ಇಯರ್‌ಬಡ್ಸ್ ಖರೀದಿಸೋರಿಗೆ ಹೊಸ ಆಯ್ಕೆ ನೀಡಿದ ನಾಯ್ಸ್ ಸಂಸ್ಥೆ!
ನಾಯ್ಸ್ ಸಂಸ್ಥೆಯ ಇಯರ್‌ಬಡ್ಸ್‌ಗಳಿಗೆ ಭಾರತದಲ್ಲಿ ಒಳ್ಳೆಯ ಮಾರುಕಟ್ಟೆಯಿದೆ. ಬಳಕೆದಾರರ ಕಿವಿಯ ವಿನ್ಯಾಸಕ್ಕೆ ತಕ್ಕಂತೆ ಹೊಂದಿಕೊಳ್ಳುವ ನಾಯ್ಸ್ ಇಯರ್‌ಬಡ್ಸ್ ಸಿಕ್ಕಾಪಟ್ಟೆ ಡಿಮ್ಯಾಂಡ್ ಕ್ರಿಯೆಟ್ ಮಾಡಿವೆ. ಅದರ ಮುಂದುವರೆದ ಭಾಗವಾಗಿ ನಾಯ್ಸ್ ಕಂಪೆನಿ ಭಾರತದಲ್ಲಿ ಹೊಸ ನಾಯ್ಸ್ ಏರ್ ಬಡ್ಸ್ ಪ್ರೊ 3 ಮತ್ತು ನಾಯ್ಸ್ ಏರ್ ಬಡ್ಸ್ 3 ಪರಿಚಯಿಸಿದೆ.
ಹೌದು, ನಾಯ್ಸ್ ಏರ್ ಬಡ್ಸ್ ಪ್ರೊ 3 ಮತ್ತು ನಾಯ್ಸ್ ಏರ್ ಬಡ್ಸ್ 3 ಭಾರತದಲ್ಲಿ ಅನಾವರಣಗೊಂಡಿದೆ. ಈ ಎರಡು ಹೊಸ ಟ್ರೂಲಿ ವಾಯರ್‌ಲೆಸ್ ಇಯರ್‌ಬಡ್ಸ್‌ಗಳು ನವೀನ ಮಾದರಿಯ ಫೀಚರ್ಸ್ ಒಳಗೊಂಡಿವೆ. ಆಕ್ಟಿವ್ ನಾಯ್ಸ್ ಕ್ಯಾನ್ಸಲೇಶನ್ ಫೀಚರ್ಸ್ ಒಳಗೊಂಡಿದ್ದು, ಬಳಕೆದಾರರಿಗೆ ಅತ್ಯುತ್ತಮ ಅನುಭವ ನೀಡಲಿವೆ. ಹಾಗಾದ್ರೆ ಈ ಇಯರ್‌ಬಡ್ಸ್‌ಗಳ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ನಾಯ್ಸ್ ಏರ್ ಬಡ್ಸ್ ಪ್ರೊ 3
ನಾಯ್ಸ್ ಏರ್ ಬಡ್ಸ್ ಪ್ರೊ 3 ನಯವಾದ ಹೊಸ ವಿನ್ಯಾಸವನ್ನು ಹೊಂದಿದೆ. ಇದು 13mm ಆಡಿಯೊ ಡ್ರೈವರ್‌ಗಳನ್ನು ಹೊಂದಿದ್ದು, ಬ್ಲೂಟೂತ್ 5.3 ಅನ್ನು ಬೆಂಬಲಿಸಲಿದೆ. ಸ್ಮಾರ್ಟ್ ಡಿವೈಸ್‌ನೊಂದಿಗೆ ಕ್ವಿಕ್ ಕನೆಕ್ಟ್‌ಗಾಗಿ ಹೈಪರ್‌ಸಿಂಕ್ ಟೆಕ್ನಾಲಜಿಯನ್ನು ಒಳಗೊಂಡಿದೆ. ಇದಲ್ಲದೆ ಈ ಇಯರ್‌ಬಡ್ಸ್ 30 ಡೆಸಿಬಲ್‌ಗಳವರೆಗೆ ANC ಅನ್ನು ಸೇರಿಸಿರುವುದು ಇದರ ಪ್ರಮುಖ ಫೀಚರ್ಸ್ ಆಗಿದೆ. ಇದು ಕ್ವಾಡ್ ಮೈಕ್ ಸೆಟಪ್ ಒಳಗೊಂಡಿದ್ದು, ಫೋನ್ ಕರೆಗಳಿಗೆ ENC ಯನ್ನು ಸಹ ನೀಡಲಿದೆ.
ಇದಲ್ಲದೆ ಇಯರ್‌ಬಡ್ಸ್ ತ್ವರಿತ ಇನ್‌ಪುಟ್‌ಗಳಿಗಾಗಿ ಟಚ್ ಕಂಟ್ರೋಲ್ ಮತ್ತು ಮೀಸಲಾದ ಗೇಮಿಂಗ್ ಮೋಡ್ ಅನ್ನು ಒಳಗೊಂಡಿದೆ. ಇದು ಲೇಟೆನ್ಸಿಯನ್ನು ಕೇವಲ 45ms ಗೆ ಕಡಿಮೆ ಮಾಡಲಿದೆ. ಇನ್ನು ಇಯರ್‌ಬಡ್ಸ್ ಸಿಂಗಲ್ ಚಾರ್ಜ್‌ನಲ್ಲಿ 45 ಗಂಟೆಗಳ ಆಡಿಯೋ ಪ್ಲೇ ಬ್ಯಾಕ್ ಅನ್ನು ನೀಡಲಿದೆ. ಜೊತೆಗೆ ಚಾರ್ಜಿಂಗ್ ಕೇಸ್ ಅನ್ನು ಹೊಂದಿದ್ದುಮ ವೇಗದ ಚಾರ್ಜಿಂಗ್ ಅನ್ನು ಸಹ ಬೆಂಬಲಿಸುತ್ತದೆ. ಇದು ಕೇವಲ 10 ನಿಮಿಷಗಳ ಚಾರ್ಜಿಂಗ್ 3 ಗಂಟೆಗಳವರೆಗೆ ಆಡಿಯೊ ಪ್ಲೇಬ್ಯಾಕ್ ಅನ್ನು ಸಕ್ರಿಯಗೊಳಿಸುತ್ತದೆ.
ನಾಯ್ಸ್ ಏರ್ ಬಡ್ಸ್ 3
ಇದು ಬೇಸ್ ಮಾಡೆಲ್ ಇಯರ್‌ಬಡ್ಸ್ ಆಗಿದ್ದು, ಬಜೆಟ್ ಬೆಲೆಯನ್ನು ಹೊಂದಿದೆ. ಈ ಇಯರ್‌ಬಡ್ಸ್ 13mm ಆಡಿಯೊ ಡ್ರೈವರ್‌ಗಳನ್ನು ಹೊಂದಿದೆ. ಬ್ಲೂಟೂತ್ 5.3 ಕನೆಕ್ಟಿವಿಟಿ ಜೊತೆಗೆ ಸ್ಪಷ್ಟವಾದ ಕರೆ ಗುಣಮಟ್ಟಕ್ಕಾಗಿ ಎನ್ವಿರಾನ್ಮೆಂಟಲ್ ನಾಯ್ಸ್ ಕ್ಯಾನ್ಸಲೇಶನ್ ಅನ್ನು ಸಹ ಒಳಗೊಂಡಿದೆ. ಆದರೆ ನಾಯ್ಸ್ ಏರ್ ಬಡ್ಸ್ 3 ANC ಬೆಂಬಲವನ್ನು ಹೊಂದಿಲ್ಲ. ಇದು ಒಟ್ಟು 45 ಗಂಟೆಗಳ ಬ್ಯಾಟರಿ ಬಾಳಿಕೆಯನ್ನು ನೀಡಲಿದೆ. ಇನ್ನು ಇಯರ್‌ಬಡ್ಸ್ ವೇಗದ ಚಾರ್ಜಿಂಗ್ ಬೆಂಬಲವನ್ನು ಹೊಂದಿದ್ದು, ಕೇವಲ 10 ನಿಮಿಷಗಳ ಚಾರ್ಜಿಂಗ್‌ನೊಂದಿಗೆ 200 ನಿಮಿಷಗಳ ಆಡಿಯೊ ಪ್ಲೇಬ್ಯಾಕ್ ಅನ್ನು ಸಕ್ರಿಯಗೊಳಿಸುತ್ತದೆ.
ಬೆಲೆ ಮತ್ತು ಲಭ್ಯತೆ
ಭಾರತದಲ್ಲಿ ನಾಯ್ಸ್ ಏರ್ ಬಡ್ಸ್ 3 ಪ್ರಸ್ತುತ ಮೊದಲ 500 ಗ್ರಾಹಕರಿಗೆ ಕೇವಲ 1,399ರೂ ಬೆಲೆಯಲ್ಲಿ ದೊರೆಯಲಿದೆ. ಆದರೆ ಇದು ಪರಿಚಯಾತ್ಮಕ ಬೆಲೆ ಆಗಿದ್ದು, ಮುಂದಿನ ದಿನಗಳಲ್ಲಿ ಇದರ ಬೆಲೆ ಕಡಿಮೆ ಆಗಲಿದೆ. ಇದನ್ನು ನೀವು ಸೆರೀನ್ ವೈಟ್ ಮತ್ತು ಜೆಟ್ ಬ್ಲ್ಯಾಕ್ ಕಲರ್ ಆಯ್ಕೆಯಲ್ಲಿ ಖರೀದಿಸಬಹುದಾಗಿದೆ.
ಇನ್ನು ನಾಯ್ಸ್ ಏರ್ ಬಡ್ಸ್ ಪ್ರೊ 3 ಇಯರ್‌ಬಡ್ಸ್ ಮೊದಲ 5400 ಗ್ರಾಹಕರಿಗೆ ಕೇವಲ 1,799ರೂ. ಬೆಲೆಗೆ ದೊರೆಯಲಿದೆ. ಮುಂದಿನ ದಿನಗಳಲ್ಲಿ ಇದರ ನಿಖರವಾದ ಬೆಲೆ ತಿಳಿಯಲಿದೆ. ಇದನ್ನು ನೀವು ಸೇಜ್ ಗ್ರೀನ್, ಸೆರೀನ್ ವೈಟ್, ಶಾಡೋ ಗ್ರೇ ಮತ್ತು ಸ್ಪೇಸ್ ಬ್ಲ್ಯಾಕ್ ಕಲರ್ ಆಯ್ಕೆಗಳಲ್ಲಿ ಖರೀದಿಸಬಹುದಾಗಿದೆ.


Click it and Unblock the Notifications








