ನಾಯ್ಸ್‌ನ ಈ ವಾಚ್‌ಗೆ 72% ಡಿಸ್ಕೌಂಟ್: ಭರ್ಜರಿ ಆಫರ್‌ನೊಂದಿಗೆ ಆಕರ್ಷಕ ಫೀಚರ್ಸ್!
ನಾಯ್ಸ್ ಸಂಸ್ಥೆಯು ಈಗಾಗಲೇ ವಿವಿಧ ಸೌಲಭ್ಯ ಇರುವ ಹಾಗೂ ಸುಧಾರಿತ ಟೆಕ್ನಾಲಜಿಯಲ್ಲಿ ಕೆಲಸ ಮಾಡುವ ಇಯರ್‌ಬಡ್ಸ್ ಹಾಗೂ ಸ್ಮಾರ್ಟ್‌ವಾಚ್‌ಗಳನ್ನು ಅನಾವರಣ ಮಾಡಿದೆ. ಅದರಲ್ಲೂ ಈ ಬ್ರ್ಯಾಂಡ್‌ನ ಯಾವುದೇ ಸ್ಮಾರ್ಟ್ ಡಿವೈಸ್‌ಗಳು ಬಜೆಟ್ ಬೆಲೆಯಲ್ಲಿ ಕಾಣಿಸಿಕೊಳ್ಳುವುದು ಸಾಮಾನ್ಯದ ವಿಷಯ. ಆದರೆ, ಈ ನಾಯ್ಸ್ ಸ್ಮಾರ್ಟ್‌ವಾಚ್ ಅನ್ನು ನೀವು ಇನ್ನೂ ಅಗ್ಗದ ದರದಲ್ಲಿ ಖರೀದಿ ಮಾಡಬಹುದು.
ಹೌದು, ನಾಯ್ಸ್ ಕಲರ್‌ಫಿಟ್ ಗ್ರಾಂಡೆ ಸ್ಮಾರ್ಟ್‌ವಾಚ್ (Noise Colorfit Grande Smartwatch) ಬೆಲೆಯಲ್ಲಿ ಭಾರೀ ಇಳಿಕೆಯಾಗಿದೆ. ಅಂದರೆ 72% ರಿಯಾಯಿತಿಯೊಂದಿಗೆ ಈ ಸ್ಮಾರ್ಟ್‌ವಾಚ್ ಕಾಣಿಸಿಕೊಂಡಿದೆ. ಇನ್ನುಳಿದಂತೆ ಈ ವಾಚ್ ಏಳು ದಿನಗಳ ಬ್ಯಾಟರಿ ಬ್ಯಾಕಪ್ ಹಾಗೂ ಆಂಡ್ರಾಯ್ಡ್ ಮತ್ತು ಐಒಎಸ್ ಆಪರೇಟಿಂಗ್ ಸಿಸ್ಟಂಗಳಲ್ಲಿ ಕೆಲಸ ಮಾಡುವ ಸಾಮರ್ಥ್ಯ ಪಡೆದುಕೊಂಡಿದ್ದು, TFT LCD ಡಿಸ್‌ಪ್ಲೇ ಉತ್ತಮ ವೀಕ್ಷಣೆ ನೀಡಲಿದೆ. ಹಾಗಿದ್ರೆ, ಇದರ ಪ್ರಮುಖ ಫೀಚರ್ಸ್ ಹಾಗೂ ಆಫರ್ ಬೆಲೆ ವಿವರ ತಿಳಿದುಕೊಳ್ಳಿ.

ನಾಯ್ಸ್ ಕಲರ್‌ಫಿಟ್ ಗ್ರಾಂಡೆ ಸ್ಮಾರ್ಟ್‌ವಾಚ್ ಡಿಸ್‌ಪ್ಲೇ ವಿವರ: ಈ ಸ್ಮಾರ್ಟ್‌ವಾಚ್ ಅನ್ನು ಇಷ್ಟೊಂದು ಕಡಿಮೆ ಬೆಲೆಗೆ ಖರೀದಿ ಮಾಡುವ ಮೊದಲು ಇದರ ಪ್ರಮುಖ ಫೀಚರ್ಸ್‌ಗಳ ಬಗ್ಗೆ ತಿಳಿದುಕೊಳ್ಳಿ. ಇದರಿಂದ ನಿಮಗೆ ಅನುಕೂಲ ಆಗುತ್ತದೆ. ಈ ವಾಚ್ 1.69 ಇಂಚಿನ TFT LCD ಡಿಸ್‌ಪ್ಲೇ ಹೊಂದಿದ್ದು, ಈ ಮೂಲಕ ಉತ್ತಮ ವೀಕ್ಷಣೆ ಸಾಧ್ಯ. ಹಾಗೆಯೇ ವೈಯುಕ್ತೀಕರಿಸಿಕೊಳ್ಳಬಹುದಾದ 150+ ಕ್ಲೌಡ್ ಬೇಸ್ಡ್ ವಾಚ್ ಫೇಸ್ ಆಯ್ಕೆ ಪಡೆದುಕೊಂಡಿದೆ.
ನಾಯ್ಸ್ ಕಲರ್‌ಫಿಟ್ ಗ್ರಾಂಡೆ ಸ್ಮಾರ್ಟ್‌ವಾಚ್ ಫೀಚರ್ಸ್: ಮಲ್ಟಿ ಸ್ಪೋರ್ಟ್ಸ್ ಮೋಡ್ ಆಯ್ಕೆಗಳೊಂದಿಗೆ ಈ ಸ್ಮಾರ್ಟ್‌ವಾಚ್ SpO2 ಮಾನಿಟರ್, ಸ್ಲೀಪ್ ಮಾನಿಟರಿಂಗ್, ಸ್ಟ್ರೆಸ್ ಮಾನಿಟರಿಂಗ್, ನಿಮ್ಮ ನಿತ್ಯದ ಚಟುವಟಿಕೆ ಟ್ರ್ಯಾಕರ್ ಸೇರಿದಂತೆ ವಿವಿಧ ಆರೋಗ್ಯ ಸಂಬಂಧಿ ವಿಷಯಗಳ ಮೇಲೆ ಸದಾ ಕಣ್ಣಿಟ್ಟಿರುತ್ತದೆ. ಅದರಲ್ಲೂ ಸರಿಸುಮಾರು 40 ಗ್ರಾಂ ತೂಕ ಹೊಂದಿರುವುದರಿಂದ ಧರಿಸಲು ಆರಾಮದಾಯಕ ಅನುಭವ ನೀಡುತ್ತದೆ.
ಇದೆಲ್ಲಕ್ಕೂ ಮಿಗಿಲಾಗಿ ಈ ವಾಚ್‌ವಾಟರ್ ಅಸಿಸ್ಟೆಂಟ್ ಫೀಚರ್ಸ್ ಅನ್ನು ಸಹ ಪಡೆದುಕೊಂಡಿದೆ. ಇದರೊಂದಿಗೆ ಅಲಾರಾಂ ಗಡಿಯಾರ, ಜ್ಞಾಪನೆಗಳು ಮತ್ತು ಸ್ಟಾಪ್ ವಾಚ್ ಆಯ್ಕೆ ಸಹ ಇದ್ದು ನೋಟಿಫಿಕೇಶನ್ ಪಡೆದುಕೊಳ್ಳಲು ನೀವು ನಿಮ್ಮ ಆಂಡ್ರಾಯ್ಡ್ ಅಥವಾ ಐಓಎಸ್ ಡಿವೈಸ್‌ಗಳೊಂದಿಗೆ ಸಿಂಕ್ ಮಾಡಬಹುದು. ಯಾಕೆಂದರೆ ಈ ವಾಚ್ ಆಂಡ್ರಾಯ್ಡ್ ಮತ್ತು ಐಒಎಸ್ ಆಪರೇಟಿಂಗ್ ಸಿಸ್ಟಂಗಳಲ್ಲಿಯೂ ಕೆಲಸ ಮಾಡುತ್ತದೆ.
ನಾಯ್ಸ್ ಕಲರ್‌ಫಿಟ್ ಗ್ರಾಂಡೆ ಸ್ಮಾರ್ಟ್‌ವಾಚ್ ಬ್ಯಾಟರಿ ಸಾಮರ್ಥ್ಯ: ಈ ವಾಚ್ ಅನ್ನು ಒಂದು ಬಾರಿ ಪೂರ್ಣವಾಗಿ ಚಾರ್ಜಿಂಗ್ ಮಾಡಿದರೆ ಬರೋಬ್ಬರಿ ಏಳು ದಿನಗಳ ವರೆಗೆ ಬ್ಯಾಕಪ್ ನೀಡಲಿದೆ. ಈ ಮೂಲಕ ನೀವು ಪದೇ ಪದೇ ಚಾರ್ಜಿಂಗ್‌ಗೆ ಹಾಕುವ ಅವಶ್ಯಕತೆ ಇರುವುದಿಲ್ಲ. ಹಾಗಿದ್ರೆ, ಇದರ ಆಫರ್ ಬೆಲೆ ಬಗ್ಗೆ ತಿಳಿದುಕೊಳ್ಳೋಣ ಬನ್ನಿ.

ನಾಯ್ಸ್ ಕಲರ್‌ಫಿಟ್ ಗ್ರಾಂಡೆ ಬೆಲೆ ಹಾಗೂ ಲಭ್ಯತೆ: ಈ ವಿಶೇಷ ವಾಚ್ 4,999ರೂ. ಗಳ ಬೆಲೆಯನ್ನು ಹೊಂದಿದೆ. ಆದರೆ, ನೀವು ಇದನ್ನು ಕೇವಲ 1,399ರೂ. ಗಳಿಗೆ ಖರೀದಿ ಮಾಡಬಹುದು. ಯಾಕೆಂದರೆ ರಿಲಯನ್ಸ್ ಡಿಜಿಟಲ್ ಈ ವಾಚ್ ಮೇಲೆ ಬರೋಬ್ಬರಿ 72% ರಿಯಾಯಿತಿ ಘೋಷಣೆ ಮಾಡಿದೆ. ಇದರಿಂದಾಗಿ ನೀವು ಭಾರೀ ಹಣ ಉಳಿತಾಯ ಮಾಡಿದಂತೆ ಆಗುತ್ತದೆ. ಅಷ್ಟೇ ಅಲ್ಲದೆ ಕೆಲವು ಬ್ಯಾಂಕ್ ಕಾರ್ಡ್‌ಗಳಲ್ಲಿ ಇನ್ನೂ ಹೆಚ್ಚಿನ ರಿಯಾಯಿತಿ ಸಹ ಲಭ್ಯ ಇರಲಿದೆ.
ಇದರೊಂದಿಗೆ ನೀವು ಇಎಂಐ ಆಯ್ಕೆ ಮೂಲಕವೂ ಈ ವಾಚ್ ಅನ್ನು ಖರೀದಿ ಮಾಡಲು ಅವಕಾಶ ನೀಡಲಾಗಿದೆ. ಈ ಮೂಲಕ ತಿಂಗಳಿಗೆ 461ರೂ. ಗಳನ್ನು ಪಾವತಿ ಮಾಡಬೇಕಿದೆ. ಈ ರೀತಿ ನೀವು ಮೂರು ತಿಂಗಳವರೆಗೆ ಪಾವತಿ ಮಾಡಬಹುದು. ಆದರೆ ಈ ಆಫರ್ ಎಲ್ಲರಿಗೂ ಲಭ್ಯ ಇಲ್ಲ. ಬದಲಾಗಿ ಹೆಚ್‌ಡಿಎಫ್‌ಸಿ ಬ್ಯಾಂಕ್ ಕಾರ್ಡ್ ಹೊಂದಿರುವವರು ಮಾತ್ರ ಇದನ್ನು ಸದುಪಯೋಗಪಡಿಸಿಕೊಳ್ಳಬಹುದು.


Click it and Unblock the Notifications








