Home
ಸುದ್ದಿಜಾಲ

Noise: ನಾಯ್ಸ್ ಬಡ್ಸ್ ಎಕ್ಸ್ ಪ್ರೈಮ್ ಇಯರ್‌ಬಡ್ಸ್‌ ಲಾಂಚ್‌; 120 ಗಂಟೆಯ ಬ್ಯಾಕಪ್‌..ಬೆಲೆ ಎಷ್ಟು?

ನಾಯ್ಸ್‌ (Noise) ಸಂಸ್ಥೆಯ ಸ್ಮಾರ್ಟ್‌ವಾಚ್‌ಗಳು, ಇಯರ್‌ಬಡ್ಸ್ ಹಾಗೂ ಇನ್ನಿತರೆ ಡಿವೈಸ್‌ಗಳು ಸುಧಾರಿತ ಫೀಚರ್ಸ್‌ನೊಂದಿಗೆ ಕಾಣಿಸಿಕೊಳ್ಳುವುದರಿಂದ ಇವುಗಳಿಗೆ ಬಹುಬೇಡಿಕೆ ಇದೆ. ಈ ಕಾರಣಕ್ಕೆ ಆಗಾಗ್ಗೆ ನಾಯ್ಸ್‌ ಹೊಸ ಹೊಸ ಸ್ಮಾರ್ಟ್‌ ಡಿವೈಸ್‌ಗಳನ್ನು ಲಾಂಚ್‌ ಮಾಡಿಕೊಂಡು ಬರುತ್ತಲೇ ಇದ್ದು, ಈ ಡಿವೈಸ್‌ಗಳ ಸಾಲಿಗೆ ಮತ್ತೊಂದು ಹೊಸ ಇಯರ್‌ಬಡ್ಸ್‌ (Earbuds) ಸೇರ್ಪಡೆಯಾಗಿದೆ.

ಹೌದು, ನಾಯ್ಸ್‌ ಸಂಸ್ಥೆಯ ಸ್ಮಾರ್ಟ್‌ಡಿವೈಸ್‌ಗಳು ಭಾರತದಲ್ಲಿ ಹೆಚ್ಚಿನ ಬೇಡಿಕೆ ಪಡೆದುಕೊಂಡಿವೆ. ಅದರಲ್ಲೂ ಅಗ್ಗದ ದರದಲ್ಲಿ ಪ್ರೀಮಿಯಂ ಫೀಚರ್ಸ್‌ ಆಯ್ಕೆ ನೀಡುವ ಕಂಪೆನಿಗಳಲ್ಲಿ ಇದೂ ಸಹ ಪ್ರಮುಖವಾಗಿದ್ದು, ಇದೀಗ ನಾಯ್ಸ್ ಬಡ್ಸ್ ಎಕ್ಸ್ ಪ್ರೈಮ್ ಇಯರ್‌ಬಡ್ಸ್‌ (Noise Buds X Prime Earbuds) ಅನ್ನು ಅನಾವರಣ ಮಾಡಿದೆ. ಇದು ಟ್ರೂ ವೈರ್‌ಲೆಸ್‌ ಇಯರ್‌ಬಡ್ಸ್‌ ಆಗಿದ್ದು, ಬರೋಬ್ಬರಿ 120 ಗಂಟೆಗಳವರೆಗೆ ಬ್ಯಾಟರಿ ಬ್ಯಾಕಪ್‌ ನೀಡಲಿದೆ. ಹಾಗಿದ್ರೆ, ಇದರ ಪ್ರಮುಖ ಫೀಚರ್ಸ್‌ ಹಾಗೂ ಬೆಲೆ ವಿವರಗಳನ್ನು ತಿಳಿಯೋಣ ಬನ್ನಿ.

 ನಾಯ್ಸ್ ಬಡ್ಸ್ ಎಕ್ಸ್ ಪ್ರೈಮ್ ಇಯರ್‌ಬಡ್ಸ್‌ ಲಾಂಚ್‌; 120 ಗಂಟೆಯ ಬ್ಯಾಕಪ್‌..

ನಾಯ್ಸ್‌ ಬಡ್ಸ್‌ X ಪ್ರೈಮ್‌ ಇಯರ್‌ಬಡ್ಸ್‌ ಫೀಚರ್ಸ್‌: ದೇಶೀಯ ಧರಿಸಬಹುದಾದ ಸ್ಮಾರ್ಟ್‌ಡಿವೈಸ್‌ ತಯಾರಕ ನಾಯ್ಸ್ ದೇಶದಲ್ಲಿ ನಾಯ್ಸ್ ಬಡ್ಸ್ ಎಕ್ಸ್ ಪ್ರೈಮ್ ಇಯರ್‌ಬಡ್ಸ್‌ ಅನ್ನು ಲಾಂಚ್‌ ಮಾಡಿದೆ. ಈ ಮೂಲಕ ತನ್ನ ಟಿಡಬ್ಲ್ಯೂಎಸ್ ಶ್ರೇಣಿಯನ್ನು ದೊಡ್ಡ ಮಟ್ಟದಲ್ಲಿ ವಿಸ್ತರಣೆ ಮಾಡಿಕೊಂಡಿದೆ. ಈ ಇಯರ್‌ಬಡ್ಸ್‌ ಟಿಡಬ್ಲ್ಯೂಎಸ್ ಕ್ವಾಡ್ ಮೈಕ್ ಇಎನ್‌ಸಿಯೊಂದಿಗೆ ಕಾಣಿಸಿಕೊಂಡಿದ್ದು, 11mm ಡ್ರೈವರ್ ಯೂನಿಟ್‌ನೊಂದಿಗೆ ಪ್ಯಾಕ್‌ ಆಗಿವೆ. ಈ ಮೂಲಕ ನೀವು ಸಿನಿಮಾ ನೋಡುವಾಗ ಆಡಿಯೋ ಕೇಳುವಾದ ಅತ್ಯುತ್ತಮ ಅನುಭವ ಪಡೆದುಕೊಳ್ಳಬಹುದು.

ಇದರೊಂದಿಗೆ ಡೀಪ್‌ ಬೇಸ್‌ ಆಯ್ಕೆ ಸಹ ಇದರಲ್ಲಿದ್ದು, ಇದರಿಂದ ತಲ್ಲೀನಗೊಳಿಸುವ ಧ್ವನಿ ಅನುಭವವನ್ನು ನೀಡಲಿದೆ. ಮತ್ತು ತಡೆರಹಿತ ಮತ್ತು ತ್ವರಿತ ಜೋಡಣೆಗಾಗಿ ಹೈಪರ್‌ಸಿಂಕ್ ತಂತ್ರಜ್ಞಾನವನ್ನು ಹೊಂದಿವೆ. ಅಂದರೆ ಯಾವುದೇ ಡಿವೈಸ್‌ಗೆ ಚಿಟಿಕೆ ಹೊಡೆಯುವುದರ ಒಳಗಾಗಿ ಕನೆಕ್ಟ್ ಆಗಿಬಿಡುತ್ತದೆ. ಇದಕ್ಕಾಗಿ ಬ್ಲೂಟೂತ್ ಆವೃತ್ತಿ 5.3 ಸೌಲಭ್ಯ ಇದ್ದು, ಇದು ಎಲ್ಲಾ ರೀತಿಯಲ್ಲೂ ಅತ್ಯುತ್ತಮ ಕಾರ್ಯಕ್ಷಮತೆಗೆ ಅನುವು ಮಾಡಿಕೊಡುತ್ತದೆ.

ಜೊತೆಗೆ ಈ ಇಯರ್‌ಬಡ್‌ಗಳು IPX5 ರೇಟಿಂಗ್‌ನೊಂದಿಗೆ ಕಾಣಿಸಿಕೊಂಡಿದ್ದು, ಯಾವುದೇ ಮಳೆ ಅಥವಾ ಬೆವರು ಇನ್ನಿತರೆ ವಿಷಯಗಳಿಗೆ ಹೆದರುವ ಮಾತೇ ಇಲ್ಲ. ಎಲ್ಲಿಬೇಕಾದರೂ ಸಹ ಈ ವಾಚ್‌ ಅನ್ನು ಧರಿಸಿಕೊಳ್ಳಬಹುದಾಗಿದೆ. ಇದರೊಂದಿಗೆ 50ms ವರೆಗಿನ ಲೋ ಲೇಟೆನ್ಸಿ ಆಯ್ಕೆ ಇದ್ದು, ತಡೆರಹಿತ ಆಡಿಯೊ-ದೃಶ್ಯ ಸಿಂಕ್ರೊನೈಸೇಶನ್ ಅನ್ನು ಈ ಮೂಲಕ ಆನಂದಿಸಬಹುದಾಗಿದೆ.

ಎಲ್ಲಕ್ಕಿಂತ ಮಿಗಿಲಾಗಿ ಈ ಇಯರ್‌ಬಡ್ಸ್‌ ನಿಮಗೆ ಬರೋಬ್ಬರಿ 120 ಗಂಟೆಗಳ ಮ್ಯೂಸಿಕ್‌ ಪ್ಲೇಬ್ಯಾಕ್ ಅನ್ನು ನೀಡಲಿವೆ ಎಂದು ಕಂಪೆನಿ ಮಾಹಿತಿ ನೀಡಿದೆ. ಅಷ್ಟೇ ಅಲ್ಲದೆ ಫಾಸ್ಟ್‌ ಚಾರ್ಜಿಂಗ್‌ ಫೀಚರ್ಸ್‌ ಅನ್ನು ಹೊಂದಿದ್ದು, ಇದರಿಂದ 10 ನಿಮಿಷಗಳ ಚಾರ್ಜ್‌ ಮಾಡಿದರೆ ಇಯರ್‌ಬಡ್‌ಗಳು 200 ನಿಮಿಷಗಳವರೆಗೆ ಮ್ಯೂಸಿಕ್‌ ಪ್ಲೇಬ್ಯಾಕ್ ಅನುಭವವನ್ನು ಅನ್ನು ನೀಡುತ್ತವೆ ಎಂದು ತಿಳಿಸಿದೆ.

ನಾಯ್ಸ್‌ ಬಡ್ಸ್‌ X ಪ್ರೈಮ್‌ ಇಯರ್‌ಬಡ್ಸ್‌ ಬೆಲೆ ಹಾಗೂ ಲಭ್ಯತೆ: ಈ ಇಯರ್‌ಬಡ್ಸ್‌ 1,399 ರೂಪಾಯಿಗಳ ಬೆಲೆಯಲ್ಲಿ ಕಾಣಿಸಿಕೊಂಡಿದೆ. ಹಾಗೆಯೇ ಸಿಲ್ವರ್ ಗ್ರೇ, ಶೀನ್ ಗ್ರೀನ್ ಮತ್ತು ಷಾಂಪೇನ್ ವೈಟ್ ಬಣ್ಣದ ಆಯ್ಕೆಗಳಲ್ಲಿ ಲಭ್ಯವಿದ್ದು, ಇದನ್ನು ನೀವು ಅಮೆಜಾನ್‌ ಮತ್ತು ಗೋ ನಾಯ್ಸ್‌ ಮೂಲಕ ಆನ್‌ಲೈನ್‌ನಲ್ಲಿ ಇನ್ನೂ ಹೆಚ್ಚಿನ ಆಫರ್ ಬೆಲೆಗೆ ಖರೀದಿ ಮಾಡಬಹುದು.

ಈ ನಡುವೆ ಕೆಲವು ದಿನಗಳ ಹಿಂದೆ ನಾಯ್ಸ್‌ ತನ್ನ ಮೊದಲ ಸ್ಮಾರ್ಟ್ ರಿಂಗ್, ಲೂನಾ ರಿಂಗ್‌ (Luna Ring) ಅನ್ನು ಭಾರತದಲ್ಲಿ ಬಿಡುಗಡೆ ಮಾಡಿದೆ. ಸ್ಮಾರ್ಟ್ ವೇರಬಲ್ ಅನ್ನು ಅದರ ಬಳಕೆದಾರರ ದೈನಂದಿನ ಆರೋಗ್ಯ ಚಟುವಟಿಕೆಗಳನ್ನು ಟ್ರ್ಯಾಕ್ ಮಾಡಲು ವಿನ್ಯಾಸಗೊಳಿಸಲಾಗಿದ್ದು, ಇದು ಬಳಕೆದಾರು ಎಲ್ಲಾ ರೀತಿಯ ಆರೋಗ್ಯ ಹಾಗೂ ಇತರೆ ಚಟುವಟಿಕೆಯನ್ನು ಟ್ರ್ಯಾಕ್‌ ಮಾಡುತ್ತದೆ. ಇದಕ್ಕೆ 14,999 ರೂ.ಗಳ ಬೆಲೆ ನಿಗದಿ ಪರಿಸಲಾಗಿದ್ದು, ಇದನ್ನೂ ಸಹ ಆನ್‌ಲೈನ್‌ ಮೂಲಕ ಖರೀದಿ ಮಾಡಬಹುದಾಗಿದೆ.

 ನಾಯ್ಸ್ ಬಡ್ಸ್ ಎಕ್ಸ್ ಪ್ರೈಮ್ ಇಯರ್‌ಬಡ್ಸ್‌ ಲಾಂಚ್‌; 120 ಗಂಟೆಯ ಬ್ಯಾಕಪ್‌..

ಈ ಸ್ಮಾರ್ಟ್ ರಿಂಗ್ ಏಳು-ರಿಂಗ್ ಗಾತ್ರಗಳು ಮತ್ತು ಐದು ಬಣ್ಣದ ಆಯ್ಕೆಗಳಲ್ಲಿ ಬರುತ್ತದೆ. ಇದು ಅಲ್ಟ್ರಾ-ಲೈಟ್‌ವೈಟ್ 3mm ಫಾರ್ಮ್ ಫ್ಯಾಕ್ಟರ್‌ನೊಂದಿಗೆ ವಿನ್ಯಾಸಗೊಳಿಸಲಾಗಿದ್ದು, ಇದು ಚರ್ಮದ ಅನುಭವವನ್ನು ನೀಡುತ್ತದೆ. ಫೈಟರ್-ಜೆಟ್ ದರ್ಜೆಯ ಟೈಟಾನಿಯಂ ಮತ್ತು ವಜ್ರದಂತಹ ಲೇಪನದಿಂದ ಅತ್ಯುತ್ತಮ ನೋಟ ಪಡೆದುಕೊಂಡಿದೆ. ಜೊತೆಗೆ ಯಾವುದೇ ಕಾರಣಕ್ಕೂ ಇದು ಗೀರುಗಳು ಮತ್ತು ತುಕ್ಕಿನ ಸಮಸ್ಯೆಗೆ ಒಳಗಾಗುವುದಿಲ್ಲ.

Best Mobiles in India

English summary
Noise Buds X Prime Earbuds have been unveiled in india. In addition, it will provide battery backup up to 120 hours.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+