Noise Buds Connect : ಭಾರತದಲ್ಲಿ ನಾಯ್ಸ್‌ಬಡ್ಸ್ ಕನೆಕ್ಟ್ ಲಾಂಚ್; ಅಗ್ಗದ ಬೆಲೆಯಲ್ಲಿ ಲಭ್ಯ!
ನಾಯ್ಸ್ ಸಂಸ್ಥೆಯ ಇಯರ್‌ಫೋನ್, ಇಯರ್‌ಬಡ್ಸ್‌ಗಳು ಈಗಾಗಲೇ ಸಾಕಷ್ಟು ಜನಮನ್ನಣೆ ಪಡೆದಿವೆ. ಈ ಬ್ರ್ಯಾಂಡ್‌ನ ಸ್ಮಾರ್ಟ್ ಡಿವೈಸ್‌ಗಳು ಸುಧಾರಿತ ತಂತ್ರಜ್ಞಾನ ಹೊಂದಿದ್ದು, ದೀರ್ಘ ಬಾಳಿಕೆ ಬರುವ ಸಾಮರ್ಥ್ಯ ಪಡೆದುಕೊಂಡಿವೆ. ಈ ಕಾರಣಕ್ಕೆ ಭಾರತದಲ್ಲಿ ಹೆಚ್ಚಿನ ಬೇಡಿಕೆಯೂ ಸಹ ಇದೆ. ಇದೆಲ್ಲದರ ಜೊತೆಗೆ ಇದೀಗ ನಾಯ್ಸ್ ಹೊಸ ಇಯರ್‌ಬಡ್ಸ್ ಅನ್ನು ಅನಾವರಣ ಮಾಡಿದ್ದು, ಈ ಬಡ್ಸ್ ಬರೋಬ್ಬರಿ 50 ಗಂಟೆಗಳ ಪ್ಲೇ ಟೈಮ್ ನೀಡಲಿದೆ.

ಹೌದು, ದೇಶದ ಹೆಸರಾಂತ ಕಂಪೆನಿಗಳಲ್ಲಿ ಒಂದಾದ ನಾಯ್ಸ್, ಬಡ್ಸ್ ಕನೆಕ್ಟ್( Noise Buds Connect ) ಎಂಬ ಹೊಸ ಇಯರ್‌ಬಡ್ಸ್ ಅನ್ನು ಅನಾವರಣ ಮಾಡಿದ್ದು, ಇದು ಕ್ವಾಡ್ ಮೈಕ್‌ನೊಂದಿಗೆ ಪ್ಯಾಕ್ ಆಗಿದೆ. ಹಾಗೆಯೇ ಬೆವರು ಮತ್ತು ನೀರು ನಿರೋಧಕವಾಗಿರುವುದು ಮತ್ತಷ್ಟು ವಿಶೇಷ. ಹಾಗಿದ್ರೆ, ಈ ಇಯರ್‌ಬಡ್ಸ್‌ನ ಬೆಲೆ ಹಾಗೂ ಪ್ರಮುಖ ಫೀಚರ್ಸ್ ವಿವರವನ್ನು ಈ ಲೇಖನದಲ್ಲಿ ತಿಳಿಸಿಕೊಡಲಾಗಿದೆ ಓದಿರಿ.
ನಾಯ್ಸ್ ಬಡ್ಸ್ ಕನೆಕ್ಟ್‌ನ ಪ್ರಮುಖ ಫೀಚರ್ಸ್
ನಾಯ್ಸ್ ಬಡ್ಸ್ ಕನೆಕ್ಟ್ ಇಯರ್‌ಬಡ್ಸ್ 13mm ಡ್ರೈವರ್ ಘಟಕವನ್ನು ಹೊಂದಿದ್ದು, ಈ ಮೂಲಕ ಡೀಪ್ ಬೇಸ್ ಹಾಗೂ ಸ್ಪಷ್ಟವಾದ ಸೌಂಡ್ ಪಡೆಯಬಹುದಾಗಿದೆ. ಇದರೊಂದಿಗೆ ಬ್ಲೂಟೂತ್ ಆವೃತ್ತಿ 5.2 ಅನ್ನು ಬೆಂಬಲಿಸುತ್ತದೆ. ಜೊತೆಗೆ ENC ಬೆಂಬಲದೊಂದಿಗೆ ಕ್ವಾಡ್ ಮೈಕ್ ಆಯ್ಕೆ ಪಡೆದುಕೊಂಡಿರುವ ಈ ಇಯರ್‌ಬಡ್ಸ್, ಕರೆ ಸಮಯದಲ್ಲಿ ಅನಗತ್ಯ ಸೌಂಡ್ ಅನ್ನು ತೆಗೆದುಹಾಕುತ್ತದೆ. ಇದಿಷ್ಟೇ ಅಲ್ಲದೆ IPX5 ರೇಟಿಂಗ್ ಹೊಂದಿರುವ ಬಡ್ಸ್ ಬೆವರು ಮತ್ತು ನೀರು ನಿರೋಧಕವಾಗಿವೆ.
ನಾಯ್ಸ್ ಬಡ್ಸ್ ಕನೆಕ್ಟ್ ಅನ್ನು ಎಲ್ಲಾ ವಿಭಾಗಕ್ಕೂ ಬಳಕೆ ಮಾಡಿಕೊಳ್ಳಬಹುದಾಗಿದೆ. ಅಂದರೆ ಮ್ಯೂಸಿಕ್ ಆಲಿಸಲು, ಗೇಮಿಂಗ್ ಆಡುವಾಗ, ಚಲನಚಿತ್ರ ವೀಕ್ಷಣೆ ಸೇರಿದಂತೆ ಇತರೆ ಎಲ್ಲಾ ಅಗತ್ಯ ವಿಷಯಗಳಲ್ಲೂ ಈ ಇಯರ್‌ಬಡ್ಸ್ ಬಳಸಬಹುದಾಗಿದ್ದು, ವಿಶೇಷ ಸೌಂಡ್ ಫೀಚರ್ಸ್ ನೀಡಲಿದೆ. ಇನ್ನು ಹೈಪರ್‌ಸಿಂಕ್ ತಂತ್ರಜ್ಞಾನ ಇದರಲ್ಲಿದ್ದು, ಚಾರ್ಜಿಂಗ್ ಕೇಸ್‌ನಿಂದ ತೆಗೆದ ತಕ್ಷಣ ನಿಮ್ಮ ಸ್ಮಾರ್ಟ್‌ಫೋನ್‌ಗೆ ಸಂಪರ್ಕಗೊಳ್ಳುತ್ತವೆ. ಇದರೊಂದಿಗೆ ಬಡ್‌ಗಳು ಪವರ್-ಸೆವಿಂಗ್ ಫೀಚರ್ಸ್ ಅನ್ನು ಸಹ ಪಡೆದುಕೊಂಡಿದ್ದು, ದೀರ್ಘ ಸಮಯ ಬಳಕೆ ಮಾಡಲು ಅನುಕೂಲ ಮಾಡಿಕೊಡುತ್ತವೆ.

ನಾಯ್ಸ್ ಉತ್ಪನ್ನಗಳಲ್ಲಿ ತಂತ್ರಜ್ಞಾನ, ನಾವೀನ್ಯತೆ, ಕಾರ್ಯಕ್ಷಮತೆ ಮತ್ತು ಶೈಲಿಯನ್ನು ಒಟ್ಟಿಗೆ ತರುವುದು ಕಂಪೆನಿಯ ಗುರಿಯಾಗಿದೆ. ನಾಯ್ಸ್ ಬಡ್ಸ್ ಕನೆಕ್ಟ್ ಹೆಚ್ಚಿನದಾಗಿ ಪ್ರಯಾಣ ಮಾಡುವ ಯುವಜನರಿಗೆ ಸೂಕ್ತವಾಗಿದೆ ಎಂದು ನಾಯ್ಸ್‌ನ ಸಹ-ಸಂಸ್ಥಾಪಕ ಅಮಿತ್ ಖತ್ರಿ ತಿಳಿಸಿದ್ದಾರೆ.
ನಾಯ್ಸ್ ಬಡ್ಸ್ ಕನೆಕ್ಟ್ ಬ್ಯಾಟರಿ ಸಾಮರ್ಥ್ಯ
ಈ ಹೊಸ ನಾಯ್ಸ್ ಇಯರ್‌ಬಡ್ಸ್ ಅನ್ನು ಒಮ್ಮೆ ಪೂರ್ಣವಾಗಿ ಚಾರ್ಜ್ ಮಾಡಿದರೆ 10 ಗಂಟೆಗಳವರೆಗೆ ಸಂಗೀತ ಆಲಿಸಬಹುದಾಗಿದೆ. ಹಾಗೆಯೇ ಇನ್‌ಸ್ಟಾಚಾರ್ಜ್ ಫೀಚರ್ಸ್ ಇರುವ ಈ ಇಯರ್‌ಬಡ್ಸ್‌ನಲ್ಲಿ ಕೇವಲ 10 ನಿಮಿಷಗಳ ಚಾರ್ಜ್‌ನೊಂದಿಗೆ 120 ನಿಮಿಷಗಳ ಪ್ಲೇಬ್ಯಾಕ್ ಅನ್ನು ಆನಂದಿಸಬಹುದಾಗಿದೆ ಎಂದು ಕಂಪೆನಿ ತಿಳಿಸಿದೆ.
ನಾಯ್ಸ್ ಬಡ್ಸ್ ಕನೆಕ್ಟ್ ಬೆಲೆ ಹಾಗೂ ಲಭ್ಯತೆ
ನಾಯ್ಸ್ ಬಡ್ಸ್ ಕನೆಕ್ಟ್ ಗೆ 1,299 ರೂ. ಗಳ ಬೆಲೆ ನಿಗದಿ ಮಾಡಲಾಗಿದ್ದು, ಈ ಇಯರ್‌ಬಡ್ಸ್ ಕಾರ್ಬನ್ ಬ್ಲಾಕ್, ಮಿಂಟ್ ಗ್ರೀನ್ ಮತ್ತು ಐವರಿ ವೈಟ್ ಎಂಬ ಮೂರು ಬಣ್ಣದ ಆಯ್ಕೆಯಲ್ಲಿ ಲಭ್ಯವಿದೆ. ಹಾಗೆಯೇ ಇದನ್ನು ಕಂಪೆನಿಯ ಅಧಿಕೃತ ವೆಬ್‌ಸೈಟ್ ಹಾಗೂ ಇ ಕಾಮರ್ಸ್ ತಾಣವಾದ ಅಮೆಜಾನ್ ಮೂಲಕ ಖರೀದಿ ಮಾಡಬಹುದಾಗಿದೆ.

ನಾಯ್ಸ್ ಫಿಕ್ ಫೋರ್ಸ್ ಸ್ಮಾರ್ಟ್ ವಾಚ್
ಇತ್ತೀಚೆಗಷ್ಟೇ ನಾಯ್ಸ್ ಸ್ಮಾರ್ಟ್ ವಾಚ್ ಅನ್ನು ಭಾರತದಲ್ಲಿ ಬಿಡುಗಡೆ ಅನಾವರಣ ಮಾಡಿದ್ದನ್ನು ಈ ವೇಳೆ ಗಮನಿಸಬಹುದು. ಈ ಸ್ಮಾರ್ಟ್‌ವಾಚ್‌ಗೆ ನಾಯ್ಸ್ ಫಿಕ್ ಫೋರ್ಸ್ ಎಂದು ಹೆಸರಿಡಲಾಗಿದ್ದು 2,499 ರೂ. ಗಳ ಆಫರ್ ಬೆಲೆ ನಿಗದಿ ಮಾಡಲಾಗಿದೆ. ಈ ವಾಚ್ ಒಂದು ಪೂರ್ಣ ಚಾರ್ಜ್‌ನಲ್ಲಿ 7 ದಿನಗಳವರೆಗೆ ಬ್ಯಾಕಪ್ ಅನ್ನು ನೀಡುತ್ತದೆ.


Click it and Unblock the Notifications