ನಾಯ್ಸ್ ಕಲರ್‌ಫಿಟ್ ಕ್ಯಾಲಿಬರ್ 3: ಸ್ಟೈಲಿಶ್ ಡಿಸೈನ್ ಜೊತೆಗೆ ಆಕರ್ಷಕ ಫೀಚರ್ಸ್‌ನ ಸ್ಮಾರ್ಟ್‌ವಾಚ್!
ನಾಯ್ಸ್ ಆಗಾಗ್ಗೆ ಹೊಸ ಹೊಸ ಸ್ಮಾರ್ಟ್‌ವಾಚ್ (Smartwatch) ಅನ್ನು ಲಾಂಚ್ ಮಾಡುವ ಮೂಲಕ ಸುಧಾರಿತ ಫೀಚರ್ಸ್ ಅನ್ನು ಪರಿಚಯಿಸುವ ಕೆಲಸ ಮಾಡುತ್ತಿದೆ. ಈ ನಡುವೆ ಮತ್ತೊಂದು ಹೊಸ ಸ್ಮಾರ್ಟ್‌ವಾಚ್ ಅನ್ನು ಲಾಂಚ್ ಮಾಡಿದ್ದು, ಈ ವಾಚ್ ಅಮೋಲೆಡ್ ಡಿಸ್‌ಪ್ಲೇ, ವಿಶೇಷ ಕ್ರೌನ್ ಬಟನ್ ಆಯ್ಕೆ ಹೊಂದುವ ಮೂಲಕ ಆಕರ್ಷಕ ಎನಿಸಿದೆ.
ಹೌದು, ನಾಯ್ಸ್ ಇದೀಗ ನಾಯ್ಸ್ ಕಲರ್‌ಫಿಟ್ ಕ್ಯಾಲಿಬರ್ 3 ಸ್ಮಾರ್ಟ್‌ವಾಚ್ (Noise ColorFit Caliber 3) ಅನ್ನು ಅನಾವರಣ ಮಾಡಿದೆ. ಈ ಸ್ಮಾರ್ಟ್‌ವಾಚ್ ಬ್ಲೂಟೂತ್ ಕಾಲಿಂಗ್ ಸೌಲಭ್ಯ, 100+ ಗ್ರಾಹಕೀಯಗೊಳಿಸಬಹುದಾದ ವಾಚ್ ಫೇಸ್‌ಗಳ (Watch face) ಆಯ್ಕೆ, ದೀರ್ಘ ದಿನಗಳ ಬ್ಯಾಟರಿ ಬ್ಯಾಕಪ್ ಅನ್ನು ನೀಡಲಿದೆ. ಹಾಗಿದ್ರೆ, ಈ ಸ್ಮಾರ್ಟ್‌ವಾಚ್‌ನ ಇತರೆ ಪ್ರಮುಖ ಫೀಚರ್ಸ್ ಹಾಗೂ ಭಾರತದಲ್ಲಿ ಈ ವಾಚ್‌ನ ಬೆಲೆ ಹಾಗೂ ಲಭ್ಯತೆ ಬಗ್ಗೆ ತಿಳಿಸಿಕೊಡಲಾಗಿದೆ ಓದಿರಿ.

ನಾಯ್ಸ್ ಕಲರ್‌ಫಿಟ್ ಕ್ಯಾಲಿಬರ್ 3 ಸ್ಮಾರ್ಟ್‌ವಾಚ್ ಶೈಲಿ: ಕಳೆದ ತಿಂಗಳು ಬಿಡುಗಡೆಯಾದ ನಾಯ್ಸ್ ಲೂನಾ ರಿಂಗ್ (Noise Luna Ring) ನಂತರ ಈ ವಾಚ್ ಅನ್ನು ಲಾಂಚ್ ಮಾಡಲಾಗಿದ್ದು, ಇದು ಫ್ಲಾಟ್ ಎಡ್ಜ್ ವಿನ್ಯಾಸದೊಂದಿಗೆ ಚದರ ಡಯಲ್ ವಿನ್ಯಾಸವನ್ನು ಪಡೆದಿದೆ. ಈ ಮೂಲಕ ಇದು ನಯವಾದ ನೋಟವನ್ನು ನೀಡುತ್ತದೆ. ಈ ವಾಚ್1.78 ಇಂಚಿನ ದೊಡ್ಡ ಅಮೋಲೆಡ್ ಡಿಸ್ಪ್ಲೇ ಆಯ್ಕೆ ಪಡೆದಿದ್ದು, 100+ ಗ್ರಾಹಕೀಯಗೊಳಿಸಬಹುದಾದ ವಾಚ್ ಫೇಸ್ ಆಯ್ಕೆ ಹೊಂದಿದೆ.
ನಾಯ್ಸ್‌ಕಲರ್‌ಫಿಟ್ ಕ್ಯಾಲಿಬರ್ 3 ಸ್ಮಾರ್ಟ್‌ವಾಚ್ ಫೀಚರ್ಸ್: ಇನ್ನು ಈ ಸ್ಮಾರ್ಟ್‌ವಾಚ್ ಟ್ರೂ ಸಿಂಕ್ ತಂತ್ರಜ್ಞಾನ (True Sync technology) ಪಡೆದಿದ್ದು, ಇದು ತ್ವರಿತ ಜೋಡಣೆ ಮತ್ತು ಕಡಿಮೆ ವಿದ್ಯುತ್ ಬಳಕೆಯೊಂದಿಗೆ ಬ್ಲೂಟೂತ್ ಕರೆಯನ್ನು ಸಕ್ರಿಯಗೊಳಿಸುತ್ತದೆ. ಉಳಿದಂತೆ 24×7 ಹೃದಯ ಬಡಿತ ಮಾನಿಟರಿಂಗ್, SpO2 ಮಾಪನ, ನಿದ್ರೆ ಟ್ರ್ಯಾಕಿಂಗ್, ಒತ್ತಡ ನಿರ್ವಹಣೆ ಹಾಗೂ ಮಹಿಳಾ ಸಂಬಂಧಿ ಆರೋಗ್ಯ ಮಾಹಿತಿಗಳನ್ನು ಮೇಲ್ವಿಚಾರಣೆ ಮಾಡಲಿದೆ.

ಹಾಗೆಯೇ ಇತರ ನಾಯ್ಸ್ ಸ್ಮಾರ್ಟ್ ವಾಚ್‌ಗಳಂತೆ ಸಹ ಒಳಗೊಂಡಿದೆ. ಇದು 100+ ಸ್ಪೋರ್ಟ್ಸ್ ಮೋಡ್ ಆಯ್ಕೆ ಪಡೆದಿದ್ದು, ಈ ಮೂಲಕ ನಿಮ್ಮ ನಿತ್ಯದ ಎಲ್ಲಾ ರೀತಿಯ ಚಟುವಟಿಕೆಗಳನ್ನು ಕಂಡುಕೊಳ್ಳಬಹುದು. ಎಲ್ಲಕ್ಕಿಂತ ಮಿಗಿಲಾಗಿ ಈ ವಾಚ್ ಬ್ಲೂಟೂತ್ ಆವೃತ್ತಿ v5.3, ನೋಟಿಫಿಕೇಶನ್ ಸೌಲಭ್ಯ, ಹವಾಮಾನ ನವೀಕರಣಗಳು, ಜ್ಞಾಪನೆಗಳು, ಅಲಾರ್ಮ್, ಕ್ಯಾಮರಾ ಕಂಟ್ರೋಲ್, ಮ್ಯೂಸಿಕ್ ಕಂಟ್ರೋಲ್, ಕ್ಯಾಲ್ಕುಲೇಟರ್ ಸೇರಿದಂತೆ ವಿಶೇಷ ಆಕರ್ಷಕ ಫೀಚರ್ಸ್ ಪಡೆದುಕೊಂಡಿದೆ.
ಉಳಿದಂತೆ ಈ ಸ್ಮಾರ್ಟ್‌ವಾಚ್ ಆಂಡ್ರಾಯ್ಡ್ ಮತ್ತು ಐಓಎಸ್‌ನೊಂದಿಗೆ ಹೊಂದಿಕೊಳ್ಳುವ ಸಾಮರ್ಥ್ಯ ಪಡೆದುಕೊಂಡಿದ್ದು, ನೀರು ಮತ್ತು ಧೂಳಿನ ಪ್ರತಿರೋಧಕ್ಕಾಗಿ IP68 ರೇಟಿಂಗ್ ನೊಂದಿಗೆ ನಾಯ್ಸ್ ಫೀಟ್ ಆಪ್‌ಗಳೊಂದಿಗೆ ಈ ವಾಚ್ ಕೆಲಸ ಮಾಡಲಿದೆ. ಇದರಿಂದ ನೀವು ಎಲ್ಲಾ ರೀತಿಯ ಮಾಹಿತಿಯನ್ನು ಫೋನ್‌ನಲ್ಲಿ ಸುಲಭವಾಗಿ ಪಡೆಯಬಹುದಾಗಿದೆ. ಮತ್ತುಒಂದು ಪೂರ್ಣ ಚಾರ್ಜಿಂಗ್‌ನಲ್ಲಿ ಏಳು ದಿನಗಳ ಬ್ಯಾಕಪ್ ನೀಡಲಿದ್ದು, ಬ್ಲೂಟೂತ್ ಕರೆಯೊಂದಿಗೆ 2 ದಿನಗಳವರೆಗೆ ಬ್ಯಾಕಪ್ ನೀಡಲಿದೆ.

ನಾಯ್ಸ್ ಕಲರ್‌ಫಿಟ್ ಕ್ಯಾಲಿಬರ್ 3 ಸ್ಮಾರ್ಟ್‌ವಾಚ್ ಬೆಲೆ ಹಾಗೂ ಲಭ್ಯತೆ; ಈ ಸ್ಮಾರ್ಟ್‌ವಾಚ್ 2,499 ರೂ.ಗಳ ಆಫರ್ ಬೆಲೆಗೆ ಲಭ್ಯ ಇದೆ. ಇದನ್ನು ನೀವು ನಾಯ್ಸ್‌ನ ಅಧಿಕೃತ ವೆಬ್‌ಸೈಟ್ ಮೂಲಕ ಖರೀದಿ ಮಾಡಬಹುದಾಗಿದೆ. ಹಾಗೆಯೇ ಈ ವಾಚ್ ಮಿಂಟ್ ಗ್ರೀನ್, ಸ್ಪೇಸ್ ಬ್ಲೂ, ರೋಸ್ ಪಿಂಕ್, ಜೆಟ್ ಬ್ಲ್ಯಾಕ್ ಮತ್ತು ಡೀಪ್ ವೈನ್ ಬಣ್ಣಗಳಲ್ಲಿ ಕಂಡುಬಂದಿದೆ.


Click it and Unblock the Notifications








