Noise: ನಾಯ್ಸ್ ಕಲರ್‌ಫಿಟ್ ಓರ್ ಸ್ಮಾರ್ಟ್‌ವಾಚ್ ಲಾಂಚ್! ಅಮೋಲೆಡ್ ಡಿಸ್‌ಪ್ಲೇ, ಬೆಲೆ ಎಷ್ಟು?
ನಾಯ್ಸ್ (Noise) ಈಗಾಗಲೇ ಧರಿಸಬಹುದಾದ ಸಾಕಷ್ಟು ಸ್ಮಾರ್ಟ್ ಡಿವೈಸ್‌ಗಳನ್ನು ಅನಾವರಣ ಮಾಡಿದೆ. ಅದರಲ್ಲೂ ಇತ್ತೀಚೆಗೆ ಭಿನ್ನ ಫೀಚರ್ಸ್ ಆಯ್ಕೆ ಡಿವೈಸ್‌ಗಳು ಬಳಕೆದಾರರಿಗೆ ವಿಶೇಷವಾದ ಅನುಭವ ನೀಡುತ್ತಿವೆ. ಈ ನಡುವೆ ನಾಯ್ಸ್ ಕಲರ್‌ಫಿಟ್ ಓರ್ ಸ್ಮಾರ್ಟ್‌ವಾಚ್ (Noise ColorFit Ore smartwatch) ಲಾಂಚ್ ಮಾಡಿದೆ.
ಹೌದು, ಇದೀಗ ನಾಯ್ಸ್ ಕಲರ್‌ಫಿಟ್ ಓರ್ ಸ್ಮಾರ್ಟ್‌ವಾಚ್ ಅನ್ನು ಅನಾವರಣ ಮಾಡಲಾಗಿದೆ. ಈ ಸ್ಮಾರ್ಟ್‌ವಾಚ್ ಹಿಂದಿನ ಸ್ಮಾರ್ಟ್‌ವಾಚ್‌ಗಳಿಗಿಂತ ಭಿನ್ನವಾಗಿದೆ. ಇದು 2.1 ಇಂಚಿನ ಅಮೋಲೆಡ್ ಡಿಸ್ಪ್ಲೇ ಆಯ್ಕೆ ಪಡೆದಿದ್ದು, ಅಲ್ಟ್ರಾ-ತೆಳುವಾದ ಬೆಜೆಲ್ ಮೂಲಕ ಆಕರ್ಷಕವಾಗಿದೆ. ಹಾಗಿದ್ರೆ, ಈ ಸ್ಮಾರ್ಟ್‌ವಾಚ್‌ನ ಪ್ರಮುಖ ಫೀಚರ್ಸ್ ಹಾಗೂ ಇದರ ಬೆಲೆ ವಿವರವನ್ನು ಈ ಲೇಖನದಲ್ಲಿ ತಿಳಿಸಿಕೊಡಲಾಗಿದೆ ಓದಿರಿ.

ನಾಯ್ಸ್ ಕಲರ್‌ಫಿಟ್ ಓರ್ ಸ್ಮಾರ್ಟ್‌ವಾಚ್: ಈ ಸ್ಮಾರ್ಟ್‌ವಾಚ್ 2.1 ಇಂಚಿನ ಡೈನಾಮಿಕ್ ಅಮೋಲೆಡ್ ಡಿಸ್ಪ್ಲೇ ಆಯ್ಕೆ ಪಡೆದಿದ್ದು, 368 x 44 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಸಾಮರ್ಥ್ಯದೊಂದಿಗೆ ಉತ್ತಮವಾಗಿದೆ. ಅಲ್ಲದೆ 600 ನಿಟ್ಸ್ ಗರಿಷ್ಠ ಬ್ರೈಟ್‌ನೆಸ್ ಆಯ್ಕೆ ಪಡೆದಿದ್ದು, ಆಕರ್ಷಕ ಕ್ರೌನ್ ಬಟನ್ ಮೂಲಕ ನಿಮ್ಮ ಕೈನ ಅಂದವನ್ನು ಇನ್ನಷ್ಟು ಹೆಚ್ಚಿಗೆ ಮಾಡಲಿದೆ. ಇದರ ಜೊತೆಗೆ 100+ ಕ್ಲೌಡ್-ಆಧಾರಿತ ವಾಚ್ ಫೇಸ್‌ಗಳನ್ನು ಈ ವಾಚ್‌ನಲ್ಲಿ ಕಾಣಬಹುದಾಗಿದೆ.
ಇದರ ಜೊತೆಗೆ ಟ್ರೂ ಸಿಂಕ್ ತಂತ್ರಜ್ಞಾನದೊಂದಿಗೆ, ಬ್ಲೂಟೂತ್ ಆವೃತ್ತಿ v5.3 ಮೂಲಕ ನಿಮ್ಮ ಫೋನ್‌ಗೆ ತಡೆರಹಿತ ಸಂಪರ್ಕದ ಅನುಕೂಲ ಮಾಡಿಕೊಡುತ್ತದೆ. ಅಲ್ಲದೆ ಸ್ಥಿರ ಕರೆಗಳನ್ನು ಕಡಿಮೆ ಬ್ಯಾಟರಿ ಬಳಕೆಯೊಂದಿಗೆ ನೀಡಲಿದ್ದು, ಡಯಲ್ ಪ್ಯಾಡ್, ಕರೆ ಲಾಗ್‌ಗಳು ಮತ್ತು 10 ಸಂಪರ್ಕಗಳಿಗೆ ಸ್ಟೋರೇಜ್ ಆಯ್ಕೆ ನೀಡಲಿದೆ. ಈ ಮೂಲಕ ಸ್ಮಾರ್ಟ್‌ಫೋನ್ ಬದಲು ಈ ವಾಚ್‌ನಲ್ಲೇ ನೀವು ಅಗತ್ಯ ಕೆಲಸಗಳನ್ನು ಮಾಡಬಹುದು.

ಉಳಿದಂತೆ ಈ ಸ್ಮಾರ್ಟ್‌ವಾಚ್ ಹೃದಯ ಬಡಿತ ಮತ್ತು SpO2 ಟ್ರ್ಯಾಕಿಂಗ್, ನಿದ್ರೆಯ ಮೇಲ್ವಿಚಾರಣೆ, ಒತ್ತಡ ಮಾಪನ ಮತ್ತು ಸ್ತ್ರೀ ಸೈಕಲ್ ಟ್ರ್ಯಾಕರ್‌ನಂತಹ ವೈಶಿಷ್ಟ್ಯಗಳೊಂದಿಗೆ ಆರೋಗ್ಯ ಮೇಲ್ವಿಚಾರಣೆಗೆ ಆದ್ಯತೆ ನೀಡುತ್ತದೆ. ಹೆಚ್ಚುವರಿಯಾಗಿ 100 ಕ್ಕೂ ಹೆಚ್ಚು ಸ್ಪೋರ್ಟ್ಸ್ ಮೋಡ್ ಟ್ರ್ಯಾಕಿಂಗ್ ಮತ್ತು ದೈನಂದಿನ ಕಾರ್ಯಗಳಿಗಾಗಿ ಪ್ರೊಡಕ್ಟಿವಿಟಿ ಸೂಟ್ ಅನ್ನು ನೀಡಲಿದ್ದು, , IP68 ರೇಟಿಂಗ್ ಪಡೆಯುವ ನೀರು ಮತ್ತು ಧೂಳು ನಿರೋಧಕವಾಗಿದೆ.
ಇದರೊಂದಿಗೆ ನೋಟಿಫಿಕೇಶನ್ ಪ್ರದರ್ಶನ, ಹವಾಮಾನ ನವೀಕರಣಗಳು, ಕ್ಯಾಮರಾ ಕಂಟ್ರೋಲ್, ಸಂಗೀತ ಕಂಟ್ರೋಲ್, ಟೈಮರ್, ಜ್ಞಾಪನೆಗಳು, ಕ್ಯಾಲ್ಕುಲೇಟರ್, ನಾಯ್ಸ್ ಫಿಟ್ ಆಪ್‌ಗೆ ಬೆಂಬಲ ಸೇರಿದಂತೆ ಅನೇಕ ಅಗತ್ಯ ಸೌಲಭ್ಯಗಳನ್ನು ಬಳಕೆದಾರರಿಗೆ ನೀಡಲಿದೆ. ಅಲ್ಲದೆ ಈ ವಾಚ್ ಅನ್ನು ಒಂದು ಬಾರಿ ಪೂರ್ಣವಾಗಿ ಚಾರ್ಜ್ ಮಾಡಿದ್ರೆ ಬರೋಬ್ಬರಿ 7 ದಿನಗಳ ವರೆಗೆ ಬ್ಯಾಟರಿ ಬ್ಯಾಕಪ್ ಪಡೆಯಬಹುದಾಗಿದೆ.
ನಾಯ್ಸ್ ಕಲರ್‌ಫಿಟ್ ಓರ್ ಸ್ಮಾರ್ಟ್‌ವಾಚ್ ಬೆಲೆ ಮತ್ತು ಲಭ್ಯತೆ: ಈ ಸ್ಮಾರ್ಟ್‌ವಾಚ್ 6,999ರೂ.ಗಳ ಸಾಮಾನ್ಯ ಬೆಲೆ ಹೊಂದಿದ್ದು, ನೀವೀಗ ಇದನ್ನು ವಿಶೇಷ ಕೊಡುಗೆ ಬೆಲೆಯಾದ 2999 ರೂ.ಗಳಿಗೆ ಖರೀದಿ ಮಾಡಬಹುದಾಗಿದೆ. ಈ ವಾಚ್ ಎಲೈಟ್ ಬ್ಲ್ಯಾಕ್, ಎಲೈಟ್ ಸಿಲ್ವರ್, ಕ್ಲಾಸಿಕ್ ಬ್ರೌನ್, ಸ್ಪೇಸ್ ಬ್ಲೂ ಮತ್ತು ಜೆಟ್ ಬ್ಲ್ಯಾಕ್ ಬಣ್ಣಗಳಲ್ಲಿ ಹಾಗೂ ಮೆಟಲ್, ಲೆದರ್ ಮತ್ತು ಸಿಲಿಕೋನ್ ಪಟ್ಟಿಗಳೊಂದಿಗೆ ಬರಲಿದ್ದು, ಅಮೆಜಾನ್ ಹಾಗೂ ಗೋನಾಯ್ಸ್ ಮೂಲಕ ಖರೀದಿ ಮಾಡಬಹುದಾಗಿದೆ.

ನಾಯ್ಸ್ ಕಲರ್‌ಫಿಟ್ ಮ್ಯಾಕ್ರೋ ಸ್ಮಾರ್ಟ್‌ವಾಚ್: ಈ ಸ್ಮಾರ್ಟ್‌ವಾಚ್ ಅನ್ನು ನಾಯ್ಸ್ ಈ ವರ್ಷದ ಫೆಬ್ರವರಿಯಲ್ಲಿ ಲಾಂಚ್ ಮಾಡಿತ್ತು. ಇದು 2 ಇಂಚಿನ ಕರ್ವ್ ಡಿಸ್‌ಪ್ಲೇಯೊಂದಿಗೆ ಬ್ಲೂಟೂತ್ ಕರೆ ಸೌಲಭ್ಯ ಪಡೆದಿದೆ. ಹಾಗೆಯೇ ಸಿಲಿಕೋನ್, ಲೆದರ್ ಮತ್ತು ಮೆಟಾಲಿಕ್ ಸ್ಟ್ರಾಪ್‌ಗಳು ಮತ್ತು ಹಲವಾರು ಬಣ್ಣದ ಆಯ್ಕೆಯಲ್ಲಿ ಲಭ್ಯ ಇದೆ. ಭಾರತದಲ್ಲಿ ಈ ವಾಚ್ ಅನ್ನು 1,499ರೂ.ಗಳೊಂದಿಗೆ ಖರೀದಿ ಮಾಡಬಹುದಾಗಿದೆ.


Click it and Unblock the Notifications








