ನಾಯ್ಸ್ ಸಂಸ್ಥೆಯ ಈ ಇಯರ್‌ಬಡ್ಸ್ ಬೆಲೆಯಲ್ಲಿ ಈಗ 64% ಡಿಸ್ಕೌಂಟ್!
ನಾಯ್ಸ್ ಸಂಸ್ಥೆಯು ಭಾರತೀಯ ಮಾರುಕಟ್ಟೆಯಲ್ಲಿ ಫೋನ್‌ಗಳ ಜೊತೆಗೆ ಇತರೆ ಸ್ಮಾರ್ಟ್ ಡಿವೈಸ್‌ಗಳನ್ನು ಸಹ ಪರಿಚಯಿಸಿ ಸೈ ಎನಿಸಿಕೊಂಡಿದೆ. ನಾಯ್ಸ್ ಕಂಪನಿಯ ಆಡಿಯೋ ಉತ್ಪನ್ನಗಳು ಸಹ ಹೆಚ್ಚಿನ ಗಮನ ಸೆಳೆದಿವೆ. ಆ ಪೈಕಿ ಇತ್ತೀಚಿನ ನಾಯ್ಸ್ ಬಡ್ಸ್ VS104 ಮ್ಯಾಕ್ಸ್ ಇಯರ್‌ಬಡ್ಸ್ ಡಿವೈಸ್‌ಗಳ ಸಹ ಸದ್ದು ಮಾಡಿದ್ದು, ಇದೀಗ ಈ ಇಯರ್‌ಬಡ್ಸ್ ಸಖತ್ ಡಿಸ್ಕೌಂಟ್ ಪಡೆದಿದೆ.
ಹೌದು, ನಾಯ್ಸ್ ಬಡ್ಸ್ VS104 ಮ್ಯಾಕ್ಸ್ ಇಯರ್‌ಬಡ್ಸ್ ಡಿವೈಸ್ ಅಮೆಜಾನ್ ತಾಣದಲ್ಲಿ ಹಾಗೂ ನಾಯ್ಸ್ ವೆಬ್‌ಸೈಟ್‌ನಲ್ಲಿ ಶೇ. 64% ರಷ್ಟು ಡಿಸ್ಕೌಂಟ್ ಪಡೆದಿದೆ. ಈ ಡಿವೈಸ್ ಬೆಲೆಯು 4,999ರೂ. ಆಗಿದ್ದು, ಆಫರ್‌ನಲ್ಲಿ 1799ರೂ. ಗಳಿಗೆ ಖರೀದಿಗೆ ಲಭ್ಯ ಇದೆ. ಈ ಸಾಧನವು ಬ್ಲ್ಯಾಕ್, ಗೋಲ್ಡ್ ಹಾಗೂ ಗ್ರೇ ಕಲರ್ ಆಯ್ಕೆಗಳನ್ನು ಪಡೆದುಕೊಂಡಿದೆ.

ನಾಯ್ಸ್ ಬಡ್ಸ್ VS104 ಮ್ಯಾಕ್ಸ್ ಇಯರ್‌ಬಡ್ಸ್ ಡಿವೈಸ್ 45 ಗಂಟೆಗಳ ಬ್ಯಾಟರಿ ಬ್ಯಾಕ್‌ಅಪ್ ಸೌಲಭ್ಯ ಪಡೆದಿದೆ. ಜೊತೆಗೆ ಈ ಇಯರ್‌ಬಡ್ಸ್ IPX5 ವಾಟರ್ ಪ್ರೂಫ್ ವ್ಯವಸ್ಥೆ ಸಹ ಒಳಗೊಂಡಿದೆ. ಈ ಇಯರ್‌ಬಡ್ಸ್ ಆಕ್ಟಿವ್ ನಾಯ್ಸ್ ಕ್ಯಾನ್ಸಲೇಶನ್ ಟೆಕ್ನಾಲಜಿಯನ್ನು ಸಹ ಹೊಂದಿದೆ. ಹಾಗಾದರೆ ನಾಯ್ಸ್ ಬಡ್ಸ್ VS104 ಮ್ಯಾಕ್ಸ್ ಇಯರ್‌ಬಡ್ಸ್ ಸಾಧನದ ಇತರೆ ಫೀಚರ್ಸ್ ಬಗ್ಗೆ ಮುಂದೆ ತಿಳಿಯೋಣ ಬನ್ನಿರಿ.
ನಾಯ್ಸ್ ಬಡ್ಸ್ VS104 ಮ್ಯಾಕ್ಸ್ ಇಯರ್‌ಬಡ್ಸ್ ಫೀಚರ್ಸ್ ಮಾಹಿತಿ :
ನಾಯ್ಸ್ ಬಡ್ಸ್ VS104 ಮ್ಯಾಕ್ಸ್ ಇಯರ್‌ಬಡ್ಸ್ ಪ್ರೀಮಿಯಂ ಆಡಿಯೋ ಅನುಭವವನ್ನು ಒದಗಿಸಲಿದ್ದು, ಇದಕ್ಕಾಗಿ 13mm ಆಡಿಯೋ ಡ್ರೈವರ್‌ಗಳನ್ನು ಈ ಸಾಧನ ಪಡೆದುಕೊಂಡಿದೆ. ಇನ್ನು ಈ ಇಯರ್‌ಬಡ್ಸ್ ಬ್ಲೂಟೂತ್ 5.3 ಆನ್‌ಬೋರ್ಡ್ ಜೊತೆಗೆ ಹೈಪರ್ ಸಿಂಕ್ ಟೆಕ್ನಾಲಜಿ ವನ್ನು ಸಹ ಪಡೆದಿದ್ದು, ಇದರಿಂದಾಗಿ ಬಳಕೆದಾರರು ಇಯರ್‌ಬಡ್ಸ್ ಚಾರ್ಜಿಂಗ್ ಕೇಸ್ ಮುಚ್ಚಳವನ್ನು ತೆರೆದ ತಕ್ಷಣವೇ ಫೋನಿನೊಂದಿಗೆ ಇಯರ್‌ಬಡ್ಸ್‌ಗಳನ್ನು ಕನೆಕ್ಟ್ ಆಗಲಿವೆ.
ಹಾಗೆಯೇ ಈ ಇಯರ್‌ಬಡ್ಸ್ ಆಕ್ಟಿವ್ ನಾಯ್ಸ್ ಕ್ಯಾನ್ಸಲೇಶನ್ ಟೆಕ್ನಾಲಜಿವನ್ನು ಸಹ ಒಳಗೊಂಡಿದ್ದು, ಇದರಿಂದ ಬಳಕೆದಾರರ ಸುತ್ತಮತ್ತಲಿನ ಶಬ್ದವನ್ನು 25 dB ವರೆಗೆ ಕಡಿತಗೊಳಿಸುತ್ತದೆ. ಈ ಕಾರಣಕ್ಕಾಗಿ ಬಳಕೆದಾರರು ಇಯರ್‌ಬಡ್ಸ್ ಅನ್ನು ಧರಿಸಿಕೊಂಡಾಗ ಅಹ್ಲಾದಕರ ಹಾಗೂ ತಲ್ಲೀನಗೊಳಿಸುವ ಆಲಿಸುವ ಅನುಭವವನ್ನು ಪಡೆಯಲು ಸಾಧ್ಯವಾಗಲಿದೆ. ಇದರ ಜೊತೆಗೆ ಬಳಕೆದಾರರ ಇಯರ್‌ಬಡ್ಸ್‌ಗಳನ್ನು ತೆಗೆಯದೆಯೇ ಹೊರಗಿನ ಶಬ್ದಗಳನ್ನು ಕೇಳುವುದಕ್ಕೆ ಅನುಮತಿಸುವ ಪಾರದರ್ಶಕತೆ ಮೋಡ್ ಅನ್ನು ಸಹ ಪಡೆದುಕೊಂಡಿದೆ.
ಇನ್ನು ನಾಯ್ಸ್ ಬಡ್ಸ್ VS104 ಮ್ಯಾಕ್ಸ್ ಇಯರ್‌ಬಡ್ಸ್ ಕರೆಗಳು ಮತ್ತು ವರ್ಚುವಲ್ ಮೀಟಿಂಗ್‌ಗಳ ಸಮಯದಲ್ಲಿ ಸ್ಪಷ್ಟ ಸಂವಹನಕ್ಕಾಗಿ ಕ್ವಾಡ್ ಮೈಕ್ ಮತ್ತು ಎನ್ವಿರಾನ್‌ಮೆಂಟಲ್ ನಾಯ್ಸ್ ಕಂಟ್ರೋಲ್ ಅನ್ನು ಪಡೆದುಕೊಂಡಿದೆ. ಇದರ ಜೊತೆಗೆ ಗೇಮರ್‌ಗಳ ಅನುಕೂಲಕ್ಕಾಗಿ, ಗೇಮಿಂಗ್ ಮತ್ತು ವೀಡಿಯೊಗಳನ್ನು ವೀಕ್ಷಿಸಲು ಕಡಿಮೆ ಲೇಟೆನ್ಸಿ ಮೋಡ್ ಅನ್ನು ಸಹ ಲಭ್ಯ. ಹಾಗೆಯೇ ಈ ಇಯರ್‌ಬಡ್ಸ್ 50ms ವರೆಗೆ ಆಡಿಯೊ ಸಿಂಕ್ರೊನೈಸೇಶನ್ ಅನ್ನು ಕೂಡಾ ಒದಗಿಸುತ್ತದೆ.
ನಾಯ್ಸ್ ಬಡ್ಸ್ VS104 ಮ್ಯಾಕ್ಸ್ ಇಯರ್‌ಬಡ್ಸ್ ಸಾಧನವು ಸುಮಾರು 45 ಗಂಟೆಗಳ ಬ್ಯಾಟರಿ ಬ್ಯಾಕ್‌ಅಪ್ ಅನ್ನು ಒದಗಿಸುವ ಸಾಮರ್ಥ್ಯ ಪಡೆದಿದೆ. ಇದು ಇನ್‌ಸ್ಟಾಚಾರ್ಜ್ ಟೆಕ್ನಾಲಜಿಯನ್ನು ಪಡೆದಿದ್ದು, 10 ನಿಮಿಷದ ಚಾರ್ಜಿಂಗ್ ಮಾಡಿದರೆ, ಸುಮಾರು ಮೂರು ಗಂಟೆಗಳ ಬ್ಯಾಟರಿ ಬ್ಯಾಕ್‌ಅಪ್ ಅನ್ನು ನೀಡಬಲ್ಲದು. ಹಾಗೆಯೇ ಈ ಇಯರ್‌ಬಡ್ಸ್ IPX5 ವಾಟರ್ ಪ್ರೂಫ್ ವ್ಯವಸ್ಥೆಯನ್ನು ಹೊಂದಿದ್ದು, ನಿಮ್ಮ ಕಿವಿಗಳ ವಿನ್ಯಾಸಕ್ಕೆ ತಕ್ಕಂತೆ ಹೊಂದಿಕೊಳ್ಳುವ ಆಯ್ಕೆ ಇದೆ.
ನಾಯ್ಸ್ ಬಡ್ಸ್ VS104 ಮ್ಯಾಕ್ಸ್ ಇಯರ್‌ಬಡ್ಸ್ ಕಲರ್ ಹಾಗೂ ಲಭ್ಯತೆ :
ನಾಯ್ಸ್ ಬಡ್ಸ್ VS104 ಮ್ಯಾಕ್ಸ್ ಇಯರ್‌ಬಡ್ಸ್ ಅನ್ನು ಗ್ರಾಗಕರು ಬ್ಲ್ಯಾಕ್, ಗೋಲ್ಡ್ ಹಾಗೂ ಗ್ರೇ ಕಲರ್ ಆಯ್ಕೆಗಳಲ್ಲಿ ಖರೀದಿಸಬಹುದಾಗಿದೆ. ಇನ್ನು ಈ ಸಾಧನವು ಅಮೆಜಾನ್ ಹಾಗೂ ನಾಯ್ಸ್ ವೆಬ್‌ಸೈಟ್‌ನಲ್ಲಿ ಖರೀದಿಗೆ ಲಭ್ಯ.


Click it and Unblock the Notifications








