Home
ಸುದ್ದಿಜಾಲ

ನಾಯ್ಸ್‌ಬಡ್ಸ್‌ X ಲಾಂಚ್‌; ANC ಯೊಂದಿಗೆ 35 ಗಂಟೆಗಳ ಪ್ಲೇಬ್ಯಾಕ್!

ನಾಯ್ಸ್‌ ಕಂಪೆನಿಯ ಧರಿಸಬಹುದಾದ ಹಲವಾರು ಡಿವೈಸ್‌ಗಳು ಈಗಾಗಲೇ ಮಾರುಕಟ್ಟೆಯಲ್ಲಿ ಭಾರೀ ಬೇಡಿಕೆ ಸೃಷ್ಟಿಸಿಕೊಂಡಿವೆ. ಇದರ ಜೊತೆಗೆ ನಾಯ್ಸ್‌ ಹೊಸದಾಗಿ ಸುಧಾರಿತ ಫೀಚರ್ಸ್‌ ಇರುವ ಇಯರ್‌ಬಡ್ಸ್‌ ಅನ್ನು ಅನಾವರಣ ಮಾಡಿದ್ದು, ಇದು ಬರೋಬ್ಬರಿ 35 ಗಂಟೆಗಳ ಬ್ಯಾಟರಿ ಬ್ಯಾಕಪ್‌ ಹೊಂದಿದೆ.

ಹೌದು, ಮಾರುಕಟ್ಟೆಯಲ್ಲಿ ಈಗಾಗಲೇ ಹಲವಾರು ವಿವಿಧ ಹಾಗೂ ಆಕರ್ಷಕ ಇಯರ್‌ಬಡ್ಸ್‌ಗಳು ಇದ್ದು, ಇದರ ನಡುವೆ ಕೈಗೆಟಕುವ ದರದಲ್ಲಿ ನಾಯ್ಸ್‌ ಬಡ್ಸ್‌X (Noise Buds X ) ಅನಾವರಣ ಆಗಿದೆ. ಇದರ ವಿಶೇಷತೆ ಎಂದರೆ ಈ ಬೆಲೆಯಲ್ಲಿ ನಾಯ್ಸ್‌ ಕ್ಯಾನ್ಸಲಿಂಗ್‌ ಫೀಚರ್ಸ್‌ ಜೊತೆ ಲಭ್ಯವಾಗುವ ಮೊದಲ ಇಯರ್‌ಬಡ್ಸ್‌ ಎಂಬ ಖ್ಯಾತಿ ಪಡೆಯಲಿದೆ. ಹಾಗಿದ್ರೆ, ಇದರ ಪ್ರಮುಖ ಫೀಚರ್ಸ್ ಹಾಗೂ ಭಾರತದಲ್ಲಿ ಇದರ ಬೆಲೆ ಎಷ್ಟು? ಎಂಬ ಮಾಹಿತಿಯನ್ನು ತಿಳಿದುಕೊಳ್ಳಿ.

ನಾಯ್ಸ್‌ಬಡ್ಸ್‌ X ಲಾಂಚ್‌; ANC ಯೊಂದಿಗೆ 35 ಗಂಟೆಗಳ ಪ್ಲೇಬ್ಯಾಕ್!

ನಾಯ್ಸ್‌ಬಡ್ಸ್‌ X ಪ್ರಮುಖ ಫೀಚರ್ಸ್‌

ಈ ನಾಯ್ಸ್ ಬಡ್ಸ್ X ನ ಬಡ್ಸ್‌ಗಳು ಸಿಲಿಕೋನ್ ಇಯರ್ ಟಿಪ್ಸ್‌ನೊಂದಿಗೆ ಇನ್ ಇಯರ್ ವಿನ್ಯಾಸವನ್ನು ಪಡೆದುಕೊಂಡಿದ್ದು, ಕಿವಿಗೆ ಯಾವುದೇ ಸಮಸ್ಯೆ ಉಂಟು ಮಾಡುವುದಿಲ್ಲ. ಹಾಗೆಯೇ ಬಡ್ಸ್‌ಗಳ ಮೇಲೆ ಟ್ಯಾಪ್ ಮಾಡುವ ಮೂಲಕ ಬಳಕೆದಾರರು ವಿಶೇಷ ಅನುಭವ ಪಡೆದುಕೊಳ್ಳಬಹುದು. ಅಂದರೆ ಕರೆ ನಿಯಂತ್ರಣ ಮಾಡಬಹುದು, ಮ್ಯೂಸಿಕ್‌ ಆಲಿಸಬಹುದು ಅಥವಾ ಸ್ಟಾಪ್‌ ಮಾಡಬಹುದು.

ನಾಯ್ಸ್‌ಬಡ್ಸ್‌ X ನಲ್ಲಿ ಹೈಪರ್‌ ಸಿಂಕ್‌ ತಂತ್ರಜ್ಞಾನ

ಹಾಗೆಯೇ ನಾಯ್ಸ್‌ಬಡ್ಸ್‌ X ಇಯರ್‌ಬಡ್ಸ್‌ 12mm ಡ್ರೈವರ್‌ ಆಯ್ಕೆಯನ್ನು ಹೊಂದಿದ್ದು, ಸ್ಪಷ್ಟವಾದ ಧ್ವನಿ ಹಾಗೂ ಇಂಪಾದ ಬೇಸ್‌ ಆಡಿಯೋವನ್ನು ಅನುಭವವನ್ನು ಒದಗಿಸಲಿದೆ. ಇದರೊಂದಿಗೆ ಇಯರ್‌ಬಡ್‌ಗಳು ಹೈಪರ್‌ ಸಿಂಕ್‌ ತಂತ್ರಜ್ಞಾನ ಹೊಂದಿದ್ದು, ಈ ಮೂಲಕ ಚಾರ್ಜಿಂಗ್ ಕೇಸ್‌ನಿಂದ ಹೊರತೆಗೆದ ತಕ್ಷಣ ಸಂಬಂಧಿತ ಡಿವೈಸ್‌ಗಳಿಗೆ ಸಂಪರ್ಕಗೊಳ್ಳುತ್ತವೆ. ಇನ್ನುಳಿದಂತೆ ಬಡ್ಸ್‌ಗಳು IPX5 ರೇಟಿಂಗ್‌ ಹೊಂದಿದ್ದು, ವಾಟರ್‌ ರೆಸಿಸ್ಟೆಂಟ್ ಆಗಿರುವುದು ಭಾರೀ ವಿಶೇಷ.

ನಾಯ್ಸ್‌ಬಡ್ಸ್‌ X ಲಾಂಚ್‌; ANC ಯೊಂದಿಗೆ 35 ಗಂಟೆಗಳ ಪ್ಲೇಬ್ಯಾಕ್!

ಇನ್ನು ಈ ನಾಯ್ಸ್‌ ಬಡ್ಸ್‌ X ಕ್ವಾಡ್ ಮೈಕ್ ಮೂಲಕ ಎನ್ವಿರಾನ್‌ಮೆಂಟಲ್ ನಾಯ್ಸ್‌ ಕ್ಯಾನ್ಸಲೇಷನ್ ನೀಡಲಿದ್ದು, ಇದರಿಂದ ಕರೆಯಲ್ಲಿರುವಾಗ ಅಥವಾ ಯಾವುದಾದರೂ ಮೀಟಿಂಗ್‌ನಲ್ಲಿ ಭಾಗಿಯಾಗಿರುವಾಗ ಯಾವುದೇ ಅಡೆತಡೆಯ ಶಬ್ಧ ಇಲ್ಲದೆ ಸ್ಪಷ್ಟವಾಗಿ ಸಂವಹನ ಪ್ರಕ್ರಿಯೆಯಲ್ಲಿ ತೊಡಗಬಹುದಾಗಿದೆ. ಇದರೊಂದಿಗೆ ಟ್ರಾನ್ಸ್ಪರೆಂಟ್ ಮೋಡ್‌ ಆಯ್ಕೆ ಇದ್ದು,
ಈ ಮೋಡ್ ಅನ್ನು ಆನ್ ಅಥವಾ ಆಫ್ ಮಾಡಲು ವಾಯ್ಸ್‌ ಅಸಿಸ್ಟೆಂಟ್‌ ಬಳಕೆ ಮಾಡಿಕೊಳ್ಳಬಹುದಾಗಿದೆ.

ನಾಯ್ಸ್‌ ಬಡ್ಸ್‌ X ಬ್ಯಾಟರಿ ಸಾಮರ್ಥ್ಯ

ನಾಯ್ಸ್‌ ಬಡ್ಸ್‌ X ಇಯರ್‌ಬಡ್ಸ್‌ ಬರೋಬ್ಬರಿ 35 ಗಂಟೆಗಳ ಬ್ಯಾಟರಿ ಬ್ಯಾಕಪ್‌ ನೀಡಲಿದ್ದು, ಇದು ಇನ್‌ಸ್ಟಾಚಾರ್ಜ್‌ TM ತಂತ್ರಜ್ಞಾನ ಹೊಂದಿದೆ. ಹಾಗೆಯೇ 10 ನಿಮಿಷಗಳ ಚಾರ್ಜ್‌ ಮಾಡಿದರೆ 120 ನಿಮಿಷಗಳ ಪ್ಲೇಟೈಮ್ ಅನ್ನು ಒದಗಿಸುತ್ತದೆ. ಚಾರ್ಜಿಂಗ್‌ಗಾಗಿ ಈ ಕೇಸ್‌ ಯುಎಸ್‌ಬಿ ಟೈಪ್‌ - ಸಿ ಪೋರ್ಟ್ ಆಯ್ಕೆ ಪಡೆದಿದೆ. ಇದಿಷ್ಟೇ ಅಲ್ಲದೆ ಚಾರ್ಜಿಂಗ್ ಕೇಸ್‌ನ ಅಥವಾ ಇಯರ್‌ಬಡ್ಸ್‌ನ ಬ್ಯಾಟರಿ ಸಾಮರ್ಥ್ಯವನ್ನು ಹೆಚ್ಚಿಗೆ ಮಾಡುವ ಫೀಚರ್ಸ್‌ ಸಹ ಇದರಲ್ಲಿದ್ದು, ನೀವು ಚಾರ್ಜಿಂಗ್‌ ಕೇಸ್‌ಗೆ ಬಡ್ಸ್‌ಗಳನ್ನು ಹಾಕಿ ಮುಚ್ಚಳ ಮುಚ್ಚಿದ ತಕ್ಷಣವೇ ಆಟೋಮ್ಯಾಟಿಕ್‌ ಆಗಿ ಆಫ್‌ ಆಗುತ್ತದೆ.

ನಾಯ್ಸ್‌ಬಡ್ಸ್‌ X ಲಾಂಚ್‌; ANC ಯೊಂದಿಗೆ 35 ಗಂಟೆಗಳ ಪ್ಲೇಬ್ಯಾಕ್!

ನಾಯ್ಸ್‌ ಬಡ್ಸ್‌ X ಬೆಲೆ ಹಾಗೂ ಲಭ್ಯತೆ

ಭಾರತದಲ್ಲಿ ನಾಯ್ಸ್‌ ಬಡ್ಸ್‌ X ಇಯರ್‌ಬಡ್ಸ್‌ಗೆ 1,999 ರೂ ಗಳ ಬೆಲೆ ನಿಗದಿ ಮಾಡಲಾಗಿದ್ದು, ಇದು ಕಾರ್ಬನ್ ಬ್ಲಾಕ್ ಮತ್ತು ಸ್ನೋ ವೈಟ್ ಬಣ್ಣಗಳಲ್ಲಿ ಕಂಡುಬಂದಿದೆ. ಇನ್ನು ಗ್ರಾಹಕರು ಇಂದಿನಿಂದ ನಾಯ್ಸ್‌ ನ ಅಧಿಕೃತ ವೆಬ್‌ಸೈಟ್ ಹಾಗೂ ಅಮೆಜಾನ್‌ ಮೂಲಕ ಖರೀದಿ ಮಾಡಬಹುದಾಗಿದೆ.

Best Mobiles in India

English summary
Noise Buds X launched with attractive features in india , and this is the first earbuds with noise cancelling feature at an affordable price.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+