TRENDING ON ONEINDIA
-
ಸಾಕ್ಷ್ಯಾಧಾರ ಇಲ್ಲದೆ ಪಾಕಿಸ್ತಾನವನ್ನು ದೂಷಿಸಬೇಡಿ ಎಂದ ಚೀನಾ
-
7 ಸೀಟರ್ ವೈಶಿಷ್ಟ್ಯತೆಗಳೊಂದಿಗೆ ಬಿಡುಗಡೆಯಾಗಲಿದೆ ಕಿಯಾ ಕಾರ್ನಿವಾಲ್
-
ಯಾವುದೇ ಆಪ್ಗಳ ಕ್ಯಾಶೆ ಕ್ಲಿಯರ್ ಮಾಡುತ್ತಿರಬೇಕು ಏಕೆ ಮತ್ತು ಹೇಗೆ?
-
'ಬೆಲ್ ಬಾಟಮ್' ಪಾಸು, 'ಕೆಮಿಸ್ಟ್ರಿ ಆಫ್ ಕರಿಯಪ್ಪ'ನ ಫಾರ್ಮೂಲಾ ವರ್ಕೌಟ್
-
ಭಾರತ ಪಾಕ್ ನಡುವೆ ಯುದ್ದ ನಡೆದರೆ ಉಂಟಾಗುವ ಆರ್ಥಿಕ ದುಷ್ಪರಿಣಾಮಗಳೇನು?
-
ಮುಖಮೈಥುನ ನಡೆಸುವ ಪುರುಷರಿಗೆ 'ಬಾಯಿ-ಗಂಟಲ ಕ್ಯಾನ್ಸರ್' ಬರಬಹುದು!
-
ಅಭಿಮಾನಿಗಳಿಂದ ಕೊಹ್ಲಿ-ಎಬಿಡಿ ಪೋಸ್ಟರ್ಗೆ ಹಾಲಭಿಷೇಕ: ವಿಡಿಯೋ
-
ಐಟಿಐ ಲಿಮಿಟೆಡ್ ನಲ್ಲಿ ಕಾನೂನು ಪದವಿ ಅಭ್ಯರ್ಥಿಗೆ ಉದ್ಯೋಗಾವಕಾಶ
ಯಾರಿಗೂ ಅರ್ಥವಾಗದ ಗೂಗಲ್ ಉದ್ಯೋಗಿಗಳ ಭಾಷೆ
ಯಾವುದಾದರೂ ಮಾಹಿತಿ ತಿಳಿಯದಿದ್ದರೇ, ಅಥವಾ ಯಾವುದಾದರೂ ಪದಗಳ ಅರ್ಥ ತಿಳಿಯದಿದ್ದರೇ ಎಲ್ಲರೂ ಹೋಗುವುದು ಇಂದು ಗೂಗಲ್ ಸರ್ಚ್‌ಗೆ. ಗೂಗಲ್ ಕಂಪನಿ 40,000 ಕ್ಕಿಂತ ಹೆಚ್ಚು ಉದ್ಯೋಗಿಗಳನ್ನು ಹೊಂದಿದೆ. ಅಲ್ಲದೇ ವಿವಿಧ ಭಾಷೆಯ, ವಿವಿಧ ಸಂಸ್ಕೃತಿಯ ಉದ್ಯೋಗಿಗಳು ಅಲ್ಲಿದ್ದರು ಸಹ ಎಲ್ಲರಿಗೂ ಅರ್ಥವಾಗುವಂತ ಪದಗಳನ್ನು ಅನುಕೂಲವಾಗುವಂತೆ ಅಳವಡಿಸಿದೆ. ಆ ಪದಗಳು ಏನು ಎಂಬುದನ್ನು ಗಿಜ್‌ಬಾಟ್ ಇಂದಿನ ಲೇಖನದಲ್ಲಿ ನಿಮಗೆ ತಿಳಿಸುತ್ತಿದೆ.
ಓದಿರಿ: ಭಾರತೀಯರು ಮೊಬೈಲ್ ಖರೀದಿಸುತ್ತಿಲ್ಲ : ಏಕೆ ಗೊತ್ತೇ?
ಸ್ಟಾನ್(Stan)
ಗೂಗಲ್ ಪ್ಲೆಕ್ಸ್‌ನಲ್ಲಿ ಗೂಗಲ್ ನ ಟಿ-ರೆಕ್ಸ್ ನೋಡಬಹುದು. ಗೂಗಲ್ ಕಂಪನಿಯನ್ನು ನೆನಪಿಸಲು ಟಿ-ರೆಕ್ಸ್ನ ಪ್ರತಿಮೆ ಇಟ್ಟಿದ್ದಾರೆ.
ನೂಗ್ಲರ್ (Noogler)
ಗೂಗಲ್ ನ ಕಲರ್ ಟೋಪಿಗೆ ಅಲ್ಲಿ ನೂಗ್ಲರ್ ಎಂದು ಕರೆಯುತ್ತಾರೆ.
ಪ್ಲೆಕ್ಸ್ (Plex)
ಗೂಗಲ್‌ನ ವಿಶಾಲವಾದ ಮೌಂಟೇನ್ ವ್ಯೂ ಕ್ಯಾಂಪಸ್ ಅನ್ನು ಉದ್ಯೋಗಿಗಳು ಶಾರ್ಟ್ ಆಗಿ ಹೀಗೆ ಕರೆಯುತ್ತಾರೆ.
ಜಿಬೈಕ್ (GBike)
ಜಿಬೈಕ್ ಗೂಗಲ್ ಕ್ಯಾಂಪಸ್‌ನಲ್ಲಿ ಓಡಾಡಲು ಬಳಸುವ ಕಲರ್ ಫುಲ್ ಫ್ರೇಮಿನ ಬೈಕ್.
ಗ್ರೇಗ್ಲರ್ಸ್ (Greyglers)
ಗೂಗಲ್‌ನಲ್ಲಿನ 40 ವರ್ಷ ವಯಸ್ಸಿಗಿಂತ ಹೆಚ್ಚು ವಯಸ್ಸಾದ ಉದ್ಯೋಗಿಗಳಿಗೆ ಗ್ರೇಗ್ಲರ್ಸ್ ಎಂದು ನಿಕ್‌ನೇಮ್ ನಿಂದ ಕರೆಯುತ್ತಾರೆ.
ಗೇಗ್ಲರ್ಸ್ (Gayglers)
ಗೂಗಲ್‌ನ LGBT ಸದಸ್ಯರಿಗೆ ಗೇಗ್ಲರ್ಸ್ ಎಂದು ಕರೆಯುತ್ತಾರೆ.
ಗೂಗಲ್‌ಜಿಯೆಸ್ಟ್ (Googlegiest)
ಗೂಗಲ್‌ನ ಗಾಸ್ಟ್ ಎಂದು ತಿಳಿಯಬೇಡಿ. ಗೂಗಲ್ ಉದ್ಯೋಗಿಗಳ ವಾರ್ಷಿಕ ಸಮೀಕ್ಷೆಯನ್ನು ಹೀಗೆ ಕರೆಯುತ್ತಾರೆ. ಗೂಗಲ್ ವಾರ್ಷಿಕ ಸಮೀಕ್ಷೆಯಲ್ಲಿ HR ಕೇಳುವ ಪ್ರಶ್ನೆಗಳಿಗೆ ಉತ್ತರಿಸಿದಲ್ಲಿ ಭತ್ಯೆ ಹಾಗೂ ಸ್ಥಾನಗಳನ್ನು ಏರಿಕೆ ಮಾಡಲಾಗುತ್ತದೆ, ಉತ್ತರ ತಪ್ಪಾದಲ್ಲಿ ಅವರನ್ನು ಗೂಗಲ್‌ನಿಂದ ಹೊರಗೆ ಕಳುಹಿಸಲಾಗುತ್ತದೆ.
ಕ್ಸೂಗ್ಲರ್ (Xoogler)
ಗೂಗಲ್ ಕಂಪನಿಯನ್ನು ಬಿಟ್ಟುಹೋದ ಉದ್ಯೋಗಿಯನ್ನು ಕ್ಸೂಗ್ಲರ್ ಎಂದು ಕರೆಯಲಾಗುತ್ತದೆ.
TGIF
Thank God It's Friday ಎಂದು ಇದರ ಅರ್ಥ. ಇದನ್ನು ವಾರದ ಸಭೆ ಸೇರಲು ಬಳಸುತ್ತಾರೆ.
ಪರ್ಫ್ (Perf)
ಗೂಗಲ್ ತನ್ನ ಉದ್ಯೋಗಿಗಳನ್ನು ಅವರ ಕಾರ್ಯಕ್ಷಮತೆಯನ್ನು ವಿಮರ್ಶಿಸಿ ಅವರನ್ನು ಉತ್ತಮರೋ ಅಥವಾ ಕಾರ್ಯದಕ್ಷತೆ ಅವರಿಗಿಲ್ಲವೋ ಎಂಬುದನ್ನು ತಿಳಿಸುತ್ತದೆ. ಅವರನ್ನು ಪರ್ಫ್ ಎಂದು ಕರೆಯುತ್ತಾರೆ.