Noise: ನಾಯ್ಸ್‌ನಿಂದ ಎರಡು ಹೊಸ ಸ್ಮಾರ್ಟ್‌ವಾಚ್ ಲಾಂಚ್! ಬೊಂಬಾಟ್ ಫೀಚರ್ಸ್, ಬೆಲೆ ಎಷ್ಟು?
ಸ್ಮಾರ್ಟ್‌ವಾಚ್‌ಗಳ (Smartwatch) ವಿಭಾಗದಲ್ಲಿ ನಾಯ್ಸ್ (Noise) ಕಂಪೆನಿಯ ವಾಚ್‌ಗಳಿಗೆ ಬಹಳಷ್ಟು ಬೇಡಿಕೆ ಇದೆ. ಈ ವಾಚ್‌ಗಳು ಇತರೆ ವಾಚ್‌ಗಳಿಗಿಂತ ಭಿನ್ನ ಫೀಚರ್ಸ್ ಹೊಂದಿದ್ದು, ಬಜೆಟ್ ಬೆಲೆಯಲ್ಲೇ ಪ್ರೀಮಿಯಂ ಫೀಚರ್ಸ್ ಅನುಭವ ಪಡೆಯುವಂತೆ ಮಾಡುತ್ತವೆ. ಅದರಂತೆ ಈಗ ನಾಯ್ಸ್ ಎರಡು ಹೊಸ ಸ್ಮಾರ್ಟ್‌ವಾಚ್‌ಗಳನ್ನು ಅನಾವರಣ ಮಾಡಿದೆ.
ಹೌದು, ಎರಡು ಹೊಸ ಸ್ಮಾರ್ಟ್ ವಾಚ್‌ಗಳನ್ನು ಭಾರತದಲ್ಲಿ ಲಾಂಚ್ ಮಾಡುವುದರೊಂದಿಗೆ ನಾಯ್ಸ್ ತನ್ನ ಕೈಗೆಟುಕುವ ಸ್ಮಾರ್ಟ್‌ವಾಚ್ ಶ್ರೇಣಿಯನ್ನು ವಿಸ್ತರಣೆ ಮಾಡಿಕೊಂಡಿದೆ. ಅಂದರೆ ಇದೀಗ ನಾಯ್ಸ್‌ಕಂಪೆನಿಯುವ ನಾಯ್ಸ್ ಕಲರ್‌ಫಿಟ್ ಪ್ರೊ 5 ಮತ್ತು ನಾಯ್ಸ್ ಕಲರ್‌ಫಿಟ್ ಪ್ರೊ 5 ಮ್ಯಾಕ್ಸ್ (Noise ColorFit 5 Pro Max, Noise ColorFit Pro 5) ಅನ್ನು ಬಿಡುಗಡೆ ಮಾಡಿದೆ. ಈ ವಾಚ್‌ಗಳು SOS ತಂತ್ರಜ್ಞಾನದೊಂದಿಗೆ ಬರುತ್ತವೆ. ಹಾಗಿದ್ರೆ, ಈ ವಾಚ್‌ಗಳ ಪ್ರಮುಖ ಫೀಚರ್ಸ್ ಏನು?, ಭಾರತದಲ್ಲಿ ಈ ವಾಚ್‌ಗಳಿಗೆ ಬೆಲೆ ಎಷ್ಟು ಅನ್ನೋದನ್ನು ತಿಳಿಸಿಕೊಡಲಾಗಿದೆ ಓದಿರಿ.

ನಾಯ್ಸ್ ಕಲರ್‌ಫಿಟ್ ಪ್ರೊ 5 ಸ್ಮಾರ್ಟ್‌ವಾಚ್‌ಗಳು: ಈ ಸರಣಿಯಲ್ಲಿ ನಾಯ್ಸ್ ಕಲರ್‌ಫಿಟ್ ಪ್ರೊ 5 ಮತ್ತು ನಾಯ್ಸ್ ಕಲರ್‌ಫಿಟ್ ಪ್ರೊ 5 ಮ್ಯಾಕ್ಸ್ ಅನ್ನು ಅನಾವರಣ ಮಾಡಲಾಗಿದ್ದು, ಮೊದಲೇ ತಿಳಿಸಿದಂತೆ ಈ ಎರಡೂ ಸ್ಮಾರ್ಟ್‌ವಾಚ್‌ಗಳು ಸಹ SOS ತಂತ್ರಜ್ಞಾನದೊಂದಿಗೆ (SOS technology) ಕಾಣಿಸಿಕೊಂಡಿವೆ. ಸ್ಮಾರ್ಟ್ ಡಾಕ್‌ನಲ್ಲಿರುವ ಬಟನ್ ಅನ್ನು ಐದು ಬಾರಿ ಒತ್ತಿದ ನಂತರ ಬಳಕೆದಾರರು ಉಳಿಸಿದ ತುರ್ತು ಸಂಪರ್ಕಕ್ಕೆ ತ್ವರಿತವಾಗಿ ಕರೆ ಮಾಡಲು ಅನುವು ಮಾಡಿಕೊಡುತ್ತದೆ.
ನಾಯ್ಸ್ ಕಲರ್‌ಫಿಟ್ ಪ್ರೊ 5 ಮ್ಯಾಕ್ಸ್ ಸ್ಮಾರ್ಟ್‌ವಾಚ್ ಫೀಚರ್ಸ್: ಈ ವಾಚ್‌ಗಳಲ್ಲಿನ ಪ್ರತ್ಯೇಕ ಫೀಚರ್ಸ್ ಕಡೆ ಕಣ್ಣಾಯಿಸುವುದಾದರೆ ಮ್ಯಾಕ್ಸ್ ವೇರಿಯಂಟ್ 1.96 ಇಂಚಿನ ಅಮೋಲೆಡ್ ಡಿಸ್‌ಪ್ಲೇ ಆಯ್ಕೆ ಪಡೆದುಕೊಂಡಿದ್ದು, ಇದು 410x502 ಪಿಕ್ಸೆಲ್ ಸ್ಕ್ರೀನ್‌ನ ಅಲ್ಟ್ರಾ-ಹೈ ರೆಸಲ್ಯೂಶನ್ ಸಾಮರ್ಥ್ಯ ಹೊಂದಿದೆ. ಹಾಗೆಯೇ 600 ನಿಟ್ಸ್ ಗರಿಷ್ಠ ಬ್ರೈಟ್‌ನೆಸ್ ಆಯ್ಕೆ ಮತ್ತು IP68 ರೇಟಿಂಗ್ ಪಡೆಯುವ ಮೂಲಕ ಅತ್ಯುತ್ತಮ ಎನಿಸಿದೆ.
ಇದರೊಂದಿಗೆ ಈ ಸ್ಮಾರ್ಟ್‌ವಾಚ್ ಬ್ಲೂಟೂತ್ ಆವೃತ್ತಿ v5.3 ಹಾಗೂ 100+ ಸ್ಪೋರ್ಟ್ಸ್ ಮೋಡ್, 150+ ಕ್ಲೌಡ್ ಆಧಾರಿತ ವಾಚ್ ಫೇಸ್‌ನೊಂದಿಗೆ ಕಾಣಿಸಿಕೊಂಡಿದ್ದು, ಈ ಮೂಲಕ ಬಳಕೆದಾರರು ಉತ್ತಮ ಅನುಭವ ಪಡೆದುಕೊಳ್ಳಬಹುದಾಗಿದೆ. ಇದರೊಂದಿಗೆ ಈ ವಾಚ್ Vo2 ಮ್ಯಾಕ್ಸ್ ಕ್ಯಾಲ್ಕುಲೇಟರ್‌ನೊಂದಿಗೆ ಕಾಣಿಸಿಕೊಂಡಿದ್ದು, ವ್ಯಾಯಾಮದ ನಂತರ ನಿಖರವಾದ ಡೇಟಾವನ್ನು ಬಳಕೆದಾರರಿಗೆ ನೀಡುತ್ತದೆ.

ಈ ಸ್ಮಾರ್ಟ್‌ವಾಚ್ ಎಂಟು ಬಣ್ಣಗಳ ಆಯ್ಕೆಗಳಲ್ಲಿ ಬರುತ್ತದೆ ಅವುಗಳೆಂದರೆ ಜೆಟ್ ಬ್ಲಾಕ್, ಸ್ಪೇಸ್ ಬ್ಲೂ, ಕ್ಲಾಸಿಕ್ ಬ್ಲಾಕ್, ಕ್ಲಾಸಿಕ್ ಬ್ರೌನ್, ಎಲೈಟ್ ಬ್ಲಾಕ್, ಎಲೈಟ್ ಸಿಲ್ವರ್, ಸೇಜ್ ಗ್ರೀನ್ ಮತ್ತು ಶಾಡೋ ಬ್ಲ್ಯಾಕ್. ಇದರೊಂದಿಗೆ ಈ ಸ್ಮಾರ್ಟ್‌ವಾಚ್ ನಾಲ್ಕು ಪಟ್ಟಿಯ ಆಯ್ಕೆಗಳಲ್ಲಿ ಕಾಣಿಸಿಕೊಂಡಿದ್ದು, ಅವುಗಳೆಂದರೆ ಎಲೈಟ್ (ಮೆಟಲ್), ಕ್ಲಾಸಿಕ್ (ಲೆದರ್), ಲೈಫ್‌ಸ್ಟೈಲ್ (ಸಿಲಿಕಾನ್) ಮತ್ತು ವೀವ್ (ನಿಟ್) ಆಯ್ಕೆ ಇದೆ. ಈ ಸ್ಮಾರ್ಟ್‌ವಾಚ್ ಪೂರ್ಣ ಚಾರ್ಜಿಂಗ್‌ನಲ್ಲಿ 7 ದಿನಗಳವರೆಗೆ ಬ್ಯಾಕಪ್ ನೀಡಲಿದೆ.
ನಾಯ್ಸ್ ಕಲರ್‌ಫಿಟ್ ಪ್ರೊ 5 ಸ್ಮಾರ್ಟ್‌ವಾಚ್: ಇನ್ನು ಈ ಸ್ಮಾರ್ಟ್‌ವಾಚ್ 1.85 ಇಂಚಿನ ಅಮೋಲೆಡ್ ಡಿಸ್‌ಪ್ಲೇ ಹೊಂದಿದ್ದು, 390x450 ಪಿಕ್ಸೆಲ್ ಸ್ಕ್ರೀನ್ ಅಲ್ಟ್ರಾ-ಹೈ ರೆಸಲ್ಯೂಶನ್ ಸಾಮರ್ಥ್ಯ ಪಡೆದುಕೊಂಡಿದೆ. ಜೊತೆಗೆ 600 ನಿಟ್ಸ್‌ನ ಗರಿಷ್ಠ ಬ್ರೈಟ್‌ನೆಸ್ ಆಯ್ಕೆ ಹಾಗೂ 100+ ಸ್ಪೋರ್ಟ್ಸ್ ಮೋಡ್, 150+ ಕ್ಲೌಡ್ ಆಧಾರಿತ ವಾಚ್ ಫೇಸ್ ಆಯ್ಕೆ ಈ ವಾಚ್‌ಗೆ ಇನ್ನಷ್ಟು ಮೆರಗು ನೀಡಲಿದೆ.
ಇದರೊಂದಿಗೆ ಬ್ಲೂಟೂತ್ ಆವೃತ್ತಿ v5.3 ಹೊಂದಿದ್ದು, IP68 ರೇಟಿಂಗ್ ಪಡೆಯುವ ಮೂಲಕ ಉತ್ತಮ ವಾಟರ್ ರೆಸಿಸ್ಟೆಂಟ್ ವಾಚ್ ಎನಿಸಿಕೊಂಡಿದೆ. ಉಳಿದಂತೆ ಬಳಕೆದಾರರು ಹೃದಯ ಬಡಿತ, SpO2, ನಿದ್ರೆಯ ಮಾದರಿಗಳು ಮತ್ತು ಒತ್ತಡದ ಮಟ್ಟಗಳಂತಹ ಪ್ರಮುಖವಾದ ಮಾಹಿತಿಯನ್ನು ಪಡೆದುಕೊಳ್ಳಬಹುದಾಗಿದೆ. ಜೊತೆಗೆ ಈ ಸ್ಮಾರ್ಟ್‌ವಾಚ್ ಸಹ ಒಂದು ಪೂರ್ಣ ಚಾರ್ಜಿಂಗ್‌ನಲ್ಲಿ ಏಳು ದಿನಗಳ ಬ್ಯಾಕಪ್ ನೀಡಲಿದೆ.

ನಾಯ್ಸ್ ಕಲರ್‌ಫಿಟ್ ಪ್ರೊ 5 ಸರಣಿ ಬೆಲೆ ಹಾಗೂ ಲಭ್ಯತೆ: ನಾಯ್ಸ್ ಕಲರ್‌ಫಿಟ್ ಪ್ರೊ 5 ಸ್ಮಾರ್ಟ್‌ವಾಚ್ 3,999 ರೂ.ಗಳ ಬೆಲೆ ಹೊಂದಿದ್ದು, ನಾಯ್ಸ್ ಕಲರ್‌ಫಿಟ್ ಪ್ರೊ 5 ಮ್ಯಾಕ್ಸ್ 4,999 ರೂ. ಗಳ ಆಫರ್ ಬೆಲೆ ಪಡೆದುಕೊಂಡಿದೆ. ಈ ಸ್ಮಾರ್ಟ್ ವಾಚ್‌ಗಳನ್ನು ನಾಯ್ಸ್‌ನ ಅಧಿಕೃತ ಸೈಟ್ ಹಾಗೂ ಫ್ಲಿಪ್‌ಕಾರ್ಟ್, ಅಮೆಜಾನ್ ಸೇರಿದಂತೆ ಅನೇಕ ಆನ್‌ಲೈನ್ ಸೈಟ್ ಮೂಲಕ ಖರೀದಿ ಮಾಡಬಹುದಾಗಿದೆ.


Click it and Unblock the Notifications








