Home
ಸುದ್ದಿಜಾಲ

Gruha Lakshmi scheme: ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಕೆ ಇನ್ನಷ್ಟು ಸರಳ... ಎಸ್‌ಎಮ್‌ಎಸ್‌ಗಾಗಿ ಕಾಯಬೇಕಿಲ್ಲ!

ಕರ್ನಾಟಕ ಸರ್ಕಾರದ ಮಹತ್ವದ ಯೋಜನೆಗಳಲ್ಲಿ ಒಂದಾದ ಗೃಹಲಕ್ಷ್ಮಿಗೆ (Gruha Lakshmi) ಜನರು ಮುಗಿಬಿದ್ದು ಅರ್ಜಿ ಸಲ್ಲಿಕೆ ಮಾಡುತ್ತಿದ್ದಾರೆ. ಅದರಲ್ಲೂ ಈ ವಿಭಾಗದಲ್ಲಿ ಹೆಚ್ಚು ಕಟ್ಟು ನಿಟ್ಟಿನ ಕ್ರಮಗಳನ್ನು ತೆಗೆದುಕೊಂಡಿದ್ದು, ಕಚೇರಿಗಳಿಗೆ ತೆರಳಿಯೇ ಅರ್ಜಿ ಸಲ್ಲಿಸಲು ಸೂಚನೆ ನೀಡಲಾಗಿದೆ. ಈ ನಡುವೆ ಮಹಿಳೆಯರು ಇನ್ನಷ್ಟು ಸುಲಭವಾಗಿ ಅರ್ಜಿ ಸಲ್ಲಿಕೆಗೆ ಅವಕಾಶ ಮಾಡಿಕೊಡಲಾಗಿದೆ.

ಹೌದು, ಕಾಂಗ್ರೆಸ್‌ ಸರ್ಕಾರದ (Congress Govt) ಪ್ರಮುಖ ಐದು ಗ್ಯಾರಂಟಿಗಳಲ್ಲಿ ಒಂದಾದ ಗೃಹ ಲಕ್ಷ್ಮಿಗೆ ಅರ್ಜಿ ಸಲ್ಲಿಕೆ ಆರಂಭ ಆಗಿದ್ದು, ಅರ್ಜಿ ಸಲ್ಲಿಸುವ ಮುನ್ನ ಮೊಬೈಲ್‌ನಲ್ಲಿ ನೀಡಲಾದ ನಂಬರ್‌ಗೆ ಎಸ್‌ಎಮ್‌ಎಸ್‌ ಮಾಡಿದ ನಂತರವಷ್ಟೇ ನಿಗದಿಪಡಿಸಲಾದ ಕಚೇರಿಗಳಿಗೆ ತೆರಳಿ ಅರ್ಜಿ ಸಲ್ಲಿಕೆ ಮಾಡಬಹುದಾಗಿತ್ತು. ಆದರೆ, ಈ ನಿಯಮ ಈಗ ಬದಲಾಗಿದೆ. ಈ ಮೂಲಕ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್(Lakshmi Hebbalkar) ರಾಜ್ಯದ ಜನರಿಗೆ ಗುಡ್‌ ನ್ಯೂಸ್‌ ನೀಡಿದ್ದಾರೆ. ಹಾಗಿದ್ರೆ, ಏನಿದು ಹೊಸ ನಿಯಮ ಎಂದು ತಿಳಿಯೋಣ ಬನ್ನಿ.

ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಕೆ ಇನ್ನಷ್ಟು ಸರಳ ....

ಮೆಸೆಜ್‌ ಅವಶ್ಯಕತೆ ಇಲ್ಲ: ಇನ್ನು ಗೃಹಲಕ್ಷ್ಮಿ ಯೋಜನೆಗೆ ಚಾಲನೆ ಸಿಕ್ಕ 7 ದಿನಗಳಲ್ಲೇ ಬರೋಬ್ಬರಿ 50 ಲಕ್ಷಕ್ಕೂ ಅಧಿಕ ಫಲಾನುಭವಿಗಳಿಗಳು ಅರ್ಜಿ ಸಲ್ಲಿಕೆ ಮಾಡಿದ್ದಾರೆ. ಈ ಸಂತಸದ ನಡುವೆ ಗೃಹಲಕ್ಷ್ಮಿ ಯೋಜನೆಯ ನೋಂದಣಿಗಾಗಿ ಎಸ್‌ಎಮ್‌ಎಸ್‌(SMS) ಬರುವವರೆಗೂ ಕಾಯಬೇಕಿಲ್ಲ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಮಾಹಿಸತಿ ನೀಡಿದ್ದು, ಅರ್ಹ ಫಲಾನುಭವಿಗಳು ನೇರವಾಗಿ ಹತ್ತಿರದ ನೋಂದಣಿ ಕೇಂದ್ರಗಳಿಗೆ ತೆರಳಿ ಹೆಸರು ನೋಂದಾಯಿಸಿಕೊಳ್ಳಬಹುದು ತಿಳಿಸಿದ್ದಾರೆ. ಈ ಸಂಬಂಧ ಉಂಟಾಗಿದ್ದ ಸಮಸ್ಯೆಗೆ ವಿದಾಯ ಹೇಳಿದಂತೆ ಆಗಿದೆ.

ಈ ಮೊದಲು ಫಲಾನುಭವಿಗಳು ಮೆಸೆಜ್‌ ಮಾಡಿದ ಬಳಿಕ ಆ ನಂಬರ್‌ಗೆ ಸ್ಥಳ ಹಾಗೂ ದಿನಾಂಕ ಸೇರಿದಂತೆ ಅಗತ್ಯ ಮಾಹಿತಿ ಇರುವ ಮೆಸೆಜ್‌ ಅನ್ನು ಸ್ವೀಕಾರ ಮಾಡುತ್ತಿದ್ದರು. ಇದಾದ ಬಳಿಕವಷ್ಟೇ ನೋಂದಣಿ ಕೇಂದ್ರಗಳಿಗೆ ತೆರಳಿ ನೋಂದಣಿ ಮಾಡಿಸಿಕೊಳ್ಳುವ ಅವಕಾಶ ನೀಡಲಾಗಿತ್ತು. ಅದರಲ್ಲೂ ನಿಗದಿತ ಸಮಯಕ್ಕೆ ತಲುಪದವರು ಸಂಜೆ ವೇಳೆ ಕೇಂದ್ರಗಳಿಗೆ ಹೋಗಿ ನೋಂದಣಿ ಮಾಡಿಸಿಕೊಳ್ಳುವ ಅವಕಾಶವನ್ನೂ ನೀಡಲಾಗಿತ್ತು.

ಈ ಎಲ್ಲಾ ಬೆಳವಣಿಗೆ ನಡುವೆ ಎಸ್‌ಎಮ್‌ಎಸ್‌ ಸಂಬಂಧ ಹಲವಾರು ಸಮಸ್ಯೆಗಳು ಉಂಟಾಗಿದ್ದವು. ಅಂದರೆ ಹಲವಾರು ಜನರು ಎಷ್ಟೇ ಪ್ರಯತ್ನಪಟ್ಟರೂ ಎಸ್‌ಎಮ್ಎಸ್‌ ಸ್ವೀಕಾರ ಮಾಡಿರಲಿಲ್ಲ. ಇದರಿಂದಾಗಿ ಈಗ ಈ ನಿಯಮ ಜಾರಿ ಮಾಡಲಾಗಿದೆ. ಈ ನಿರ್ಧಾರದಿಂದ ಸಾಕಷ್ಟು ಮಹಿಳೆಯರಿಗೆ ಅನುಕೂಲ ಆದಂತೆ ಆಗಿದೆ. ಯಾಕೆಂದರೆ ಒಂಟಿಯಾಗಿ ಇರುವ ಮಹಿಳೆಯರಲ್ಲಿ ಕೆಲವರ ಬಳಿ ಮೊಬೈಲ್‌ ಇರುವುದಿಲ್ಲ, ಇನ್ನೂ ಕೆಲವರಿಗೆ ಬಳಕೆ ಹೇಗೆ ಮಾಡಬೇಕು ಎಂಬುದೇ ತಿಳಿದಿರಲಿಲ್ಲ.

ಇನ್ನು ಬೆಂಗಳೂರು ಒನ್ (Bangalore is one) ಸೇರಿದಂತೆ ನೋಂದಣಿ ಕೇಂದ್ರಗಳಲ್ಲಿ ಹಲವು ರೀತಿಯ ಸಮಸ್ಯೆ ಗಳು ಈ ಸಂಬಂಧ ಎದುರಾಗುತ್ತಿವೆ. ಹೀಗಾಗಿ ಪಾಲಿಕೆಯ ಎಲ್ಲಾ ವಾರ್ಡ್ ಕಚೇರಿಗಳಲ್ಲಿ ನೋಂದಣಿ ಮಾಡಲು ಅವಕಾಶ ಕಲ್ಪಿಸಲು ಸೂಚನೆ ನೀಡಲಾಗಿದೆ. ಅದರಂತೆ 198 ವಾರ್ಡ್ ಕಛೇರಿಗಳಲ್ಲಿ ಸೆಂಟರ್ ಓಪನ್ ಮಾಡಲು ಕಂದಾಯ ವಿಭಾಗದ ಉಪ ಆಯುಕ್ತರನ್ನು ನೋಡಲ್ ಅಧಿಕಾರಿಯಾಗಿ ನೇಮಕ ಮಾಡಲು ಸೂಚನೆ ನೀಡಲಾಗಿದೆ. ಈ ಮೂಲಕ ಯಶಸ್ವಿಯಾಗಿ ಈ ಕಾರ್ಯ ಮಾಡಲು ಅನುಕೂಲ ಮಾಡಿಕೊಡಲಾಗಿದೆ.

ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಕೆ ಇನ್ನಷ್ಟು ಸರಳ ....

ಅಷ್ಟು ಮಾತ್ರವಲ್ಲದೆ ಬಿಬಿಎಂಪಿ ವ್ಯಾಪ್ತಿಯಲ್ಲಿನ ಜನನಿಬಿಡ ಪ್ರದೇಶಗಳಲ್ಲಿ ಈ ಸಂಬಂಧ ಜಾಹೀರಾತು ನೀಡಲು ಸರ್ಕಾರ ಮುಂದಾಗಿದೆ. ಅದರಲ್ಲೂ ಕೊಳಗೇರಿ ಪ್ರದೇಶಗಳಲ್ಲಿ ವಿಶೇಷ ಅಭಿಯಾನದ ಮೂಲಕ ನೋಂದಣಿ ಪ್ರಕ್ರಿಯೆಗೆ ವೇಗ ನೀಡಲು ಪಾಲಿಕೆ ಸಜ್ಜಾಗುತ್ತಿದೆ. ಅಷ್ಟು ಮಾತ್ರವಲ್ಲದೆ ಈ ಸಂಬಂಧ ಏನಾದರೂ ಕುಂದುಕೊರತೆ ಇದ್ದರೆ ಪಾಲಿಕೆ ವಾರ್ಡ್ ಕಚೇರಿಯಲ್ಲಿ ಮಾಹಿತಿ ಪಡೆದುಕೊಳ್ಳಬಹುದು ಎಂದು ಜನರಿಗೆ ತಿಳಿಸಲಾಗಿದೆ.

ಅರ್ಜಿ ಸಲ್ಲಿಕೆ ವೇಳೆ ಗೊಂದಲ ಇದ್ದರೆ ಈ ರೀತಿ ಮಾಡಿ: ಇಷ್ಟಾಗಿಯೂ ನಿಮಗೆ ಈ ಸಂಬಂಧ ಹಲವು ಗೊಂದಲಗಳಿಗೆ ಎಂದರೆ 1902 ಸಂಖ್ಯೆಗೆ ಕರೆ ಮಾಡಿ ಸಂಪೂರ್ಣ ಮಾಹಿತಿ ಪಡೆದುಕೊಳ್ಳಬಹುದಾಗಿದೆ. ಅಷ್ಟು ಮಾತ್ರವಲ್ಲದೆ ಈ ಸಂಖ್ಯೆಗೆ ಕರೆ ಮಾಡುವ ಮೂಲಕ ನಿಮ್ಮ ವೇಳಾಪಟ್ಟಿಯ ಮಾಹಿತಿಯನ್ನೂ ತಿಳಿದುಕೊಳ್ಳಬಹುದು. ಇದರೊಂದಿಗೆ ಸೇವಾಸಿಂಧು ಪೋರ್ಟಲ್‌ನಲ್ಲಿ ನಿಮ್ಮ ಪಡಿತರ ಚೀಟಿ(Ration card) ಸಂಖ್ಯೆಯನ್ನು ನಮೂದಿಸುವ ಮೂಲಕ ನಿಮ್ಮ ಅರ್ಜಿ ಸಲ್ಲಿಕೆ ದಿನಾಂಕದ ಬಗ್ಗೆ ಮಾಹಿತಿ ತಿಳಿದುಕೊಳ್ಳಬಹುದಾಗಿದೆ.

ಅರ್ಜಿ ಸಲ್ಲಿಕೆ ಮಾಡಲು ಏನೆಲ್ಲಾ ದಾಖಲೆಗಳು ಬೇಕು?: ಈ ಯೋಜನೆಗೆ ಅರ್ಜಿ ಸಲ್ಲಿಕೆ ಮಾಡಲು ಅರ್ಹ ಫಲಾನುಭವಿಗಳು ಮೊಬೈಲ್‌ ಸಂಖ್ಯೆ, ಆಧಾರ್‌ ಕಾರ್ಡ್‌(Aadhaar Card), ಬ್ಯಾಂಕ್‌ ಖಾತೆ ಪುಸ್ತಕವನ್ನು ಹೊಂದಿರಬೇಕು. ಇದಾದ ಬಳಿಕ ನಿಮಗೆ ಒಂದು ಸ್ವೀಕೃತಿ ನೀಡಲಾಗುತ್ತದೆ.

Best Mobiles in India

English summary
Application submission for Gruha Lakshmi has started and it was necessary to send SMS on mobile phone before submission of application. But, now this rule has changed.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+