಜೋಡಣೆಗಾಗಿ ಮೊಬೈಲ್ ಅಂಗಡಿಗಳಿಗೆ ಅಲೆದಾಡುವ ಜಂಜಾಟ ತಪ್ಪಿಸಿ ಒಂದು ಬಾರಿ ನೀಡುವ ಪಾಸ್‌ವರ್ಡ್‌ ನೆರವಿನಿಂದ ಮನೆಯಿಂದಲೇ ಸುಲಭವಾಗಿ ಸಂಪರ್ಕ ಕಲ್ಪಿಸುವ ವ್ಯವಸ್ಥೆ ಅಂತಿಮ ಹಂತದಲ್ಲಿದ್ದು, ಡಿಸೆಂಬರ್ 1 ರ ನಂತರ ಚಾಲನೆಗೊಳ್ಳಿದೆ ಎಂದು ದೂರಸಂಪರ್ಕ ಖಾತೆ ಸಚಿವ ಮನೋಜ್‌ ಸಿನ್ಹಾ ತಿಳಿಸಿದ್ದಾರೆ.!!

ಓದಿರಿ'ರೆಡ್‌ಮಿ ನೋಟ್ 4' ಹಿಂದಿಕ್ಕುವ 'ಜೆನ್‌ಪೋನ್ 3 ಮ್ಯಾಕ್ಸ್' ಬೆಲೆ ಇದೀಗ 9,200ರೂ.!!

English summary
The government has clarified that there has been no final decision on linking Aadhaar to mobile numbers.to know more visit to kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot