ಮೊಬೈಲ್ ನೆಟ್‌ವರ್ಕ್ ಇಲ್ಲದೆ ಮರಹತ್ತಿ ಕಾಲ್ ಮಾಡಿದ ಕೇಂದ್ರ ಸಚಿವ!!!

Written By:

ಡಿಜಿಟಲ್ ಇಂಡಿಯಾಕ್ಕೆ ಇರುಸುಮುರುಸಾಗುವ ಪ್ರಕರಣವೊಂದು ರಾಜಸ್ತಾನದ ಬಿಕಾನೇರ್ ಜಿಲ್ಲೆಯ ದೋಲಿಯಾ ಎಂಬ ಗ್ರಾಮದಲ್ಲಿ ಈ ಘಟನೆ ನಡೆದಿದೆ.!! ಹೌದು, ಕೇಂದ್ರ ಹಣಕಾಸು ಖಾತೆ ರಾಜ್ಯ ಸಚಿವ ಅರ್ಜುನ್ ರಾಮ್ ಮೇಘವಾಲ್ ಅವರು ಮೊಬೈಲ್‍ನಲ್ಲಿ ಮಾತನಾಡಲು ನೆಟ್‌ವರ್ಕ್ ಸಿಗದೆ ಮರ ಹತ್ತಿದ್ದಾರೆ.!!

ತಮ್ಮದೇ ಸಂಸದೀಯ ಕ್ಷೇತ್ರದ ದೋಲಿಯಾ ಗ್ರಾಮಕ್ಕೆ ಭಾನುವಾರ ಭೇಟಿ ನೀಡಿದ್ದ ಮೇಘವಾಲ್, ಅಧಿಕಾರಿಗಳ ನಿರ್ಲಕ್ಷತನ ಮತ್ತು ಜನರ ಸಮಸ್ಯೆ ಆಲಿಸಿ ತಕ್ಷಣವೇ ಅಧಿಕಾರಿಗಳಿಗೆ ಕರೆ ಮಾಡಲು ಮುಂದಾದಾಗ ಆ ಪ್ರದೇಶದಲ್ಲಿ ನೆಟ್‍ವರ್ಕ್ ಸಿಗದೆ ಪರದಾಡಿದ್ದಾರೆ.!!

ಮೊಬೈಲ್ ನೆಟ್‌ವರ್ಕ್ ಇಲ್ಲದೆ ಮರಹತ್ತಿ ಕಾಲ್ ಮಾಡಿದ ಕೇಂದ್ರ ಸಚಿವ!!!

ನಂತರ ಗ್ರಾಮಸ್ಥರು ಮರ ಹತ್ತಿದರೆ ಮಾತ್ರ ಇಲ್ಲಿ ನೆಟ್‌ವರ್ಕ್ ಸಿಗುವುದು ಎಂದು ಹೇಳಿದ ನಂತರ ಮೇಘವಾಲ್ ಅವರು ಮರ ಹತ್ತಿ ಫೋನ್ ಕರೆ ಮಾಡಿದ್ದಾರೆ.!! ಏಣಿ ಮೂಲಕ ಮರ ಸಚಿವರು ಅಧಿಕಾರಿಗಳಿಗೆ ಫೋನ್ ಮಾಡಿ ಗ್ರಾಮಸ್ಥರ ಸಮಸ್ಯೆ ಪರಿಹರಿಸುವಂತೆ ಸೂಚಿಸಿದ್ದಾರೆ.!

ಮೊಬೈಲ್ ನೆಟ್‌ವರ್ಕ್ ಇಲ್ಲದೆ ಮರಹತ್ತಿ ಕಾಲ್ ಮಾಡಿದ ಕೇಂದ್ರ ಸಚಿವ!!!

ನಂತರ ಪ್ರತಿದಿನವೂ ನಾವು ಇದೇ ಸಮಸ್ಯೆಯನ್ನು ಎದುರಿಸುತ್ತಿದ್ದೇವೆ ಎಂದು ಗ್ರಾಮಸ್ಥರು ಹೇಳಿದಾಗ ಸಚಿವರು ಗ್ರಾಮದಲ್ಲಿ ಬಿಎಸ್ಎನ್ಎಲ್ ನೆಟ್‍ವರ್ಕ್ ಟವರ್‌ಗಳನ್ನು ಸ್ಥಾಪಿಸಲು ₹13 ಲಕ್ಷ ಘೋಷಿಸಿದ್ದಾರೆ.! ಸಚಿವರು ಮರ ಹತ್ತಿ ಫೋನ್‌ನಲ್ಲಿ ಮಾತನಾಡುತ್ತಿರುವ ವಿಡಿಯೊ ಈಗ ಸಾಮಾಜಿಕ ತಾಣದಲ್ಲಿ ವೈರಲ್ ಆಗಿದೆ.!!

ಓದಿರಿ: ಆನ್‌ಲೈನ್‌ನಲ್ಲಿ ಲಕ್ಷ ಲಕ್ಷ ಹಣಗಳಿಸಲು ಅತ್ಯುತ್ತಮ ಆಪ್ !! ಯಾವುದು? ಹೇಗೆ ಗೊತ್ತಾ?English summary
nion Minister Arjun Meghwal was forced to climb a tree for a clearer mobile phone signal. to know more visit to kannada.gizbot.com
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot