Home
ಸುದ್ದಿಜಾಲ

ಲಿಥಿಯಂ-ಐಯಾನ್ ಬ್ಯಾಟರಿ ಮೂಲಕ ಸ್ಮಾರ್ಟ್‌ಫೋನ್‌ಗಳನ್ನು ಸಾಧ್ಯವಾಗಿಸಿದ್ದ ಸಾಧಕ ನಿಧನ

ಸ್ಮಾರ್ಟ್‌ಫೋನ್‌ಗಳು ಇಷ್ಟು ಚಿಕ್ಕದಾಗಿ ಚೊಕ್ಕದಾಗಿ ಬಳಕೆ ಮಾಡಲು ಹಿತ ನೀಡುವ ಹಾಗೆ ರೂಪುಗೊಳ್ಳುವುದಕ್ಕೆ ಕಾರಣರಾಗಿದ್ದ ನೊಬೆಲ್ ಪ್ರಶಸ್ತಿ ವಿಜೇತ ಗುಡ್‌ನಫ್(John B. Goodenough) ನಿಧನರಾಗಿದ್ದಾರೆ. ಇವರು ಲಿಥಿಯಂ-ಐಯಾನ್ ಬ್ಯಾಟರಿಗಳನ್ನು ಕಂಡುಹಿಡಿದು ಸ್ಮಾರ್ಟ್‌ಫೋನ್‌ಗಳ ನಿರ್ಮಾಣಕ್ಕೆ ಕೊಡುಗೆ ನೀಡಿದ್ದರು.

ಹೌದು, ಇಂದಿನ ಸ್ಮಾರ್ಟ್‌ಪೋನ್‌ಗಳಂತಹ ವಾಯರ್‌ಲೆಸ್‌ ಎಲೆಕ್ಟ್ರಾನಿಕ್ ಡಿವೈಸ್‌ಗಳಿಗೆ ಶಕ್ತಿ ತುಂಬುವ ಲಿಥಿಯಂ-ಐಯಾನ್ ಬ್ಯಾಟರಿಗೆ (lithium-ion battery) ಅಡಿಪಾಯ ಹಾಕಿದ್ದ 2019 ರ ನೊಬೆಲ್ ಪ್ರಶಸ್ತಿ ವಿಜೇತ ಜಾನ್ ಬಿ ಗುಡ್‌ನಫ್ ಅವರು ತಮ್ಮ 100 ನೇ ವಯಸ್ಸಿನಲ್ಲಿ ಕೊನೆಯುಸಿರೆಳೆದಿದ್ದಾರೆ. ಬನ್ನಿ ಇವರು ಸ್ಮಾರ್ಟ್‌ಗ್ಯಾಜೆಟ್‌ ವಿಭಾಗಕ್ಕೆ ಬ್ಯಾಟರಿ ಮೂಲಕ ಕೊಟ್ಟ ದೊಡ್ಡ ಕೊಡುಗೆಯ ಇಂಟ್ರೆಸ್ಟಿಂಗ್‌ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿಯೋಣ.

ಲಿಥಿಯಂ-ಐಯಾನ್ ಬ್ಯಾಟರಿ ಮೂಲಕ ಸ್ಮಾರ್ಟ್‌ಫೋನ್‌ ಸಾಧ್ಯವಾಗಿಸಿದ್ದ ಸಾಧಕ ನಿಧನ

ಯಾರು ಈ ಜಾನ್ ಬಿ. ಗುಡ್‌ನಫ್ ?: ಜಾನ್ ಬಿ. ಗುಡ್‌ನಫ್ ಅವರು 1980 ರಲ್ಲಿ ಆಕ್ಸ್‌ಫರ್ಡ್ ವಿಶ್ವವಿದ್ಯಾನಿಲಯದಲ್ಲಿ ಕೆಲಸ ಮಾಡುವಾಗ ಲಿಥಿಯಂ-ಕೋಬಾಲ್ಟ್-ಆಕ್ಸೈಡ್ ಕ್ಯಾಥೋಡ್ನೊಂದಿಗೆ ಬ್ಯಾಟರಿಯನ್ನು ಅಭಿವೃದ್ಧಿಪಡಿಸುವ ಮೂಲಕ ಮನ್ನಣೆ ಗಳಿಸಿದ್ದರು.ಅಂದರೆ ಎಕ್ಸಾನ್‌ಗಾಗಿ ಕೆಲಸ ಮಾಡುತ್ತಿದ್ದ ಬ್ರಿಟಿಷ್ ರಸಾಯನಶಾಸ್ತ್ರಜ್ಞ ಡಾ. ವಿಟಿಂಗ್‌ಹ್ಯಾಮ್ ಅಭಿವೃದ್ಧಿಪಡಿಸಿದ ಬ್ಯಾಟರಿಯ ವಿನ್ಯಾಸವನ್ನು ಅವರು ಸುಧಾರಿಸಿದ್ದರು. ಈ ಮೂಲಕ ಇವರ ಈ ಹೊಸ ಆವಿಷ್ಕಾರವು ಲಿಥಿಯಂ-ಐಯಾನ್ ಬ್ಯಾಟರಿಗಳಲ್ಲಿ ಹೆಚ್ಚಿನ ಶಕ್ತಿ ಸಾಮರ್ಥ್ಯ ಮತ್ತು ಹೆಚ್ಚಿನ ಸುರಕ್ಷತೆಗೆ ಅವಕಾಶ ಮಾಡಿಕೊಟ್ಟಿತ್ತು.

ಯಾವುದೇ ರಾಯಧನ ಪಡೆಯಲಿಲ್ಲ: ಬ್ಯಾಟರಿ ವಿಭಾಗದಲ್ಲಿನ ಇವರ ಕ್ರಾಂತಿಕಾರಿ ಹೆಜ್ಜೆ ಎಲ್ಲರಿಗೂ ಅಚ್ಚುಮೆಚ್ಚಾದರೂ ಸಹ ಇವರು ಎಂದಿಗೂ ತಮ್ಮ ಕೆಲಸದಿಂದ ಯಾವುದೇ ರಾಯಧನವನ್ನು ಪಡೆದುಕೊಳ್ಳಲಿಲ್ಲವಂತೆ. ಅಷ್ಟು ಮಾತ್ರವಲ್ಲದೆ ಹೆಚ್ಚಿನ ಹಕ್ಕುಗಳಿಗೆ ಸಹಿ ಸಹ ಹಾಕಿದ್ದರಂತೆ. ಈ ವಿಚಾರದಲ್ಲಿ ಆಕ್ಸ್‌ಫರ್ಡ್ ಮೊದಲು ಪೇಟೆಂಟ್ ಮಾಡಲು ನಿರಾಕರಿಸಿತ್ತು. ಆದರೆ, ಅಂತಿಮವಾಗಿ ಡಾ ಗುಡ್‌ನಫ್ ಬ್ರಿಟಿಷ್ ಪರಮಾಣು ಶಕ್ತಿ ಸಂಶೋಧನಾ ಸಂಸ್ಥೆಗೆ ಸಹಿ ಹಾಕಿದ್ದರಂತೆ.

ಈ ಬ್ಯಾಟರಿಗಳಲ್ಲಿ ಮತ್ತಷ್ಟು ಸುಧಾರಣೆ: ಜಪಾನ್ ಮತ್ತು ಸ್ವಿಟ್ಜರ್ಲೆಂಡ್‌ನ ವಿಜ್ಞಾನಿಗಳು ಲಿಥಿಯಂ-ಐಯಾನ್ ಬ್ಯಾಟರಿಗಳ ಸಾಮರ್ಥ್ಯವನ್ನು ಕಂಡುಕೊಂಡು ಅವುಗಳ ಕಾರ್ಯಕ್ಷಮತೆಯನ್ನು ಹೆಚ್ಚಿಸಲು ಪ್ರಯತ್ನಿಸಿದರು. ಅದರಂತೆ ಗ್ರಾಫಿಟಿಕ್ ಕಾರ್ಬನ್‌ನೊಂದಿಗೆ ಲೇಯರಿಂಗ್ ಲಿಥಿಯಂ ಬ್ಯಾಟರಿಯ ಆನೋಡ್ ಅನ್ನು ಹೆಚ್ಚು ಸುಧಾರಿಸಿದೆ ಎಂದು ಅವರು ಕಂಡುಹಿಡಿದರು. ಈ ಮೂಲಕ ಈ ಬ್ಯಾಟರಿಗಳ ದಕ್ಷತೆ ಮತ್ತು ಸುರಕ್ಷತೆಯನ್ನು ಇನ್ನಷ್ಟು ಹೆಚ್ಚಿಸಿದರು.

1991 ರಲ್ಲಿ ಸೋನಿ ಡಾ. ಗುಡ್‌ನಫ್‌ನ ಕ್ಯಾಥೋಡ್ ಮತ್ತು ಕಾರ್ಬನ್ ಆನೋಡ್ ಅನ್ನು ಸಂಯೋಜಿಸಿ ತರುವಾಯ ಮಾರುಕಟ್ಟೆಯಲ್ಲಿ ಪರಿಚಯಿಸಲು ಮುಂದಾಯಿತು. ಈ ಮೂಲಕ ಬಳಕೆ ಮಾಡಲು ಸುರಕ್ಷಿತವಾದ ಹಾಗೂ ವಿಶ್ವದ ಮೊದಲ ಪುನರ್ಭರ್ತಿ ಮಾಡಬಹುದಾದ ಲಿಥಿಯಂ-ಐಯಾನ್ ಬ್ಯಾಟರಿಯನ್ನು ಎಲ್ಲರೂ ಬಳಕೆ ಮಾಡುವಂತೆ ಆಯ್ತು ಎಂದು ಎನ್‌ಐಟಿ ಸುದ್ದಿ ಸಂಸ್ಥೆ ತನ್ನ ವರದಿಯಲ್ಲಿ ಉಲ್ಲೇಖ ಮಾಡಿದೆ.

ನೊಬೆಲ್ ಪ್ರಶಸ್ತಿ: ಈ ಎಲ್ಲಾ ಬೆಳವಣಿಗೆ ನಡುವೆ 2019ರಲ್ಲಿ ಡಾ. ಗುಡ್‌ನಫ್ ಅವರು 97ನೇ ವಯಸ್ಸಿನಲ್ಲಿ ನೊಬೆಲ್ ಪ್ರಶಸ್ತಿ ಪಡೆದುಕೊಂಡಿದ್ದಾರೆ. ಹಾಗೆಯೇ ಈ ವೇಳೆ ಬ್ಯಾಟರಿ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸುವಲ್ಲಿ ಮಹತ್ವದ ಪಾತ್ರ ವಹಿಸಿದ್ದ ಇತರ ಇಬ್ಬರು ವಿಜ್ಞಾನಿಗಳೂ ಸಹ ಪ್ರತಿಷ್ಠಿತ ಪ್ರಶಸ್ತಿಯನ್ನು ಹಂಚಿಕೊಂಡಿದ್ದಾರೆ. ಇದಾದ ನಂತರದಲ್ಲಿ ಟೆಕ್ಸಾಸ್ ವಿಶ್ವವಿದ್ಯಾಲಯದಲ್ಲಿ ಸಕ್ರಿಯ ಸಂಶೋಧಕರಾಗಿ ಕೆಲಸ ಮಾಡಿದ್ದಾರೆ. ಈ ಮೂಲಕ ಆಧುನಿಕ ಬ್ಯಾಟರಿಗಳನ್ನು ನಿರ್ಮಾಣ ಮಾಡುವಲ್ಲಿ ಅಪಾರ ಸೇವೆ ಸಲ್ಲಿಸಿದ್ದಾರೆ.

ಲಿಥಿಯಂ-ಐಯಾನ್ ಬ್ಯಾಟರಿ ಮೂಲಕ ಸ್ಮಾರ್ಟ್‌ಫೋನ್‌ ಸಾಧ್ಯವಾಗಿಸಿದ್ದ ಸಾಧಕ ನಿಧನ

ಹಿಂದುಳಿದಿದ್ದ ವಿದ್ಯಾರ್ಥಿಯಂತೆ ಇವರು: ಇಷ್ಟು ಸಾಧನೆ ಮಾಡಿ ಜಗತ್ತಿಗೇ ತಮ್ಮದೇ ಆದ ದೊಡ್ಡ ಕೊಡುಗೆ ನೀಡಿದ್ದ ಇವರು ಉತ್ತಮ ವಿದ್ಯಾರ್ಥಿ ಆಗಿರಲಿಲ್ಲವಂತೆ. ನ್ಯೂಯಾರ್ಕ್ ಟೈಮ್ಸ್ ವರದಿಯ ಪ್ರಕಾರ, ಜುಲೈ 25, 1922 ರಂದು ಜರ್ಮನಿಯ ಜೆನಾದಲ್ಲಿ ಜನಿಸಿದ ಇವರು ಶಾಲೆಯಲ್ಲಿ ಹಿಂದುಳಿದ ವಿದ್ಯಾರ್ಥಿ ಎಂದು ಕರೆಸಿಕೊಂಡಿದ್ದರಂತೆ. ಇದರಿಂದಾಗಿ ಆರಂಭದ ಜೀವನದಲ್ಲಿ ಹತಾಶೆ ಮತ್ತು ಪ್ರತ್ಯೇಕತೆಯ ಭಾವನೆ ಮೂಡಿತ್ತಂತೆ.

ಅದಾಗ್ಯೂ ಸಹ ಗಣಿತ ಮತ್ತು ಇತರೆ ವಿಷಯಗಳಲ್ಲಿ ಉತ್ತಮ ಸಾಧನೆ ಮಾಡಿದ್ದಾರೆ. ಜೊತೆಗೆ ಲ್ಯಾಟಿನ್ ಮತ್ತು ಗ್ರೀಕ್ ಭಾಷೆಗಳಲ್ಲಿ ಕಠಿಣ ಅಧ್ಯಯನಕ್ಕೆ ತಮ್ಮನ್ನು ತಾವು ತೊಡಗಿಸಿಕೊಂಡಿದ್ದು, ಈ ಮೂಲಕ ಉತ್ತಮ ಜ್ಞಾನ ಪಡೆದುಕೊಂಡಿದ್ದಾರೆ. ಇದಾದ ಬಳಕ ಗ್ರೋಟನ್ ಮತ್ತು ಯೇಲ್ ವಿಶ್ವವಿದ್ಯಾನಿಲಯದಲ್ಲಿ ಕಂಡುಬಂದ ಶೈಕ್ಷಣಿಕ ವಾತಾವರಣವು ಅವರ ಭವಿಷ್ಯದ ಯಶಸ್ಸಿಗೆ ಕಾರಣವಾಯ್ತಂತೆ.

Best Mobiles in India

English summary
2019 Nobel winner John B Goodenough, who laid the foundation for the lithium-ion battery, has passed away at the age of 100.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+